HOME » NEWS » Tech » WHATSAPP IS UPDATING ITS TERMS AND PRIVACY POLICY AND USERS NEED TO ACCEPT THEM OR DELETE THEIR ACCOUNT HG

WhatsApp: ನವೀಕರಣಕ್ಕೆ ಮುಂದಾದ ವಾಟ್ಸ್​​ಆ್ಯಪ್​; ನಿಯಮ ಬದಲಾಯಿಸಲಿದೆಯಾ ಜನಪ್ರಿಯ ಆ್ಯಪ್​?

ವಾಟ್ಸ್​ಆ್ಯಪ್​​ ಹೊಸದೊಂದು ಅಪ್ಡೇಟ್​​ಗೆ ಸಜ್ಜಾಗಿದೆ. ಹೊಸ ಷರತ್ತುಗಳನ್ನು ತರಲು ವ್ಯಾಟ್ಸ್​​ಆ್ಯಪ್​​ ಚಿಂತನೆ ಮಾಡಿದ್ದು, ಬಳಕೆದಾರರು ಷರತ್ತುಗಳಿಗೆ ಒಪ್ಪದೆ ಹೋದರೆ ಖಾತೆಯನ್ನು ಬಳಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

news18-kannada
Updated:December 5, 2020, 6:28 PM IST
WhatsApp: ನವೀಕರಣಕ್ಕೆ ಮುಂದಾದ ವಾಟ್ಸ್​​ಆ್ಯಪ್​; ನಿಯಮ ಬದಲಾಯಿಸಲಿದೆಯಾ ಜನಪ್ರಿಯ ಆ್ಯಪ್​?
ವಾಟ್ಸ್ಆ್ಯಪ್
  • Share this:
ಜನಪ್ರಿಯ ಆ್ಯಪ್​ಗಳಲ್ಲಿ ವ್ಯಾಟ್​ಆ್ಯಪ್​​​ ಕೂಡ ಒಂದು. ಸಾಕಷ್ಟು ಜನರು ವ್ಯಾಟ್ಸ್​ಆ್ಯಪ್​ ಬಳಸುತ್ತಿದ್ದಾರೆ. ತಮ್ಮ ದೈನಂದಿನ ವ್ಯವಹಾರವನ್ನು ನಡೆಸಲು ವ್ಯಾಟ್ಸ್​ಆ್ಯಪ್​ ಸಹಕಾರಿಯಾಗಿದೆ. ಇದರ ಮೂಲಕ ವಿಡಿಯೋ ಕರೆ, ಧ್ವನಿ ಕರೆ, ಸಂದೇಶ, ಫೋಟೋ, ಫೈಲ್​ ರವಾನಿಸಲು ಸಾಧ್ಯವಾಗುತ್ತಿದೆ. ಆದರೆ ಮುಂದಿನ ವರ್ಷ ವಾಟ್ಸ್​​ಆ್ಯಪ್​ ತನ್ನ ಬಳಕೆದಾರರಿಗೆ ಕೆಲವು ಷರತ್ತುಗಳನ್ನು ಹೇರಲು ಮುಂದಾಗಿದೆ.

ವಾಟ್ಸ್​ಆ್ಯಪ್​​ ಹೊಸದೊಂದು ಅಪ್ಡೇಟ್​​ಗೆ ಸಜ್ಜಾಗಿದೆ. ಹೊಸ ಷರತ್ತುಗಳನ್ನು ತರಲು ವ್ಯಾಟ್ಸ್​​ಆ್ಯಪ್​​ ಚಿಂತನೆ ಮಾಡಿದ್ದು, ಬಳಕೆದಾರರು ಷರತ್ತುಗಳಿಗೆ ಒಪ್ಪದೆ ಹೋದರೆ ಖಾತೆಯನ್ನು ಬಳಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

2021ರ ಫೆ.8ರಂದು ವಾಟ್ಸ್​ ಆ್ಯಪ್​​​ ಹೊಸ ಷರತ್ತುಗಳನ್ನು ತರಲು ಚಿಂತನೆ ನಡೆಸಿದೆ. ಆದರೆ ಯಾವೆಲ್ಲ ಆಷರತ್ತುಗಳನ್ನು ತರಲಿದೆ ಎಂದು ಬಳಕೆದಾರರಲ್ಲಿ ಕೂತೂಹಲಕ್ಕೆ ಕಾರಣವಾಗಿದೆ. ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​​ ಟೆಲಿಗ್ರಾಂ ಪ್ರೇರಿತವಾಗಿ ನೂತನ ಅಪ್ಡೇಟ್​ ಅನ್ನು ತರಲು ಮುಂದಾಗಿದೆ.

ಅಮೆರಿಕ ಮೂಲದ ವಕ್ತಾರರೊಬ್ಬರು ವಾಟ್ಸ್​​ಆ್ಯಪ್​ ಫೆ.08 ರಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.  ವ್ಯವಹಾರದ ಸಲುವಾಗಿ ಈ ನಿರ್ಣಯವನ್ನು ಜಾರಿಗೆ ತರಲಿದೆ ಎಂದಿದ್ದಾರೆ.ಇತ್ತೀಚೆಗೆ ವ್ಯಾಟ್ಸ್​ಆ್ಯಪ್​  ಅನಿಮೇಟೆಡ್​ ಸ್ಟಿಕ್ಕರ್​ ಪ್ಯಾಕ್​ ಅನ್ನು ಪರಿಚಯಿಸಿದೆ. ಜೊತೆಗೆ ವಾಲ್​ಪೇಪರ್​ ಬದಲಾಯಿಸುವ ಆಯ್ಕೆಯನ್ನು ನೀಡಿದೆ.
Published by: Harshith AS
First published: December 5, 2020, 6:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories