ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಭಾರತ ಹೆಚ್ಚು ಒತ್ತುಕೊಡುತ್ತಿದೆ. ಹೀಗಿರುವಾಗ ಜನಪ್ರಿಯ ವಾಟ್ಸ್ಆ್ಯಪ್ ಕೂಡ ಯುಪಿಐ ಪೇಮೆಂಟ್ ಸೇವೆಯನ್ನು ಒದಗಿಸಲು ವಾಟ್ಸ್ಆ್ಯಪ್ ಪೇ ಆಯ್ಕೆಯನ್ನು ಭಾರತೀಯರಿಗಾಗಿ ಪರಿಚಯಿಸಿದೆ. ಸದ್ಯ ಕೆಲವು ಐಫೋನ್ ಮತ್ತು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಸಿಗುತ್ತಿದೆ. ಆದರೆ ವಾಟ್ಸ್ಆ್ಯಪ್ ಪೇ ಸೇವೆ ಸಿಗಬೇಕಾದರೆ ನೂತನ ವರ್ಷನ್ ಅನ್ನು ಡೌನ್ಲೋಡ್ ಮಾಡಬೇಕಿದೆ. ಅದರ ಮೂಲಕ ಯುಪಿಐ ಸೇವೆ ಸ್ಮಾರ್ಟ್ಫೋನ್ನಲ್ಲಿ ಬಳಕೆಗೆ ಸಿಗಲಿದೆ. ಇದಕ್ಕಾಗಿ ಭಾರತದ 160ಕ್ಕೂ ಹೆಚ್ಚಿನ ಬ್ಯಾಂಕ್ಗಳೊಂದಿದೆ ವಾಟ್ಸ್ಆ್ಯಪ್ ಸಂಪರ್ಕಸಾಧಿಸಿದೆ. ಗೂಗಲ್ ಪೇ, ಫೋನ್, ಪೇಟಿಯಂ ಆ್ಯಪ್ಗಳಿಗೆ ಪೈಪೋಟಿ ನೀಡಲು ವಾಟ್ಸ್ಆ್ಯಪ್ ಪೇ ಮುಂದಾಗಿದೆ.
ಭಾರತದಲ್ಲಿ ಸುಮಾರು 400 ಮಿಲಿಯನ್ ಜನರು ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ. ಆದರೆ ವಾಟ್ಸ್ಆ್ಯಪ್ ಪೇ 20 ಮಿಲಿಯನ್ ಜನರಿಗೆ ಬಳಕೆಗೆ ಸಿಗುತ್ತಿದೆ. ಹಂತ ಹಂತವಾಗಿ ಎಲ್ಲಾ ಬಳಕೆದಾರರಿಗೆ ಸಿಗುವಂತೆ ಅಭಿವೃದ್ಧಿಪಡಿಸುತ್ತಿದೆ. ರಾಷ್ಟ್ರೀಯ ಪಾವತಿ ನಿಗಮ ಎನ್ಸಿಪಿಐ ಥರ್ಡ್ ಪಾರ್ಟಿಆ್ಯಪ್ಗಳು ತಿಂಗಳಿಗೆ ಶೇ30 ರಷ್ಟು ವಹಿವಾಟು ನಡೆಸುವ ಸಲುವಾಗಿ ರೂಪುರೇಷೆ ಹಾಕಿಕೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಸಿಗಲಿದೆ.
ಏನಿದು ವಾಟ್ಸ್ಆ್ಯಪ್ ಪೇ?
ಭಾರತದಲ್ಲಿ 400 ಮಿಲಿಯನ್ ಜನರು ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ. ಇದೊಂದು ಮೆಸೆಂಜಿಂಗ್ ಆ್ಯಪ್ ಆಗಿದೆ. ಆದರಲ್ಲಿ ವಾಟ್ಸ್ಆ್ಯಪ್ ಪೇ ಡಿಜಿಟಲ್ ವಹಿವಾಟು ಮಾಡಲು ಉತ್ತೇಜನ ನೀಡುವ ವ್ಯವಸ್ಥೆಯಾಗಿದೆ. ಈಗಾಗಲೇ ಪೇಟಿಯಂ, ಫೋನ್ ಪೇ ಆ್ಯಪ್ಗಳು ಬ್ಯಾಂಕ್ ಖಾತೆಯ ಲಿಂಕ್ ಜೊತೆಗೆ ಹಣದ ವಹಿವಾಟು ನಡೆಸುತ್ತಿದೆ. ಅದರಂತೆ ವಾಟ್ಸ್ಆ್ಯಪ್ ಪೇ ಕೂಡ ಹಣದ ವಹಿವಾಟನ್ನು ಮಾಡಲು ನೆರವಾಗಲಿದೆ.
ಯಾವೆಲ್ಲಾ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬಹುದು?
ವಾಟ್ಸ್ಆ್ಯಪ್ ಪೇ ಯುಪಿಐ ಸೇವೆಯನ್ನು ನೀಡುವ ಸಲುವಾಗಿ ಸುಮಾರು 160ಕ್ಕೂ ಹೆಚ್ಚು ಬ್ಯಾಂಕ್ಗಳ ಜೊತೆ ಸಂಪರ್ಕದಲ್ಲಿದೆ. ಆಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಏರ್ಟೆಲ್ ಪೇಮೆಂಟ್ ಬ್ಯಾಂಕ್, ಆಂಧ್ರ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್, ಆರ್ಬಿಎಲ್ , ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್, ಯೆಸ್ ಬ್ಯಾಂಕ್ ಸೇರಿ ಇನ್ನು ಕೆಲವು ಬ್ಯಾಂಕ್ಗಳ ಖಾತೆಯನ್ನು ಲಿಂಕ್ ಮಾಡಬಹುದಾಗಿದೆ.
ನನ್ನ ಸ್ಮಾರ್ಟ್ಫೋನ್ನಲ್ಲಿ ವಾಟ್ಸ್ಆ್ಯಪ್ ಪೇ ಬಳಸುಹುದಾ?
ಭಾರತದಲ್ಲಿ ಹೆಚ್ಚಿಗರು ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ. ಹಾಗಾಗಿ ನೂತನ ವಾಟ್ಸ್ಆ್ಯಪ್ ಪೇ ಸೇವೆಯನ್ನು ಬಳಸಲು ಅಂದುಕೊಂಡಿರುತ್ತಾರೆ. ಪ್ಲೇ ಸ್ಟೋರ್ಗೆ ತೆರಳಿ ವಾಟ್ಸ್ಆ್ಯಪ್ ಅನ್ನು ಅಪ್ಡೇಡ್ ಮಾಡಿದರೆ ನೂತನ ಫೀಚರ್ ಸಿಗಲಿದೆ. ಅದರ ಮೂಲಕ ಎಲ್ಲಾ ಆ್ಯಂಡ್ರಾಯ್ಡ್ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ನಲ್ಲಿ ವಾಟ್ಸ್ಆ್ಯಪ್ ಪೇ ಸೇವೆಯನ್ನು ಬಳಸಬಹುದಾಗಿದೆ.
ಸಂಪರ್ಕದಲ್ಲಿರುವವರಿಗೆ ಪೇಮೆಂಟ್ ಮಾಡುವುದು ಹೇಗೆ?
-ವಾಟ್ಸ್ಆ್ಯಪ್ ಪೇ ಬಳಸಬೇಕಾದರೆ ಯುಪಿಐ ಜೊತೆಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬೇಕಿದೆ. ನಂತರ ಆ್ಯಂಡ್ರಾಯ್ಡ್ ಬಳಕೆದಾರರು ಸುಲಭವಾಗಿ ಈ ಸೇವೆಯನ್ನು ಬಳಸಬಹುದಾಗಿದೆ
-ಐಫೋನ್ ಬಳಕೆದಾರರಿಗಾಗಿ ಚಾಟ್ ಬಾಕ್ಸ್ ಬಳಿ ‘+’ ಐಕಾನ್ ನೀಡಲಾಗಿದೆ. ಟ್ಯಾಪ್ ಮಾಡುವ ಮೂಲಕ ಬಳಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ