• Home
  • »
  • News
  • »
  • tech
  • »
  • WhatsApp: ಇನ್ಮುಂದೆ ಈ ಮೊಬೈಲ್‌ ಫೋನ್‌ಗಳಲ್ಲಿ ವಾಟ್ಸಾಪ್‌  ಬಳಸೋಕೆ ಆಗೋದೇ ಇಲ್ಲ!

WhatsApp: ಇನ್ಮುಂದೆ ಈ ಮೊಬೈಲ್‌ ಫೋನ್‌ಗಳಲ್ಲಿ ವಾಟ್ಸಾಪ್‌  ಬಳಸೋಕೆ ಆಗೋದೇ ಇಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಾಟ್ಸಾಪ್ ಎನ್ನುವುದು ಈಗಿನ ಕಾಲದಲ್ಲಿ ಯುವಜನರ ಹಾಟ್ ಫೆವರೇಟ್ ಆಗಿದೆ. ಆದ್ರೆ ಇನ್ನು ಮುಂದೆ ಈ ಕೆಲವು ಮೊಬೈಲ್ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ವಂತೆ!

  • Share this:

    ಅತೀ ಹೆಚ್ಚಿನ ಜನ (Most people) ಸಕ್ರಿಯವಾಗಿ ಬಳಕೆ ಹೊಂದಿರುವ ಜನಪ್ರಿಯ (Popular) ಇನ್‌ಸ್ಟಂಟ್‌ ಮೆಸೆಜ್‌ ಅಪ್ಲಿಕೇಶನ್ (Application) ಅಂದ್ರೆ ಅದು ವಾಟ್ಸಾಪ್‌ (WhatsApp) ಇದೀಗ ಆಪಲ್‌ ಐಫೋನ್‌ (Apple  iPhone) ಬಳಕೆದಾರರಿಗೆ ಬಿಗ್‌ ಶಾಕ್ (Big Shock)  ನೀಡಿದೆ. ಆಪಲ್‌ ಸಂಸ್ಥೆಯ (Apple Organization) ಇತ್ತೀಚಿನ ಅಪ್‌ಡೇಟ್ (Update) ಪ್ರಕಾರ ಇದೇ ಅಕ್ಟೋಬರ್ 24 ರಿಂದ ಹಳೆಯ ಐಓಎಸ್‌ (iOS) ನಲ್ಲಿ ವಾಟ್ಸಾಪ್  ಬಳಕೆಮಾಡಲಾಗುವುದಿಲ್ಲ. ಕೆಲವು ಐಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ( Work) ಮಾಡುವುದನ್ನು ನಿಲ್ಲಿಸಲಿದೆ ಎಂದು ಸಹಾ ಸೂಚಿಸಿದೆ. ಹೌದು ವಾಟ್ಸಾಪ್‌  ಬಳಕೆ ಮುಂದುವರಿಸಲು, ಬಳಕೆದಾರರು (Users) ತಮ್ಮ iOS ಓಎಸ್‌ ಅನ್ನು ಅಪ್‌ಡೇಟ್‌ ಮಾಡಲು ಆಪಲ್ ಸಂಸ್ಥೆಯು ತ್ವರಿತ ಮೆಸೆಜ್‌ (Message) ಕಳುಹಿಸುವ ಮೂಲಕ ತಿಳಿಸಿದೆ. ಇನ್ನು ವಾಟ್ಸಾಪ್‌ (WhatsApp) ಸಹಾಯ ಕೇಂದ್ರದ ಪುಟದ ಪ್ರಕಾರ, ಐಫೋನ್‌ ಬಳಕೆದಾರರು ವಾಟ್ಸಾಪ್‌ ಆಪ್‌ ಅನ್ನು ಬಳಕೆ ಮಾಡುವುದನ್ನು ಮುಂದುವರಿಸಲು iOS 12 ಅಥವಾ ಅದಕ್ಕೂ ಮೇಲಿನ ಅಂದರೆ (ಇತ್ತೀಚಿನ) ಓಎಸ್‌ ಹೊಂದಿರುವುದು ಅಗತ್ಯವಿದೆ.


    ಐಫೋನ್‌ 5 ಅಥವಾ ಐಫೋನ್‌ 5C ಬಳಸುವ ಐಫೋನ್‌ ಬಳಕೆದಾರರು iOS ಅಪ್‌ಡೇಟ್‌ ಮತ್ತು ವಾಟ್ಸಾಪ್‌ ಅಪ್‌ಡೇಟ್‌ ಮಾಡಿದ ನಂತರ ವಾಟ್ಸಾಪ್‌ ಅನ್ನು ಬಳಸಲು ಸಾಧ್ಯವಾಗತ್ತದೆ.  ಐಫೋನ್‌ 4 ಮತ್ತು ಐಫೋನ್‌ 4S ಡಿವೈಸ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್‌ ಬೆಂಬಲಿಸುವುದಿಲ್ಲ ಎನ್ನಲಾಗಿದೆ. ಇನ್ನು ಆಪಲ್ iOS 10 ಮತ್ತು iOS 11 ಸಾಫ್ಟ್‌ವೇರ್ ಅಪ್‌ಡೇಟ್‌ ಹೊಂದಿರುವ ಐಫೋನ್‌ಗಳ ಸಂಖ್ಯೆ ಹೆಚ್ಚಿಲ್ಲ ಎನ್ನಲಾಗಿದೆ.


    WhatsApp is no longer available on these phones
    ಸಾಂದರ್ಭಿಕ ಚಿತ್ರ


    ಐಫೋನ್ ಅಪ್ಡೇಟ್ ಆಗಿದ್ದರೆ ಮಾತ್ರ ವಾಟ್ಸಾಪ್‌ ಚಾಟಿಂಗ್


    ಆಪಲ್‌ iOS 12 ಅಥವಾ ಅದಕ್ಕಿಂತ ಮುಂದಿನ iOS  ಅಪ್ಡೇಟ್ ಹೊಂದಿರುವ ಐಫೋನ್‌ಗಳಲ್ಲಿ ಯಾವುದೇ ಅಡೆ ತಡೆಯಿಲ್ಲದೆ ವಾಟ್ಸಾಪ್‌  ಕಾರ್ಯ ನಿರ್ವಹಿಸಲಿದೆ. ಹಾಗೆಯೇ iOS 10 ಮತ್ತು iOS 11 ಓಎಸ್‌ ಹಳೆಯ ಆಪರೇಟಿಂಗ್ ಸಿಸ್ಟಂಗಳಾಗಿದ್ದು, ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಅನ್ನು ಪಡೆಯಬಹುದು.


    ಅದಕ್ಕಾಗಿ ಹೀಗೆ ಮಾಡಿ ಐಫೋನಿನಲ್ಲಿ ಸೆಟ್ಟಿಂಗ್‌ಗಳು (Settings ) > ಜನರಲ್‌ (General) ಹೋಗಬಹುದು, ನಂತರ ಇತ್ತೀಚಿನ iOS ಅಪ್ಡೇಟ್ ಪಡೆಯಲು ಸಾಫ್ಟ್‌ವೇರ್ ಅಪ್‌ಡೇಟ್‌ (Software Update) ಆಯ್ಕೆಯನ್ನು ಟ್ಯಾಪ್ ಮಾಡಿ. ಬಳಿಕ ಸಂರ್ಪೂಣ ಅಪ್ಡೇಟ್ ಆದ ಬಳಿಕ ವಾಟ್ಸಾಪ್ ಸಪೋರ್ಟ್ ಆಗಿದೆಯಾ ಎಂಬುವುದನ್ನು ಖಚಿತ ಪಡಿಸಿಕ್ಕೋಳ್ಳಿ.


    ಇದನ್ನೂ ಓದಿ: Mobile Bomb: ಮಕ್ಕಳ ಕೈಯಲ್ಲಿ ಬಾಂಬುಗಳಿವೆ! ಪೋಷಕರೇ ಎಚ್ಚರ ಎಚ್ಚರ

     ವಾಟ್ಸಾಪ್ ಅಪ್ಡೇಟ್ ಬಳಿಕ ಸೇರಲಿರುವ ಹೊಸ ಫೀಚರ್ಸ್ಗಳು

    ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಕ್ಲಿಕ್ ಮಾಡಬಹುದಾದ ಲಿಂಕ್‌ಗಳು ಇತ್ತೀಚಿನ ದಿನಗಳಲ್ಲಿ ಹಲವು ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟೋರಿಸ್‌ ಆಯ್ಕೆ ಹೆಚ್ಚು ಜನಪ್ರಿಯವಾಗಿರುವುದನ್ನು ನಾವು ಕಂಡಿರಬಹುದು.


    ಈ ಸ್ಟೇಟಸ್‌ ಆಯ್ಕೆಯಲ್ಲಿ ಬದಲಾವಣೆ ತರಲಿದ್ದು,  ಹೆಸರಿನಲ್ಲಿ ಹೈಪರ್‌ಲಿಂಕ್ ಮಾಡುವ URL ಲಿಂಕ್ಗಳನ್ನು ತಯಾರಗುತ್ತದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರು ತಮ್ಮ ವೆಬ್‌ಸೈಟ್‌ಗಳು ಮತ್ತು ಪೇಜ್‌ಗಳಿಗೆ URL ಲಿಂಕ್ಗಳನ್ನು ಶೇರ್ ಮಾಡಲು ಸಾಧ್ಯವಾಗುತ್ತದೆ. ಸ್ಟೇಟಸ್‌ ನೋಡುವವರು ಲಿಂಕ್‌ಗಳ ಮೇಲೆ  ಸುಲಭವಾಗಿ ಕ್ಲಿಕ್ ಮಾಡಿದಾಗ ಪೇಜ್‌ ಒಪನ್ ಆಗುತ್ತದೆ  . ಅದೇ ರೀತಿ ಸ್ಟೇಟಸ್ ಕಾಣಬಹುದಾಗಿದೆ.


    • ವಾಟ್ಸಾಪ್ಗೆ ಸೇರಲಿದೆ ಹೊಸ ಬಿಸಿನೆಸ್ ಟೂಲ್ ಟ್ಯಾಬ್


    ವಾಟ್ಸಾಪ್‌ ಸೇರಲಿದೆ ಹೊಸ ಬಿಸಿನೆಸ್ ಟೂಲ್ ಸದ್ಯದಲ್ಲೇ ವಾಟ್ಸಾಪ್‌ ಬಿಸಿನೆಸ್ ಅಪ್ಲಿಕೇಶನ್‌ನ  ಮೈನ್ ಮೆನು ನಲ್ಲಿ ಹೊಸ ಟ್ಯಾಬ್ ಲಭ್ಯವಾಗಲಿದೆ. ಎಡಭಾಗದಲ್ಲಿರುವ ಕ್ಯಾಮರಾ ಟ್ಯಾಬ್ ಅನ್ನು ಬದಲಿಸಿದರೆ, ಬಿಸಿನೆಸ್ ಖಾತೆಯ ಬಳಕೆದಾರರಿಗೆ ಬಿಸಿನೆಸ್ ಟೂಲ್ ಟ್ಯಾಬ್  ಕಾಣಲುಸಿಗುತ್ತದೆ .


    ಅಲ್ಲಿ ಅಪ್ಲಿಕೇಶನ್‌ನಲ್ಲಿನ ಸೆಟ್ಟಿಂಗ್‌ಗಳ ಮೂಲಕ ಹೋಗದೆ ಬಿಸಿನೆಸ್ ಬಳಕೆದಾರರು  ಸುಲಭವಾಗಿ ಆಕ್ಸಸ್ ಮಾಡಬಹುದಾಗಲಿದೆ. ಈ ಪರಿಕರಗಳು ವ್ಯಾಪಾರ ಪ್ರೊಫೈಲ್ ನಿರ್ವಹಣೆ, ಕ್ಯಾಟಲಾಗ್ ಸೆಟ್ಟಿಂಗ್‌ಗಳು ಮತ್ತು ಜಾಹೀರಾತುಗಳ ಮೂಲಕ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ನೊಂದಿಗೆ ಲಿಂಕ್ ಆಗಿರಲಿದೆ.


    ಇದನ್ನೂ ಓದಿ:  WhatsApp Ban: ನೀವು ವಾಟ್ಸಾಪ್ ಬಳಸುವಾಗ ಹೀಗೆಲ್ಲಾ ಮಾಡ್ತೀರಾ? ಹಾಗಿದ್ರೆ ಬ್ಲಾಕ್ ಆಗಬಹುದು ಹುಷಾರ್!


    • ವಾಟ್ಸಾಪ್ಪ್ರೀಮಿಯಂ ಆಯ್ಕೆ


    ವಾಟ್ಸಾಪ್‌ ಬಿಸಿನೆಸ್ ಬಳಕೆದಾರರಿಗಾಗಿ ವಾಟ್ಸಾಪ್‌ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಮಾದರಿಯಲ್ಲಿ ವಾಟ್ಸಾಪ್‌ ಕೇಲಸ ಮಾಡತ್ತದ್ದೆ. ಟೆಲಿಗ್ರಾಮ್ ಪ್ರೀಮಿಯಂನಲ್ಲಿರುವ ಸೇವೆಗಳಂತೆಯೇ, ವಾಟ್ಸಾಪ್‌ ಪ್ರೀಮಿಯಂ ಬಿಸಿನೆಸ್ ಖಾತೆಯ ಬಳಕೆದಾರರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.


    ಈ ಫೀಚರ್ಸ್‌ಗಳು ಕಸ್ಟಮ್ ಬಿಸಿನೆಸ್ ಲಿಂಕ್‌ಗಳು ಮತ್ತು ಒಂದೇ ಖಾತೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಡಿವೈಸ್‌ಗಳನ್ನು ಒಟ್ಟಿಗೆ ಲಿಂಕ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿವೆ.

    Published by:Harshith AS
    First published: