ಮೆಟಾ ಒಡೆತನದಲ್ಲಿರುವ ಬಹಳಷ್ಟು ಜನಪ್ರಿಯತೆಯಲ್ಲಿರುವ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಎಂದರೆ ಅದು ವಾಟ್ಸಾಪ್. ಈ ಆ್ಯಪ್ ತನ್ನ ಬಳಕೆದಾರರಿಗೆ ದಿನಕ್ಕೆ ಒಂದರಂತೆ ಹೊಸ ಹೊಸ ಸುದ್ದಿಗಳನ್ನು ನೀಡುತ್ತಲೇ ಇದೆ. ಅದರಲ್ಲೂ ಕಳೆದ ವರ್ಷಕ್ಕಿಂತ ಈ ಬಾರಿ ಮೊದಲ ತಿಂಗಳಲ್ಲೇ ಸಾಕಷ್ಟು ಫೀಚರ್ಸ್ಗಳನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಇನ್ನೂ ಹಲವಾರು ಅಪ್ಡೇಟ್ಗಳು ಬರಲಿದ್ದು, ಅವುಗಳೆಲ್ಲವೂ ಪ್ರಗತಿಯ ಹಂತದಲ್ಲಿದೆ ಎಂದು ಹೇಳಿದೆ. ವಾಟ್ಸಾಪ್ (WhatsApp) ಬಳಕೆದಾರರೂ ಭಾರತ ದೇಶದಲ್ಲೇ 550 ಮಿಲಿಯನ್ಗೂ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇದೀಗ ಜನವರಿ ತಿಂಗಳ ಅಂತ್ಯದಲ್ಲಿ ಐಓಎಸ್ (IOS) ವಾಟ್ಸಾಪ್ ಬಳಕೆದಾರರಿಗೆ ಹೊಸ ಅಪ್ಡೇಟ್ ಒಂದನ್ನು ಬಿಡುಗಡೆ ಮಾಡಿದೆ.
ಇದೀಗ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ತನ್ನ ಐಓಎಸ್ ಬಳಕೆದಾರರಿಗೆ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಇದಕ್ಕೆ ಇನ್ ಆ್ಯಪ್ ಬ್ಯಾನರ್ ಎಂದು ಹೆಸರಿಡಲಾಗಿದೆ. ಈ ಮೂಲಕ ಇನ್ಮುಂದೆ ಐಓಎಸ್ನಲ್ಲಿ ವಾಟ್ಸಾಪ್ ಬಳಕೆದಾರರು ಅನೌನ್ಸ್ಮೆಂಟ್ ಗ್ರೂಪ್ಗಳಲ್ಲಿ ಎಮೋಜಿ ರಿಯಾಕ್ಷನ್ ಅನ್ನು ಮಾಡಬಹುದಾಗಿದೆ.
ಇನ್ ಆ್ಯಪ್ ಬ್ಯಾನರ್ ಫೀಚರ್ ಹೇಗಿದೆ?
ವಾಟ್ಸಾಪ್ ಸದ್ಯ ಪರಿಚಯಿಸಿರುವ ಫೀಚರ್ ಇನ್ ಆ್ಯಪ್ ಬ್ಯಾನರ್ ಎಂಬುದಾಗಿದೆ. ಇದು ಈಗಾಗಲೇ ಐಓಎಸ್ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಈ ಫೀಚರ್ ಬರಲಿದೆ ಎಂದು ಕಂಪೆನಿ ಹೇಳಿದೆ. ಇನ್ನು ಈ ಇನ್ ಆ್ಯಪ್ ಬ್ಯಾನರ್ ಮೂಲಕ ಐಓಎಸ್ ಬಳಕೆದಾರರು ಅನೌನ್ಸ್ಮೆಂಟ್ ವಾಟ್ಸಾಪ್ ಗ್ರೂಪ್ನಲ್ಲಿ ಬಂದ ಮೆಸೇಜ್ಗಳಿಗೆ ಎಮೋಜಿ ರಿಯಾಕ್ಷನ್ ಅನ್ನು ಮಾಡಬಹುದಾಗಿದೆ.
ಹೇಗೆ ಲಭ್ಯವಾಗುತ್ತದೆ?
ಇನ್ ಆ್ಯಪ್ ಬ್ಯಾನರ್ ಫೀಚರ್ ಸದ್ಯ ಐಓಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಹೊಸ ಫೀಚರ್ ಅನ್ನು ಪಡೆಯಬೇಕಾದರೆ ಐಓಎಸ್ ಬಳಕೆದಾರರು ಆ್ಯಪ್ ಸ್ಟೋರ್ಗೆ ಭೇಟಿ ನೀಡುವ ಮೂಲಕ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ತದನಂತರದಲ್ಲಿ ಇನ್ ಆ್ಯಪ್ ಬ್ಯಾನರ್ ಫೀಚರ್ ಐಓಎಸ್ ಬಳಕೆದಾರರಿಗೆ ಲಭ್ಯವಾಗುತ್ತದೆ.
ಸರ್ಚ್ ಬೈ ಡೇಟ್ ಫೀಚರ್
ವಾಟ್ಸಾಪ್ ಇತ್ತೀಚೆಗೆ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಸರ್ಚ್ ಬೈ ಡೇಟ್ ಫೀಚರ್ ಅನ್ನು ಪರಿಚಯಿಸಿತ್ತು. ಈ ಮೂಲಕ ಯಾವುದೇ ಹಳೆಯ ಚಾಟ್ ಅನ್ನು ನೋಡಬೇಕಾದರೆ ದಿನಾಂಕವನ್ನು ನಮೂದಿಸುವ ಮೂಲಕ ನೋಡಬಹುದಾಗಿದೆ. ಇನ್ನು ಈ ಹಿಂದೆ ಯಾವುದೇ ಹಳೆಯ ಮೆಸೇಜ್ ಅನ್ನು ನೋಡಬೇಕಾದರೆ ಯಾವ ಚಾಟ್ ಅನ್ನು ನೋಡಬೇಕೋ ಅದರ ವಿಂಡೋ ಅನ್ನು ಓಪನ್ ಮಾಡಬೇಕೋ ಅದನ್ನು ಸ್ಕ್ರಾಲ್ ಮಾಡಿ ನೋಡಬೇಕು.
ಇದರಿಮದ ಸಮಯ ಕೂಡ ವ್ಯರ್ಥ. ಆದರೆ ಇನ್ಮುಂದೆ ಈ ರೀತಿಯ ಯಾವುದೇ ತೊಂದರೆ ಎದುರಾಗುವುದಿಲ್ಲ. ಕಾರಣ ವಾಟ್ಸಾಪ್ ಇದಕ್ಕಾಗಿಯೇ ಸರ್ಚ್ ಬೈ ಡೇಟ್ ಎಂಬ ಫೀಚರ್ ಅನ್ನು ಪರಿಚಯಿಸಿದೆ.
ಫೋಟೋ ಶೇರಿಂಗ್ ಫೀಚರ್
ವಾಟ್ಸಾಪ್ ಪರಿಚಯಿಸಿದ ಮತ್ತೊಂದು ಫೀಚರ್ ಎಂದರೆ ಫೋಟೋ ಶೇರಿಂಗ್ ಫೀಚರ್. ಈ ಫೀಚರ್ ಮೂಲಕ ವಾಟ್ಸಾಪ್ ಬಳಕೆದಾರರು ತಾವು ಇನ್ನೊಬ್ಬರಿಗೆ ಫೋಟೋವನ್ನು ಕಳುಹಿಸುವಾಗ ಅದೇ ಗುಣಮಟ್ಟದಲ್ಲಿ ಕಳುಹಿಸಬಹುದು. ಈ ಹಿಂದೆ ಒಂದು ಫೋಟೋವನ್ನು ತನ್ನಿಂದ ಇನ್ನೊಬ್ಬರಿಗೆ ಕಳುಹಿಸಬೇಕಾದರೆ ಅದರ ಗುಣಮಟ್ಟದಲ್ಲಿ ಸ್ವಲ್ಪ ವ್ಯತ್ಯಾಸ ಬರುತ್ತಿತ್ತು.
ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ಕಡಿಮೆ ಬೆಲೆಯಲ್ಲಿ ಪ್ರತೀದಿನ 2.5 ಜಿಬಿ ಡೇಟಾವನ್ನು ಪಡೆಯಬಹುದು
ಆದರೆ ಇನ್ಮುಂದೆ ಈ ತೊಂದರೆಗಳು ಎದುರಾಗುವುದಿಲ್ಲ. ಇನ್ಮುಂದೆ ಬಳಕೆದಾರರು ಯಾವುದೇ ಫೋಟೋವನ್ನು ಶೇರ್ ಮಾಡುವ ಸಂದರ್ಭದಲ್ಲಿ ಅವರಿಗೆ ಬೇಕಾದ ಗುಣಮಟ್ಟವನ್ನು ಆಯ್ಕೆ ಮಾಡಬಹುದಾಗಿದೆ. ಇದು ಗ್ರಾಹಕರ ಬಹು ಬೇಡಿಕೆಯ ಫೀಚರ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ