WhatsApp: ಇನ್ಮುಂದೆ ವಾಟ್ಸಪ್‍ನಲ್ಲಿ ಆನ್‌ಲೈನ್‌ನಲ್ಲಿದ್ದರೂ ಗೊತ್ತಾಗಲ್ಲ; 'ಆನ್‌ಲೈನ್' ಸೂಚಕವನ್ನು ಮರೆಮಾಡುವ ಹೊಸ ಫೀಚರ್

ಬಳಕೆದಾರರ ಪ್ರೈವೆಸಿ ಮತ್ತು ಸೆಕ್ಯೂರಿಟಿ ಬಗ್ಗೆ ಹೆಚ್ಚು ಗಮನಹರಿಸುವ ವಾಟ್ಸಾಪ್ ಇದಕ್ಕೆ ಸಂಬಂಧಪಟ್ಟಂತೆ ಹತ್ತಾರು ಫೀಚರ್‍‍ಗಳನ್ನು ಪರಿಚಯಿಸಿದೆ. ಮೆಸೇಜ್ ಓದಿರುವ ನೀಲಿ ಮಾರ್ಕ್ ಅನ್ನು ಮರೆಮಾಡುವುದು, ಸ್ಟೇಟಸ್, ಪ್ರೊಫೈಲ್ ಫೋಟೋ ಬೇಕಾದವರ ಜೊತೆ ಮಾತ್ರ ಶೇರ್ ಮಾಡುವ ಹೀಗೆ ಅನೇಕ ಹೊಸ ಆಯ್ಕೆಗಳನ್ನು ಅಭಿವೃದ್ಧಿಪಡಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಪ್ (WhatsApp) ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ತತ್‌ಕ್ಷಣ ಸಂದೇಶ ಕಳುಹಿಸುವ ವೇದಿಕೆಯಾಗಿರುವ ವಾಟ್ಸಪ್ ಪ್ರಪಂಚದಾದ್ಯಂತ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಅಪ್ಲಿಕೇಶನ್ (Application). ಶತಕೋಟಿ ಬಳಕೆದಾರರೊಂದಿಗೆ, ಮೆಟಾ ಒಡೆತನದಲ್ಲಿರುವ ವಾಟ್ಸಪ್ ಪ್ಲಾಟ್‌ಫಾರ್ಮ್ ಹೊಸ ಹೊಸ ವೈಶಿಷ್ಟ್ಯಗಳನ್ನು ತನ್ನ ಬಳಕೆದಾರರ ಗೌಪ್ಯತೆ, ಭದ್ರತೆಯ ಸಲುವಾಗಿ ಪರಿಚಯಿಸುತ್ತಲೇ ಇರುತ್ತದೆ. ತನ್ನ ಬಳಕೆದಾರರ ಪ್ರೈವೆಸಿ ಮತ್ತು ಸೆಕ್ಯೂರಿಟಿ ಬಗ್ಗೆ ಹೆಚ್ಚು ಗಮನಹರಿಸುವ ವಾಟ್ಸಾಪ್ ಇದಕ್ಕೆ ಸಂಬಂಧಪಟ್ಟಂತೆ ಹತ್ತಾರು ಫೀಚರ್‍‍‍ಗಳನ್ನು (Feature) ಪರಿಚಯಿಸಿದೆ. ಮೆಸೇಜ್ (Message) ಓದಿರುವ ನೀಲಿ ಮಾರ್ಕ್ ಅನ್ನು ಮರೆಮಾಡುವುದು, ಸ್ಟೇಟಸ್, ಪ್ರೊಫೈಲ್ ಫೋಟೋ ಬೇಕಾದವರ ಜೊತೆ ಮಾತ್ರ ಶೇರ್ ಮಾಡುವ ಹೀಗೆ ಅನೇಕ ಹೊಸ ಆಯ್ಕೆಗಳನ್ನು ಅಭಿವೃದ್ಧಿಪಡಿಸಿದೆ.

ಮುಂಬರುವ ವೈಶಿಷ್ಟ್ಯಗಳು ಮತ್ತು ನವೀಕರಣಗಳ ಬಗ್ಗೆ ಮಾಹಿತಿ ನೀಡುವ WaBetaInfoನ ಇತ್ತೀಚಿನ ವರದಿಯ ಪ್ರಕಾರ ಆಂಡ್ರಾಯ್ಡ್, ಐಒಎಸ್ ಮತ್ತು ಡೆಸ್ಕ್ ಟಾಪ್ ಬಳಕೆದಾರರಿಗಾಗಿ ಅಪ್ಲಿಕೇಶನ್‌ನಲ್ಲಿ ಆನ್‌ಲೈನ್ ಸೂಚಕವನ್ನು ಮರೆಮಾಡಬಹುದಾದ ವೈಶಿಷ್ಟ್ಯದಲ್ಲಿ ವಾಟ್ಸಪ್ ಕಾರ್ಯನಿರ್ವಹಿಸುತ್ತಿದೆ ಎಂದಿದೆ.

ಪ್ರಸ್ತುತ ಆನ್‌ಲೈನ್ ಸ್ಟೇಟಸ್ ಹೇಗಿದೆ?
ಮೊದಲು ವಾಟ್ಸಾಪ್‍ನಲ್ಲಿ ಬಳಕೆದಾರರು ಯಾವಾಗ ಆನ್‌ಲೈನ್‍ನಲ್ಲಿ ಇದ್ದರು, ಸಮಯ, ಎಷ್ಟು ನಿಮಿಷದ ಹಿಂದೆ ಎಂಬೆಲ್ಲಾ ಮಾಹಿತಿಯನ್ನು ಇತರರು ನೋಡಬಹುದಿತ್ತು. ಕಾಲಕ್ರಮೇಣ ಈ ವೈಶಿಷ್ಟ್ಯತೆ ಹೋಗಿ ಅಲ್ಲಿ ನಮಗೆ ಯಾರು ನೋಡಬಹುದು ಎಂಬ ಆಯ್ಕೆ ಲಭ್ಯವಾಯಿತು.

ಇದನ್ನೂ ಓದಿ:  Instagram: ಇನ್ಮುಂದೆ ವಿಡಿಯೋ ಪೋಸ್ಟನ್ನು ರೀಲ್ಸ್ ಆಗಿ ಮಾಡಬಹುದಂತೆ! ಹೀಗೊಂದು ಪ್ರಯತ್ನಕ್ಕಿಳಿದಿದೆ ಇನ್ಸ್ಟಾಗ್ರಾಮ್

ಈ ಪ್ರಕಾರ ಬಳಕೆದಾರರು ಮೈ ಕಾಂಟ್ಯಾಕ್ಟ್ಸ್, ಎವರಿ ಒನ್ ಹೀಗೆ ಕೆಲವು ಆಯ್ಕೆಗಳನ್ನು ಪಡೆದುಕೊಂಡರು. ಆದರೆ ಇತ್ತೀಚಿನ ದಿನಗಳಲ್ಲಿ ಅದಕ್ಕೆ ಹೊಸ ಸೇರ್ಪಡೆಯಾಗಿ ನೋ ಬಡಿ (ಯಾರು ಬೇಡ) ಆಯ್ಕೆ ಸೇರಿಕೊಂಡಿತು. ಇದರ ಮೂಲಕ ಒಬ್ಬರು ಯಾವಾಗ ಆನ್‌ಲೈನ್‍ನಲ್ಲಿ ಇದ್ದರೂ, ಸಮಯ ಎಲ್ಲವನ್ನೂ ಮರೆಮಾಚಲು ಈ ಫೀಚರ್ ನೆರವಾಯಿತು. ಇದರಿಂದಾಗಿ ಒಬ್ಬರು ಆ್ಯಪ್ ಅನ್ನು ತೆರೆದಿದ್ದಾಗ ಮಾತ್ರ ಸ್ಟೇಟಸ್ ಸ್ಥಿತಿಯು ಆನ್‌ಲೈನ್ ಎಂದು ತೋರಿಸುತ್ತದೆ.

ಹೊಸ ಫೀಚರ್ ಏನು?
ಪ್ರಸ್ತುತ ಕಂಪನಿ ಅಭಿವೃದ್ಧಿಪಡಿಸುತ್ತಿರುವ ವೈಶಿಷ್ಟ್ಯ ಈಗಿರುವ ಆನ್‌ಲೈನ್ ಸ್ಥಿತಿಯನ್ನು ಸಹ ಬಳಕೆದಾರರು ಮರೆಮಾಡುವ ಫೀಚರ್ ನೀಡುವುದಾಗಿದೆ.

"ಬಹಳಷ್ಟು ಜನರು ಈ ವೈಶಿಷ್ಟ್ಯವನ್ನು ಎದುರು ನೋಡುತ್ತಿದ್ದಾರೆ ಎಂದು ನಮಗೆ ತಿಳಿದಿದೆ, ಆದ್ದರಿಂದ ನಾವು ಕಳೆದ ವರ್ಷ ಆನ್‌ಲೈನ್ ಸ್ಥಿತಿಯನ್ನು ನಿಷ್ಕ್ರಿಯಗೊಳಿಸುವ ಪರಿಕಲ್ಪನೆಯನ್ನು ಸಹ ರಚಿಸಿದ್ದೇವೆ, ಇದು ವಾಟ್ಸಪ್‍ನೊಂದಿಗೆ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು ಉತ್ತಮ ಮಾರ್ಗವಾಗಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆ ಮೂಲಕ, ಬಳಕೆದಾರರ ಪ್ರತಿಕ್ರಿಯೆಯನ್ನು ಪರಿಗಣನೆಗೆ ತೆಗೆದುಕೊಂಡು, ವಾಟ್ಸಪ್ ಒಂದು ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಅದೇನೆಂದರೆ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಅಥವಾ ಚಾಟ್ ಮಾಡಲು ಅಥವಾ ಅವರ ಸ್ಟೇಟಸ್ ಅನ್ನು ನವೀಕರಿಸಲು ಅಪ್ಲಿಕೇಶನ್ ಅನ್ನು ತೆರೆದಾಗ ಅವರ ಆನ್‌ಲೈನ್ ಸ್ಥಿತಿಯನ್ನು ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.

ಹೂ ಕ್ಯಾನ್ ಸೀ ವೆನ್ ಐಯಾಮ್ ಆನ್‍‍‍ಲೈನ್
ಆ್ಯಪ್‌ನಲ್ಲಿನ ಸೆಟ್ಟಿಂಗ್‌ನಲ್ಲಿರುವ 'ಕೊನೆಯದಾಗಿ ನೋಡಿದ ( ಲಾಸ್ಟ್ ಸೀನ್) ಮತ್ತು ಆನ್‌ಲೈನ್' ವಿಭಾಗಕ್ಕೆ 'ನಾನು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು' ( ಹೂ ಕ್ಯಾನ್ ಸೀ ವೆನ್ ಐಯಾಮ್ ಆನ್‍ಲೈನ್) ಎಂಬ ಶೀರ್ಷಿಕೆಯ ಹೊಸ ಆಯ್ಕೆಯನ್ನು ವಾಟ್ಸಪ್ ಸೇರಿಸುತ್ತದೆ ಎಂದು ವರದಿಗಳು ಹೇಳಿವೆ. ಈ ಹೊಸ ಸೇರ್ಪಡೆಯಲ್ಲಿ ಬಳಕೆದಾರರು ಎವರಿ ಒನ್ ಮತ್ತು ಸೇಮ್ ಆ್ಯಸ್ ಲಾಸ್ಟ್ ಸೀನ್ (ಕೊನೆಯದಾಗಿ ನೋಡಿದಂತೆಯೇ)ಎಂಬ ಆಯ್ಕೆಗಳು ಲಭ್ಯವಾಗಲಿವೆ.

ಇದನ್ನೂ ಓದಿ: WhatsApp: 19 ಲಕ್ಷಕ್ಕೂ ಹೆಚ್ಚು ಭಾರತೀಯರ ವಾಟ್ಸ್​ಆ್ಯಪ್​ ಖಾತೆಗಳು ಬ್ಯಾನ್!

ವರದಿಯ ಪ್ರಕಾರ, ನಮ್ಮ ಕೊನೆಯದಾಗಿ ನೋಡಿದ ಸೆಟ್ಟಿಂಗ್‌ಗಳಲ್ಲಿ ನಾವು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ಕಾನ್ಫಿಗರ್ ಮಾಡಲು ಈ ಎರಡು ಹೊಸ ಆಯ್ಕೆಗಳು ಬಳಕೆದಾರರಿಗೆ ಅನುಕೂಲವಾಗಲಿದೆ.

ಈ ವೈಶಿಷ್ಟ್ಯತೆ ಬಂದ ನಂತರ ಆನ್‌ಲೈನ್‌ ನಲ್ಲಿ ಇದ್ದರೂ ಕೂಡ ಅದು ಬೇರೆಯವರಿಗೆ ಕಾಣಿಸದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
Published by:Ashwini Prabhu
First published: