ಒಂದೇ ಒಂದು ವಾಟ್ಸಪ್ ಮೆಸೇಜ್​ನಿಂದ ಕಂಪನಿಗೆ ಕೋಟಿಗಟ್ಟಲೆ ನಷ್ಟ!

news18
Updated:September 30, 2018, 2:52 PM IST
ಒಂದೇ ಒಂದು ವಾಟ್ಸಪ್ ಮೆಸೇಜ್​ನಿಂದ ಕಂಪನಿಗೆ ಕೋಟಿಗಟ್ಟಲೆ ನಷ್ಟ!
  • Advertorial
  • Last Updated: September 30, 2018, 2:52 PM IST
  • Share this:
-ನ್ಯೂಸ್ 18 ಕನ್ನಡ

ವಾಟ್ಸಪ್​ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳೇ ಡಿಜಿಟಲ್ ಯುಗದ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ದೇಶದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ ಸುಳ್ಳು ಸುದ್ದಿಗಳಿಂದ ಗಲಭೆಗಳು ಉಂಟಾಗಿರುವುದು ಕೇಳಿದ್ದೇವೆ. ಇದೀಗ ಅಂತಹ ಸುದ್ದಿಗಳಿಂದಲೇ ಕಂಪನಿಯೊಂದು ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ. ಇನ್ಫಿಬೀಮ್ ಅವೆನ್ಯೂಸ್ ಲಿಮಿಟೆಡ್ ಸಂಸ್ಥೆಯು ವಾಟ್ಸಪ್​ನಲ್ಲಿ ಹರಿದಾಡಿದ್ದ ಸಂದೇಶಗಳಿಂದ ಭಾರೀ ಹೊಡೆತಕ್ಕೊಳಗಾಗಿದೆ.

ಇನ್ಫಿಬೀಮ್ ಅವೆನ್ಯೂಸ್ ಸಂಸ್ಥೆ ಶುಕ್ರವಾರ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆಸಿತ್ತು. ಇಲ್ಲಿ ಸಂಸ್ಥೆಯು ಶೇ.70ರಷ್ಟು ಷೇರು ಕುಸಿತ ಕಂಡಿರುವುದಾಗಿ ತಿಳಿಸಿದೆ. ವಾಟ್ಸಪ್​ನಲ್ಲಿ ಹರಿದಾಡಿದ ಸುದ್ದಿಯಿಂದಾಗಿ ಕಂಪನಿ ಷೇರು ಒಂದೇ ಬಾರಿ ಇಳಿಕೆಯಾಗಿದೆ ಎಂದು ಸಂಸ್ಥೆ ಹೇಳಿದೆ. 2016ರ ನವೆಂಬರ್​ ಬಳಿಕ ಇದೇ ಮೊದಲ ಬಾರಿಗೆ ಇನ್ಫಿಬೀಮ್ ಷೇರಿನಲ್ಲಿ ಭಾರೀ ಪ್ರಮಾಣ ಕುಸಿತ ಉಂಟಾಗಿದೆ. ಈ ಕಂಪನಿಯ ಅಕೌಂಟಿಂಗ್ ಪದ್ಧತಿಗಳಲ್ಲಿ ಪ್ರಮಾಣಿಕತೆ ಕಂಡು ಬರುತ್ತಿಲ್ಲ ಎಂಬ ಸಂದೇಶಗಳು ವಾಟ್ಸಪ್​ನಲ್ಲಿ ಹರಿದಾಡಿತ್ತು. ಇದರಿಂದ ಟ್ರೇಡರ್ಸ್​ಗಳಲ್ಲಿ ಆತಂಕ ಮೂಡಿದ್ದು, ಈ ಹಿನ್ನಲೆಯಲ್ಲಿ ಸಂಸ್ಥೆಯ ಷೇರಿನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಬಂಡವಾಳ ಹೂಡಿಕೆದಾರ ಮಾರುಕಟ್ಟೆಯಲ್ಲಿ ಬರೋಬ್ಬರಿ 9,200 ಕೋಟಿ ರೂ. ನಷ್ಟವಾಗಿದೆ. 2009 ರ ಸತ್ಯಂ ಕಂಪೂಟರ್ಸ್​ ಹಗರಣದ ಬಳಿಕ ಸಂಸ್ಥೆಯು ಒಂದೇ ದಿನ ಶೇ.83ರಷ್ಟು ಷೇರು ಕುಸಿತ ಕಂಡಿತ್ತು. ಇದಾದ ಬಳಿಕ ಷೇರು ಮಾರುಕಟ್ಟೆಯಲ್ಲಿ ಭಾರೀ ಹೊಡೆತಕ್ಕೊಳಗಾದ ಸಂಸ್ಥೆ ಎಂದು ಇನ್ಫಿಬೀಮ್ ಅವೆನ್ಯೂಸ್ ಲಿಮಿಟೆಡ್​ನ್ನು ಪರಿಗಣಿಸಲಾಗಿದೆ. ಯಾವುದೇ ಆಧಾರವಿಲ್ಲದೆ ಇನ್ಫಿಬೀಮ್ ಸಂಸ್ಥೆ ಬಡ್ಡಿ ರಹಿತ ತನ್ನದೇ ಯುನಿಟ್​ನ ಸಂಸ್ಥೆಗೆ ಸಾಲ ನೀಡಲಾಗಿದೆ. ಸಂಸ್ಥೆಯ ಅಕೌಂಟಿಂಗ್ ವಿಭಾಗದಲ್ಲಿ ಮೋಸ ನಡೆಯುತ್ತಿದೆ ಎಂಬ ಸಂದೇಶಗಳು ವಾಟ್ಸಪ್​ನಲ್ಲಿ ಹರಿದಾಡಿತ್ತು.  ಇದರಿಂದಾಗಿ ಸಂಸ್ಥೆಯ ಷೇರು ಒಂದೇ ದಿನದಲ್ಲಿ  ಶೇ.70ರಷ್ಟು ಕುಸಿಯಲು ಕಾರಣ ಎನ್ನಲಾಗಿದೆ.

ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿಯಲ್ಲೂ ಶುಕ್ರವಾರ  ಕುಸಿತ ಕಂಡಿದೆ. ಶೇಕಡಾವಾರು ಕುಸಿತವನ್ನು ದಾಖಲಿಸಿದ ನಂತರ ಇನ್ಫಿಬೀಮ್ ಅವೆನ್ಯೂಸ್ ಲಿಮಿಟೆಡ್ ಭಾರೀ  ನಷ್ಟ ಅನುಭವಿಸಿದೆ. 2016ರ ಏಪ್ರಿಲ್ 4ರಂದು ಇನ್ಫಿಬೀಮ್ ಅವೆನ್ಯೂಸ್ ಲಿಮಿಟೆಡ್ ಸಂಸ್ಥೆ ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಿತು.450 ಕೋಟಿ ಬಂಡವಾಳ ಹೂಡಿಕೆಯ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸಿದ ಮೊದಲ ಇ-ವಾಣಿಜ್ಯ ಸಂಸ್ಥೆ ಎಂಬ ಖ್ಯಾತಿ ಇನ್ಫಿಬೀಮ್ ಕಂಪನಿ ಹೆಸರಲ್ಲಿತ್ತು.
First published:September 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ