ವಾಟ್ಸ್ಆ್ಯಪ್​ನಲ್ಲಿ ಗ್ರೂಪ್​ ಕಾಲ್​ ಮಾಡುವುದು ಹೇಗೆ?

news18
Updated:June 22, 2018, 4:36 PM IST
ವಾಟ್ಸ್ಆ್ಯಪ್​ನಲ್ಲಿ ಗ್ರೂಪ್​ ಕಾಲ್​ ಮಾಡುವುದು ಹೇಗೆ?
news18
Updated: June 22, 2018, 4:36 PM IST
ನ್ಯೂಯಾರ್ಕ್​: ಈವರೆಗೆ ಬಿಸಿಬಿಸಿ ಚರ್ಚೆಯಲ್ಲಿದ್ದ  ವಾಟ್ಸ್​ಆ್ಯಪ್​​ ಗ್ರೂಪ್​ ವಿಡಿಯೋ ಮತ್ತು ಆಡಿಯೋ ಕಾಲಿಂಗ್​ ಸೇವೆಯನ್ನು ಕೊನೆಗೂ ವಾಟ್ಸ್​ಆ್ಯಪ್​​ ನೀಡಿದೆ.

ಫೇಸ್​ಬುಕ್​ನ ಅಂಗ ಸಂಸ್ಥೆಯಾದ ವಾಟ್ಸ್​ಆ್ಯಪ್​​ನಲ್ಲಿ ಗ್ರೂಪ್​ ವಿಡಿಯೋ ಕಾಲಿಂಗ್​ ವ್ಯವಸ್ಥೆ ಕುರಿತು ಮೇನಲ್ಲಿ ನಡೆದ F8 2018 ಸಮ್ಮೇಳನದಲ್ಲಿ ಪೇಸ್​ಬುಕ್​ ಹೇಳಿಕೊಂಡಿತ್ತು, ಇದೀಗ ವಾಟ್ಸ್​ಆ್ಯಪ್​​ ಬೀಟಾ ವರ್ಷನ್​ ಬಳಕೇದಾರರು version 2.18.192ಗೆ ಅಪ್​ಡೇಟ್​ ಮಾಡಿಕೊಳ್ಳಬೇಕು.

ಗ್ರೂಪ್​ ವಿಡಿಯೋ ಅಥವಾ ಆಡಿಯೋ ಕಾಲ್​ ಮಾಡುವುದು ಹೇಗೆ, ಇಲ್ಲಿದೆ ಸಂಪೂರ್ಣ ಮಾಹಿತಿ


  • ಮೊದಲು ನಿಮ್ಮ ವಾಟ್ಸ್​ಆ್ಯಪ್​​ನ್ನು ಬೀಟಾ version 2.18.192ಗೆ ಅಪ್​ಡೇಟ್​ ಮಾಡಿಕೊಳ್ಳಿ,

  • ನಿಮ್ಮ ಸ್ನೇಹಿತರೊಬ್ಬರಿಗೆ ಮೊದಲು ವಾಯ್ಸ್​ ಕರೆ ಅಥವಾ ವಿಡಿಯೋ ಕರೆಯನ್ನು ಮಾಡಿ

  • ಬಲ ಬದಿಯ ಮೇಲಿನ ಭಾಗದಲ್ಲಿರುವ Add Participant ಆಯ್ಕೆಯನ್ನು ಒತ್ತಿ, ಬಳಿಕ

  • Loading...

  • ನಿಮಗೆ ಯಾರ ಜೊತೆ ಮಾತನಾಡಬೇಕೋ ಅವರನ್ನು ಆಯ್ಕೆ ಮಾಡಿಕೊಳ್ಳಿ,

  • ಒಂದು ಬಾರಿ ನೀವು ಕೇವಲ ಒಬ್ಬರನ್ನು ಮಾತ್ರಾ ಆಯ್ಕೆ ಮಾಡಿಕೊಳ್ಳಬಹುದು

  • ಒಟ್ಟಾರೆ ನೀವು ನಾಲ್ಕು ಮಂದಿಯೊಂದಿಗೆ ಚಾಟ್​ ಮಾಡಬಹುದಾಗಿದೆ.

  • ಕೇವಲ ಕರೆಯನ್ನು ಮಾಡಿದ ವ್ಯಕ್ತಿ ಮಾತ್ರ ಮತ್ತೋರ್ವ ವ್ಯಕ್ತಿಯನ್ನು ಆ್ಯಡ್​ ಮಾಡಬಹುದು, ಬೇರೆ ವ್ಯಕ್ತಿಗಳಿಗೆ ಈ ಆಯ್ಕೆ ಇರುವುದಿಲ್ಲ.

  • ಸದ್ಯ ವಾಟ್ಸ್​ಆ್ಯಪ್​​ ಬಿಟಾ ಬಳಕೆದಾರರಿಗೆ ಈ ಆಯ್ಕೆ ಲಭ್ಯವಿದೆ.


ಇತ್ತೀಚೆಗೆ ವಾಟ್ಸಾಪ್​ ತಮ್ಮ ಬಳಕೇದಾರರ ಅಭಿರುಚಿಗೆ ತಕ್ಕಂತೆ ಬದಲಾವಣೆಯನ್ನು ತರುತ್ತಿದ್ದು, ಡೆಲಿವರಿಯಾಗಿರುವ ಮೆಸೇಜ್​ನ್ನು ಕೂಡಾ ಡಿಲೀಟ್​ ಮಾಡುವ ಆಯ್ಕೆಯನ್ನು ವಾಟ್ಸಾಪ್​ ನೀಡಿತ್ತು. ಅಲ್ಲದೇ ಡೌನ್​ಲೋಡ್​ ಆಗಿರುವ ಮಾಹಿತಿಗಳನ್ನು ಒಂದು ತಿಂಗಳು ತನ್ನ ಸರ್ವರ್​ನಲ್ಲಿ ಶೇಖರಣೆ ಮಾಡುವ ಸೌಲಭ್ಯ ಕೂಡಾ ನೀಡಿದೆ.
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...