news18-kannada Updated:November 6, 2020, 11:48 AM IST
ವಾಟ್ಸ್ಆ್ಯಪ್
ಫೇಸ್ಬುಕ್ ಒಡೆತನದ ವಾಟ್ಸಪ್ ಭಾರತದಲ್ಲಿ ಪೇಮೆಂಟ್ ಸೇವೆ ನೀಡಲು ಅನುಮತಿ ಪಡೆದುಕೊಂಡಿದೆ. ಹೀಗಾಗಿ ಶೀಘ್ರವೇ ವಾಟ್ಸಪ್ನಿಂದ ಯುಪಿಐ ಸೇವೆ ಸಿಗಲಿದೆ. ರಾಷ್ಟ್ರೀಯ ಪಾವತಿ ನಿಗಮ ಬುಧವಾರ ವಾಟ್ಸಪ್ಗೆ ಯುಪಿಐ ಸೇವೆ ಆರಂಭಿಸಲು ಅನುಮತಿ ನೀಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ವಾಟ್ಸಪ್ ಬರೋಬ್ಬರಿ 40 ಕೋಟಿ ಬಳಕೆದಾರರನ್ನು ಹೊಂದಿದೆ. ಇದರ ಜೊತೆಗೆ ಒಂದೂವರೆ ಕೋಟಿ ಸಣ್ಣ ಉದ್ದಿಮೆದಾರರು ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲು ವಾಟ್ಸಪ್ . ಈಗ ವಾಟ್ಸಪ್ನಿಂದ ಯುಪಿಐ ಪೇಮೆಂಟ್ ಬಂದರೆ ಗ್ರಾಹಕರಿಗೆ ಭಾರೀ ಲಾಭದಾಯಕವಾಗಲಿದೆ.
ವಾಟ್ಸಪ್ ಪೇಮೆಂಟ್ ಸೇವೆಯನ್ನು ನೀಡಲು 2018ರಲ್ಲೇ ನಿರ್ಧರಿಸಿತ್ತು. ಆದರೆ, ವಾಟ್ಸಪ್ ಭದ್ರತೆ ಮತ್ತು ಖಾಸಗಿ ಪಾಲಿಸಿ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಪೇಮೆಂಟ್ ಸೇವೆ ಬೇಟಾ ಮೋಡ್ನಲ್ಲೇ ಉಳಿದುಕೊಂಡಿತ್ತು. ಈಗ ವಾಟ್ಸಪ್ಗೆ ಯುಪಿಐ ಸೇವೆ ಆರಂಭಿಸಲು ಅವಕಾಶ ಸಿಕ್ಕಿದ್ದು, ಶೀಘ್ರವೇ ಪೇಮೆಂಟ್ ಸೇವೆ ಆರಂಭಗೊಳ್ಳಲಿದೆ. ಇತ್ತೀಚೆಗಷ್ಟೇ ವಾಟ್ಸಪ್ ಜಿಯೋ ಮಾರ್ಟ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.
Published by:
Rajesh Duggumane
First published:
November 6, 2020, 11:48 AM IST