HOME » NEWS » Tech » WHATSAPP ROLLS OUT ABILITY TO MUTE VIDEOS BEFORE SHARING FOR ANDROID USERS HG

WhatsApp: ವಿಡಿಯೋ ಕಳುಹಿಸುವ ಮೊದಲು ಮ್ಯೂಟ್ ಮಾಡುವ ಅವಕಾಶ; ಆದರೆ ಈ ಬಳಕೆದಾರರಿಗೆ ಮಾತ್ರ!

ಆ್ಯಂಡ್ರಾಯ್ಡ್​​ ಬಳಕೆದಾರರು ವಾಟ್ಸ್​ಆ್ಯಪ್​ ನವೀಕರಣವನ್ನು ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಪ್ರತಿ ಬಳಕೆದಾರರಿಗೆ ಹೊಸ ಫೀಚರ್​ ಸಿಗಲಿದೆ.

news18-kannada
Updated:March 2, 2021, 9:58 AM IST
WhatsApp: ವಿಡಿಯೋ ಕಳುಹಿಸುವ ಮೊದಲು ಮ್ಯೂಟ್ ಮಾಡುವ ಅವಕಾಶ; ಆದರೆ ಈ ಬಳಕೆದಾರರಿಗೆ ಮಾತ್ರ!
ವಾಟ್ಸ್​ಆಪ್​.
  • Share this:
ವಾಟ್ಸ್​​ಆ್ಯಪ್​ ವಿಡಿಯೋಗಳನ್ನು ಹಂಚಿಕೊಳ್ಳುವ ಮೊದಲು ಮ್ಯೂಟ್​ ಮಾಡುವ ಆಯ್ಕೆಯನ್ನು ಹೊರತಂದಿದೆ. ಕಳೆದ ತಿಂಗಳ ಆರಂಭದಲ್ಲಿ ಈ ನೂತನ ಫೀಚರ್​ ಅನ್ನು ಬೀಟಾದಲ್ಲಿ ಗುರುತಿಸಲಾಗಿದೆ. ಆದರೀಗ ಆ್ಯಂಡ್ರಾಯ್ಡ್​ ಸ್ಥಿರ ಬಳಕೆದಾರರಿಗೆ ಮ್ಯೂಟ್​​ ಫೀಚರ್​ ಬಳಕೆಗೆ ಸಿಗುವಂತೆ ಮಾಡಿದೆ.

ಮ್ಯೂಟ್​​​ ಫೀಚರ್​ನಲ್ಲಿ ಎಡಿಟಿಂಗ್​ ಆಯ್ಕೆಯನ್ನು ನೀಡಲಾಗಿದೆ. ಬಳಕೆದಾರರು ಇದೀಗ ತಮಗೆ ಹೇಗೆ ಬೇಕೊ ಹಾಗೆ ಮ್ಯೂಟ್​ ಮಾಡುವ ಮೂಲಕ ಬೇರೆಯವರಿಗೆ ಕಳುಹಿಸಬಹುದಾಗಿದೆ. ಸದ್ಯ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಈ ಫೀಚರ್​ ಪರಿಚಯಿಸಿದ್ದು, ವಿಡಿಯೋ ಮ್ಯೂಟ್​ ಮಾಡಿ ಕಳುಹಿಸಬಹುದಾಗಿದೆ.

ಆ್ಯಂಡ್ರಾಯ್ಡ್​​ ಬಳಕೆದಾರರು ವಾಟ್ಸ್​ಆ್ಯಪ್​ ನವೀಕರಣವನ್ನು ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಪ್ರತಿ ಬಳಕೆದಾರರಿಗೆ ಹೊಸ ಫೀಚರ್​ ಸಿಗಲಿದೆ. ಆದರೆ ಐಒಎಸ್​ ಬಳಕೆದಾರರಿಗೆ ಯಾವಾಗ ವಿಡಿಯೋ ಮ್ಯೂಟ್​ ಮಾಡುವ ಫೀಚರ್​ ಸಿಗಲಿದೆ ಎಂಬ ಮಾಹಿತಿ ಬಗ್ಗೆ ಸ್ಪಷ್ಟತೆ ಇಲ್ಲ.

ಮ್ಯೂಟ್​ ವಿಡಿಯೋಗಳಾಗಿ ಬದಲಾಯಿಸುವ ಮೂಲಕ ವಾಟ್ಸ್​ಆ್ಯಪ್​ ಬಳಕೆದಾರರು ವಿಡಿಯೋಗಳನ್ನು ಕಳುಹಿಸಬಹುದಾದ ಕುರಿತು ಫೆಬ್ರವರಿ 27ರಂದು ಟ್ವೀಟ್​ ಮೂಲಕ ಹೇಳಿಕೊಂಡಿದೆ.

ಇನ್ನು ವಿಡಿಯೋಗಳನ್ನು ಸ್ನೇಹಿತರಿಗೆ ಕಳುಹಿಸುವ ಮೊದಲು ಟ್ರಿಮ್​ ಮಾಡಬಹುದಾಗಿದೆ. ಜೊತೆಗೆ ಶಿರ್ಷಿಕೆ, ಟೆಕ್ಟ್ಸ್​​ ಸೇರಿಸಬಹುದಾಗಿದೆ. ಅಂತೆಯೇ ವಿಡಿಯೋವನ್ನು ಮ್ಯೂಟ್​ ಮಾಡುವ ಆಯ್ಕೆಯೂ ಇದರಲ್ಲಿದೆ. ಬಳಕೆದಾರರು ಅಲ್ಲಿರುವ ಸ್ಪೀಕರ್​​ ಬಟನ್​ ಕ್ಲಿಕ್​ ಮಾಡುವ ಮೂಲಕ ಮತ್ತು ವಿಡಿಯೋ ಹಂಚಿಕೊಳ್ಳುವ ಮೊದಲು ಮ್ಯೂಟ್​ ಮಾಡಬಹುದಾಗಿದೆ.
Published by: Harshith AS
First published: March 2, 2021, 9:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories