ವಾಟ್ಸ್ಆ್ಯಪ್ ಬಳಕೆದಾರರಿಗೆ ಗುಡ್ ನ್ಯೂಸ್! ಇನ್ಮುಂದೆ ಏಕಕಾಲದಲ್ಲಿ ಹಲವು ಡಿವೈಸ್​​ಗಳಲ್ಲಿ ಬಳಸಬಹುದು

ಈ ಹಿಂದೆ ವಾಟ್ಸ್​ಆ್ಯಪ್​ ಅನ್ನು ಒಂದು ಡಿವೈಸ್​ನಲ್ಲಿ ಮಾತ್ರ ಬಳಸಬಹುದಾಗಿತ್ತು. ವಾಟ್ಸ್​ಆ್ಯಪ್​ ವೆಬ್​ ಬಳಕೆ ಮಾಡಿದಾಗ ಏಕಕಾಲದಲ್ಲಿ ಕಂಪ್ಯೂಟರ್​ನಲ್ಲಿ ಬಳಕೆ ಮಾಡಬಹುದಾಗಿತ್ತು.

news18-kannada
Updated:October 31, 2019, 3:41 PM IST
ವಾಟ್ಸ್ಆ್ಯಪ್ ಬಳಕೆದಾರರಿಗೆ ಗುಡ್ ನ್ಯೂಸ್! ಇನ್ಮುಂದೆ ಏಕಕಾಲದಲ್ಲಿ ಹಲವು ಡಿವೈಸ್​​ಗಳಲ್ಲಿ ಬಳಸಬಹುದು
ವಾಟ್ಸ್ಆ್ಯಪ್
  • Share this:
ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ. ಬಳಕೆದಾರರು ವಾಟ್ಸ್​ಆ್ಯಪ್​ ಅನ್ನು ಏಕಕಾಲದಲ್ಲಿ ಹಲವು ಡಿವೈಸ್​ಗಳಲ್ಲಿ ಬಳಸಬಹುದಾದ ಆಯ್ಕೆಯೊಂದನ್ನು ನೀಡುತ್ತಿದೆ.

ಈ ಹಿಂದೆ ವಾಟ್ಸ್​ಆ್ಯಪ್​ ಅನ್ನು ಒಂದು ಡಿವೈಸ್​ನಲ್ಲಿ ಮಾತ್ರ ಬಳಸಬಹುದಾಗಿತ್ತು. ವಾಟ್ಸ್​ಆ್ಯಪ್​ ವೆಬ್​ ಬಳಕೆ ಮಾಡಿದಾಗ ಏಕಕಾಲದಲ್ಲಿ ಕಂಪ್ಯೂಟರ್​ನಲ್ಲಿ ಬಳಕೆ ಮಾಡಬಹುದಾಗಿತ್ತು. ಇದೀಗ ಹೊಸ ಫೀಚರ್​ನಲ್ಲಿ ಹಲವು ಡಿವೈಸ್​ಗಳಲ್ಲಿ ಬಳಕೆ ಮಾಡಬಹುದಾದ ಆಯ್ಕೆಯನ್ನು ಪರಿಚಯಿಸುತ್ತಿದೆ. ಸದ್ಯದಲ್ಲೇ ಈ ಫೀಚರ್ ವಾಟ್ಸ್​ಆ್ಯಪ್​ನಲ್ಲಿ ಸೇರಿಕೊಳ್ಳಲಿದ್ದು​, ಬಳಕೆದಾರರಿಗೆ ಮತ್ತಷ್ಟು ಪ್ರಯೋಜನಕಾರಿಯಾಗಲಿದೆ.

ಇದನ್ನೂ ಓದಿ: ಇನ್ಮುಂದೆ ಫೇಸ್​​​ಬುಕ್​​ನಲ್ಲಿ ಈ ಎಮೋಜಿ ಬಳಸಿದರೆ ನಿಮ್ಮ ಖಾತೆ ಬ್ಲಾಕ್ ಆಗೋದು ಗ್ಯಾರಂಟಿ..!

ಪ್ರತಿಬಾರಿ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಕೆಳ ತಿಂಗಳ ಹಿಂದೆ ಸ್ಟೇಟಸ್​ನಲ್ಲಿ ಹಾಕುವ ಸ್ಟೋರಿಗಳನ್ನು ನೇರವಾಗಿ ಫೇಸ್​ಬುಕ್​ಗೆ ಶೇರ್​ ಮಾಡುವ ಆಯ್ಕೆಯನ್ನು ನೀಡಿತ್ತು. ಇದೀಗ ಏಕಕಾಲದಲ್ಲಿ ವಾಟ್ಸ್​ಆ್ಯಪ್​ ಅನ್ನು ಹಲವು ಡಿವೈಸ್​ಗಳಲ್ಲಿ ಬಳಸಬಹುದಾದ ಫೀಚರ್​ ಅನ್ನು ಪರಿಚಯಿಸುತ್ತಿದೆ. ಸದ್ಯದಲ್ಲೇ ಈ ನೂತನ ಫೀಚರ್ ವಾಟ್ಸ್​ಆ್ಯಪ್​​ನಲ್ಲಿ ಸೇರಿಕೊಳ್ಳಲಿದೆ.

First published:October 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading