Iphone ಬಳಕೆದಾರರಿಗೆ WhatsApp ಕಡೆಯಿಂದ ಸಿಹಿ ಸುದ್ದಿ.. ಏನದು ಗೊತ್ತಾ?

ನಿಮ್ಮ WhatsApp ಖಾತೆಯ ಮೂಲಕ ಫೋಟೋಗಳನ್ನು ತೆಗೆದುಕೊಳ್ಳಲು ಕ್ಯಾಮರಾವನ್ನು ತೆರೆಯುವಾಗ ಅಲ್ಲಿ ಹಾರಿಜಂಟಲ್ ಗ್ಯಾಲರಿ ತೆರೆದುಕೊಳ್ಳುತ್ತದೆ ಮತ್ತು ಅಲ್ಲಿ ನಾವು ಫೋಟೋಗಳನ್ನು ಸಹ ಕ್ಲಿಕ್ಕಿಸಲು ಹಿಂದೆ, ಮುಂದಿನ ಕ್ಯಾಮರಾ ಆಯ್ಕೆ ಎಲ್ಲಾ ಫೋನ್‌ಗಳಲ್ಲಿ ಸಹಜವಾಗಿ ಇರುತ್ತದೆ.

ವಾಟ್ಸ್‌ಆ್ಯಪ್‌

ವಾಟ್ಸ್‌ಆ್ಯಪ್‌

  • Share this:
    ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವುದು ವಾಟ್ಸ್‌ಆ್ಯಪ್‌ (WhatsApp). ಬೃಹತ್ ಸಂಖ್ಯೆಯಲ್ಲಿ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆ್ಯಪ್‌ ಯೂಸರ್ಸ್ ಅಗತ್ಯಕ್ಕೆ ತಕ್ಕಂತೆ ಆ್ಯಂಡ್ರಾಯ್ಡ್ (Android), ಐಫೋನ್‌ನಲ್ಲಿ (Iphone) ಅನೇಕ ಹೊಸ ಹೊಸ ಫೀಚರ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ವಾಟ್ಸ್‌ಆ್ಯಪ್‌ ಸದ್ಯ ಐಫೋನ್ ಬಳಕೆದಾರರಿಗೆ ಹೊಸ ಫೀಚರ್‌ವೊಂದನ್ನು (New Feature) ಪ್ರಸ್ತುತ ಪಡಿಸಲಿದೆಯಂತೆ. ಯಾವುದು ಆ ಫೀಚರ್, ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯೋಣ.

    ವಾಟ್ಸ್‌ಆ್ಯಪ್‌ ಶೀಘ್ರದಲ್ಲೇ ಐಫೋನ್‌ನಲ್ಲಿ ಕ್ಯಾಮೆರಾ UI ಅನ್ನು ಬದಲಾಯಿಸಲಿದೆ. ಈ ಮೂಲಕ ಐಫೋನ್ ಬಳಕೆದಾರರಿಗೆ ಗ್ಯಾಲರಿ ಐಕಾನ್‌ನೊಂದಿಗೆ ಮೀಡಿಯಾ ಆಯ್ಕೆಯನ್ನು ಸುಲಭ ಮಾಡುವ ಹೊಸ ವೈಶಿಷ್ಟ್ಯದ ಪರಿಚಯ ಮಾಡಿಕೊಡಲಿದೆ. UI ಎಂದರೆ ಯೂಸರ್ಸ್ ಇಂಟರ್ಫೇಸ್ ವಿನ್ಯಾಸ ಅಥವಾ ಯೂಸರ್ಸ್ ಇಂಟರ್ಫೇಸ್ ಎಂಜಿನಿಯರಿಂಗ್. ಯುಐ (UI)ಮೊಬೈಲ್‌ನ ಸ್ಕ್ರೀನ್, ಪೇಜ್ ಮತ್ತು ವಿಶ್ಯುವಲ್ ಎಲಿಮೆಂಟ್ಸ್, ಬಟನ್‌ಗಳು ಮತ್ತು ಐಕಾನ್‌ಗಳನ್ನು ಪ್ರತಿನಿಧಿಸುತ್ತದೆ ಮತ್ತು ಇದು ಉತ್ಪನ್ನ ಅಥವಾ ಸೇವೆಯೊಂದಿಗೆ ಸಂವಹನ ನಡೆಸಲು ವ್ಯಕ್ತಿಯನ್ನು ಸಕ್ರಿಯಗೊಳಿಸುತ್ತದೆ.

    ನಿಮ್ಮ WhatsApp ಖಾತೆಯ ಮೂಲಕ ಫೋಟೋಗಳನ್ನು ತೆಗೆದುಕೊಳ್ಳಲು ಕ್ಯಾಮರಾವನ್ನು ತೆರೆಯುವಾಗ ಅಲ್ಲಿ ಹಾರಿಜಂಟಲ್ ಗ್ಯಾಲರಿ ತೆರೆದುಕೊಳ್ಳುತ್ತದೆ ಮತ್ತು ಅಲ್ಲಿ ನಾವು ಫೋಟೋಗಳನ್ನು ಸಹ ಕ್ಲಿಕ್ಕಿಸಲು ಹಿಂದೆ, ಮುಂದಿನ ಕ್ಯಾಮರಾ ಆಯ್ಕೆ ಎಲ್ಲಾ ಫೋನ್‌ಗಳಲ್ಲಿ ಸಹಜವಾಗಿ ಇರುತ್ತದೆ.

    ಇನ್ನು ಮುಂದೆ ಈ ಫೀಚರ್ ಐಫೋನ್‌ನಲ್ಲಿ ಬದಲಾಗುತ್ತಿದೆ. ಈ ಎಲ್ಲಾ ಕ್ರಿಯೆಯನ್ನು ಒಂದೇ ರೂಪದಲ್ಲಿ ನಡೆಸಲು ಐಫೋನ್ ಬಳಕೆದಾರರಿಗಾಗಿ ಬಟನ್ ಒಂದನ್ನು ಪರಿಚಯಿಸಲು ವಾಟ್ಸ್‌ಆ್ಯಪ್‌ ಹೊರಟಿದೆ. ಈ ಬಗ್ಗೆ Wabetainfo ವರದಿಯಲ್ಲಿ ಬಹಿರಂಗವಾಗಿದ್ದು, ಐಫೋನ್ ಬಳಕೆದಾರರಿಗೆ ಲಭ್ಯವಿದೆ. ಎಂದು ಹೇಳಿದೆ. WhatsApp ಬೀಟಾ ಈ ಹೊಸ WhatsApp ಕ್ಯಾಮೆರಾವನ್ನು iOS 22.4.0.72 ಗಾಗಿ ತರುತ್ತಿದೆ.

    ಇದನ್ನು ಓದಿ: Electric Bike ಆಗಿ ಬರಲಿದೆ KTM: ಅಭಿವೃದ್ಧಿ ಹಂತದಲ್ಲಿದೆ ಇ-ಡ್ಯೂಕ್ ಬೈಕ್!

    ಈ ಬದಲಾವಣೆಗಳು ಈಗಾಗಲೇ ಬೀಟಾ ಪರೀಕ್ಷಕರಿಗೆ ಲಭ್ಯವಿವೆ ಮತ್ತು WhatsApp ಗಾಗಿ ಹೆಚ್ಚಿನ ಟ್ವೀಕ್‌ಗಳು
    ಕ್ಯಾಮರಾ ಮುಂದಿನ ನವೀಕರಣಗಳೊಂದಿಗೆ ಬರುವ ಸಾಧ್ಯತೆಯಿದೆ.

    ಈ WhatsApp ಅಪ್‌ಡೇಟ್‌ನಿಂದ ಏನು ಬದಲಾಗಲಿದೆ?

    ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಕ್ಯಾಮೆರಾ ಐಕಾನ್‌ನ ಮೇಲ್ಭಾಗದಲ್ಲಿ ಸ್ಟೇಟಸ್ ಅಪ್‌ಲೋಡ್ ಮಾಡಲು ಗ್ಯಾಲರಿಯಿಂದ ನೇರವಾಗಿ ಚಿತ್ರಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಇದೆ. ಹಾಗೆ ಐಫೋನ್ ಬಳಕೆದಾರರಿಗೆ ಕೆಳಗಿನ ಎಡ ಮೂಲೆಯಲ್ಲಿರುವ ಗ್ಯಾಲರಿ ಐಕಾನ್ ಬಟನ್ ಮೇಲೆ ಟ್ಯಾಪ್ ಮಾಡಿದರೆ ಗ್ಯಾಲರಿ ತೆರೆದುಕೊಳ್ಳುತ್ತದೆ ಮತ್ತು ಅಲ್ಲಿ ನಾವು ನಮಗೆ ಬೇಕಿರುವ ಫೋಟೋ ಅಪ್ ಲೋಡ್ ಮಾಡಬಹುದು. ಐಫೋನ್‌ನಲ್ಲಿ ಈ ಬಟನ್ ಮಾದರಿಯನ್ನು ಬದಲಾಯಿಸಲಿದ್ದು, ಮರುವಿನ್ಯಾಸಗೊಳಿಸಲಾಗಿದೆ. ಇದು ಕ್ಯಾಮೆರಾವನ್ನು ಹಿಂದಿನಿಂದ ಮುಂಭಾಗಕ್ಕೆ ಮತ್ತು ಪ್ರತಿಯಾಗಿ ಬದಲಾಯಿಸುತ್ತದೆ. ಇದು ಸ್ಟೇಟಸ್ ಅಪ್‌ಲೋಡ್ ಮಾಡಲು ಗ್ಯಾಲರಿಯಿಂದ ರೀಸೆಂಟ್ ವ್ಯೂ ಫೋಟೋಗಳನ್ನು ತೆಗೆದು ಹಾಕಿ ನೇರವಾಗಿ ಗ್ಯಾಲರಿ ಪ್ರವೇಶ ಮಾಡುತ್ತದೆ. ಗ್ಯಾಲರಿ ಐಕಾನ್‌ನೊಂದಿಗೆ ಮೀಡಿಯಾ ಆಯ್ಕೆಯನ್ನು ಸುಲಭ ಮಾಡುತ್ತದೆ.

    ಇದನ್ನು ಓದಿ: Tata group ಎಷ್ಟು ಕಂಪನಿಗಳ ಒಡೆಯ ಗೊತ್ತಾ? ನಿಮಗೆ ಗೊತ್ತಿರದ ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ

    ಈ ವೈಶಿಷ್ಟ್ಯದ ಜೊತೆಗೆ ಇನ್ನೂ ಕೆಲವು ನವೀಕರಣಗಳು ಸಹ ಬರುತ್ತಿವೆ. WhatsApp ಬಳಕೆದಾರರು 2.2205.2.0 ಅನ್ನು ಅಪ್ ಗ್ರೇಡ್ ಮಾಡುವ ಮೂಲಕ ಡಾರ್ಕ್ ಥೀಮ್ ಅನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಇದು ಎಲ್ಲಾ WhatsApp ವಿಭಾಗಗಳಲ್ಲಿ ಸಕ್ರಿಯಗ್ರವಾಗಿ ಅಂದರೆ ಸೆಟ್ಟಿಂಗ್ಸ್, ಪುಟ, ಚಾಟ್ ಬ್ಯಾಕ್ ಗ್ರೌಂಡ್, ಟೈಟಲ್ ಬಾರ್‌ಗೆ ಅನ್ವಯವಾಗುತ್ತದೆ.

    ನೀವು ವಿಂಡೋಸ್‌ನಲ್ಲಿ ಡಾರ್ಕ್ ಥೀಮ್ ಅನ್ನು ಬಳಸಿದರೆ, ಸ್ವಯಂಚಾಲಿತವಾಗಿ ವಾಟ್ಸ್‌ಆ್ಯಪ್‌ ಥೀಮ್ ಡಾರ್ಕ್ ಮೋಡ್‌ಗೆ ಬದಲಾಗುತ್ತದೆ. ವಿಂಡೋಸ್‌ನಲ್ಲಿ ಬದಲಾವಣೆ ಮಾಡದಿದ್ದರೆ ನೀವು ನೇರವಾಗಿ ಥೀಮ್ ಅನ್ನು WhatsApp ಸೆಟ್ಟಿಂಗ್‌ನಲ್ಲಿ ಆಯ್ಕೆ ಮಾಡಬಹುದು.

    ಐಫೋನ್‌ನಲ್ಲಿ ವಾಟ್ಸ್‌ಆ್ಯಪ್‌ ಹೊಸ ಫೀಚರ್ಸ್ ಅನ್ನು ಪರಿಚಯಿಸುವ ತಯಾರಿ ನಡೆಸಿದ್ದು, ಮುಂದಿನ ಅಪ್ಡೇಟ್‌ಗೆ ಕಾಯಬೇಕಿದೆ.
    Published by:Harshith AS
    First published: