WhatsApp: ಮೆಸೇಜ್​ಗಳಿಂದ ಕಿರಿಕಿರಿ ಆಗುತ್ತಿದೆಯಾ?; ಶೀಘ್ರವೇ ಬರಲಿದೆ ವಾಟ್ಸ್ಆ್ಯಪ್ ‘ಮ್ಯೂಟ್ ಆಲ್ವೇಸ್’ ಫೀಚರ್

WhatsApp New Update: ಭಾರತದಲ್ಲಿ ಬಹುಪಾಲು ಜನರು ವಾಟ್ಸ್​ಆ್ಯಪ್​​​ ಬಳಸುತ್ತಿದ್ದಾರೆ. ದೈನಂದಿನ ವ್ಯವಹಾರದಿಂದ ಹಿಡಿದು ಎಲ್ಲಾ  ಕೆಲಸವನ್ನು ಅದರಲ್ಲಿ ಮಾಡುತ್ತಿದ್ದಾರೆ.

ವಾಟ್ಸ್ಆ್ಯಪ್

ವಾಟ್ಸ್ಆ್ಯಪ್

  • Share this:
    ವಾಟ್ಸ್​ಆ್ಯಪ್​​ನಲ್ಲಿ ಪದೇ ಪದೇ ಬರುವ ಸಂದೇಶದಿಂದ ಕಿರಿಕಿರಿ ಉಂಟಾಗುತ್ತಿದೆಯಾ? ಹಾಗಿದ್ದರೆ ಅಂತಹ ತೊಂದರೆಯಿಂದ ಪಾರಾಗಲು ವಾಟ್ಸ್​ಆ್ಯಪ್​​ ‘ಮ್ಯೂಟ್​ ಆಲ್ವೇಸ್’​ ಎಂಬ ಹೊಸ ಫೀಚರ್​ ಅನ್ನು ಪರಿಚಯಿಸಲು ಮುಂದಾಗಿದೆ. ಅಧಿಕ ಜನರನ್ನು ಹೊಂದಿರುವ ವಾಟ್ಸ್​ಆ್ಯಪ್​ ಹೊಸ ಫೀಚರ್​​ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಬಳಕೆದಾರರ ತೊಂದರೆಯಾಗುತ್ತಿರುವ ಸಂದೇಶದಿಂದ ಪಾರು ಮಾಡಲು ‘ಮ್ಯೂಟ್​​ ಆಲ್ವೇಸ್’​ ಎಂಬ ಫೀಚರ್​ ಪರಿಚಯಿಸುತ್ತಿದೆ. ಸದ್ಯದಲ್ಲೇ ಈ ನೂತನ ಫೀಚರ್​​ ಬಳಕೆದಾರರ ಬಳಕೆಗೆ ಸಿಗಲಿದೆ.

    ಭಾರತದಲ್ಲಿ ಬಹುಪಾಲು ಜನರು ವಾಟ್ಸ್​ಆ್ಯಪ್​​​ ಬಳಸುತ್ತಿದ್ದಾರೆ. ದೈನಂದಿನ ವ್ಯವಹಾರದಿಂದ ಹಿಡಿದು ಎಲ್ಲಾ  ಕೆಲಸವನ್ನು ಅದರಲ್ಲಿ ಮಾಡುತ್ತಿದ್ದಾರೆ. ಹೀಗಿರುವಾಗ ದಿನ ಪೂರ್ತಿ ಸಂದೇಶಗಳನ್ನು ವಾಟ್ಸ್​ಆ್ಯಪ್​​ನಲ್ಲಿ ಹರಿದಾಡುತ್ತಿರುತ್ತದೆ. ಕೆಲವೊಮ್ಮೆ ಇದರಿಂದ ತೊಂದರೆಯುಂಟಾಗುತ್ತದೆ. ಹೀಗಾಗಿ ಬೇಡವಾದ ಸಂದೇಶಗಳನ್ನು ಮ್ಯೂಟ್​ ಮಾಡಲು ಮ್ಯೂಟ್​ ಆಲ್ವೇಸ್​ ಎಂಬ ಫೀಚರ್​ ಅನ್ನು ಪರಿಚಯಿಸಲು ವಾಟ್ಸ್​ಆ್ಯಪ್​ ​ಮುಂದಾಗಿದೆ.

    ಸದ್ಯ ಬಳಕೆದಾರರಿಗೆ ವಾಟ್ಸ್​​ಆ್ಯಪ್​ ನೋಟಿಫಿಕೇಷನ್​ ತಪ್ಪಿಸಲು ಕೆಲವು ಆಯ್ಕೆಯನ್ನು ನೀಡಲಾಗಿದೆ. ‘8 ಗಂಟೆ’, ‘1 ವಾರ’, ‘1 ವರ್ಷದ’ ಆಯ್ಕೆಯನ್ನುನೀಡಿದೆ. ಇದರ ಮೂಲಕ ಬೇಡವಾದ ಗ್ರೂಪ್​ಗಳನ್ನು ಮ್ಯೂಟ್​ ಮಾಡಬಹುದಾಗಿದೆ. ಆದರೀಗ ನಿರಂತರ ಸಂದೇಶವನ್ನು ಮ್ಯೂಟ್​ ಮಾಡುವ ಸಲುವಾಗಿ ‘ಮ್ಯೂಟ್​ ಆಲ್ವೇಸ್​’ ಎಂಬ ಆಯ್ಕೆಯನ್ನು ವಾಟ್ಸ್​ಆ್ಯಪ್​ ​ ಪರಿಚಯಿಸಲು ಯೋಜನೆ ಹಾಕಿಕೊಂಡಿದೆ.

    ವಾಟ್ಸ್​ಆ್ಯಪ್​ ಬೇಟಾ ಆವೃತ್ತಿ 2.20.201ರಲ್ಲಿ ಲಭ್ಯವಿದೆ. ಈ ಹಂತದಲ್ಲಿ ಯಶಸ್ವಿಯಾದರೆ ಎಲ್ಲಾ ಬಳಕೆದಾರರಿಗೆ ನೂತನ ಫೀಚರ್​ ಬಳಕೆಗೆ ಸಿಗಲಿದೆ. ಚಾಟ್​ ಅಥವಾ ಗ್ರೂಪ್​​ ಮೇಲೆ ಲಾಂಗ್​ ಪ್ರೆಸ್​ ಮಾಡಿದರೆ ಮ್ಯೂಟ್​ ಆಲ್ವೇಸ್​ ಎಂಬ ಆಯ್ಕೆ ಕಾಣಸಿಗಲಿದೆಯಂತೆ.
    Published by:Harshith AS
    First published: