ಮೈಕ್ರೋಸಾಫ್ಟ್​ ಜತೆ ಕೆಲಸ ಮಾಡುತ್ತಿರುವ ವಾಟ್ಸಾಪ್​

news18
Updated:June 18, 2018, 6:02 PM IST
ಮೈಕ್ರೋಸಾಫ್ಟ್​ ಜತೆ ಕೆಲಸ ಮಾಡುತ್ತಿರುವ ವಾಟ್ಸಾಪ್​
news18
Updated: June 18, 2018, 6:02 PM IST
ನ್ಯೂಯಾರ್ಕ್​: ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಇದೀಗ ಕಂಪ್ಯೂಟರ್​ ಧಿಗ್ಗಜ ಮೈಕ್ರೋಸಾಫ್ಟ್​ನೊಂದಿಗೆ ಜತೆಗೂಡಿದ್ದು ತನ್ನ ವಾಟ್ಸಾಪ್​ ವಿಂಡೋಸ್​ ವೆಬ್​ ಅಪ್ಲಿಕೇಶನ್​ಗೆ ಹೊಸ ಆಯಾಮ ನೀಡಲು ಮುಂದಾಗಿದೆ.

ವಿಂಡೋಸ್​ ಡೆಸ್ಕ್​ಟಾಪ್​ ಆ್ಯಪ್​ ಕುರಿತು ಜಂಟಿಯಾಗಿ ಕೆಲಸ ಮಾಡಲು ನಿರ್ಧರಿಸಿರುವ ವಾಟ್ಸಾಪ್​ ತನ್ನ ಡೆವಲಪರ್​ಗಳನ್ನು ಮೈಕ್ರೋಸಾಫ್ಟ್​ ಕಂಪನಿಗೆ ಕಳುಹಿಸಿದೆ. ಈ ಕುರಿತು ವರದಿ ಮಾಡಿರುವ ದಿ ನೆಕ್ಸ್ಟ್​ ವೆಬ್​ ಈಗಿರುವ ವಿಂಡೋಸ್​ನ ವಾಟ್ಸಾಪ್​ ಆ್ಯಪ್​ಗೆ ಅಪ್​ಡೇಟ್​ ನೀಡಲು ಈ ಹೊಸ ಸಾಹಸಕ್ಕೆ ಎರಡೂ ಸಂಸ್ಥೆಗಳು ಮುಂದಾಗಿದೆ ಎನ್ನಲಾಗಿದೆ.  ಯೂನಿವರ್ಸಲ್‌ ವಿಂಡೋಸ್‌ ಪ್ಲ್ಯಾಟ್‌ಫಾರಂ ಹೆಸರಿನಡಿ ಈ ಎರಡೂ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ.

ಈಗಿರುವ ವಾಟ್ಸಾಪ್​ ವೆಬ್​ನಲ್ಲಿ ಕೇವಲ ಮೆಸೇಜ್​ ರೀಡ್​ ಮತ್ತು ರೀಪ್ಲೆ ಕೊಡುವ ಅವಕಾಶವಿದೆ. ಆದರೆ ವೀಡಿಯೋ ಹಾಗೂ ಆಡಿಯೋ ಕಾಲ್​ ಆಯ್ಕೆ ಇದರಲ್ಲಿ ಲಭ್ಯವಿಲ್ಲ. ಇದರ ಮುಂದಿನ ಹಂತವಾಗಿ ಎರಡೂ ಸಂಸ್ಥೆಗಳು ಜತೆಗೂಡಿ ಇದೀಗ ವಾಟ್ಸಾಪ್​ ವೆಬ್ ಅಪ್ಲಿಕೇಶನ್​ಗೆ ಅಪ್ಡೇಟ್​ ನೀಡಲು ಮುಂದಾಗಿವೆ.

ಈಗಿನ ಮಾಹಿತಿಗಳ ಪ್ರಕಾರ ವಾಟ್ಸಾಪ್​ ವೆಬ್​ ಫೀಚರ್​ ಐಒಎಸ್​ ಒಎಸ್​ಗಳಿಗೆ ಲಭ್ಯವಿಲ್ಲ. ಅಲ್ಲದೇ ವಿಶ್ವದಲ್ಲಿ ಅತ್ಯಂತ ಹೆಚ್ಚು ಬಳಕೇದಾರರನ್ನು ಮೈಕ್ರೋಸಾಫ್ಟ್​ ವಿಂಡೋಸ್​ ಹೊಂದಿದೆ. ಹೀಗಾಗಿ ವಾಟ್ಸಾಪ್​ ಸಂಸ್ಥೆ ತನ್ನ ವೆಬ್​ ಫೀಚರ್​ನ್ನು ವಿಂಡೋಸ್​ ಬಳಕೇದಾರರಿಗೆ ಮೇಲೆ ಒತ್ತು ನೀಡುತ್ತಿದೆ.
First published:June 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ