ವಾಟ್ಸಾಪ್ (WhatsApp) ಎಂಬುದು ಸದ್ಯ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ವೇಗವಾದ ಸಂದೇಶ-ಸಂವಹನೆಯ ಸೇವೆಯಾಗಿದೆ. ಧ್ವನಿ ಅಥವಾ ವೀಡಿಯೊ ಕರೆಗಳು (Voice or video calls), ಡಾಕ್ಯುಮೆಂಟ್ ಸಂಗ್ರಹಣೆ (document storage) ಮತ್ತು ಹಣ ಪಾವತಿಗಳನ್ನು (money payments) ಮಾಡಲು ಸಹ ಈ ಅಪ್ಲಿಕೇಶನ್ ಅನ್ನು ಬಳಸಬಹುದು. ವಾಟ್ಸಾಪ್ ಅನ್ನು ಮೆಟಾ-ಮಾಲೀಕತ್ವದ ಪ್ಲಾಟ್ಫಾರ್ಮ್ (meta-owned platform) ಅನ್ನು ಪ್ರಪಂಚದಾದ್ಯಂತ ಎರಡು ಬಿಲಿಯನ್ ಪ್ಲಸ್ ಬಳಕೆದಾರರು ಬಳಸುತ್ತಾರೆ. ಈಗ, ಇತ್ತೀಚಿನ ವರದಿಯ ಪ್ರಕಾರ ಸುಮಾರು 500 ಮಿಲಿಯನ್ ವಾಟ್ಸ್ಅಪ್ ಬಳಕೆದಾರರ ಫೋನ್ ಸಂಖ್ಯೆಗಳನ್ನು ಹೊಂದಿರುವ ಡೇಟಾಬೇಸ್ ಅನ್ನು ಅಪರಿಚಿತ ಮಾರಾಟಗಾರರಿಂದ ಹ್ಯಾಕಿಂಗ್ ಕಮ್ಯೂನಿಟಿ (hacking community) ಪ್ಲಾಟ್ಪಾರ್ಮ್ನಲ್ಲಿ ಮಾರಾಟ ಮಾಡಲಾಗಿದೆ.
ಸೈಬರ್ನ್ಯೂಸ್ನ ವರದಿಯ ಪ್ರಕಾರ, ಡೇಟಾಬೇಸ್ ಭಾರತ ಸೇರಿದಂತೆ 84 ವಿವಿಧ ದೇಶಗಳಲ್ಲಿನ ಸಕ್ರಿಯ ವಾಟ್ಸ್ಅಪ್ ಬಳಕೆದಾರರಿಗೆ ಸೇರಿದ 487 ಮಿಲಿಯನ್ ಫೋನ್ ಸಂಖ್ಯೆಗಳನ್ನು ಹೊಂದಿದೆ ಎಂದು ಮಾರಾಟಗಾರ ಹೇಳಿಕೊಂಡಿದ್ದಾರೆ. "ಪ್ರಸಿದ್ಧ ಹ್ಯಾಕಿಂಗ್ ಕಮ್ಯೂನಿಟಿ ಪ್ಲಾಟ್ಪಾರ್ಮ್” ನಲ್ಲಿ ಪೋಸ್ಟ್ ಮಾಡಿದ ನಂತರ 487 ಮಿಲಿಯನ್ ವಾಟ್ಸ್ಅಪ್ ಬಳಕೆದಾರರ ಅಪ್-ಟು-ಡೇಟ್ ಡೇಟಾಬೇಸ್ ಅನ್ನು ಮಾರಾಟ ಮಾಡುತ್ತಿದೆ" ಎಂದು ವರದಿಯ ತನಿಖೆಯಲ್ಲಿ ಬಹಿರಂಗಗೊಂಡಿದೆ. ಅಂದರೆ ಇದರರ್ಥ ಪ್ರಪಂಚದಾದ್ಯಂತ ಒಟ್ಟು 2 ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರಲ್ಲಿ 25% ರಷ್ಟು ಜನರು ಈಗ ಅಪಾಯದಲ್ಲಿರಬಹುದು ಎಂದು ತಿಳಿಸಲಾಗಿದೆ.
ಸೋರಿಕೆಯಾದ ಫೋನ್ ಸಂಖ್ಯೆಗಳನ್ನು ಮಾರ್ಕೆಟಿಂಗ್ ಮತ್ತು ಫಿಶಿಂಗ್ ಸೇರಿದಂತೆ ಯಾವುದೇ ಕಾರಣಗಳಿಗಾಗಿ ಬಳಸಬಹುದು.
ಯಾವ ದೇಶದ ಬಳಕೆದಾರರು ಹೆಚ್ಚು ಅಪಾಯದಲ್ಲಿದ್ದಾರೆ?
ಸೋರಿಕೆಯಾದ ದಾಖಲೆಗಳಲ್ಲಿ 32 ಮಿಲಿಯನ್ಗಿಂತಲೂ ಹೆಚ್ಚು ದಾಖಲೆಗಳು ಯುಎಸ್ನಲ್ಲಿನ ಬಳಕೆದಾರರಿಂದ ಬಂದಿರುವ ದಾಖಲೆಗಳು ಆಗಿವೆ ಎಂದು ಹೇಳಲಾಗಿದೆ. ಇದರ ನಂತರ ಯುಕೆ (11 ಮಿಲಿಯನ್) ಬಳಕೆದಾರರ ದಾಖಲೆಗಳನ್ನು ಹೊಂದಿದೆ.
ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ಇತರ ರಾಷ್ಟ್ರಗಳೆಂದರೆ ಈಜಿಪ್ಟ್ (45 ಮಿಲಿಯನ್), ಇಟಲಿ (35 ಮಿಲಿಯನ್), ಸೌದಿ ಅರೇಬಿಯಾ (29 ಮಿಲಿಯನ್), ಫ್ರಾನ್ಸ್ (20 ಮಿಲಿಯನ್), ಟರ್ಕಿ (20 ಮಿಲಿಯನ್), ಮತ್ತು ರಷ್ಯಾ (10 ಮಿಲಿಯನ್). ಭಾರತದಿಂದ, 6 ಮಿಲಿಯನ್ಗಿಂತಲೂ ಹೆಚ್ಚು ವಾಟ್ಸ್ಅಪ್ ಬಳಕೆದಾರರು ಅಪಾಯಕ್ಕೆ ಒಳಗಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Whatsapp: ಹೊಸ ವೈಶಿಷ್ಟ್ಯತೆ ತರಲು ಮುಂದಾದ ವಾಟ್ಸಪ್
ಸೈಬರ್ ನ್ಯೂಸ್ ಹೇಳುತ್ತಿರೋದೇನು?
ಡೇಟಾ ಉಲ್ಲಂಘನೆಯ ಹಕ್ಕುಗಳನ್ನು ಪರಿಶೀಲಿಸಲು ಸುಮಾರು 2,000 ಸಂಖ್ಯೆಗಳ ಮಾದರಿಯನ್ನು ಸ್ವೀಕರಿಸಲಾಗಿದೆ ಮತ್ತು ಅವುಗಳು ವಾಟ್ಸ್ಅಪ್ ಬಳಕೆದಾರರಿಗೆ ಸೇರಿದವು ಎಂದು ಸೈಬರ್ ನ್ಯೂಸ್ ಹೇಳಿದೆ. ಡೇಟಾ ಸುರಕ್ಷತೆ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಮೆಟಾ ಮತ್ತು ಅದರ ಆನ್ಲೈನ್ ಪ್ಲಾಟ್ಫಾರ್ಮ್ಗಳು ಇದೇ ಮೊದಲಲ್ಲ. ಕಳೆದ ವರ್ಷ, ಮತ್ತೊಂದು ಮೆಟಾ-ಮಾಲೀಕತ್ವದ ಕಂಪನಿಯಾದ ಫೇಸ್ಬುಕ್ನ 500 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರ ಮಾಹಿತಿಯನ್ನು ಆನ್ಲೈನ್ನಲ್ಲಿ ಉಚಿತವಾಗಿ ನೀಡಿತ್ತು.
2019 ರಲ್ಲಿ, 419 ಮಿಲಿಯನ್ ಫೇಸ್ಬುಕ್ ಮತ್ತು 49 ಮಿಲಿಯನ್ ಇನ್ಸ್ಟಾಗ್ರಾಮ್ ಬಳಕೆದಾರರ ಡೇಟಾವನ್ನು ಬಹಿರಂಗಪಡಿಸಲಾಗಿದೆ. ಅದೇ ವರ್ಷದಲ್ಲಿ, ಇದು 267 ಮಿಲಿಯನ್ ಬಳಕೆದಾರರ ಡೇಟಾವನ್ನು ಬಹಿರಂಗಪಡಿಸಿದ ಮತ್ತೊಂದು ಉಲ್ಲಂಘನೆಯನ್ನು ಫೇಸ್ಬುಕ್ ಎದುರಿಸಿತು.
ನಿಮ್ಮ ಡೇಟಾ ಸುರಕ್ಷಿತವಾಗಿದೆಯೇ ಅಂತ ಹೀಗೆ ಪರಿಶೀಲಿಸಿ
ಪಟ್ಟಿ ಮಾಡಲಾದ ಫೋನ್ ಸಂಖ್ಯೆಗಳು ಸ್ಪ್ಯಾಮಿಂಗ್, ಫಿಶಿಂಗ್ ಮತ್ತು ಪ್ರಮುಖ ಅಪರಾಧ ಚಟುವಟಿಕೆಗಳಿಗೆ ಬಲಿಯಾಗಬಹುದಾದ್ದರಿಂದ ಇದು ಕಳವಳಕಾರಿ ಸಂಗತಿಯಾಗಿದೆ. ವಾಟ್ಸಾಪ್ ಬಳಕೆದಾರರು ಜಾಗರೂಕರಾಗಿರಬೇಕು. ಅಪರಿಚಿತ ಸಂಖ್ಯೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ಏಕೆಂದರೆ ಹ್ಯಾಕರ್ಗಳು ಸ್ಮಿಶಿಂಗ್ ಮತ್ತು ವಿಶಿಂಗ್ ಮೂಲಕ ಮಾಹಿತಿಯನ್ನು ಬಳಸಬಹುದು.
ಇದನ್ನೂ ಓದಿ: WhatsApp: ನಿಮ್ಮ ಚಾಟ್ ಅನ್ನು ಯಾರಾದ್ರೂ ಓದುತ್ತಿದ್ದಾರೆ ಎಂಬ ಅನುಮಾನವೇ? ಹಾಗಿದ್ರೆ ಅದನ್ನ ಹೀಗೆ ಪತ್ತೆ ಮಾಡಿ!
ಸ್ಮಿಶಿಂಗ್ ಮತ್ತು ವಿಶಿಂಗ್ ಎಂದರೆ ಹ್ಯಾಕರ್ಗಳು ಪಠ್ಯ ಅಥವಾ ಧ್ವನಿ ಮೇಲ್ ಮೂಲಕ ಮೋಸದ ಲಿಂಕ್ಗಳನ್ನು ಬಳಸುತ್ತಾರೆ. ಈ ಲಿಂಕ್ಗಳ ಮೇಲೆ ಕ್ಲಿಕ್ ಮಾಡುವುದರಿಂದ ಅಥವಾ ಅವುಗಳಿಗೆ ಪ್ರತಿಕ್ರಿಯಿಸುವುದರಿಂದ ಬಳಕೆದಾರರು ನಿರ್ಣಾಯಕ ಡೇಟಾ ಅಥವಾ ಹಣವನ್ನು ಕಳೆದುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ