WhatsApp: ಮೇ ಅಂತ್ಯದಲ್ಲಿ ವಾಟ್ಸ್​​​ಆ್ಯಪ್​​ ಕೊಡಲಿದೆ ಸಿಹಿ ಸುದ್ದಿ! ಏನದು?

WhatsApp Pay service: ವಾಟ್ಸ್​​ಆ್ಯಪ್ ಪೇ ಫೀಚರ್​​ ಮೇ ತಿಂಗಳಿನ ಅಂತ್ಯದಲ್ಲಿ ಭಾರತೀಯ ವಾಟ್ಸ್​​ಆ್ಯಪ್​ ಬಳಕೆದಾರರಿಗೆ ಸಿಗಲಿದೆ. ಈಗಾಗಲೇ ಐಸಿಐಸಿಐ, ಆ್ಯಕ್ಸಸ್​​ ಬ್ಯಾಂಕ್​​​, ಹೆಚ್​ಡಿಎಫ್​ಸಿ ಬ್ಯಾಂಕ್​ ಜೊತೆ ವ್ಯಾಟ್ಸ್​ ಆ್ಯಪ್​ ಕೈಜೋಡಿಸಿಕೊಂಡಿದೆ.

news18-kannada
Updated:May 7, 2020, 7:36 AM IST
WhatsApp: ಮೇ ಅಂತ್ಯದಲ್ಲಿ ವಾಟ್ಸ್​​​ಆ್ಯಪ್​​ ಕೊಡಲಿದೆ ಸಿಹಿ ಸುದ್ದಿ! ಏನದು?
ವಾಟ್ಸ್​ಆ್ಯಪ್​
  • Share this:
ಅತಿ ಹೆಚ್ಚು ಬಳಕೆದರಾರರನ್ನು ಹೊಂದಿರುವ ವಾಟ್ಸ್​ಆ್ಯಪ್​ ಯುಪಿಐ ಆಧಾರಿತ ಪೇಮೆಂಟ್​​​ ಸೇವೆಯನ್ನು ಆರಂಭಿಸುವುದಾಗಿ ಈ ಹಿಂದೆ ಹೇಳಿತ್ತು. ಆದರೆ ಈ ಸೇವೆಯು ಯಾವಾಗ ಬರಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿತ್ತು. ಇದೀಗ ಹೊರ ಬಿದ್ದಿರುವ ಮಾಹಿತಿಯ ಪ್ರಕಾರ ವಾಟ್ಸ್ಆ್ಯಪ್​ ಇದೇ ತಿಂಗಳಿನಲ್ಲಿ ಯುಪಿಐ ಆಧಾರಿತ ಪೇಮೆಂಟ್​ ಸೇವೆಯ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. 

ಕಳೆದ ಎರಡು ವರ್ಷಗಳಿಂದ ವಾಟ್ಸ್​​ ಆ್ಯಪ್ ಪೇಮೆಂಟ್​​ ಸೇವೆಗಾಗಿ​ ಬೇಟಾ ಟೆಸ್ಟ್​​​ ನಡೆಸುತ್ತಿದೆ. ಮಾತ್ರವಲ್ಲದೆ, ಈ ಸೇವೆಗಾಗಿ ಭಾರತದ ಮೂರು ಖಾಸಗಿ ಬ್ಯಾಂಕ್​ಗಳ ಜೊತೆ ಕೈಜೋಡಿಸಿದೆ. ಇದೀಗ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ವಾಟ್ಸ್​​ಆ್ಯಪ್ ಪೇ ಫೀಚರ್​​ ಮೇ ತಿಂಗಳಿನ ಅಂತ್ಯದಲ್ಲಿ ಭಾರತೀಯ ವಾಟ್ಸ್​​ಆ್ಯಪ್​ ಬಳಕೆದಾರರಿಗೆ ಸಿಗಲಿದೆ. ಈಗಾಗಲೇ ಐಸಿಐಸಿಐ, ಆ್ಯಕ್ಸಸ್​​ ಬ್ಯಾಂಕ್​​​, ಹೆಚ್​ಡಿಎಫ್​ಸಿ ಬ್ಯಾಂಕ್​ ಜೊತೆ ವ್ಯಾಟ್ಸ್​ ಆ್ಯಪ್​ ಕೈಜೋಡಿಸಿಕೊಂಡಿದೆ. ನಂತರದ ದಿನಗಳಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಜೊತೆಗೆಗೂ ಕೈಜೋಡಿಸಲಿದೆ. ಹಾಗಾಗಿ ಈ ನಾಲ್ಕು ಬ್ಯಾಂಕ್​ಗಳ ಜೊತೆ ಬೀಟಾ ಟೆಸ್ಟ್​ ಮಾಡಿಕೊಂಡಿದೆ ಎಂದು ಮನಿ ಕಂಟ್ರೋಲ್​​ ವರದಿ ಮಾಡಿದೆ.

ವಾಟ್ಸ್​ಆ್ಯಪ್​​ ಪೇಮೆಂಟ್​ ಸೇವೆಗಾಗಿ ನಾವು ಸರ್ಕಾರದ ಜೊತೆ ಕೆಲಸ ಮಾಡುತ್ತೇವೆ. ಇದರಿಂದ ಭಾರತೀಯ ಎಲ್ಲಾ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಪಾವತಿ ಸೇವೆ ಒದಗಿಸಬಹುದು. ವಾಟ್ಸ್​​ ಪೇಮೆಂಟ್​ ಡಿಜಿಟಲ್​ ಪೇಮೆಂಟ್​ ಸೇವೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಕೊವೀಡ್​-19 ಸಮಯದಲ್ಲಿ ಈ ಸೇವೆ ಮುಖ್ಯವಾಗಿದೆ. ಮಾತ್ರವಲ್ಲದೆ 400 ಮಿಲಿಯನ್​ ಭಾರತೀಯರಿಗೆ  ವಹಿವಾಟು ನಡೆಸಲು ಇದು ಸುರಕ್ಷಿತವಾಗಿದೆ ಎಂದು ವಾಟ್ಸ್​​​​ಆ್ಯಪ್​ ವಕ್ತಾರೊಬ್ಬರು ಮನಿ ಕಂಟ್ರೋಲ್​ಗೆ ತಿಳಿಸಿದ್ದಾರೆ.

ಭಾರತದಲ್ಲಿ ಈಗಾಗಲೇ ಯುಪಿಐ ಆಧಾರಿತ ಪೇಮೆಂಟ್​ ಆ್ಯಪ್​ಗಳು ಸಾಕಷ್ಟಿವೆ, ಗೂಗಲ್​ ಪೇ, ಫೋನ್​ ಪೇ, ಪೇಟಿಎಂ, ಭಾರತ್​ ಪೇ ಆ್ಯಪ್​ಗಳು ಬಳಕೆದಾರರಿಗೆ ಉತ್ತಮ ಫೀಚರ್ಸ್​ ನೀಡುತ್ತಿದೆ. ಇದೀಗ  ‘ವಾಟ್ಸ್​ಆ್ಯಪ್​ ಪೇ‘ ಕೂಡ ಇದರೊಂದಿಗೆ ಸೇರಿಕೊಳ್ಳಲಿದೆ.

ವಾಟ್ಸ್​ಆ್ಯಪ್​ ಪೇ‘ ಆ್ಯಪ್​ ಅನ್ನು 3 ಲಕ್ಷದಿಂದ ಸುಮಾರು 75 ಕೋಟಿಯಷ್ಟು ವಾರ್ಷಿಕ ವಹಿವಾಟು ನಡೆಸುವ ಸಣ್ಣ, ಮಧ್ಯಮ ಮತ್ತು ವ್ಯಾಪಾರಸ್ಥರು ಬಳಸಲು ಯೋಗ್ಯವಾಗುವಂತೆ ಸಿದ್ಧಪಡಿಸಲಾಗುತ್ತಿದೆ.

ವಾಟ್ಸ್​ಆ್ಯಪ್​ ಅನ್ನು ಪ್ರತಿದಿನ 400 ಮಿಲಿಯನ್​ ಜನರು ಸಕ್ರಿಯವಾಗಿ ಬಳಸುತ್ತಿದ್ದಾರೆ. ಹಾಗಾಗೀ ‘ವಾಟ್ಸ್​ಆ್ಯಪ್​ ಪೇ‘ ಕೂಡ ವೇಗವಾಗಿ ಜನಪ್ರಿಯತೆ ಪಡೆಯಲಿದೆ ಎಂಬ ವಿಶ್ವಾಸವನ್ನು ವಾಟ್ಸ್​ಆ್ಯಪ್​ ಹೊಂದಿದೆ.Video: ಮೊಬೈಲ್​​ನಲ್ಲಿ ಯ್ಯೂಟೂಬ್​ ವಿಡಿಯೋ ಬ್ಯಾಗ್​​ರೌಂಡ್​ ಪ್ಲೇ ಮಾಡುವುದು ಹೇಗೆ? ಇಲ್ಲಿದೆ ಟ್ರಿಕ್ಸ್​​​​​!
First published: May 7, 2020, 7:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading