ವಾಟ್ಸ್​ಆ್ಯಪ್​ ಫಿಂಗರ್​ಪ್ರಿಂಟ್ ಫೀಚರ್​; ಬಳಸೋದು ಹೇಗೆ ಗೊತ್ತಾ?​

ವಾಟ್ಸ್​​​ಆ್ಯಪ್ ಬೀಟಾ ವರ್ಷನ್​ ಬಳಕೆದಾರರು ತಮ್ಮ ವಾಟ್ಸ್​ಆ್ಯಪ್​ ಅನ್ನು ಅಪ್ಡೇಟ್​ ಮಾಡುವ ಮೂಲಕ ಈ ನೂತನ ಆಯ್ಕೆಯನ್ನು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಬಳಸಬಹುದಾಗಿದೆ. ಅಂತೆಯೇ, ವಾಟ್ಸ್​ಆ್ಯಪ್​ ಸೆಟ್ಟಿಂಗ್ಸ್​ನಲ್ಲಿರುವ​-ಅಕೌಂಟ್ ಸೆಟ್ಟಿಂಗ್ಸ್​ನಲ್ಲಿ​-ಫಿಂಗರ್​ಪ್ರಿಂಟ್  ಅಥೆಂಟಿಕೇಷನ್​ ಆಪ್ಷನ್​ ಸಿಗಲಿದೆ. ಇದನ್ನು ಎನೇಬಲ್​ ಮಾಡಿಕೊಂಡರೆ ನಿಮ್ಮ ಬೆರಲಚ್ಚಿನಿಂದ ಮಾತ್ರ ವಾಟ್ಸ್​ಆ್ಯಪ್​ ಓಪನ್​ ಆಗುತ್ತದೆ. ​

news18
Updated:August 14, 2019, 2:51 PM IST
ವಾಟ್ಸ್​ಆ್ಯಪ್​ ಫಿಂಗರ್​ಪ್ರಿಂಟ್ ಫೀಚರ್​; ಬಳಸೋದು ಹೇಗೆ ಗೊತ್ತಾ?​
ವಾಟ್ಸ್​​​ಆ್ಯಪ್
  • News18
  • Last Updated: August 14, 2019, 2:51 PM IST
  • Share this:
ವಾಟ್ಸ್​ಆ್ಯಪ್ ತನ್ನ​ ಆಂಡ್ರಾಯ್ಡ್​ ಬಳಕೆದಾರರಿಗಾಗಿ ಫಿಂಗರ್​ಪ್ರಿಂಟ್​ ಫೀಚರ್​ ಅನ್ನು ಪರಿಚಯಿಸಿದೆ. ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಲಾಗುವ ಸಂದೇಶಗಳಿಗೆ ಸುರಕ್ಷತೆಯನ್ನು ನೀಡುವ ನಿಟ್ಟಿನಲ್ಲಿ ಈ ಫೀಚರ್​ ಅನ್ನು ಅಭಿವೃದ್ಧಿ ಪಡಿಸಿದೆ. ಈಗಾಗಲೇ ಈ ನೂತನ ಫೀಚರ್​ ಅನ್ನು ಐಒಎಸ್​ ಬಳಕೆದಾರರು ಬಳಕೆ ಮಾಡುತ್ತಿದ್ದು, ಆಂಡ್ರಾಯ್ಡ್​ ಬೇಟಾ ವರ್ಷನ್​ 2.19.221 ಬಳಕೆದಾರರಿಗೂ ಲಭ್ಯವಿದೆ.

ವಾಟ್ಸ್​​​ಆ್ಯಪ್ ಬೀಟಾ ವರ್ಷನ್​ ಬಳಕೆದಾರರು ತಮ್ಮ ವಾಟ್ಸ್​ಆ್ಯಪ್​ ಅನ್ನು ಅಪ್ಡೇಟ್​ ಮಾಡುವ ಮೂಲಕ ಈ ನೂತನ ಆಯ್ಕೆಯನ್ನು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಬಳಸಬಹುದಾಗಿದೆ. ಅಂತೆಯೇ, ವಾಟ್ಸ್​ಆ್ಯಪ್​ ಸೆಟ್ಟಿಂಗ್ಸ್​ನಲ್ಲಿರುವ​-ಅಕೌಂಟ್ ಸೆಟ್ಟಿಂಗ್ಸ್​ನಲ್ಲಿ​-ಫಿಂಗರ್​ಪ್ರಿಂಟ್ ಅಥೆಂಟಿಕೇಷನ್​ ಆಪ್ಷನ್​ ಸಿಗಲಿದೆ. ಇದನ್ನು ಎನೇಬಲ್​ ಮಾಡಿಕೊಂಡರೆ ನಿಮ್ಮ ಬೆರಲಚ್ಚಿನಿಂದ ಮಾತ್ರ ವಾಟ್ಸ್​ಆ್ಯಪ್​ ಓಪನ್​ ಆಗುತ್ತದೆ. ​

ಇದನ್ನೂ ಓದಿ: ವಿರಾಟ್ ಕೊಹ್ಲಿ ಬಳಿ ಕ್ಷಮೆ ಕೇಳಿದ ಡೇಲ್ ಸ್ಟೇನ್; ದಕ್ಷಿಣ ಆಫ್ರಿಕಾ ಆಟಗಾರ ಮಾಡಿದ ತಪ್ಪೇನು?

ಹಿಂದೆ ಬಳಕೆದಾರರ ಗೌಪ್ಯತೆ ಕಾಪಾಡುವ ಹಾಗೂ ಸುಳ್ಳು ಸುದ್ದಿಗಳು ಹರಿದಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಫೇಸ್‌ಬುಕ್‌ ಒಡೆತನದ ಈ ಚಾಟಿಂಗ್‌ ಆ್ಯಪ್‌ ಹಲವು ಮಾರ್ಗೋಪಾಯಗಳನ್ನು ಕಂಡುಕೊಂಡಿತ್ತು. ಜೊತೆಗೆ ಸ್ಕ್ರೀನ್​ ಶಾಟ್​ ಆಯ್ಕೆಯನ್ನು ನಿಷೇಧ ಗೊಳಿಸಿತ್ತು.

ಇದೀಗ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಫಿಂಗರ್​ಪ್ರಿಂಟ್​​ ಆಯ್ಕೆಯನ್ನು ಪರಿಚಯಿಸುವ ಮೂಲಕ ಸಂದೇಶದ ಸುರಕ್ಷತೆಗಾಗಿ ಹೆಚ್ಚು ಗಮನಹರಿಸಿದೆ.
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ