• Home
  • »
  • News
  • »
  • tech
  • »
  • Whatsapp: ಹೊಸ ವೈಶಿಷ್ಟ್ಯತೆ ತರಲು ಮುಂದಾದ ವಾಟ್ಸಪ್

Whatsapp: ಹೊಸ ವೈಶಿಷ್ಟ್ಯತೆ ತರಲು ಮುಂದಾದ ವಾಟ್ಸಪ್

ವಾಟ್ಸಪ್ ಅಪ್ಡೇಟ್

ವಾಟ್ಸಪ್ ಅಪ್ಡೇಟ್

ಈ ವೈಶಿಷ್ಟ್ಯತೆಯೂ ಸಹ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಇನ್ನೂ ಪೂರ್ತಿಯಾಗಿ ಬಳಕೆಗೆ ಸಿದ್ಧವಾಗಿಲ್ಲ ಎಂದು ಹೇಳಿತ್ತು.

  • Trending Desk
  • 2-MIN READ
  • Last Updated :
  • Share this:

ಈಗಂತೂ ಜನರು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಮತ್ತು ಮೆಸೇಜ್ ಮಾಡುವ ಅಪ್ಲಿಕೇಶನ್ ಗಳಲ್ಲಿಯೇ (Message Application) ತುಂಬಾ ಸಮಯ ಕಳೆಯುತ್ತಾರೆ. ಅವರ ಬಹುತೇಕ ಚಿಕ್ಕ-ಪುಟ್ಟ ಕೆಲಸಗಳೆಲ್ಲವೂ ಇದರ ಮೂಲಕವೇ ಮಾಡಿಕೊಳ್ಳುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಗಳಲ್ಲಿ (Messaging Platform) ವಾಟ್ಸಾಪ್ (Whats app) ತುಂಬಾನೇ ಜನಪ್ರಿಯತೆ ಗಳಿಸಿದೆ ಅಂತ ಹೇಳಿದರೆ ಸುಳ್ಳಲ್ಲ. ಆಗಾಗ್ಗೆ ವಾಟ್ಸಾಪ್ ತಮ್ಮ ಬಳಕೆದಾರರಿಗಾಗಿ ಅನೇಕ ರೀತಿಯ ಹೊಸ ಹೊಸ ಫೀಚರ್ ಗಳನ್ನು (New Feature) ಪರಿಚಯಿಸುತ್ತಲೇ ಇರುತ್ತದೆ. ಈಗ ಇದೇ ಕಾರಣಕ್ಕೆ ವಾಟ್ಸಾಪ್ ಮತ್ತೊಮ್ಮೆ ಸುದ್ದಿಯಲ್ಲಿದೆ ಅಂತ ಹೇಳಬಹುದು ನೋಡಿ.


ಏನಿದು ವಾಟ್ಸಾಪ್ ನ ಹೊಸ ವೈಶಿಷ್ಟ್ಯತೆ?


ಈಗ ವಾಟ್ಸಾಪ್ ಗ್ರೂಪ್ ಚಾಟ್ ಗಳಿಗಾಗಿ ಮ್ಯೂಟ್ ಮಾಡುವ ಶಾರ್ಟ್ಕಟ್ ವೈಶಿಷ್ಟ್ಯತೆಯ ಮೇಲೆ ಕೆಲಸ ಮಾಡುತ್ತಿದೆ ಅಂತ ಹೇಳಲಾಗುತ್ತಿದೆ.


ಈ ವೈಶಿಷ್ಟ್ಯತೆಯೊಂದಿಗೆ ವಾಟ್ಸಾಪ್ ನಲ್ಲಿರುವ ನಿಮ್ಮ ಗ್ರೂಪ್ ಗಳಲ್ಲಿ ಸ್ವೀಕರಿಸಿದ ಸಂದೇಶಗಳ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸುವುದು ಈಗ ಮತ್ತಷ್ಟು ಸುಲಭವಾಗಲಿದೆ ಎಂದು ವಾಟ್ಸಾಪ್ ಅಪ್ಲಿಕೇಷನ್ ಗೆ ಸಂಬಂಧಿಸಿದ ಹೊಸ ಅಪ್ಡೇಟ್ ಗಳ ಬಗ್ಗೆ ಸುದ್ದಿ ಮಾಡುವ ಡಬ್ಲ್ಯೂಎಬೆಟಾಇನ್ಫೋ ಎಂಬ ವೆಬ್‌ಸೈಟ್ ತಿಳಿಸಿದೆ.


ಬೀಟಾ ಭವಿಷ್ಯದ ನವೀಕರಣ


ಎರಡು ವಾರಗಳ ಹಿಂದೆ ಬೀಟಾ ಆವೃತ್ತಿಯಲ್ಲಿ ದೊಡ್ಡ ಗ್ರೂಪ್ ಗಳಿಗೆ ಸ್ವಯಂಚಾಲಿತವಾಗಿ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ವಾಟ್ಸಾಪ್ ಈಗಾಗಲೇ ಬಹಿರಂಗಪಡಿಸಿದೆ.


ಗ್ರೂಪ್ ಚಾಟ್ಸ್ ವೈಶಿಷ್ಟ್ಯಕ್ಕಾಗಿ ಮ್ಯೂಟ್ ಶಾರ್ಟ್ಕಟ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ವಾಟ್ಸಾಪ್ ಡೆಸ್ಕ್ಟಾಪ್ ಬೀಟಾದ ಭವಿಷ್ಯದ ನವೀಕರಣದಲ್ಲಿ ಅನಾವರಣಗೊಳ್ಳಲಿದೆ.


ಈ ಹೊಸ ವೈಶಿಷ್ಟ್ಯತೆ ಇನ್ನೂ ಬೀಟಾ ಆವೃತ್ತಿಯಲ್ಲಿದೆ


ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಕಾಲಕಾಲಕ್ಕೆ ಬಳಕೆದಾರ-ಸ್ನೇಹಿ ಅನುಭವಕ್ಕಾಗಿ ಹೊಸ ಹೊಸ ವೈಶಿಷ್ಟ್ಯತೆಗಳನ್ನು ಹೊರ ತರುತ್ತದೆ. ಇದು ವಾಟ್ಸಾಪ್ ಬೀಟಾ ಆವೃತ್ತಿಯಲ್ಲಿ ಸಂಪರ್ಕಗಳನ್ನು ಹಂಚಿಕೊಳ್ಳುವುದನ್ನು ಹೊರತರುತ್ತಿದೆ ಎಂದು ಹೇಳಲಾಗುತ್ತದೆ.


ಈ ವೈಶಿಷ್ಟ್ಯತೆಯೊಂದಿಗೆ ವಾಟ್ಸಾಪ್ ಬಳಕೆದಾರರು ಒಂದೇ ಚಾಟ್ ಶೇರ್ ಶೀಟ್ ನೊಳಗೆ ಸಂಪರ್ಕಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ, ಅಲ್ಲಿ ಫೈಲ್ ಗಳನ್ನು ಹಂಚಿಕೊಳ್ಳುವ ಮತ್ತು ಸಮೀಕ್ಷೆಗಳನ್ನು ರಚಿಸುವ ಆಯ್ಕೆಗಳು ಗೋಚರಿಸುತ್ತವೆ ಎಂದು ಡಬ್ಲ್ಯೂಎಬೆಟಾಇನ್ಫೋ ವರದಿ ಮಾಡಿದೆ.


ವರದಿಯ ಪ್ರಕಾರ, ಈ ವೈಶಿಷ್ಟ್ಯತೆಯನ್ನು ಕೆಲವು ಬೀಟಾ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಹೆಚ್ಚಿನ ಪರೀಕ್ಷಾರ್ಥಿಗಳಿಗೆ ಇದನ್ನು ಹೊರತರಲಾಗುವುದು.


ಧ್ವನಿ ಟಿಪ್ಪಣಿಗಳನ್ನು ಸ್ಟೇಟಸ್ ಅಗಿರಿಸಿಕೊಳ್ಳುವ ವೈಶಿಷ್ಟ್ಯತೆ ಅಭಿವೃದ್ದಿ ಹಂತದಲ್ಲಿದೆ


ಕೆಲವು ದಿನಗಳ ಹಿಂದೆಯಷ್ಟೆ ಐಒಎಸ್ ಗಾಗಿ ಸ್ಟೇಟಸ್ ಅಪ್ಡೇಟ್ ಗಳಿಗೆ ಧ್ವನಿ ಟಿಪ್ಪಣಿಗಳನ್ನು ಹಂಚಿಕೊಳ್ಳಲು ಬಳಕೆದಾರರನ್ನು ಸಕ್ರಿಯಗೊಳಿಸುವ ವೈಶಿಷ್ಟ್ಯತೆಯ ಮೇಲೆ ವಾಟ್ಸಾಪ್ ಕಾರ್ಯ ನಿರ್ವಹಿಸುತ್ತಿದೆ ಎಂಬ ಸುದ್ದಿ ನೋಡಿದ್ದೆವು.


ಬಳಕೆದಾರರು ಪಠ್ಯದ ಸ್ಟೇಟಸ್ ನೊಂದಿಗೆ ತಮ್ಮ ಸ್ಟೇಟಸ್ ನವೀಕರಣಗಳಲ್ಲಿ 30 ಸೆಕೆಂಡುಗಳವರೆಗೆ ಧ್ವನಿ ಟಿಪ್ಪಣಿಯನ್ನು ಸಹ ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಎಂದು ಡಬ್ಲ್ಯುಎಬೆಟಾಇನ್ಫೋ ವರದಿ ಮಾಡಿತ್ತು.


ಇದನ್ನೂ ಓದಿ:  Trend: ಮೊಟ್ಟೆಗಳನ್ನು ಬಾಹ್ಯಾಕಾಶದಿಂದ ಬಿಟ್ಟರೂ ಒಡೆಯುತ್ತಿಲ್ಲ, ಸಖತ್ ವೈರಲ್ ಆಗ್ತಿದೆ ಈ ವಿಡಿಯೋ


ಅಭಿವೃದ್ಧಿ ಹಂತದಲ್ಲಿ


ಈ ವಿಭಾಗದೊಳಗೆ ಯಾವುದೇ ಪಠ್ಯವನ್ನು ನಮೂದಿಸದಿದ್ದಾಗ ಮೈಕ್ರೊಫೋನ್ ಐಕಾನ್ ಕಾಣಿಸುತ್ತದೆ. ಈ ವೈಶಿಷ್ಟ್ಯತೆಯೂ ಸಹ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಇನ್ನೂ ಪೂರ್ತಿಯಾಗಿ ಬಳಕೆಗೆ ಸಿದ್ಧವಾಗಿಲ್ಲ ಎಂದು ಹೇಳಿತ್ತು.


ಇನ್ನೂ ಐಓಎಸ್ ಗಾಗಿ ವಾಟ್ಸಾಪ್ ಬಳಕೆದಾರರು ತಮ್ಮ ಸ್ಟೇಟಸ್ ಅಪ್ಡೇಟ್ ಗಳಿಗಾಗಿ 30 ಸೆಕೆಂಡುಗಳವರೆಗೆ ಧ್ವನಿ ಟಿಪ್ಪಣಿಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವ ವೈಶಿಷ್ಟ್ಯತೆಯ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದು ವರದಿಯಾಗಿತ್ತು. ಈ ವೈಶಿಷ್ಟ್ಯತೆಯು ಈಗಾಗಲೇ ಆಂಡ್ರಾಯ್ಡ್ ಗಾಗಿ ವಾಟ್ಸಾಪ್ ಬೀಟಾದಲ್ಲಿ ಅಭಿವೃದ್ಧಿಯ ಹಂತದಲ್ಲಿದೆ.


ಇದನ್ನೂ ಓದಿ:  K Radhakrishnan: IIM ಬೆಂಗಳೂರು ನನಗೆ ಸಂಸ್ಥೆ ನಿರ್ಮಾಣದ ಕಲೆ ಕಲಿಸಿದೆ: ಇಸ್ರೋ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್


"ಐಒಎಸ್ ಬೀಟಾದಲ್ಲಿ ವಾಯ್ಸ್ ಸ್ಟೇಟಸ್ ಅಪ್ಡೇಟ್ ಗಳ ಮೇಲೆ ವಾಟ್ಸಾಪ್ ಕೆಲಸ ಮಾಡುತ್ತಿದೆ! ಐಓಎಸ್ ಗಾಗಿ ವಾಟ್ಸಾಪ್ ಬೀಟಾದ ಭವಿಷ್ಯದ ನವೀಕರಣದಲ್ಲಿ ಸ್ಟೇಟಸ್ ಮೂಲಕ 30 ಸೆಕೆಂಡುಗಳವರೆಗೆ ಧ್ವನಿ ಟಿಪ್ಪಣಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಡಬ್ಲ್ಯೂಎಬಿಟಾಇನ್ಫೋ ಎಂಬ ವೆಬ್‌ಸೈಟ್ ಟ್ವೀಟ್ ಮಾಡಿತ್ತು.

Published by:Mahmadrafik K
First published: