ಜಿಯೋ ಫೋನ್​ನಲ್ಲಿ ವಾಟ್ಸಪ್​ ಬಳಕೆ ಹೇಗೆ?

news18
Updated:September 11, 2018, 3:34 PM IST
ಜಿಯೋ ಫೋನ್​ನಲ್ಲಿ ವಾಟ್ಸಪ್​ ಬಳಕೆ ಹೇಗೆ?
news18
Updated: September 11, 2018, 3:34 PM IST
ದೇಶದ ಅತ್ಯಂತ ಕಡಿಮೆ ದರ್ಜೆಯ ಸ್ಮಾರ್ಟ್​ಫೋನ್​ಗಳಲ್ಲಿ ಒಂದಾದ ರಿಲಯನ್ಸ್​​ ಜಿಯೋ ಹೊರ ತಂದಿರುವ ಜಿಯೋ ಮೊಬೈಲ್​ ಇದೀಗ ತನ್ನ ಗ್ರಾಹಕರಿಗೆ ಖ್ಯಾತ ಖಾಸಗಿ ಮೆಸೇಜಿಂಗ್​ ಸೇವೆಯಾದ ವಾಟ್ಸ​ಪ್​ ಸೇವೆಯನ್ನು ಆರಂಭಿಸಲು ತೀರ್ಮಾನಿಸಿದೆ.

ರಿಲಯನ್ಸ್​​ ಒಡೆತನದ ಮಧ್ಯಮ ದರ್ಜೆ ಮೊಬೈಲ್​ಗಳಾದ ಜಿಯೋ ಮೊಬೈಲ್​ ಫೋನ್​ಗಳಿಗೆ ಸೋಮವಾರದಿಂದ ವಾಟ್ಸ್​ಆ್ಯಪ್​ ಸೇವೆ ಆರಂಭವಾಗಿದೆ. ಈ ಮೊಬೈಲ್​ಗಳು KaiOs ಆಪರೇಟಿಂಗ್​ ಸಿಸ್ಟಂ ಮೂಲಕವೇ ಕಾರ್ಯ ನಿರ್ವಹಿಸುವ ತಂತ್ರಜ್ಞಾನ ಹೊಂದಿದೆ. ಹೀಗಾಗಿ ಜಿಯೋ ಫೋನ್​ ಗ್ರಾಹಕರಿಗಾಗಿಯೇ ಫೇಸ್​ಬುಕ್​ ಒಡೆತನದ ವಾಟ್ಸಪ್​ ಸಂಸ್ಥೆ ಹೊಸ ಶ್ರೀಣಿಯ ವಾಟ್ಸಪ್​ ಆ್ಯಪ್​ನ್ನು ಅಭಿವೃದ್ಧಿ ಪಡಿಸಿದೆ.

ಅತ್ಯಂತ ಕಡಿಮೆ ದರ್ಜೆಯ ಹಾಗೂ ಕೀಪ್ಯಾಡ್​ ಹೊಂದಿರುವ ಟಚ್​ ಸ್ಕ್ರೀನ್​ ಹೊಂದಿರದ ಮೊಬೈಲ್​ಗಳಿಗೆ ಇದೇ ಮೊದಲ ಬಾರಿಗೆ ವಾಟ್ಸಪ್​ ತನ್ನ ಸೇವೆಯನ್ನು ವಿಸ್ತರಿಸಿದೆ. ಕೆಲವೊಂದು ಕೀಗಳ ಮೂಲಕ ವಾಯ್ಸ್​ ರೆಕಾರ್ಡ್​​ ಮಾಡಿ ನಿಮ್ಮವರಿಗೆ ಕಳುಹಿಸಬಹುದು. ಈ ಸೇವೆಯನ್ನು ಆರಂಭಿಸಲು ಜಿಯೋ ಗ್ರಾಹಕರು ಮೊಬೈಲ್​ ನಂಬರ್​ ಮೂಲಕ ವೆರಿಫೈ ಮಾಡಬೇಕು. 'ಜಗತ್ತಿನ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ವಾಟ್ಸಪ್​ ಆ್ಯಪ್​ನ್ನು ನಮ್ಮ ಮೊಬೈಲ್​ನಲ್ಲಿ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿರುವ ವಾಟ್ಸಪ್​ ಸಂಸ್ಥೆಗೆ ನಾವು ಖುಣಿಯಾಗಿರುತ್ತೇವೆ' ಎಂದು ಜಿಯೋ ನಿರ್ಧೇಶಕ ಆಕಾಶ್​ ಅಂಬಾನಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸೆ.10 ರಿಂದ ಈ ಸೇವೆ ಆರಂಭವಾಗಿದ್ದರೂ ಸೆ.20ರೊಳಗೆ ಎಲ್ಲಾ ಜಿಯೋ ಫೋನ್​ಗಳಿಗೂ ಈ ಸೇವೆ ದೊರೆಯುವುದಾಗಿ ಸಂಸ್ಥೆ ಭರವಸೆ ನೀಡಿದೆ.

ನಿಮ್ಮ ಜಿಯೋ ಫೋನ್​ನಲ್ಲಿ ವಾಟ್ಸಪ್​ ಆರಂಭಿಸುವ ವಿಧಾನ
ಮೊದಲು ಆ್ಯಪ್​ಸ್ಟೋರ್​ನಲ್ಲಿ ವಾಟ್ಸಪ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ
Loading...

ನಿಮ್ಮ ಮೊಬೈಲ್​ ಸಂಖ್ಯೆಯನ್ನು ನಮೂಧಿಸಿ
ಒಟಿಪಿ ವೆರಿಫಿಕೇಶನ್​ ಬಳಿಕ ಸೇವೆಯನ್ನು ಬಳಸಿ

 
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626