iPhone ಬಳಸುತ್ತಿದ್ದೀರಾ? ಇನ್ಮುಂದೆ ಈ ಮಾಡೆಲ್‌ಗಳಲ್ಲಿ ವಾಟ್ಸ್‌ಆ್ಯಪ್ ವರ್ಕ್ ಆಗೋದಿಲ್ಲ!

ಹಳೆಯ ಐಫೋನ್ ಶೀಘ್ರದಲ್ಲಿಯೇ ವಾಟ್ಸ್‌ಆ್ಯಪ್ ಬೆಂಬಲವನ್ನು ಕಳೆದುಕೊಳ್ಳಬಹುದು. ಅಂದರೆ ನಿಮ್ಮ ಡಿವೈಸ್‌ನಲ್ಲಿ ವಾಟ್ಸ್‌ಆ್ಯಪ್ ಬಳಸಲು ನಿಮಗೆ ಸಾಧ್ಯವಾಗದಿರಬಹುದು. ಮೆಟಾ ಮಾಲೀಕತ್ವದ ತ್ವರಿತ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್ ತುಂಬಾ ಹಳೆಯ ಐಫೋನ್ ಮಾಡೆಲ್‌ಗಳಿಗೆ ಬೆಂಬಲವನ್ನು ಕೈಬಿಡುತ್ತಿದೆ. ಅಂದರೆ ಕೆಲವು ಆ್ಯಪಲ್ ಐಫೋನ್ ಬಳಕೆದಾರರಿಗೆ ಮುಂದಿನ ತಿಂಗಳಿನಿಂದ ಮೆಸೇಜಿಂಗ್ ಸೇವೆಯನ್ನು ಬಳಸಲಾಗುವುದಿಲ್ಲ.

ವಾಟ್ಸ್‌ಆ್ಯಪ್

ವಾಟ್ಸ್‌ಆ್ಯಪ್

  • Share this:
ನಿಸ್ಸಂದೇಹವಾಗಿ ವಾಟ್ಸ್‌ಆ್ಯಪ್ (WhatsApp) ಇಂದು ಜಗತ್ತಿನಾದ್ಯಂತ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಒಂದೆನಿಸಿದೆ. ನೀವಿನ್ನೂ ಹಳೆಯ ಐಫೋನ್ ಡಿವೈಸ್‌ಗಳನ್ನು (iPhone Device) ಬಳಸುತ್ತಿದ್ದೀರಿ ಎಂದರೆ ನೀವು ದೊಡ್ಡ ಸಂಕಷ್ಟದಲ್ಲಿ ಸಿಲುಕಿಹಾಕಿಕೊಳ್ಳುವುದು ಖಂಡಿತ. ನಿಮ್ಮ ಹಳೆಯ ಐಫೋನ್ ಶೀಘ್ರದಲ್ಲಿಯೇ ವಾಟ್ಸ್‌ಆ್ಯಪ್ ಬೆಂಬಲವನ್ನು ಕಳೆದುಕೊಳ್ಳಬಹುದು. ಅಂದರೆ ನಿಮ್ಮ ಡಿವೈಸ್‌ನಲ್ಲಿ ವಾಟ್ಸ್‌ಆ್ಯಪ್ ಬಳಸಲು ನಿಮಗೆ ಸಾಧ್ಯವಾಗದಿರಬಹುದು. ಮೆಟಾ (Meta) ಮಾಲೀಕತ್ವದ ತ್ವರಿತ ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್ ತುಂಬಾ ಹಳೆಯ ಐಫೋನ್ ಮಾಡೆಲ್‌ಗಳಿಗೆ (Old iPhone Model) ಬೆಂಬಲವನ್ನು ಕೈಬಿಡುತ್ತಿದೆ. ಅಂದರೆ ಕೆಲವು ಆ್ಯಪಲ್ ಐಫೋನ್ ಬಳಕೆದಾರರಿಗೆ ಮುಂದಿನ ತಿಂಗಳಿನಿಂದ ಮೆಸೇಜಿಂಗ್ ಸೇವೆಯನ್ನು ಬಳಸಲಾಗುವುದಿಲ್ಲ.

ಐಫೋನ್ ಮಾಡೆಲ್‌ಗಳಲ್ಲಿ ವಾಟ್ಸ್‌ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ
WABetaInfo ನ ಹಿಂದಿನ ವರದಿಯ ಪ್ರಕಾರ ವಾಟ್ಸ್‌ಆ್ಯಪ್ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಐಓಎಸ್ 10 ಹಾಗೂ 11 ಆಪರೇಟಿಂಗ್ ಸಿಸ್ಟಮ್‌ಗಳ ಮೆಸೇಜಿಂಗ್ ಆ್ಯಪ್‌ಗಾಗಿ ತನ್ನ ಸಪೋರ್ಟ್  ಅನ್ನು ಕೊನೆಗೊಳಿಸಲಿದೆ ಎನ್ನಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಆ್ಯಪಲ್‌ನ ಸಪೋರ್ಟ್ ಅಪ್‌ಡೇಟ್ ಹೇಳಿರುವಂತೆ ವಾಟ್ಸ್‌ ಆ್ಯಪ್ ಇನ್ನುಮುಂದೆ ಹಳೆಯ ಐಫೋನ್ ಮಾಡೆಲ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದಾಗಿದೆ.

ಸೂಚನೆ ನೀಡಲಿರುವ ವಾಟ್ಸ್‌ಆ್ಯಪ್
ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಬೆಂಬಲವನ್ನು ಕೊನೆಗೊಳಿಸುವ ಮುನ್ನ ವಾಟ್ಸ್‌ಆ್ಯಪ್ ನೇರವಾಗಿ ಆ್ಯಪ್ ಮೂಲಕ ಬಳಕೆದಾರರಿಗೆ ಸೂಚನೆಯನ್ನು ನೀಡುತ್ತದೆ. ಅಂತೆಯೇ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್‌ಗೆ ಅಪ್‌ಗ್ರೇಡ್ ಮಾಡಲು ಹಲವಾರು ರಿಮೈಂಡರ್‌ಗಳನ್ನು ಕೂಡ ಹಂಚಿಕೊಳ್ಳುತ್ತದೆ. ಆದರೆ ಹಾರ್ಡ್‌ವೇರ್ ಮಿತಿಗಳ ಕಾರಣ ಹಲವಾರು ಡಿವೈಸ್‌ಗಳಿಗೆ ಅಪ್‌ಗ್ರೇಡ್ ಮಾಡಲಾಗುವುದಿಲ್ಲ ಮತ್ತು ಆ್ಯಪ್ ಅನ್ನು ಡಿವೈಸ್‌ಗಳು ಕಳೆದುಕೊಳ್ಳುತ್ತವೆ.

ಇದನ್ನೂ ಓದಿ:  Game Streaming App ಅನ್ನು ಸ್ಥಗಿತಗೊಳಿಸಲು ಮುಂದಾದ ಫೇಸ್​​ಬುಕ್​! ಮೆಟಾ ಯೋಚನೆ ವರ್ಕೌಟ್ ಆಗಿಲ್ವಾ?

ವಾಟ್ಸ್‌ ಆ್ಯಪ್‌ನ ಬೆಂಬಲ ಪುಟ ಉಲ್ಲೇಖಿಸಿರುವಂತೆ, ಓಎಸ್ 4.1 ಹಾಗೂ ಹೊಸ ಓಎಸ್ ಚಾಲನೆಯ ಆ್ಯಂಡ್ರಾಯ್ಡ್ ಹಾಗೂ ಐಓಎಸ್ 12 ಮತ್ತು ಹೊಸ ಆವೃತ್ತಿಯ ಐಫೋನ್ ಜೊತೆಗೆ ಜಿಯೋಫೋನ್ ಹಾಗೂ ಜಿಯೋಫೋನ್ 2 ಸೇರಿದಂತೆ KaiOS 2.5.0 ಹಾಗೂ ಹೊಸ ಆವೃತ್ತಿಗಳಿಗೆ ಬೆಂಬಲವನ್ನು ಒದಗಿಸುತ್ತದೆ ಮತ್ತು ಶಿಫಾರಸು ಮಾಡುತ್ತದೆ ಎಂದು ಉಲ್ಲೇಖಿಸಿದೆ.

ಓಎಸ್ ಅಪ್‌ಗ್ರೇಡ್
ಆ್ಯಪಲ್ ಐಫೋನ್ 5 ಎಸ್, 6, ಅಥವಾ 6 ಎಸ್ ಬಳಕೆದಾರರು ವಾಟ್ಸ್‌ ಆ್ಯಪ್‌ ಆ್ಯಪ್ ಬಳಸುವುದನ್ನು ಮುಂದುವರಿಸಲು ಡಿವೈಸ್ ಓಎಸ್ ಅನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಐಓಎಸ್ 12 ಗಾಗಿ ಬೆಂಬಲದ ಅಂತ್ಯ ಎಂದರೆ ಐಫೋನ್ 5 ಹಾಗೂ 5 ಸಿ ಬಳಸುವವರು ಅಕ್ಟೋಬರ್‌ನಿಂದ ವಾಟ್ಸ್‌ ಆ್ಯಪ್‌ ಬಳಸಲು ಸಾಧ್ಯವಾಗುವುದಿಲ್ಲ, ಏಕೆಂದರೆ ಈ ಡಿವೈಸ್‌ಗಳು ಐಓಎಸ್ 12 ಅನ್ನು ಬೆಂಬಲಿಸುವುದಿಲ್ಲ ಎಂದಾಗಿದೆ.

ಇದನ್ನೂ ಓದಿ:  Snapchat: ಸ್ನಾಪ್​ಚಾಟ್​ಗೆ ಬಂದಿದೆ ಡ್ಯುಯೆಲ್ ಕ್ಯಾಮೆರಾ ಫೀಚರ್​! ಇದನ್ನು ಬಳಸೋದು ಹೇಗೆ ಗೊತ್ತಾ?

ಡಿವೈಸ್‌ಗಳು ಅಂತೆಯೇ ಸಾಫ್ಟ್‌ವೇರ್‌ಗಳು ಆಗಾಗ್ಗೆ ಬದಲಾಗುತ್ತಿರುತ್ತವೆ ಹಾಗಾಗಿ ವಾಟ್ಸ್‌ ಆ್ಯಪ್‌ ನಿಯಮಿತವಾಗಿ ಓಎಸ್‌ಗಳನ್ನು ಪರಿಶೀಲಿಸುತ್ತದೆ ಮತ್ತು ಅಪ್‌ಡೇಟ್‌ಗಳನ್ನು ಮಾಡುತ್ತಿರುತ್ತದೆ. ಯಾವುದು ಬೆಂಬಲವನ್ನು ನಿಲ್ಲಿಸುತ್ತದೆ ಎಂಬುದನ್ನು ಆಯ್ಕೆಮಾಡಲು, ಪ್ರತೀ ವರ್ಷ ವಾಟ್ಸ್‌ ಆ್ಯಪ್‌ ಇತರ ತಂತ್ರಜ್ಞಾನ ಕಂಪೆನಿಗಳಂತೆಯೇ ಯಾವ ಡಿವೈಸ್‌ಗಳು ಹಾಗೂ ಸಾಫ್ಟ್‌ವೇರ್ ಹಳೆಯದು ಹಾಗೂ ಎಷ್ಟು ಕಡಿಮೆ ಜನರು ಅದನ್ನು ಬಳಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುತ್ತದೆ. ಈ ಡಿವೈಸ್‌ಗಳು ಇತ್ತೀಚಿನ ಭದ್ರತಾ ಅಪ್‌ಡೇಟ್‌ಗಳನ್ನು ಹೊಂದಿಲ್ಲದಿರಬಹುದು ಅಥವಾ ವಾಟ್ಸ್‌ ಆ್ಯಪ್‌ ಅನ್ನು ಚಾಲನೆ ಮಾಡಲು ಕಾರ್ಯವಿಧಾನದ ಕೊರತೆಯನ್ನು ಎದುರಿಸುತ್ತಿರಬಹುದು.

ಐಫೋನ್ 6 ಹಾಗೂ 6 ಎಸ್‌ ನಲ್ಲಿಯೂ ಕಾರ್ಯನಿರ್ವಹಿಸುವುದಿಲ್ಲವೇ!
ಆ್ಯಪಲ್ ತನ್ನ ಐಓಎಸ್ 15.4 ಅಪ್‌ಡೇಟ್ ಕುರಿತು ಈ ಹಿಂದೆಯೇ ತಿಳಿಸಿದ್ದು ಇದೀಗ ಟೆಕ್ ದಿಗ್ಗಜ ಐಓಎಸ್ 16 ಅಪ್‌ಡೇಟ್ ಅನ್ನು ಶೀಘ್ರದಲ್ಲಿಯೇ ಪರಿಚಯಿಸಲಿದೆ. ಇದೇ ಸಮಯದಲ್ಲಿ 72% ದಷ್ಟು ಐಫೋನ್‌ಗಳು ಇನ್‌ಸ್ಟಾಲ್ ಆದ ಐಓಎಸ್‌ನ ಇತ್ತೀಚಿನ ಆವೃತ್ತಿಯನ್ನು ಪಡೆದುಕೊಳ್ಳಲಿವೆ. ಐಫೋನ್ 5 ಹಾಗೂ 5 ಸಿ ಸರಿಸುಮಾರು ಹತ್ತು ವರ್ಷಗಳ ಹಿಂದೆ ಲಾಂಚ್ ಆಗಿದ್ದವು. ಪ್ರತೀ ವರ್ಷವು ಹಳೆಯ ಐಫೋನ್ ಮಾಡೆಲ್‌ಗಳನ್ನು ಕಿತ್ತೊಗೆಯುವ ಟ್ರೆಂಡ್ ಅನ್ನು ವಾಟ್ಸ್‌ ಆ್ಯಪ್‌ ಮುಂದುವರಿಸುತ್ತಾ ಬಂದರೆ ಮುಂದಿನ ಸರದಿ ಐಫೋನ್ 6 ಹಾಗೂ 6 ಎಸ್‌ನದಾಗಿರುತ್ತದೆ ಅಂದರೆ ಹೆಚ್ಚು ಕಡಿಮೆ 2023 ರಲ್ಲಿ ಇದು ಸಂಭವಿಸಬಹುದು.
Published by:Ashwini Prabhu
First published: