WhatsAppನಿಂದ ಮತ್ತೆರೆಡು ಹೊಸ ಫೀಚರ್ಸ್; ಇಲ್ಲಿದೆ ನೋಡಿ ಯಾವುದು ಅಂತಾ

ಮೆಟಾ ಮಾಲಿಕತ್ವದ ವಾಟ್ಸ್​ಆ್ಯಪ್ ಸಂಸ್ಥೆಯು ತನ್ನ ಬಳಕೆದಾರರ ಸಮಸ್ಯೆಗಳನ್ನು ಮತ್ತು ಅವರಿಗೆ ಯಾವುದೇ ರೀತಿಯ ಅಡಚಣೆಗಳಿಲ್ಲದ ಅನುಕೂಲಕರವಾದ ಹೊಸ ಹೊಸ ವೈಶಿಷ್ಟ್ಯತೆಗಳನ್ನು ಒದಗಿಸುವಲ್ಲಿ ಯಾವಾಗಲೂ ಮುಂದಿರುತ್ತದೆ. ವಾಟ್ಸ್​ಆ್ಯಪ್ ಈಗಾಗಲೇ ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಪ್ಲಾಟ್‌ಫಾರ್ಮ್ ಸ್ಥಿರವಾದ ಆಧಾರದ ಮೇಲೆ ಹೆಚ್ಚಿನವುಗಳನ್ನು ಹೊರತರಲು ಕಾರ್ಯನಿರ್ವಹಿಸುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮೆಟಾ ಮಾಲಿಕತ್ವದ ವಾಟ್ಸ್​ಆ್ಯಪ್ (WhatsApp) ಸಂಸ್ಥೆಯು ತನ್ನ ಬಳಕೆದಾರರ ಸಮಸ್ಯೆಗಳನ್ನು ಮತ್ತು ಅವರಿಗೆ ಯಾವುದೇ ರೀತಿಯ ಅಡಚಣೆಗಳಿಲ್ಲದ ಅನುಕೂಲಕರವಾದ ಹೊಸ ಹೊಸ ವೈಶಿಷ್ಟ್ಯತೆಗಳನ್ನು (New Features) ಒದಗಿಸುವಲ್ಲಿ ಯಾವಾಗಲೂ ಮುಂದಿರುತ್ತದೆ. ವಾಟ್ಸ್​​ಆ್ಯಪ್ ಈಗಾಗಲೇ ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಪ್ಲಾಟ್‌ಫಾರ್ಮ್ (Platform) ಸ್ಥಿರವಾದ ಆಧಾರದ ಮೇಲೆ ಹೆಚ್ಚಿನವುಗಳನ್ನು ಹೊರತರಲು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಬಳಕೆದಾರರ (Users) ಬಹುಬೇಡಿಕೆಗಳಲ್ಲಿ ಒಂದಾದ, ಓದದ ಸಂದೇಶಗಳನ್ನು ಫಿಲ್ಟರ್ ಮಾಡುವ ಸಾಮರ್ಥ್ಯವೊಂದನ್ನು ಕಂಪನಿ (Company) ಅಭಿವೃದ್ಧಿಪಡಿಸಿದ್ದು ಶೀಘ್ರದಲ್ಲೇ ಲಭ್ಯವಾಗಲಿದೆ. ಸಂದೇಶಗಳನ್ನು ಓದಲಾಗಿದೆ ಮತ್ತು ಓದಿಲ್ಲ ಎಂಬುವುದನ್ನು ಸೂಚಿಸಲು ಅನುಕೂಲವಾಗುವ ಬ್ಲೂ ಟಿಕ್ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ.

ಇನ್ನೂ ಒಂದು ಹೆಜ್ಜೆ ಮುಂದುಹೋಗಿ ನೋಡುವುದಾದರೆ, ಪ್ರೈವೆಸಿಯಲ್ಲಿ ರೀಡ್ ರೆಸಿಪ್ಟ್ ಅನ್ನುವ ವೈಶಿಷ್ಟ್ಯತೆ ಮತ್ತೊಂದು ರೀತಿಯಲ್ಲಿ ಬಳಕೆದಾರರಿಗೆ ಅನುಕೂಲಕರವಾಗಿದೆ. ಇದೀಗ ಎರಡನ್ನೂ ಮೀರಿ ಓದದ ಸಂದೇಶಗಳನ್ನು ಫಿಲ್ಟರ್ ಮಾಡುವ ಫೀಚರ್ ಅನ್ನು ವಾಟ್ಸ್​ಆ್ಯಪ್ ತರುತ್ತಿದೆ.

ಓದದ ಚಾಟ್‌ಗಳನ್ನು ಫಿಲ್ಟರ್ ಮಾಡುವ ಆಯ್ಕೆ
WAbetainfoನ ಹೊಸ ವರದಿಯ ಪ್ರಕಾರ, ಮುಂಬರುವ ವೈಶಿಷ್ಟ್ಯವನ್ನು ವಾಟ್ಸ್​ಆ್ಯಪ್ ಡೆಸ್ಕ್ ಟಾಪ್ ಅಪ್ಲಿಕೇಶನ್‌ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು iOS ನಲ್ಲಿ ಈ ವೈಶಿಷ್ಟ್ಯವನ್ನು ಬಳಕೆದಾರರು ಪಡೆಯಬಹುದು. ಈ ಆಯ್ಕೆಯು ಮುಂಬರುವ ತಿಂಗಳುಗಳಲ್ಲಿ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಪರಿಚಯಿಸಬಹುದಾದ ಇತ್ತೀಚಿನ ವೈಶಿಷ್ಟ್ಯವಾಗಿದೆ.

ವಾಟ್ಸ್​ಆ್ಯಪ್ ಡೆಸ್ಕ್ ಟಾಪ್ ಬೀಟಾ ಅಪ್ಲಿಕೇಶನ್ ಆವೃತ್ತಿ 2.2221.0 ಬಳಕೆದಾರರಿಗೆ ಓದದ ಚಾಟ್‌ಗಳನ್ನು ಫಿಲ್ಟರ್ ಮಾಡುವ ಆಯ್ಕೆಯನ್ನು ನೀಡುತ್ತದೆ ಎಂದು ವರದಿ ಹೇಳಿದೆ. ವಿಂಡೋದ ಮೇಲಿನ ಬಲಭಾಗದಲ್ಲಿರುವ ಫಿಲ್ಟರ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ವೈಶಿಷ್ಟ್ಯದ ಪ್ರಯೋಜನವನ್ನು ಪರಿಣಾಮಕಾರಿಯಾಗಿ ಪಡೆಯಬಹುದು. ನೀವು ವಾಟ್ಸ್​ಆ್ಯಪ್ ನಲ್ಲಿ ಎಲ್ಲಾ ಓದದಿರುವ ಸಂದೇಶಗಳನ್ನು ಸ್ಕ್ರೀನ್ ಮೇಲೆ ಒಟ್ಟಿಗೆ ನೋಡಲು ಬಯಸದಿದ್ದರೆ ಫಿಲ್ಟರ್ ಅನ್ನು ತೆರವುಗೊಳಿಸುವ ಆಯ್ಕೆಯನ್ನು ಪಡೆಯಬಹುದು.

ಇದನ್ನೂ ಓದಿ:  Social Media: ಸೋಷಿಯಲ್ ಮೀಡಿಯಾದಲ್ಲಿ ಹುಚ್ಚಾಪಟ್ಟೆ ಪೋಸ್ಟ್ ಮಾಡಿದ್ರೆ ಹುಷಾರ್, ಕೇಂದ್ರದಿಂದ ಹೊಸ ರೂಲ್ಸ್!

ಬಳಕೆದಾರರು ತಮಗೆ ಅಗತ್ಯವಿಲ್ಲ ಎಂದು ಭಾವಿಸುವ ಸಂದೇಶಗಳನ್ನು ಫಿಲ್ಟರ್ ಮಾಡುವ ವೈಶಿಷ್ಟ್ಯಗಳನ್ನು ವಾಟ್ಸ್​ಆ್ಯಪ್ ತಂದಿದೆ ಮತ್ತು ಅಂತಿಮವಾಗಿ ಇದು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಓದದಿರುವ ಚಾಟ್‌ಗಳನ್ನು ಫಿಲ್ಟರ್ ಮಾಡುವ ಆಯ್ಕೆಯನ್ನು ಹೊಂದಿರುವುದು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಲ್ಲಿ ಒಂದಾಗಿರಬಹುದು ಎನ್ನಲಾಗಿದೆ. ಡೆಸ್ಕ್ ಟಾಪ್ ಬಳಕೆದಾರರಿಗೆ ಇದು ಮೊದಮೊದಲು ವಿಚಿತ್ರವಾಗಿ ತೋರುತ್ತದೆ, ಆದರೆ ಇದನ್ನು ಆಂಡ್ರಾಯ್ಡ್ ಮತ್ತು iOS ನಲ್ಲಿ ನೋಡುವ ನಿರೀಕ್ಷೆಯು ವೈಶಿಷ್ಟ್ಯದ ಬಗ್ಗೆ ನಮಗೆ ಹೆಚ್ಚು ಉತ್ಸುಕತೆಯನ್ನು ನೀಡುತ್ತದೆ ಎಂದು ವರದಿಗಳು ಹೇಳಿವೆ. ಬಳಕೆದಾರರಿಗಾಗಿ ವಾಟ್ಸ್​ಆ್ಯಪ್ ಈ ವೈಶಿಷ್ಟ್ಯವನ್ನು ಮೊಬೈಲ್‌ನಲ್ಲಿ ಯಾವಾಗ ಪರೀಕ್ಷಿಸುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ವಾಟ್ಸ್​ಆ್ಯಪ್ ಗ್ರೂಪ್ ಪೋಲ್ ಫಲಿತಾಂಶಗಳ ಪರೀಕ್ಷೆ


ವಾಟ್ಸ್​ಆ್ಯಪ್ ಇದೀಗ ಕಾರ್ಯನಿರ್ವಹಿಸುತ್ತಿರುವ ಇನ್ನೊಂದು ವೈಶಿಷ್ಟ್ಯವೆಂದರೆ ನೀವು ರಚಿಸಿದ ಮತ್ತು ಇತರರೊಂದಿಗೆ ಹಂಚಿಕೊಂಡ ಗುಂಪು ಸಮೀಕ್ಷೆಯ ಫಲಿತಾಂಶಗಳನ್ನು ವೀಕ್ಷಿಸುವ ಆಯ್ಕೆಯಾಗಿದೆ. ಬಳಕೆದಾರರು ಗುಂಪು ಸಮೀಕ್ಷೆಯ ಫಲಿತಾಂಶಗಳನ್ನು ವಾಟ್ಸ್​ಆ್ಯಪ್ ನಲ್ಲಿ ಶೀಘ್ರದಲ್ಲಿಯೇ ವೀಕ್ಷಿಸುವ ಸಾಧ್ಯತೆಯು ಕಂಡುಬರುತ್ತಿದೆ.

ಈ ಉಪಕ್ರಮವು iOS ಬೀಟಾ ಆವೃತ್ತಿ 22.12.0.73 ನಲ್ಲಿ ಲಭ್ಯವಿದೆ ಮತ್ತು ಯಾವ ವಿಷಯ ಹೆಚ್ಚು ಮತಗಳನ್ನು ಗೆದ್ದಿದೆ ಮತ್ತು ಎಷ್ಟು ಶೇಕಡಾವಾರು ಮತಗಳನ್ನು ಗೆದ್ದಿದೆ ಎಂಬಂತಹ ಸಮೀಕ್ಷೆಯ ಫಲಿತಾಂಶಗಳ ಕುರಿತು ನಿಮಗೆ ವಿವರಗಳನ್ನು ನೀಡುತ್ತದೆ. ವಾಟ್ಸ್​ಆ್ಯಪ್ ಆಯ್ಕೆಯ ಟ್ಯಾಗ್ ಅನ್ನು ಸಹ ಹೊಂದಿರುತ್ತದೆ, ಇದು ಮೂಲತಃ ಬಳಕೆದಾರರು ಗೆಲ್ಲುವ ಪೋಲ್ ಆಯ್ಕೆಯನ್ನು ಸಹ ತೋರಿಸುತ್ತದೆ.

ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಬಹುದಾದ ನಿರ್ದಿಷ್ಟ ದಿನಾಂಕ?
ವಾಟ್ಸ್​ಆ್ಯಪ್ ಗ್ರೂಪ್ ಪೋಲ್ ಸ್ವತಃ ಬೀಟಾದಲ್ಲಿದೆ, ಆದ್ದರಿಂದ ಅಂತಿಮ ಬಳಕೆದಾರರಿಗೆ ಪೋಲ್ ಫಲಿತಾಂಶಗಳ ಆಯ್ಕೆಯೊಂದಿಗೆ ಮುಖ್ಯ ವೈಶಿಷ್ಟ್ಯವು ಯಾವಾಗ ಲಭ್ಯವಿರುತ್ತದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

ಇದನ್ನೂ ಓದಿ:   WhatsApp: ಒಂದೇ ತಿಂಗಳಿನಲ್ಲಿ 16 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳು ನಿಷೇಧ! ಕಾರಣ ಏನು ಗೊತ್ತಾ?

ಈ ಎರಡು ಹೊಸ ವೈಶಿಷ್ಟ್ಯತೆ ಮೆಟಾ ಒಡೆತನದ ಈ ವ್ಯಾಪಕವಾಗಿ ಬಳಸಲಾಗುವ ವಾಟ್ಸ್​ಆ್ಯಪ್ ಅಪ್ಲಿಕೇಶನ್‌ನ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಬಹುದಾದ ನಿರ್ದಿಷ್ಟ ದಿನಾಂಕವನ್ನು ವಾಟ್ಸ್​ಆ್ಯಪ್ ಇನ್ನೂ ಸ್ಪಷ್ಟಪಡಿಸಿಲ್ಲ.
Published by:Ashwini Prabhu
First published: