WhatsApp‌ಗೆ ಶೀಘ್ರದಲ್ಲೇ ಬರಲಿದೆ ಈ ಹೊಸ ಫೀಚರ್‌ಗಳು..!

WhatsApp Upcomming Features: ವಾಟ್ಸ್‌ಆ್ಯಪ್‌ ಪ್ರಸ್ತುತ ಧ್ವನಿ ರೆಕಾರ್ಡಿಂಗ್‌ಗಳನ್ನು (Voice Recording) ದಾಖಲಿಸುವಾಗ ಅವುಗಳನ್ನು ನಿಲ್ಲಿಸುವ (ವಿರಾಮಗೊಳಿಸುವ) ಫೀಚರ್‌ನ ಮೇಲೆ ಕಾರ್ಯನಿರ್ವಹಿಸುತ್ತಿದೆ.

WhatsApp

WhatsApp

 • Share this:

  WhatsApp New Features: ವಾಟ್ಸ್‌ಆ್ಯಪ್‌ ಇತ್ತೀಚೆಗೆ ತಾನೇ ತನ್ನ ಆ್ಯಂಡ್ರಾಯ್ಡ್ ಆ್ಯಪ್‌ನ ಬೀಟಾ ಆವೃತ್ತಿಯಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ (ಕೋಡ್‌ನಂತೆ ಮಾರ್ಪಡಿಸಲಾದ) ಮಾಡಲಾದ ಚಾಟ್ ಬ್ಯಾಕಪ್‌ಗಳನ್ನು (Chat Backup) ಬಿಡುಗಡೆ ಮಾಡಲು ಆರಂಭಿಸಿದೆ. ಇದೀಗ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಫೀಚರ್‌ಗಳು ವಾಟ್ಸ್‌ಆ್ಯಪ್‌ಗೆ ಬರಲಿವೆ ಎಂಬುದಾಗಿ ವರದಿ ತಿಳಿಸಿದೆ. ಹಾಗಿದ್ದರೆ ಆ ಫೀಚರ್‌ಗಳೇನು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.


  ಚಾಟ್‌ ಬ್ಯಾಕಪ್‌ಗಳನ್ನು ನಿರ್ವಹಿಸುವುದು:


  WABetaInfo ವರದಿಯ ಪ್ರಕಾರ ಕ್ಲೌಡ್‌ನಲ್ಲಿ ಸೇವ್ ಮಾಡಲಾದ ಚ್ಯಾಟ್ ಬ್ಯಾಕಪ್‌ಗಳ ಗಾತ್ರ ಆಧರಿಸಿ ಅವುಗಳನ್ನು ನಿರ್ವಹಿಸಲು ಸಾಧ್ಯವಾಗುವಂತಹ ಫೀಚರ್ ಮೇಲೆ ವಾಟ್ಸ್‌ಆ್ಯಪ್‌ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಆಡಿಯೋ ಫೈಲ್‌ಗಳು (Audio Files), ಫೋಟೋಗಳು (Photos), ವಿಡಿಯೋಗಳು (Videos) ಹೀಗೆ ಬಳಕೆದಾರರು ತಮಗೆ ಬೇಕಾದ ಡೇಟಾವನ್ನು ತಮ್ಮ ಚಾಟ್‌ ಬ್ಯಾಕಪ್‌ನ ಭಾಗವಾಗಿ ಸೇವ್ ಮಾಡಬಹುದಾಗಿದೆ.


  2.21.21.5 ಬೀಟಾ ಆವೃತ್ತಿಯಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾದ ಬ್ಯಾಕಪ್‌ಗಳನ್ನು ಸಕ್ರಿಯಗೊಳಿಸಿದ ನಂತರ ವಾಟ್ಸ್‌ಆ್ಯಪ್‌ ಹೆಚ್ಚಿನ ಬೀಟಾ ಟೆಸ್ಟರ್‌ಗಳಿಗೆ ಬ್ಯಾಕಪ್ ಎನ್‌ಕ್ರಿಪ್ಟ್ ಮಾಡುವ ಫೀಚರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆ್ಯಂಡ್ರಾಯ್ಡ್ ಆವೃತ್ತಿ 2.21.21.7ಗಾಗಿ ವಾಟ್ಸ್‌ಆ್ಯಪ್‌ನಲ್ಲಿ ಈ ಅಪ್‌ಡೇಟ್ ಲಭ್ಯವಿದೆ. ಕಂಪನಿಯು ಹಂಚಿಕೊಂಡ ಫೀಚರ್‌ನ ಸ್ಕ್ರೀನ್‌ಶಾಟ್ ಒಮ್ಮೆ ದೊರಕಿದ ನಂತರ, ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ತಮ್ಮ ಚಾಟ್ ಬ್ಯಾಕಪ್‌ ಗಾತ್ರ ನಿಯಂತ್ರಿಸುವ ಒಟ್ಟು ಐದು ನಿಯಂತ್ರಣಗಳು ದೊರೆಯಲಿವೆ. ಇದು ಫೋಟೋಗಳು, ವಿಡಿಯೋಗಳು, ಆಡಿಯೋ ಫೈಲ್‌ಗಳು, ಡಾಕ್ಯುಮೆಂಟ್‌ಗಳು ಹಾಗೂ ಇತರ ಮೀಡಿಯಾ ಫೈಲ್‌ಗಳನ್ನು ಒಳಗೊಂಡಿದೆ. ಈ ಯಾವುದೇ ಬಟನ್ ಅನ್ನು ಆನ್ ಅಥವಾ ಆಫ್‌ನಂತೆ ಟಾಗಲ್ ಮಾಡುವುದರಿಂದ ಗೂಗಲ್ ಕ್ಲೌಡ್‌ನಲ್ಲಿ ಚಾಟ್ ಬ್ಯಾಕಪ್‌ನಿಂದ ವಾಟ್ಸ್‌ಆ್ಯಪ್‌ ಬಳಕೆದಾರರನ್ನು ಒಳಸೇರಿಸಲು ಅಥವಾ ಹೊರಗಿಡಲು ಸಾಧ್ಯವಾಗುತ್ತದೆ. ಇನ್ನು ಅಭಿವೃದ್ಧಿ ಹಂತದಲ್ಲಿರುವ ಬ್ಯಾಕಪ್ ಗಾತ್ರ ವಿಭಾಗದಡಿಯಲ್ಲಿ ಈ ನಿಯಂತ್ರಣಗಳು ಲಭ್ಯವಿರುತ್ತವೆ.


  ಇದನ್ನು ಓದಿ: Moto E40 Review: ಕೇವಲ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ಮೊಟೊ ಕಂಪನಿಯ ಈ ನೂತನ ಫೋನ್!

  ಧ್ವನಿ ರೆಕಾರ್ಡಿಂಗ್‌ಗಳನ್ನು ವಿರಾಮಗೊಳಿಸುವುದು:


  ವಾಟ್ಸ್‌ಆ್ಯಪ್‌ ಪ್ರಸ್ತುತ ಧ್ವನಿ ರೆಕಾರ್ಡಿಂಗ್‌ಗಳನ್ನು (Voice Recording) ದಾಖಲಿಸುವಾಗ ಅವುಗಳನ್ನು ನಿಲ್ಲಿಸುವ (ವಿರಾಮಗೊಳಿಸುವ) ಫೀಚರ್‌ನ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ಫೀಚರ್ ಬಳಕೆದಾರರಿಗೆ ಹೊಸ ಸಂದೇಶ ನಿಲ್ಲಿಸಲು ಅಥವಾ ಮರು-ರೆಕಾರ್ಡ್ ಮಾಡಲು ಒತ್ತಾಯ ಮಾಡದೆಯೇ ಅವರ ಧ್ವನಿ ಸಂದೇಶಗಳ ಮೇಲೆ ಹೆಚ್ಚಿನ ನಿಯಂತ್ರಣ ನೀಡುತ್ತದೆ.


  ವಾಯ್ಸ್ ರೆಕಾರ್ಡಿಂಗ್ ಅನ್ನು ಬಳಕೆದಾರರು ಒಮ್ಮೆ ನಿಲ್ಲಿಸಿದ ನಂತರ ಇನ್ನೊಂದು ರೆಕಾರ್ಡ್ ಬಟನ್ ಅವರಿಗೆ ಕಾಣಸಿಗುತ್ತದೆ. ಈ ಬಟನ್ ಸ್ಪರ್ಶಿಸುವ ಮೂಲಕ ಧ್ವನಿ ನೋಟ್‌ನ ರೆಕಾರ್ಡಿಂಗ್ ಪುನಾರಂಭಿಸಲು ಸಾಧ್ಯವಾಗುತ್ತದೆ. ಐಒಎಸ್‌ಗಾಗಿ ವಾಟ್ಸ್‌ಆ್ಯಪ್‌ನ ಈ ಫೀಚರ್ ಇನ್ನೂ ಪ್ರಗತಿಯಲ್ಲಿದೆ. ಇದು ಈಗಾಗಲೇ ಆ್ಯಂಡ್ರಾಯ್ಡ್‌ಗಾಗಿ ವಾಟ್ಸ್‌ಆ್ಯಪ್‌ ಬೀಟಾದಲ್ಲಿ ಲಭ್ಯವಿದೆ. ಇದು ಸದ್ಯದಲ್ಲಿಯೇ ವಾಟ್ಸ್‌ಆ್ಯಪ್‌ನ ಬೀಟಾ ಟೆಸ್ಟರ್‌ಗಳಿಗೂ ಲಭ್ಯವಾಗಲಿದೆ.


  ಇದನ್ನು ಓದಿ:WhatsAppನಲ್ಲಿ ಈ ಬದಲಾವಣೆಗಳು ಕಂಡರೆ ಯಾರೋ ನಿಮ್ಮನ್ನು Block​​ ಮಾಡಿರಬಹುದು.. ಯಾರೆಂದು ಈ ರೀತಿ ತಿಳಿಯಿರಿ

  ಹೊಸ ಸಂಪರ್ಕ ಮಾಹಿತಿ ವಿನ್ಯಾಸ:


  ವಾಟ್ಸ್‌ಆ್ಯಪ್‌ನ ಹೊಸ ಸಂಪರ್ಕ ಮಾಹಿತಿ ವಿನ್ಯಾಸದಲ್ಲೂ ಕಾರ್ಯನಿರ್ವಹಿಸುತ್ತಿದೆ. ಹೊಸ ಕಾಂಟ್ಯಾಕ್ಟ್ ಇನ್ಫೋ ಡಿಸೈನ್ ಪುಟವು ವಾಟ್ಸ್‌ಆ್ಯಪ್‌ನ ಬಿಸ್‌ನೆಸ್ ಆ್ಯಪ್‌ಗಾಗಿ ಮರುವಿನ್ಯಾಸಗೊಳಿಸಲಾದ ಕಾಂಟ್ಯಾಕ್ಟ್ ಇನ್‌ಫೋ ವಿಭಾಗಕ್ಕೆ ಹೋಲುತ್ತದೆ. ಮರುವಿನ್ಯಾಸಗೊಳಿಸಿದ ಭಾಗದಂತೆ, ಬಳಕೆದಾರರು ಕಾಂಟ್ಯಾಕ್ಟ್‌ನ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ, ಅವರಿಗೆ ಮೂರು ಆಯ್ಕೆಗಳು ದೊರೆಯುತ್ತವೆ ಒಂದು ಚಾಟ್ ಮಾಡಲು, ಎರಡನೆಯದ್ದು ಆಡಿಯೋ ಕರೆ ಮಾಡಲು ಹಾಗೂ ಮೂರನೆಯದ್ದು ವಿಡಿಯೋ ಕರೆ ಮಾಡಲು.


  ಅದರ ಕೆಳಗೆ, ಬಳಕೆದಾರರಿಗೆ ಅವರ ಕಾಂಟ್ಯಾಕ್ಟ್‌ಗಳ ವಿವರ ನೋಡಲು ಸಾಧ್ಯವಾಗುತ್ತದೆ. ಈ ಮರುವಿನ್ಯಾಸವು ಆ್ಯಂಡ್ರಾಯ್ಡ್ ಆವೃತ್ತಿ 2.21.19.2 ಗಾಗಿ ವಾಟ್ಸ್‌ಆ್ಯಪ್‌ ಬೀಟಾದ ಭಾಗವಾಗಿ ಲಭ್ಯವಿದೆ. ಮುಖ್ಯ ಆ್ಯಪ್‌ನಲ್ಲಿ ಇದು ಯಾವಾಗ ಲಭ್ಯವಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿಗಳಿಲ್ಲ.


  First published: