WhatsAppನಲ್ಲಿ ಇನ್ಮುಂದೆ 2GB ಗಾತ್ರದ ಫೈಲ್ಸ್​ ಕಳಿಸ್ಬೋದು! ಇಷ್ಟೇ ಅಲ್ಲ, ಇನ್ನೂ ಇದೆ ಫೀಚರ್ಸ್​

WhatsApp: ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಅಂತಿಮವಾಗಿ ಎಲ್ಲಾ ಬಳಕೆದಾರರಿಗಾಗಿ ಸಂದೇಶಗಳಿಗೆ ರಿಯಾಕ್ಷನ್ ನೀಡುವ ಫೀಚರ್ ಅನ್ನು ಶೀಘ್ರದಲ್ಲೇ ಪರಿಚಯಿಸಲಿದೆ.

ವಾಟ್ಸ್‌ಆ್ಯಪ್‌

ವಾಟ್ಸ್‌ಆ್ಯಪ್‌

  • Share this:
    ಬೇರೆ ಸೋಶಿಯಲ್ ಮೀಡಿಯಾಗಳಂತೆ (Social Media) ವಾಟ್ಸ್​ಆ್ಯಪ್ (WhatsApp ) ಕೂಡ ಸಂದೇಶ ಪ್ರತಿಕ್ರಿಯೆಗಳ ವೈಶಿಷ್ಟ್ಯವನ್ನು (Features) ಪರಿಚಯಿಸುತ್ತಿದೆ ಎಂದು ಸುದ್ದಿಯಾಗುತ್ತಲೇ ಇತ್ತು. ಈದೀಗ ವಾಟ್ಸ್​ಆ್ಯಪ್ ಈ ಬಗ್ಗೆ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಬಹುನಿರೀಕ್ಷಿತ ಸಂದೇಶ ಪ್ರತಿಕ್ರಿಯೆಗಳ ವೈಶಿಷ್ಟ್ಯವನ್ನು ಹೊರತಂದಿದ್ದು, ಶೀಘ್ರವೇ ಭಾರತದಲ್ಲೂ (India) ಸಹ ಪರಿಚಯಿಸುವುದಾಗಿ ಘೋಷಿಸಿದೆ.

    ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವಿಕೆ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಅಂತಿಮವಾಗಿ ಎಲ್ಲಾ ಬಳಕೆದಾರರಿಗಾಗಿ ಸಂದೇಶಗಳಿಗೆ ರಿಯಾಕ್ಷನ್ ನೀಡುವ ಫೀಚರ್ ಅನ್ನು ಶೀಘ್ರದಲ್ಲೇ ಪರಿಚಯಿಸಲಿದೆ.

    ಇದರ ಹೊರತಾಗಿ, ಹೆಚ್ಚಿನ ಫೈಲ್ ಹಂಚಿಕೆ ಗಾತ್ರ ಮತ್ತು ವಾಟ್ಸ್​ಆ್ಯಪ್ ಗುಂಪುಗಳಿಗೆ ಹೆಚ್ಚಿನ ಜನರನ್ನು ಸೇರಿಸುವ ಸಾಮರ್ಥ್ಯದಂತಹ ಹಲವು ವೈಶಿಷ್ಟ್ಯಗಳನ್ನು ವಾಟ್ಸ್​ಆ್ಯಪ್ ಪರಿಚಯಿಸುತ್ತಿದೆ.

    ವಾಟ್ಸ್​ಆ್ಯಪ್ ಸಂದೇಶ ಪ್ರತಿಕ್ರಿಯೆಗಳು ಕಳೆದ ಕೆಲವು ತಿಂಗಳುಗಳಿಂದ ಅಭಿವೃದ್ಧಿಯಲ್ಲಿರುವ ವೈಶಿಷ್ಟ್ಯವಾಗಿದೆ. ಈ ವೈಶಿಷ್ಟ್ಯವು ಕೆಲವು ಎಮೋಜಿ ಪ್ರತಿಕ್ರಿಯೆಗಳೊಂದಿಗೆ ಬರಲಿದೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು ಮತ್ತು ಭವಿಷ್ಯದಲ್ಲಿ ಹೆಚ್ಚಿನ ಎಮೋಜಿ ಮತ್ತು ಬೆಂಬಲಗಳನ್ನು ಸೇರಿಸಲಾಗುವುದು ಎಂದು ಹೇಳಲಾಗಿದೆ. ನವೀಕರಣವನ್ನು ಪರಿಶೀಲಿಸಲು ಬಳಕೆದಾರರು ಆಪಲ್ ಆಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್ನಲ್ಲಿ ಪರೀಕ್ಷಿಸಬಹುದು.

    ಪ್ರಸ್ತುತ, ಇದು ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿಲ್ಲ, ಆದರೆ ಮುಂಬರುವ ದಿನಗಳಲ್ಲಿ ಲಭ್ಯವಾಗುತ್ತದೆ. ಸಂದೇಶ ಪ್ರತಿಕ್ರಿಯೆಗಳ ವೈಶಿಷ್ಟ್ಯವು ಇನ್ಸ್ಟಾಗ್ರಾಮ್ ಗಳು, ಸ್ಲ್ಯಾಕ್, ಟ್ವಿಟ್ಟರ್ ಮತ್ತು ಹೆಚ್ಚಿನವುಗಳಂತಹ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಇರುವಂತೆಯೇ ಲಭ್ಯವಾಗುತ್ತದೆ. ಟೆಲಿಗ್ರಾಮ್ ಮತ್ತು ಇನ್ಸ್ಟಾಗ್ರಾಮ್ ನಂತೆಯೇ ವಾಟ್ಸ್​ಆ್ಯಪ್ ನಲ್ಲೂ ಇನ್ನು ಮುಂದೆ ಬಳಕೆದಾರರು ಕೆಲವು ಕೂಲ್ ಮತ್ತು ಫನ್ನಿ ಎಮೋಜಿಗಳೊಂದಿಗೆ ಸಂದೇಶಗಳಿಗೆ ರಿಪ್ಲೈ ಮಾಡಬಹುದಾಗಿದೆ. ಆದರೆ ಆಯ್ದ ಬಳಕೆದಾರರಿಗೆ ಮಾತ್ರ ಈ ಫೀಚರ್ ಲಭ್ಯವಿರುತ್ತದೆ ಮತ್ತು ಶೀಘ್ರದಲ್ಲೇ ಎಲ್ಲಾ ಬಳಕೆದಾರರು ಉಪಯೋಗಿಸಲು ವಾಟ್ಸ್​ಆ್ಯಪ್ ಅನುವು ಮಾಡಿಕೊಡುತ್ತದೆ.

    ವಾಟ್ಸ್​ಆ್ಯಪ್ ಅನಿಮೇಟೆಡ್ ಎಮೋಜಿಗಳನ್ನು ಪ್ರಸ್ತುತ ನೀಡುತ್ತಿಲ್ಲವಾದರೂ, ಬಳಕೆದಾರರು ಈಗಾಗಲೇ ತಮ್ಮ ಅಪ್ಲಿಕೇಶನ್ನಲ್ಲಿರುವ ಸಾಮಾನ್ಯ ಎಮೋಜಿಗಳೊಂದಿಗೆ ಕೆಲವು ಸಂದೇಶಗಳಿಗೆ ಪ್ರತಿಕ್ರಿಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ವಾಟ್ಸ್ಯಾಪಿನಲ್ಲಿ ಸಂದೇಶಗಳಿಗೆ ಪ್ರತಿಕ್ರಿಯಿಸಲು, ಬಳಕೆದಾರರು ಮೇಸೇಜ್ ಮೇಲೆ ಟ್ಯಾಪ್ ಮಾಡಿದರೆ ಸಾಕು, ಅಪ್ಲಿಕೇಶನ್ ಎಮೋಜಿ ಬಾಕ್ಸ್ ಅನ್ನು ಪ್ರದರ್ಶಿಸುತ್ತದೆ. ನಂತರ ನೀವು ಅವುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು, ಅದರ ನಂತರ ನಿಮ್ಮ ಎಮೋಜಿಯು ಆ ಸಂದೇಶಕ್ಕೆ ಪ್ರತಿಕ್ರಿಯಿಸಲು ಸಹಾಯವಾಗುತ್ತದೆ.

    ಇದನ್ನೂ ಓದಿ: Amazon Sale: ಅಮೆಜಾನ್ ಸೇಲ್‍ನಲ್ಲಿ ಮಹಿಳೆಯರ ಈ ಏಳು ಬ್ಯಾಗುಗಳ ಮೇಲೆ ಭರ್ಜರಿ ಆಫರ್! ಈಗಲೇ ಶಾಪಿಂಗ್ ಶುರು ಮಾಡಿ

    ಎಮೋಜಿ ಪ್ರತಿಕ್ರಿಯೆಗಳ ಹೊರತಾಗಿ, ವಾಟ್ಸಾಪ್ 2GB ವರೆಗೆ ತ್ವರಿತ ಸಂದೇಶ ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳಬಹುದಾದ ಫೈಲ್‌ಗಳ ಗಾತ್ರವನ್ನು ಹೆಚ್ಚಿಸುತ್ತಿದೆ, ಇದು ಪ್ರಸ್ತುತ 100MB ಗರಿಷ್ಠ ಫೈಲ್ ಗಾತ್ರದಿಂದ 2GB ವರೆಗೆ ಹೆಚ್ಚಳವಾಗಿದೆ. ಇನ್ನೂ ವಾಟ್ಸ್​ಆ್ಯಪ್ ಗ್ರೂಪ್‍ಗೆ ನೀವು ಸೇರಿಸಬಹುದಾದ ಜನರ ಸಂಖ್ಯೆಯನ್ನು ಸಹ ವಾಟ್ಸ್​ಆ್ಯಪ್ ದ್ವಿಗುಣಗೊಳಿಸುತ್ತಿದೆ. ಕಂಪನಿಯು ತನ್ನ ಬ್ಲಾಗ್ ಪೋಸ್ಟಿನಲ್ಲಿ, ವಾಟ್ಸ್​ಆ್ಯಪ್ ಗುಂಪುಗಳಲ್ಲಿ ನೀವು ಸೇರಿಸಬಹುದಾದ ಜನರ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಹೇಳಿದೆ. ನವೀಕರಣದ ನಂತರ, ಬಳಕೆದಾರರು 512 ಜನರನ್ನು ಗುಂಪುಗಳಲ್ಲಿ ಸೇರಿಸಲು ಸಾಧ್ಯವಾಗುತ್ತದೆ.

    "ಖಾಸಗಿ, ಸುರಕ್ಷಿತ ಸಮುದಾಯಗಳನ್ನು ನಿರ್ಮಿಸುವ ಕೆಲಸ ಮಾಡುತ್ತದೆ ಮತ್ತು ಈ ಸುಧಾರಣೆಗಳ ಸರಣಿಯು ಜನರು ಮತ್ತು ಗುಂಪುಗಳು ಪರಸ್ಪರ ಹತ್ತಿರದಲ್ಲಿರಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ವಾಟ್ಸ್​ಆ್ಯಪ್ ತನ್ನ ಬ್ಲಾಗ್‍ನಲ್ಲಿ ಹೇಳಿದೆ.

    ಇದನ್ನೂ ಓದಿ: V23E ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಒಂದೊಳ್ಳೆ ಅವಕಾಶ! ವಿಶೇಷ ಕೊಡುಗೆ ಘೋಷಿಸಿದೆ Vivo

    “ಎಮೋಜಿ ಪ್ರತಿಕ್ರಿಯೆಗಳು ಈಗ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯಲ್ಲಿ ಲಭ್ಯವಿದೆ ಎಂದು ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಪ್ರತಿಕ್ರಿಯೆಗಳು ಹಸ್ಯಾಭರಿತವಾಗಿರುತ್ತವೆ, ವೇಗವಾಗಿರುತ್ತವೆ ಮತ್ತು ಅವು ಗುಂಪುಗಳಲ್ಲಿ ಓವರ್‌ಲೋಡ್ ಅನ್ನು ಕಡಿಮೆಗೊಳಿಸುತ್ತವೆ. ಭವಿಷ್ಯದಲ್ಲಿ ಇನ್ನೂ ವಿಶಾಲವಾದ ಅಭಿವ್ಯಕ್ತಿಗಳನ್ನು ಸೇರಿಸುವ ಮೂಲಕ ನಾವು ಅವುಗಳನ್ನು ಸುಧಾರಿಸುವುದನ್ನು ಮುಂದುವರಿಸುತ್ತೇವೆ, ” ಎಂದು ಮೆಟಾ ಮಾಲಿಕತ್ವದ ವಾಟ್ಸ್​ಆ್ಯಪ್ ಕಂಪನಿ ಹೇಳಿದೆ.

    2GB ಫೈಲ್‌ಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಎಂದು ಕಂಪನಿಯು ಹೇಳಿದೆ ಮತ್ತು ಬಳಕೆದಾರರು ತಮ್ಮ ವಾಟ್ಸ್​ಆ್ಯಪ್ ನಲ್ಲಿ ದೊಡ್ಡ ಫೈಲ್‌ಗಳನ್ನು ಹಂಚಿಕೊಳ್ಳುವಾಗ ವೈ-ಫೈ ಬಳಸಲು ಬಳಕೆದಾರರಿಗೆ ಸಲಹೆ ನೀಡುತ್ತದೆ.
    Published by:Pavana HS
    First published: