WhatsApp: ವಾಟ್ಸ್​​ಆ್ಯಪ್ ಮ್ಯೂಟ್ ವಿಡಿಯೋ ಫೀಚರ್ ಈಗ iOS beta ಬಳಕೆದಾರರಿಗೂ ಲಭ್ಯ!

ಸುಮಾರು 7 ತಿಂಗಳ ಹಿಂದೆ ಆ್ಯಂಡ್ರಾಯ್ಡ್ 2.21.3.13ಗೆ ವಾಟ್ಸಾಆ್ಯಪ್ ತನ್ನ ವಿಡಿಯೋಗಳನ್ನು ಮ್ಯೂಟ್ ಮಾಡುವ ಬೀಟಾ ಫೀಚರ್ ಅನ್ನು ಬಿಡುಗಡೆ ಮಾಡಿತ್ತು. ಹೊಸ ಮರುವಿನ್ಯಾಸದೊಂದಿಗೆ ಈ ಫೀಚರ್ ಐಓಎಸ್ ಬಳಕೆದಾರರಿಗೂ ಲಭ್ಯವಿರಲಿದೆ ಎಂದು ವರದಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಾಟ್ಸಾಆ್ಯಪ್(WhatsApp) ಕೊನೆಗೂ ತನ್ನ ಮ್ಯೂಟ್ ವಿಡಿಯೋ ಫೀಚರ್(mute videos feature) ಅನ್ನು ಆ್ಯಂಡ್ರಾಯ್ಡ್ ಬಳಕೆದಾರರಿಗೆ(Android users) ಬಿಡುಗಡೆ ಮಾಡಿದ ತಿಂಗಳ ನಂತರ ಐಒಎಸ್ ಬಳಕೆದಾರರಿಗೆ( iOS users) ಮ್ಯೂಟ್ ವೀಡಿಯೋಸ್(mute videos feature) ವೈಶಿಷ್ಟ್ಯವನ್ನು ಹೊರತರುತ್ತಿದೆ. ವರದಿಗಳ ಪ್ರಕಾರ ಈ ಫೀಚರ್ ವಿಶೇಷತೆ ಏನೆಂದರೆ ವಿಡಿಯೊಗಳನ್ನು ಕಳುಹಿಸುವ ಮುನ್ನ ಮ್ಯೂಟ್ ಮಾಡುವ ಸಾಮರ್ಥ್ಯ ಕೊನೆಗೂ ಐಓಎಸ್ ಬಳಕೆದಾರರಿಗೆ ಲಭ್ಯವಾಗಿದೆ. ಆ್ಯಂಡ್ರಾಯ್ಡ್ ಬಳಕೆದಾರರಿಗೆ ಈ ವೈಶಿಷ್ಟ್ಯ ಲಭ್ಯವಾಗಿ ಆರು ತಿಂಗಳ ನಂತರ ಐಓಎಸ್ ಬೀಟಾ ಬಳಕೆದಾರರಿಗೆ ವಾಟ್ಸಾಆ್ಯಪ್ ಈ ಫೀಚರ್ ಅನ್ನು ಬಿಡುಗಡೆ ಮಾಡಿದೆ. ವಾಟ್ಸಾಆ್ಯಪ್(WhatsApp) ಹೊಸ ವಿನ್ಯಾಸದೊಂದಿಗೆ ಐಒಎಸ್(iOS) ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂಬ ಮಾಹಿತಿ ಕೂಡ ವರದಿಯಾಗಿದೆ.

Wabetanifo ಪ್ರಕಾರ ವಾಟ್ಸಾಆ್ಯಪ್ ಮ್ಯೂಟ್ ವಿಡಿಯೋಸ್ ಫೀಚರ್ ಕೊನೆಗೂ ಐಓಎಸ್ ಬಳಕೆದಾರರಿಗೆ ಲಭ್ಯವಿರುತ್ತದೆ ಎಂದಾಗಿದೆ. ಸುಮಾರು 7 ತಿಂಗಳ ಹಿಂದೆ ಆ್ಯಂಡ್ರಾಯ್ಡ್ 2.21.3.13ಗೆ ವಾಟ್ಸಾಆ್ಯಪ್ ತನ್ನ ವಿಡಿಯೋಗಳನ್ನು ಮ್ಯೂಟ್ ಮಾಡುವ ಬೀಟಾ ಫೀಚರ್ ಅನ್ನು ಬಿಡುಗಡೆ ಮಾಡಿತ್ತು. ಹೊಸ ಮರುವಿನ್ಯಾಸದೊಂದಿಗೆ ಈ ಫೀಚರ್ ಐಓಎಸ್ ಬಳಕೆದಾರರಿಗೂ ಲಭ್ಯವಿರಲಿದೆ ಎಂದು ವರದಿ ತಿಳಿಸಿದೆ. ನಿಮ್ಮ ಡಿವೈಸ್‌ನಲ್ಲಿ ಈ ಫೀಚರ್ ಲಭ್ಯವಿದೆಯೇ ಎಂಬುದನ್ನು ಕಂಡುಕೊಳ್ಳಲು ವಾಟ್ಸಾಆ್ಯಪ್ ಕಾಂಟ್ಯಾಕ್ಟ್‌ಗೆ ವಿಡಿಯೋ ಕಳುಹಿಸಲು ಪ್ರಯತ್ನಿಸಿ. ಇದೇ ರೀತಿಯ ಫೀಚರ್ ನಿಮಗೆ ಕಂಡುಬಂದಲ್ಲಿ ಈ ಫೀಚರ್ ನಿಮ್ಮ ಡಿವೈಸ್‌ನಲ್ಲೂ ಲಭ್ಯವಿದೆ ಎಂದಾಗಿದೆ.

Wabetainfo ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಪ್ರಕಾರ ಮ್ಯೂಟ್ ವಿಡಿಯೋ ಆಯ್ಕೆಯನ್ನು ಮರುವಿನ್ಯಾಸಗೊಳಿಸಲಾದ ಟಾಗಲ್‌ನಲ್ಲಿ ವಿಡಿಯೋವನ್ನು ಜಿಫ್ ಆಗಿ ಪರಿವರ್ತಿಸಲು ಬಳಕೆದಾರರಿಗೆ ಸಾಧ್ಯವಿದೆ. ಪ್ರತೀ ಬಾರಿ ನೀವು ವಿಡಿಯೋವನ್ನು ಎಡಿಟ್ ಮಾಡುವಾಗ ಅದರ ಗಾತ್ರ ಕೂಡಲೇ ಅಪ್‌ಡೇಟ್ ಆಗುತ್ತದೆ. ಈ ಫೀಚರ್ ಐಓಎಸ್ ಬೀಟಾ ಬಳಕೆದಾರರಿಗೂ ಲಭ್ಯವಿದೆ ಇದು ನಿಮಗೆ ಕಾಣಿಸದೇ ಇದ್ದಲ್ಲಿ ಮುಂದಿನ ಅಪ್‌ಡೇಟ್‌ ಬರುವವರೆಗೆ ಕಾಯಿರಿ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:Karnataka CET Result Tomorrow: ನಾಳೆ ಸಂಜೆ 4 ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಸ್ತುತ ವಾಟ್ಸಾಆ್ಯಪ್ ಚಿತ್ರಗಳನ್ನು ಸ್ಟಿಕ್ಕರ್‌ಗಳನ್ನಾಗಿ ಪರಿವರ್ತಿಸುವ ವೈಶಿಷ್ಟ್ಯದ ಮೇಲೆ ಕೆಲಸ ಮಾಡುತ್ತಿದೆ. ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ ಈ ವೈಶಿಷ್ಟ್ಯವನ್ನು ಗುರುತಿಸಲಾಗಿದೆ. ವಾಟ್ಸಾಆ್ಯಪ್, ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಇದಲ್ಲದೆ ವಾಟ್ಸಾಆ್ಯಪ್ ಕೂಡ ಬೀಟಾ ಅಲ್ಲದ ಪರೀಕ್ಷಕರು ಬಹು-ಸಾಧನ ವೈಶಿಷ್ಟ್ಯವನ್ನು ಬಳಸುವ ಸಾಧ್ಯತೆಯನ್ನು ಬಿಡುಗಡೆ ಮಾಡಿದೆ. ಮುಂದಿನ ನವೀಕರಣಕ್ಕಾಗಿ ವಾಟ್ಸಾಆ್ಯಪ್ ಹೊಸ ವೈಶಿಷ್ಟ್ಯವನ್ನು ಸುಧಾರಿಸುತ್ತಿದೆ. ಇದರಿಂದ ಚಿತ್ರಗಳನ್ನು ಸ್ಟಿಕ್ಕರ್‌ಗಳನ್ನಾಗಿ ಪರಿವರ್ತಿಸಲು ಅವಕಾಶವೀಯುತ್ತದೆ.

ಈ ವೈಶಿಷ್ಟ್ಯವು ಲಭ್ಯವಿದ್ದಾಗ, ಶೀರ್ಷಿಕೆ ಪಟ್ಟಿಯ ಪಕ್ಕದಲ್ಲಿ ಹೊಸ ಸ್ಟಿಕ್ಕರ್ ಐಕಾನ್ ಇರುತ್ತದೆ. ನೀವು ಅದನ್ನು ಆಯ್ಕೆ ಮಾಡಿದಾಗ, ಚಿತ್ರವನ್ನು ಸ್ಟಿಕ್ಕರ್ ಆಗಿ ಕಳುಹಿಸಲಾಗುತ್ತದೆ "ಎಂದು ವಾಟ್ಸಾಆ್ಯಪ್ ಫೀಚರ್ ಟ್ರ್ಯಾಕರ್ ವರದಿಯಲ್ಲಿ ತಿಳಿಸಿದೆ. ವಾಟ್ಸಾಆ್ಯಪ್ ಫೀಚರ್ಸ್ ಟ್ರ್ಯಾಕರ್ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ನಲ್ಲಿ, ಸ್ಟಿಕ್ಕರ್‌ಗಳಲ್ಲಿ ಚಿತ್ರಗಳನ್ನು ರಚಿಸುವ ವಿಶೇಷ ಆಯ್ಕೆಯನ್ನು ಡಯಲಾಗ್ ಬಾಕ್ಸ್‌ನಲ್ಲಿ ಕಾಣಬಹುದು.

ಇದನ್ನೂ ಓದಿ:Bengaluru Crime: ಮುಸ್ಲಿಂ ಯುವತಿಗೆ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ; ಅರ್ಧ ದಿನದಲ್ಲಿ ಆರೋಪಿಗಳು ಅರೆಸ್ಟ್

ಚಿತ್ರವನ್ನು ಸೇರಿಸಿದಾಗ, ಸ್ಟಿಕರ್ ಆಯ್ಕೆಯನ್ನು ಟ್ಯಾಪ್ ಮಾಡಿದಾಗ ಚಿತ್ರವನ್ನು ಸ್ವಯಂಚಾಲಿತವಾಗಿ ಸ್ಟಿಕರ್ ಆಗಿ ಪರಿವರ್ತಿಸಲಾಗುತ್ತದೆ. ಚಿತ್ರಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಲು ವಾಟ್ಸಾಆ್ಯಪ್ ಯಾವುದೇ ಥರ್ಡ್ ಪಾರ್ಟಿ ಆಪ್ ಅನ್ನು ಬಳಸಿಲ್ಲ ಎಂದು Wabetainfo ಹೇಳುತ್ತದೆ.
Published by:Latha CG
First published: