ಇನ್ಮುಂದೆ ವಾಟ್ಸಪ್ ಗ್ರೂಪಿನಲ್ಲಿ ಯಾರಿಗೂ ಕಾಣದಂತೆ ರಿಪ್ಲೈ ಮಾಡಬಹುದು

zahir | news18
Updated:November 3, 2018, 3:03 PM IST
ಇನ್ಮುಂದೆ ವಾಟ್ಸಪ್ ಗ್ರೂಪಿನಲ್ಲಿ ಯಾರಿಗೂ ಕಾಣದಂತೆ ರಿಪ್ಲೈ ಮಾಡಬಹುದು
  • Advertorial
  • Last Updated: November 3, 2018, 3:03 PM IST
  • Share this:
-ನ್ಯೂಸ್ 18 ಕನ್ನಡ

Whatsapp ತನ್ನ ಬಳಕೆದಾರರಿಗೆ ನಿರಂತರ ಹೊಸ ಫೀಚರ್ಸ್​ಗಳನ್ನು ಪರಿಚಯಿಸುತ್ತಲೇ ಬರುತ್ತಿದೆ. ಇತ್ತೀಚೆಗಷ್ಟೇ ಸ್ವೈಪ್ ರಿಪ್ಲೈ ಎಂಬ ಆಯ್ಕೆಯನ್ನು ನೀಡಿದ ವಾಟ್ಸಪ್ ಇದೀಗ ಮತ್ತೊಂದು ನೂತನ ಫೀಚರ್​ನ್ನು ಒದಗಿಸಿದೆ. ಇಲ್ಲಿ ಬಳಕೆದಾರರಿಗೆ ಗ್ರೂಪ್​ ಚಾಟಿಂಗ್​ನಲ್ಲಿ ಪ್ರೈವೇಟ್ ರಿಪ್ಲೈ ಮಾಡಬಹುದು.

ಸಾಮಾನ್ಯವಾಗಿ ವಾಟ್ಸಪ್​ ಗ್ರೂಪ್​ಗಳಲ್ಲಿ ಮೆಸೇಜ್​ಗಳನ್ನು ಕಳುಹಿಸಿದರೆ ಗ್ರೂಪಿನ ಎಲ್ಲ ಸದಸ್ಯರಿಗೆ ಕಾಣಿಸುತ್ತದೆ. ಆದರೆ ಈಗ ವಾಟ್ಸಪ್​ನಲ್ಲಿ ನೀಡಲಾಗಿರುವ ಹೊಸ ಫೀಚರ್​ ಮೂಲಕ ನೀವು ವಾಟ್ಸಪ್​ ಗ್ರೂಪ್​ ರಿಪ್ಲೈ ಮಾಡಿದರೆ ಆಯಾ ವ್ಯಕ್ತಿಗಳಿಗೆ ಮಾತ್ರ ಕಾಣಿಸುತ್ತದೆ. ಇದರಿಂದ ನಿಮ್ಮ ಪ್ರತ್ಯುತ್ತರದ ಮೆಸೇಜ್ ಗ್ರೂಪಿನ ಎಲ್ಲ ಸದ್ಯಸರಿಗೆ ಕಾಣಿಸುವುದಿಲ್ಲ. ಪ್ರೈವೇಟ್ ರಿಪ್ಲೈ ಆಯ್ಕೆಯನ್ನು ಪಡೆಯಲು ನೀವು ವಾಟ್ಸಪ್ ಗ್ರೂಪ್​ ಒಪನ್ ಮಾಡಿ ಮೇಲಿರುವ ಮೂರು ಡಾಟ್​ನ್ನು ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಪ್ರೈವೇಟ್ ರಿಪ್ಲೈ ಎಂಬ ಆಯ್ಕೆಯನ್ನು ನೀಡಲಾಗಿರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಗ್ರೂಪ್ ಸದಸ್ಯನಿಗೆ ಪ್ರೈವೇಟ್ ಮೆಸೇಜ್ ಆಯ್ಕೆಯನ್ನು ತೋರಿಸುತ್ತದೆ.ಪ್ರೈವೇಟ್ ರಿಪ್ಲೈ ಬಳಕೆ ಹೇಗೆ?
ನಿಮ್ಮ ವಾಟ್ಸಪ್ ಗ್ರೂಪ್​ನ್ನು ಒಪನ್ ಮಾಡಿ. ಯಾರಿಗೆ ರಿಪ್ಲೈ ಮಾಡಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಮೇಲಿರುವ ಮೂರು ಡಾಟ್​ಗಳನ್ನು ಕ್ಲಿಕ್ ಮಾಡಿದರೆ ಪ್ರೈವೇಟ್ ರಿಪ್ಲೈ ಆಯ್ಕೆ ತೆರೆದುಕೊಳ್ಳುತ್ತದೆ. ಈ ಆಯ್ಕೆಯನ್ನು WhatsApp 2.18.335 ವರ್ಷನ್​ನಲ್ಲಿ ನೀಡಲಾಗಿದೆ. ನೀವು ವಾಟ್ಸಪ್​ನ್ನು ಅಪ್​ಡೇಟ್ ಮಾಡಿಕೊಳ್ಳುವ ಮೂಲಕ ನೂತನ ಫೀಚರ್​ನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: ಇನ್ಮುಂದೆ ವಾಟ್ಸಪ್ ಮೂಲಕ ಹಣ ಸಂಪಾದಿಸಬಹುದು..!

ಹೊಸ ಸ್ಟಿಕ್ಕರ್ಸ್​:
ವಾಟ್ಸಪ್ ಅಪ್​ಡೇಟ್​ ಮಾಡಿಕೊಂಡರೆ ಹೊಸ ಸ್ಟಿಕ್ಕರ್​ಗಳನ್ನು ಪಡೆಯಬಹುದು. ಐಒಎಸ್ ಬಳಕೆದಾರರಿಗೆ ಈ ಐಕಾನ್​ಗಳನ್ನು ಟೆಕ್ಸ್ಟ್​ ಫೀಲ್ಡ್​​ನಲ್ಲಿ ಕಾಣಿಸುತ್ತದೆ. ಹಾಗೆಯೇ ಅಂಡ್ರಾಯ್ಡ್​ ಬಳಕೆದಾರರು ಈ ಐಕಾನ್​ಗಳನ್ನು ಎಮೋಜಿಯೊಂದಿಗೆ ನೋಡಬಹುದು. ' + 'ಚಿಹ್ನೆಯನ್ನು ಕ್ಲಿಕ್ ಮಾಡಿದರೆ ಮೇಲ್ಭಾಗದಲ್ಲಿ ಸ್ಟಿಕ್ಕರ್ ಗೋಚರಿಸುತ್ತದೆ. ಇಲ್ಲಿ ನೀಡಲಾಗಿರುವ ಸ್ಟಿಕ್ಕರ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಇದರ ನಂತರವಷ್ಟೇ ನೀವು ಈ ಹೊಸ ಸ್ಟಿಕ್ಕರ್​ಗಳನ್ನು ಬಳಸಿಕೊಳ್ಳಬಹುದು.

First published:November 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ