Whatsapp ಬಳಕೆದಾರರಿಗೆ ಕಹಿ ಸುದ್ದಿ: ತಲೆನೋವಾಗಲಿದೆ ಈ ನೂತನ ಪೀಚರ್​!


Updated:October 2, 2018, 9:55 AM IST
Whatsapp ಬಳಕೆದಾರರಿಗೆ ಕಹಿ ಸುದ್ದಿ: ತಲೆನೋವಾಗಲಿದೆ ಈ ನೂತನ ಪೀಚರ್​!

Updated: October 2, 2018, 9:55 AM IST
ನ್ಯೂಸ್​ 18 ಕನ್ನಡ

2018ರ ಆರಂಭದಿಂದಲೂ Whatsapp ನೂತನ ಅಪ್ಡೇಟ್​ಗಳನ್ನು ನೀಡುತ್ತಾ ಬಂದಿದೆ. ಆದರೆ ಇನ್ನು ಬರಲಿರುವ ಹೊಸ ಫೀಚರ್​ ನಮಗೆ ಖುಷಿ ಕೊಡದೆ, ಕಹಿ ಸುದ್ದಿಯಾಗುವ ಸಾಧ್ಯತೆಗಳಿವೆ. ಶೀಘ್ರದಲ್ಲೇ ನಮ್ಮ ಸ್ಟೇಟಸ್​ ಕಂಪೆನಿಯ ಆದಾಯಕ್ಕೆ ದಾರಿ ಮಾಡಿಕೊಡಲಿದೆ. WaBetaInfo ಅನ್ವಯ ವಾಟ್ಸಾಪ್​ ಬಳಕೆದಾರರ ಸ್ಟೇಟಸ್​ನಲ್ಲಿ ಕಂಪೆನಿಯು ತನ್ನ ಜಾಹೀರಾತು ತೋರಿಸಲಿದೆ ಎಂದು ತಿಳಿದು ಬಂದಿದೆ. ಐ ವಾಲ್​ ಸ್ಟ್ರೀಟ್​ ಜರ್ನಲ್​ ಆಗಸ್ಟ್​ನಲ್ಲಿ ಪ್ರಕಟಿಸಿರುವ ವರದಿಯನ್ವಯ ಆ್ಯಪ್​ನಲ್ಲಿ ಜಾಹೀರಾತುಗಳು 2019ರಿಂದ ಆರಂಭವಾಗಲಿವೆ ಎಂದು ತಿಳಿದು ಬಂದಿದೆ. ಇದನ್ನು ಹೊರತುಪಡಿಸಿ ಇನ್ನೂ ಹಲವಾರು ಪತ್ರಿಕೆಗಳು ಜಾಹೀರಾತು ಬರುವ ಕುರಿತಾಗಿ ವರದಿ ಪ್ರಕಟಿಸಿವೆ.

WaBetaInfo ಜಾಹೀರಾತಿನ ಕುರಿತಾಗಿ ಹಲವಾರು ಟ್ವೀಟ್​ಗಳನ್ನೂ ಅಪ್ಡೇಟ್​ ಮಾಡಿದೆ. ಈ ಟ್ವೀಟ್​ಗಳಿಂದ ಕಂಪೆನಿಯು ಶೀಘ್ರದಲ್ಲೇ ತನ್ನ ಆ್ಯಪ್​ನಲ್ಲಿ ಜಾಹೀರಾತುಗಳನ್ನು ನೀಡಲಿದೆ ಎಂಬುವುದು ತಿಳಿದು ಬಂದಿದೆ. ಇನ್ನು ಆರಂಭದಲ್ಲಿ ಈ ಫೀಚರ್​ iOS ಆ್ಯಪ್​ಗಳಲ್ಲಷ್ಟೇ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಇದರ ಟೆಸ್ಟಿಂಗ್​ ಕೂಡಾ ಈಗಾಗಲೇ ಆರಂಭವಾಗಿದೆ ಎನ್ನಲಾಗಿದೆ.

ಲಭ್ಯವಾದ ಮಾಹಿತಿ ಅನ್ವಯ ಈ ಜಾಹೀರಾತು ವಿಡಿಯೋ ರೂಪದಲ್ಲಿದ್ದು, ಇನ್ಸ್ಟಾಗ್ರಾಂ ಸ್ಟೋರೀಸ್​ನಂತೆಯೇ ಇದು ಕಾರ್ಯ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ. ಫೇಸ್​ಬುಕ್​ ಇದೇ ವರ್ಷ ಜೂನ್​ನಲ್ಲಿ ಇನ್ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಜಾಹೀರಾತನ್ನು ಆರಂಭಿಸಿತ್ತು. ಇದನ್ನು ಹೊರತುಪಡಿಸಿ WhatsApp ಇನ್ನೂ ನಾಲ್ಕು ಫೀಚರ್​ಗಳ ಟೆಸ್ಟಿಂಗ್​ನ್ನೂ ಈಗಾಗಲೇ ಆರಂಭಿಸಿದೆ.

ಶೀಘ್ರದಲ್ಲೇ Whatsappನಲ್ಲಿ ಸ್ಟಿಕ್ಕರ್ಸ್​ ಆಯ್ಕೆಯನ್ನೂ ನೀಡಲಿದೆ ಎನ್ನಲಾಗಿದೆ ಈ ಕುರಿತಾಗಿ WaBetaInfoದಲ್ಲೂ ಮಾಹಿತಿ ನೀಡಲಾಗಿದೆ. ಈ ಹಿಂದೆಯೇ ಆ್ಯಂಡ್ರಾಯ್ಡ್​ ಬೀಟಾ ವರ್ಶನ್​ನಲ್ಲಿ ಈ ಆಯ್ಕೆ ನೀಡಲಾಗಿತ್ತು. ಇದನ್ನು ಹೊರತುಪಡಿಸಿ Swipe To Reply ಹಾಗೂ ಡಾರ್ಕ್​ ಮೋಡ್  ಎಂಬ ನೂತನ ಫೀಚರ್​ಗಳನ್ನೂ ಅಳವಡಿಸಲಿದೆ.
First published:October 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...