WhatsApp: ತಪ್ಪಾಗಿ ಹಾಕಿದ ಮೆಸೇಜ್ ಗಳನ್ನು ಡಿಲೀಟ್ ಮಾಡಲು ಇನ್ನೂ ಹೆಚ್ಚು ಸಮಯ ನೀಡಲಿದ್ಯಂತೆ ವಾಟ್ಸಾಪ್!

ನೀವು ವಾಟ್ಸಾಪ್ ನಲ್ಲಿ ಯಾವುದಾದರೂ ಸಂದೇಶಗಳನ್ನು ಕಳುಹಿಸಿದ ನಂತರ ಅವುಗಳನ್ನು ಅಳಿಸುವ ಸಾಮರ್ಥ್ಯವನ್ನು ವಾಟ್ಸಾಪ್ ಹೊಂದಿದ್ದು, ಆ ಸಾಮರ್ಥ್ಯವು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಹಳೆಯದಾದ ಸಂದೇಶಗಳಿಗೆ ಮಾತ್ರ ಅಸ್ತಿತ್ವದಲ್ಲಿದೆ. ಇದು ಬಳಕೆದಾರರಿಗೆ ತಮ್ಮ ಸಂದೇಶಗಳನ್ನು ಅಳಿಸಲು ಸಾಧ್ಯವಾಗುವಂತೆ ವಾಟ್ಸಾಪ್ ನೀಡಿದ ಆರಂಭಿಕ 8 ನಿಮಿಷಗಳ ಟೈಮ್ಲೈನ್ ನಿಂದ ಹೆಚ್ಚಿದ ಮಿತಿಯಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಪ್ರತಿಯೊಬ್ಬರ ಮೊಬೈಲ್ ಫೋನ್ ನಲ್ಲಿಯೂ (Mobile Phone) ವಾಟ್ಸಾಪ್ (WhatsApp) ಇದ್ದೇ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಾಲೇಜಿಗೆ ಹೋಗುವ ಹುಡುಗ ಮತ್ತು ಹುಡುಗಿಯರಿಂದ ಹಿಡಿದು ವಯಸ್ಸಾದ ಅಜ್ಜ ಮತ್ತು ಅಜ್ಜಿಯವರೆಗೆ ಎಲ್ಲರೂ ವಾಟ್ಸಾಪ್ ಅನ್ನು ಬಳಸುತ್ತಿದ್ದಾರೆ ಎಂದು ಹೇಳಬಹುದು. ತನ್ನ ಬಳಕೆದಾರರಿಗೆ ವಾಟ್ಸಾಪ್ ಸಹ ಅನೇಕ ರೀತಿಯ ಹೊಸ ಹೊಸ ಫೀಚರ್ ಗಳನ್ನು (New Features) ಪರಿಚಯಿಸುತ್ತಲೇ ಇರುತ್ತದೆ, ಇದರಲ್ಲಿರುವ ಒಂದು ಫೀಚರ್ ಮಾತ್ರ ಬಹುತೇಕ ಬಳಕೆದಾರರಿಗೆ ತುಂಬಾನೇ ಇಷ್ಟವಾಗುತ್ತದೆ ಮತ್ತು ಅವರ ತಪ್ಪುಗಳನ್ನು ಸರಿ ಮಾಡಿಕೊಳ್ಳುವಂತಹ ಒಂದು ಅವಕಾಶವನ್ನು ಅವರಿಗೆ ನೀಡುತ್ತದೆ ಎಂದು ಹೇಳಬಹುದು.

ತಪ್ಪು ಸಂದೇಶಗಳನ್ನು ಡಿಲೀಟ್ ಮಾಡುವ ಆಯ್ಕೆ
ಏನಪ್ಪಾ ಅದು ಅಂತ ನೀವು ತಲೆ ಕೆಡೆಸಿಕೊಂಡಿರಬೇಕಲ್ಲವೇ? ನೀವು ಯಾರಿಗಾದರೂ ತಪ್ಪಾಗಿ ಸಂದೇಶ ಕಳುಹಿಸಿದ್ದರೆ, ಯಾರಿಗೊ ಕಳುಹಿಸಬೇಕಾದ ಸಂದೇಶವನ್ನು ಇನ್ನ್ಯಾರಿಗೊ ಕಳುಹಿಸಿದರೆ ಮತ್ತು ಕಳುಹಿಸಬೇಕಾದ ವ್ಯಕ್ತಿಗೆ ತಪ್ಪು ಸಂದೇಶ ಕಳುಹಿಸಿದ್ದರೆ, ಅಲ್ಲಿ ಅದನ್ನು ಯಾರೂ ನೋಡದಂತೆ ಅಳಿಸಿ ಹಾಕಲು ಎಂದರೆ ಡಿಲಿಟ್ ಮಾಡಲು ಒಂದು ಅವಕಾಶವಿರುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವಂತಹ ವಿಚಾರವೇ ಆಗಿದೆ.

8 ನಿಮಿಷಗಳ ಟೈಮ್ಲೈನ್ 
ನೀವು ವಾಟ್ಸಾಪ್ ನಲ್ಲಿ ಯಾವುದಾದರೂ ಸಂದೇಶಗಳನ್ನು ಕಳುಹಿಸಿದ ನಂತರ ಅವುಗಳನ್ನು ಅಳಿಸುವ ಸಾಮರ್ಥ್ಯವನ್ನು ವಾಟ್ಸಾಪ್ ಹೊಂದಿದ್ದು, ಆ ಸಾಮರ್ಥ್ಯವು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಹಳೆಯದಾದ ಸಂದೇಶಗಳಿಗೆ ಮಾತ್ರ ಅಸ್ತಿತ್ವದಲ್ಲಿದೆ. ಇದು ಬಳಕೆದಾರರಿಗೆ ತಮ್ಮ ಸಂದೇಶಗಳನ್ನು ಅಳಿಸಲು ಸಾಧ್ಯವಾಗುವಂತೆ ವಾಟ್ಸಾಪ್ ನೀಡಿದ ಆರಂಭಿಕ 8 ನಿಮಿಷಗಳ ಟೈಮ್ಲೈನ್ ನಿಂದ ಹೆಚ್ಚಿದ ಮಿತಿಯಾಗಿದೆ. ಆದಾಗ್ಯೂ, ಈಗ, ಕಂಪನಿಯು ಬಳಕೆದಾರರಿಗೆ ಎರಡು ದಿನಗಳಿಗಿಂತ ಹಳೆಯದಾದ ಸಂದೇಶಗಳನ್ನು ಸಹ ಅಳಿಸಿ ಹಾಕಲು ಅನುಮತಿಸಲು ಸಮಯದ ಮಿತಿಯನ್ನು ಮತ್ತಷ್ಟು ವಿಸ್ತರಿಸುತ್ತಿದೆ.

ಇದನ್ನೂ ಓದಿ:  UPI Payment: ಯುಪಿಐ ಪೇಮೆಂಟ್ ಮಾಡುವಾಗ ಈ 5 ಸುರಕ್ಷತಾ ಅಂಶಗಳು ನೆನಪಿರಲಿ

ಡಬ್ಲ್ಯೂಎಬೆಟಾಇನ್ಫೋ ವರದಿಯ ಪ್ರಕಾರ, ವಾಟ್ಸಾಪ್ ಅಪ್ಲಿಕೇಶನ್ ನ ಇತ್ತೀಚಿನ ಬೀಟಾ ಆವೃತ್ತಿ 2.22.15.8 ರಲ್ಲಿ ಕೆಲವು ಬಳಕೆದಾರರಿಗೆ ಸಂದೇಶಗಳನ್ನು ಅಳಿಸುವ ಸಮಯವನ್ನು 2 ದಿನಗಳು ಮತ್ತು 12 ಗಂಟೆಗಳವರೆಗೆ ಹೆಚ್ಚಿಸಿದೆ. ಇದು ಬಳಕೆದಾರರು ಎಲ್ಲರಿಗೂ ಸಂದೇಶಗಳನ್ನು ಅಳಿಸಲು ಪಡೆಯುವ 1 ಗಂಟೆ 8 ನಿಮಿಷಗಳು ಮತ್ತು 16 ಸೆಕೆಂಡುಗಳ ಪ್ರಸ್ತುತ ಸಮಯದ ಮಿತಿಗಿಂತ ತುಂಬಾನೇ ಹೆಚ್ಚಾಗಿದೆ ಎಂದು ಹೇಳಬಹುದು.

ಸಮಯದ ಮಿತಿಯನ್ನು ಹೆಚ್ಚಿಸಲು ಕಾರಣವೇನು ಗೊತ್ತಾ?
ಇದ್ದಕ್ಕಿದ್ದಂತೆ ಏಕೆ ವಾಟ್ಸಾಪ್ ನವರು ಈ ತಪ್ಪಾಗಿ ಹಾಕಿದ ಸಂದೇಶಗಳನ್ನು ಅಳಿಸಿ ಹಾಕಲು ಸಮಯದ ಮಿತಿಯನ್ನು ಇಷ್ಟೊಂದು ಹೆಚ್ಚಿಸಿದೆ ಅಂತ ನಿಮಗೆ ಪ್ರಶ್ನೆಯೊಂದು ಕಾಡಬಹುದು. ಏಕೆಂದರೆ ವಾಟ್ಸಾಪ್ ನ ಪ್ರತಿಸ್ಪರ್ಧಿಯಾದ ಟೆಲಿಗ್ರಾಮ್ ಬಳಕೆದಾರರು ಕಳುಹಿಸಿದ 48 ಗಂಟೆಗಳ ನಂತರ ಸಹ ಸಂದೇಶಗಳನ್ನು ಅಳಿಸಲು ಅನುಮತಿಸುತ್ತದೆ, ಆದ್ದರಿಂದ ಮೆಟಾ-ಮಾಲೀಕತ್ವದ ಇನ್ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಅಪ್ಲಿಕೇಶನ್ ನ ಮೇಲೆ ಈ 12 ಗಂಟೆಗಳ ಪ್ರಯೋಜನವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಬಹುದು.

ಇದನ್ನೂ ಓದಿ: WhatsApp: ನಿಮ್ಮ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್ ಆಗಿದ್ಯಾ? ಚಿಂತಿಸದಿರಿ ಅದನ್ನು ಮತ್ತೆ ಓಪನ್ ಮಾಡಲು ಈ ರೀತಿ ಮಾಡಿ

ವರದಿಯ ಪ್ರಕಾರ, ಸಂದೇಶಗಳನ್ನು ಅಳಿಸಲು ಹೆಚ್ಚಿದ ಸಮಯದ ಮಿತಿಯ ಬಗ್ಗೆ ಬಳಕೆದಾರರನ್ನು ಎಚ್ಚರಿಸುವ ಬೀಟಾ ಆವೃತ್ತಿಯಲ್ಲಿ ಯಾವುದೇ ಅಧಿಸೂಚನೆ ಇಲ್ಲ. ಒಂದು ಗುಂಪಿಗೆ ಒಂದು ಸಂದೇಶವನ್ನು ಕಳುಹಿಸುವ ಮೂಲಕ ನೀವು ಅದನ್ನು ಸ್ವತಃ ಪ್ರಯತ್ನಿಸಬೇಕಾಗುತ್ತದೆ ಮತ್ತು ಒಂದೆರಡು ದಿನಗಳ ನಂತರ ಅದನ್ನು ಅಳಿಸಲು ಪ್ರಯತ್ನಿಸಬೇಕಾಗುತ್ತದೆ.

ಮತ್ತೊಂದು ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸಾಪ್
ವಾಟ್ಸಾಪ್ ಮತ್ತೊಂದು ಡಿಲಿಟ್ ಮೆಸೇಜ್ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಅಂತೆ, ಇದು ಗ್ರೂಪ್ ಅಡ್ಮಿನ್ ಗಳಿಗೆ ಇತರ ಸದಸ್ಯರಿಗಾಗಿ ಗುಂಪಿನಲ್ಲಿರುವ ಯಾರಿಗಾದರೂ ಚಾಟ್ ಗಳನ್ನು ಅಳಿಸಲು ಅನುವು ಮಾಡಿಕೊಡುತ್ತದೆ. ಹೊಸ ಐಟಿ ನಿಯಮಗಳು 2021 ರ ಅನುಸರಣೆಯಲ್ಲಿ ಮೇ ತಿಂಗಳಲ್ಲಿ ಭಾರತದಲ್ಲಿ 19 ಲಕ್ಷಕ್ಕೂ ಹೆಚ್ಚು ಕೆಟ್ಟ ಖಾತೆಗಳನ್ನು ನಿಷೇಧಿಸಿರುವುದಾಗಿ ವಾಟ್ಸಾಪ್ ಇತ್ತೀಚೆಗೆ ಘೋಷಿಸಿದೆ. ಈ ಪ್ಲಾಟ್‌ಫಾರ್ಮ್ ಏಪ್ರಿಲ್ ತಿಂಗಳಿನಲ್ಲಿ ಭಾರತದಲ್ಲಿ 16.6 ಲಕ್ಷಕ್ಕೂ ಹೆಚ್ಚು ಕೆಟ್ಟ ಖಾತೆಗಳನ್ನು ನಿಷೇಧಿಸಿತ್ತು.
Published by:Ashwini Prabhu
First published: