• Home
  • »
  • News
  • »
  • tech
  • »
  • ಇನ್ಮುಂದೆ WhatsApp ಬಳಕೆಗೂ ಹಣ ಪಾವತಿಸಬೇಕು!

ಇನ್ಮುಂದೆ WhatsApp ಬಳಕೆಗೂ ಹಣ ಪಾವತಿಸಬೇಕು!

ವಾಟ್ಸ ಪ

ವಾಟ್ಸ ಪ

WhatsApp Premium: ನಾವು ಮೊದಲೆಲ್ಲ ಮಾಡಿದಂತಹ ಮೆಸೆಜ್ ತಪ್ಪಿದಲ್ಲಿ ಅದನ್ನು ಡಿಲಿಟ್ ಮಾಡಿ ಇನ್ನೊಮ್ಮೆ ಮೇಸೇಜ್ ಮಾಡಬೇಕಿತ್ತು. ಆದರೆ ಮುಂದಿನ ದಿನದಲ್ಲಿ ಅದನ್ನು ರಿ ಎಡಿಟ್ ಮಾಡುವ ಆಯ್ಕೆಯನ್ನು ನೀಡಲಾಗುತ್ತೆ.

  • Share this:

    ಇದುವರೆಗೆ (WhatsApp) ವಾಟ್ಸ್‌ಆ್ಯಪ್ ಎನ್ನುವ App ಹಿಡನ್ ರೆವೆನ್ಯೂ ಮಾದರಿಯಲ್ಲಿ ಹಣಗಳಿಸುತ್ತಿತ್ತು. ಅದರೆ ಮುಂಬರುವ ದಿನದಲ್ಲಿ  ವಾಟ್ಸ್‌ಆ್ಯಪ್ ಕೂಡ ಪ್ರೀಮಿಯಂ ಮಾದರಿಯಲ್ಲಿ ಹಣಗಳಿಸಲು ಮುಂದಾಗುತ್ತಿದೆ. ಮತ್ತು ಹೊಸ ಮಾದರಿಯಲ್ಲಿ ಬಳಕೆದಾರರಿಗೆ ಉತ್ತಮ ಫೀಚರ್ ನೀಡಲ್ಲಿದ್ದಾರೆ.  ಅಯ್ಯೋ ಇದಕ್ಕೂ ಇನ್ನು ಹಣ ಹಾಕಬೇಕಾ? ಅನ್ನುವ ಚಿಂತೆ ಮಾಡಬೇಡಿ. ಈ (Premium) ಪ್ರೀಮಿಯಂ ವಾಟ್ಸಪ್ (Entrepreneurship ) ಉದ್ಯಮಿಗಳಿಗೆ ಮತ್ತು (Entrepreneur) ಉದ್ಯಮಕ್ಕಾಗಿ ಮಾಡಲಾಗುತ್ತಿದೆ. ಹಣದ ವಾಹಿವಾಟು ಇತರೆ ವಿಷಯಗಳು (Leak) ಸೋರಿಕೆ ಹಾಗು ಯಾವುದೇ ರಿತೀಯ ತೊಂದರೆ ಆಗದಿರುವಂತೆ ನಿಭಾಹಿಸಲು ಈ ಪ್ರೀಮಿಯಂ  ವಾಟ್ಸ್‌ಆ್ಯಪ್ ಬರಲಿದೆ.


    ಇದರಿಂದ ಉದ್ಯಮಿಗಳಿಗೆ ಹೆಚ್ಚು ಜನರೊಂದಿಗೆ (Video call) ವೀಡಿಯೋ ಕಾಲ್ ಮೂಲಕ ವ್ಯವಹಾರ ಮಾಡಬಹುದಾಗಿದೆ.   ವಾಟ್ಸ್‌ಆ್ಯಪ್ ಅನ್ನು4 (Device) ಡಿವ್ಯೆಸ್ ಮೂಲಕ ಒಂದೆ ಸಮಯದಲ್ಲಿ ಬಳಸಬಹುದಾಗಿದೆ. ಇದು Android Or I O S ಮೋಬೈಲ್ ಗಳಿಗೆ ಹೊಂದಿಕೊಳ್ಳುತ್ತದೆ. ಅದೇರೀತಿ ಇದು ಒಂದು ತಿಂಗಳ (Subscription) ಚಂದಾದಾರಿಕೆ ಮೂಲಕ ಬಳಸಬಹುದಾಗಿದೆ. ಮುಂದಿನ ದಿನದಲ್ಲಿ (Google Meet) ಗೂಗಲ್ ಮೀಟ್ ನಂತೆ ವೀಡಿಯೋ ಕಾಲ್ ಚರ್ಚೆಯ ಲಿಂಕ್ ಗಳನ್ನು ಹಂಚುವ (Feature) ಫೀಚರ್ ಸಹಾ ಬರಲಿದೆ.


    also you have to pay for whats app usage


    ಹಿಡನ್ ರೆವೆನ್ಯೂ ಮಾದರಿ ಎಂದರೇನು?
    ಸುಲಭವಾಗಿ ಹೇಳಬೇಕಾದ್ರೆ ನಾವು ಬಳಸುವ ಫೇಸ್​ಬುಕ್​ನಂತಹ ಆ್ಯಪ್​ಗಳು ಬಳಸುವ ಸಮಯದಲ್ಲಿ ಜಾಹಿರಾತು, ಇನ್ನಿತರ ವಿಷಯದಲ್ಲಿ ಹಣವನ್ನು ಗಳಿಸುತ್ತದೆ. ಆದರೆ ವಾಟ್ಸ್‌ಆ್ಯಪ್  ಮಾತ್ರ ಯಾವುದೇ ಜಾಹಿರಾತು ನೀಡುತ್ತಿರಲ್ಲಿಲ್ಲ. ಅದರೂ ಹಿಡನ್ ಮಾದರಿಯಲ್ಲಿ ಹಣಗಳಿಸುತ್ತಿತ್ತು. ಅಂದ್ರೆ ನಾವು ನಮ್ಮ  ವಾಟ್ಸ್‌ಆ್ಯಪ್  ನಲ್ಲಿ ನಮ್ಮ ಡಾಟವನ್ನು ಬೇರೊಂದು ಕಂಪನಿ ಜೊತೆಗೆ ಶೇರ್ ಮಾಡುವುದರ ಮೂಲಕ ಹಣಗಳಿಸುತ್ತಾರೆ.


    ಇದನ್ನೂ ಓದಿ: Jio 5G: ನೀವು ಜಿಯೋ ಬಳಕೆದಾರರಾಗಿದ್ದರೆ ಈಗಲೇ 5ಜಿ ಯೂಸ್ ಮಾಡಬಹುದು, ಮಿನಿಮಮ್ ರಿಚಾರ್ಜ್ ದರ ಪ್ರಕಟ


    ಈ ನಮ್ಮ ವಾಟ್ಸ್‌ಆ್ಯಪ್  ಡಾಟಾದಿಂದ ನಮ್ಮ ವಿಷಯವನ್ನು  ವಾಟ್ಸ್‌ಆ್ಯಪ್  ತಿಳಿದುಕೊಂಡು ತನ್ನ ಇನ್ನೊಂದು ಕಂಪನಿ ಅಂದ್ರೆ ಫೇಸ್ ಬುಕ್ ಆಪ್ ಈ ಡೇಟಾವನ್ನು ಬಳಸಿಕೊಂಡು. ನಮ್ಮ ಖಾತೆ   ಫೇಸ್​ಬುಕ್ ನಲ್ಲಿ ಇದ್ದರೆ. ನಮಗೆ ಹೊಂದುವಂತಹ ಜಾಹೀರಾತುವನ್ನು ನೀಡುತ್ತದೆ. ಇದರಿಂದ ವಾಟ್ಸ್‌ಆ್ಯಪ್  ಮತ್ತು ಫೇಸ್ ಬುಕ್ ಜೊತೆಗೆ ಹಣವನ್ನು ಮಾಡುತ್ತೆ. ಇದನ್ನು ಹಿಡನ್ ರೆವೆನ್ಯೂ ಎಂದು ಕರೆಯುತ್ತೆವೆ.


    ಇದನ್ನೂ ಓದಿ : WhatsApp ಪರಿಚಯಿಸಿದೆ ಹೊಸ ಫೀಚರ್! ಸಖತ್ತಾಗಿದೆ ನೋಡಿ




    ಬನ್ನಿ ವಾಟ್ಸ್​ಆ್ಯಪ್​ನ ಹೊಸ ಫೀಚರ್ ಏನಿದೆ ನೋಡೊಣ
    ನಾವು ನಮ್ಮ ವಾಟ್ಸ್‌ಆ್ಯಪ್  ಗ್ರೂಪ್ ಗಳಲ್ಲಿ ಪೋಲ್ ಕ್ರಿಯೆಟ್ ಮಾಡಬಹುದು. ಉದಾಹರಣೆ: ನಾವು ಟೂರ್ ಮಾಡೋಣ ಎನ್ನುವ ಟೈಟಲ್​ಗೆ ನಾಲ್ಕು ಜಾಗದ ಹೆಸರನ್ನು ಹಾಕಿ ಗ್ರೂಪ್ ನ ಸದಸ್ಯರು ತಮ್ಮ ಆಯ್ಕೆಯನ್ನು ಪೋಲ್ ಮಾಡಬಹುದು.


    ಆಫೀಸ್ ಮೀಟಿಂಗ್
    ಗೂಗಲ್ ಮೀಟ್ ಮಾದರಿಯಲ್ಲಿ ವೀಡಿಯೋ ಕಾಲ್ ಮಾಡಬಹುದು. ಮತ್ತು ವೀಡಿಯೋ ಕಾಲ್ ನ ಲೀಂಕ್ ಅನ್ನು ಶೇರ್ ಮಾಡಬಹುದಾಗಿದೆ. ಅಧಿಕ ಜನರೊಂದಿಗೆ ವೀಡಿಯೋ ಕಾಲ್ ನಲ್ಲಿ ವ್ಯವಹರಿಸಬಹುದಾಗಿದೆ.


    ಶೇರ್ ವಾಯ್ಸ್ ಆನ್ ಮೀಟಿಂಗ್
    ಇದುವರೆಗೆ   ವಾಟ್ಸ್‌ಆ್ಯಪ್ ನಲ್ಲಿ ಸ್ಟೇಟಸ್ ನಲ್ಲಿ ಪೋಟೋ, ವೀಡೀಯೋ ಮತ್ತು ಬರಹಗಳನ್ನು ಹಾಕಬಹುದಾಗಿತ್ತು. ಆದರೆ ಇನ್ನು ಮುಂಬರುವ ದಿನದಲ್ಲಿ ಧ್ವನಿಯನ್ನು ಹಾಕುವ ಆಯ್ಕೆಯನ್ನು ನೀಡಲಾಗುತ್ತದೆ.


    WhatsApp Avatar
    ಇದೊಂದು ಹೊಸ ವಿಚಾರ ವಾಟ್ಸ್‌ಆ್ಯಪ್​ ನಲ್ಲಿ ಇದುವರೆಗೆ ಇಮೋಜಿಗಳನ್ನು ಬಳಸಬಹುದಾಗಿತ್ತು. ಆದರೆ ಮುಂದಿನ ದಿನದಲ್ಲಿ ಅವತಾರ್ ಅನ್ನು ಬಳಸಬಹುದಾಗಿದೆ. ಮತ್ತು ನಮ್ಮ ಮುಖಕ್ಕೆ ಹೋಲುವಂತೆ ಹಾಕಬಹುದಾಗಿದೆ.


    ವಿಡಿಯೋ ಕಾಲ್​ನಲ್ಲಿ ಹೊಸ ಆಪ್ಷನ್
    ಕೆಲವೊಮ್ಮೆ ನಾವು ಗೊತ್ತಿಲ್ಲದೆ ತಪ್ಪಿ ಯಾರಿಗೊ ವೀಡಿಯೋ ಕಾಲ್ ಮಾಡುತ್ತೇವೆ. ಅದು ಡೈರೆಟ್ ಆಗಿ ಕಾಲ್ ಹೋಗುತ್ತದೆ, ಅದರೆ ಮುಂದಿನ ದಿನದಲ್ಲಿ 3 ನಿಮಿಷಗಳ ಕಾಲವಕಾಶ ನೀಡುವುದರಿಂದ ತಪ್ಪಿ ಕರೆ ಮಾಡಿದ್ದರೆ ಆ ಸಮಯದಲ್ಲಿ ಕರೆಯನ್ನು ಕಟ್ ಮಾಡಬಹುದಾಗಿದೆ.


    ಮೆಸೆಜ್ ಎಡಿಟ್ ಮಾಡಬಹುದು!
    ನಾವು ಮೊದಲೆಲ್ಲ ಮಾಡಿದಂತಹ ಮೆಸೆಜ್ ತಪ್ಪಿದಲ್ಲಿ ಅದನ್ನು ಡಿಲಿಟ್ ಮಾಡಿ ಇನ್ನೊಮ್ಮೆ ಮೇಸೇಜ್ ಮಾಡಬೇಕಿತ್ತು. ಆದರೆ ಮುಂದಿನ ದಿನದಲ್ಲಿ ಅದನ್ನು ರಿ ಎಡಿಟ್ ಮಾಡುವ ಆಯ್ಕೆಯನ್ನು ನೀಡಲಾಗುತ್ತೆ.

    Published by:Harshith AS
    First published: