HOME » NEWS » Tech » WHATSAPP MESSENGER STARTS TESTING ANIMATED STICKERS ON ANDROID IPHONE HG

WhatsApp: ವಾಟ್ಸ್​​ಆ್ಯಪ್​​ನಲ್ಲಿ ಬರಲಿದೆ ಹೊಸ ಫೀಚರ್​; ಬಳಕೆದಾರರು ಫುಲ್​ ಖುಷ್​​!

WhatsApp Animated Stickers: ಆ್ಯಂಡ್ರಾಯ್ಡ್​ ಮತ್ತು ಐಫೋನ್​ ಬಳಕೆದಾರರಗಿಗೆ ಅನಿಮೇಟೆಡ್​ ಸ್ಟಿಕ್ಕರ್​​ ಬಳಸಬಹುದಾದ ಹೊಸ ಫೀಚರ್​​ ನೀಡಲು ಸಿದ್ಧವಾಗಿದೆ. ವಾಟ್ಸ್​​ಆ್ಯಪ್​​​ನಲ್ಲಿ ಈಗಾಗಲೇ ಎಮೊಜಿ ಆಯ್ಕೆಯಿದೆ. ಅನೇಕರು ಈ ಫೀಚರ್​ ಅನ್ನು ಬಳಸುತ್ತಿದ್ದಾರೆ. ಪದಗಳಿಂದ ಹೇಳುವುದನ್ನು ಒಂದು ಸ್ಟಿಕ್ಕರ್​ ಮೂಲಕ ತಿಳಿಸಬಹುದಾಗಿದೆ. ಅದರಂತೆ ಇದೀಗ  ಅನಿಮೇಟೆಡ್​ ಸ್ಟಿಕ್ಕರ್​ ನೀಡಿದರೆ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನ ಸಿಗಬಹುದೆಂಬ ಕಾರಣಕ್ಕೆ ಹೊಸ ಫೀಚರ್​ರನ್ನು ಸದ್ಯದಲ್ಲೇ ಪರಿಚಯಿಸಲಿದೆ.

news18-kannada
Updated:June 26, 2020, 3:05 PM IST
WhatsApp: ವಾಟ್ಸ್​​ಆ್ಯಪ್​​ನಲ್ಲಿ ಬರಲಿದೆ ಹೊಸ ಫೀಚರ್​; ಬಳಕೆದಾರರು ಫುಲ್​ ಖುಷ್​​!
ವಾಟ್ಸ್​​ಆ್ಯಪ್
  • Share this:
ಜನಪ್ರಿಯ ವಾಟ್ಸ್​​​ಆ್ಯಪ್​ ಇತ್ತೀಚೆಗೆ ಪೇಮೆಂಟ್​ ಸೇವೆಯನ್ನು ಪರಿಚಯಿಸಿದೆ. ಬ್ರೆಜಿಲ್​ನಲ್ಲಿ ಈ ನೂತನ ಸೇವೆಯನ್ನು ಜಾರಿಗೆ ತಂದಿದೆ. ಸದ್ಯದಲ್ಲೇ ಭಾರತಕ್ಕೂ ವಾಟ್ಸ್​ಆ್ಯಪ್ ಪೇಮೆಂಟ್​ ಸೇವೆ ಬರಲಿದೆ. ಅದರ ಜೊತೆಗೀಗ ವಾಟ್ಸ್​​ಆ್ಯಪ್​​ ಅನಿಮೇಟೆಡ್​ ಸ್ಟಿಕ್ಕರ್​ ಪರಿಚಯಿಸಲು ಮುಂದಾಗಿದೆ.

ಆ್ಯಂಡ್ರಾಯ್ಡ್​ ಮತ್ತು ಐಫೋನ್​ ಬಳಕೆದಾರರಗಿಗೆ ಅನಿಮೇಟೆಡ್​ ಸ್ಟಿಕ್ಕರ್​​ ಬಳಸಬಹುದಾದ ಹೊಸ ಫೀಚರ್​​ ನೀಡಲು ಸಿದ್ಧವಾಗಿದೆ. ವಾಟ್ಸ್​​ಆ್ಯಪ್​​​ನಲ್ಲಿ ಈಗಾಗಲೇ ಎಮೊಜಿ ಆಯ್ಕೆಯಿದೆ. ಅನೇಕರು ಈ ಫೀಚರ್​ ಅನ್ನು ಬಳಸುತ್ತಿದ್ದಾರೆ. ಪದಗಳಿಂದ ಹೇಳುವುದನ್ನು ಒಂದು ಸ್ಟಿಕ್ಕರ್​ ಮೂಲಕ ತಿಳಿಸಬಹುದಾಗಿದೆ. ಅದರಂತೆ ಇದೀಗ  ಅನಿಮೇಟೆಡ್​ ಸ್ಟಿಕ್ಕರ್​ ನೀಡಿದರೆ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನ ಸಿಗಬಹುದೆಂಬ ಕಾರಣಕ್ಕೆ ಹೊಸ ಫೀಚರ್​ರನ್ನು ಸದ್ಯದಲ್ಲೇ ಪರಿಚಯಿಸಲಿದೆ.

ವಾಟ್ಸ್​ಆ್ಯಪ್​​ ಆ್ಯಂಡ್ರಾಯ್ಡ್​​ ಬೇಟಾ ವರ್ಷನ್​​ ವಿ2.20.194.7ನಲ್ಲಿ ಈ ಫೀಚರ್​ ಅನ್ನು ಬಿಡುಗಡೆ ಮಾಡಲಿದೆ, ಐಫೋನ್​​ ವಿ2.2070.26 ಬೇಟಾ ವರ್ಷನ್​ ಬಳಕೆದಾರರಿಗೆ ಸಿಗಲಿದೆ. ಆದರೆ ಹೊಸ ವರ್ಷನ್​ ಏನೆಲ್ಲಾ ಹೊಸತನದಿಂದ ಕೂಡಿದೆ ಎಂಬುದನ್ನು ಸದ್ಯದಲ್ಲೇ ಬೆಳಕಿಗೆ ಬರಲಿದೆ.

ವಾಬೇಟಾಇನ್ಫೊ ಮಾಹಿತಿ ಪ್ರಕಾರ, ಅನಿಮೇಟೆಡ್​ ಸ್ಟಿಕ್ಕರ್​ ಮೂರು ವಿಭಾಗಗಳಾಗಿ ಪ್ರತ್ಯೇಕಿಸಿದ್ದು, ಲೇಟೆಸ್ಟ್​ ಬೇಟಾ ಅಪ್ಡೇಟ್​ ಮಾಡಿದ ಕೆಲವೇ ಕೆಲವು ಬಳಕೆದಾರರು ಅನಿಮೆಟೆಡ್​​​ ಸ್ಟಿಕ್ಕರ್​ ನೋಡಬಹುದಾಗಿದೆ, ಜೊತೆಗೆ ಫಾರ್ವರ್ಡ್​ ಮಾಡಬಹುದಾಗಿದೆ. ಆದರೆ ಬೇರೆ ಆ್ಯಪ್​ಗಳಿಂದ ಡೌನ್​ಲೋಡ್​ ಮಾಡುವ ಆಯ್ಕೆ ಇರುವುದಿಲ್ಲ ಎಂದು ತಿಳಿಸಿದೆ.

ಸದ್ಯದಲ್ಲೇ ವಾಟ್ಸ್​​ಆ್ಯಪ್​ ತನ್ನ ಎಲ್ಲಾ ಬಳಕೆದಾರರಿಗೆ ಅನಿಮೇಟೆಡ್​ ಸ್ಟಿಕ್ಕರ್​ ಪರಿಚಯಿಸಲಿದೆ. ಆ ಮೂಲಕ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಲಿದೆ.

ಚಂದನವನದ ಈ ಖ್ಯಾತ ನಟರ ಅಸಲಿ ಹೆಸರೇನು ಗೊತ್ತಾ..?; ಈ ಸ್ಟೋರಿ ಓದಿ

SSLC ವಿದ್ಯಾರ್ಥಿಗಳಿಗೆ ಕೊರೋನಾ ತಗುಲಿದರೆ ಅದಕ್ಕೆ ಸರ್ಕಾರವೇ ಹೊಣೆ; ಸಿದ್ದರಾಮಯ್ಯ
First published: June 26, 2020, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories