ಇನ್ನುಮುಂದೆ ವಾಟ್ಸಾಪ್ ಮೂಲಕವೂ ಹಣ ವರ್ಗಾಯಿಸಬಹುದು.!


Updated:February 11, 2018, 11:35 AM IST
ಇನ್ನುಮುಂದೆ ವಾಟ್ಸಾಪ್ ಮೂಲಕವೂ ಹಣ ವರ್ಗಾಯಿಸಬಹುದು.!
ಸ್ಪೇನ್ ದೇಶದ ಪೋಷಕರಿಗೆ ವಿಶೇಷ ಅಧಿಕಾರ ನೀಡಿದ ಕೋರ್ಟ್

Updated: February 11, 2018, 11:35 AM IST
ಜಗತ್ತಿನ ಪ್ರಸಿದ್ಧ ಜಾಲತಾಣ
ವಾಟ್ಸಾಪ್ ಇದೀಗ ಮತ್ತಷ್ಟು ಜನಸ್ನೇಹಿಯಾಗಲು ನೆಟ್ ಬ್ಯಾಂಕಿಂಗ್ ರೀತಿ ಹಣ ವರ್ಗಾಯಿಸುವ ಫೀಚರ್ ಪರಿಚಯಿಸುತ್ತಿದೆ.

ವಾಟ್ಸಾಪ್ ಬಳಕೆದಾರರು ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಮೂಲಕ ವಾಟ್ಸಾಪ್ ಅಕೌಂಟಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವ ಮೂಲಕ ಮತ್ತೊಬ್ಬ ವಾಟ್ಸಾಪ್ ಬಳಕೆದಾರನಿಗೆ ನೇರ ಹಣ ವರ್ಗಾಯಿಸಬಹುದಾಗಿದೆ.

ಸದ್ಯ, ಈ ನೂತನ ವಾಟ್ಸಾಪ್ ಫೀಚರ್ ಪ್ರಯೋಗಾರ್ಥ ಕೆಲವು ಬಳಕೆದಾರರಿಗೆ ಮಾತ್ರ ನೀಡಲಾಗುತ್ತಿದ್ದು, ಕ್ರಮೇಣ ನಿಧಾನವಾಗಿ ಎಲ್ಲ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗಲಿದೆ. ವಾಟ್ಸಾಪ್'ನ ಈ ನೂತನ ಫೀಚರ್ ವೈಯಕ್ತಿಕ ಹಣ ವರ್ಗಾವಣೆಗೆ ಮಾತ್ರ ಸೀಮಿತವಾಗಿದ್ದು, ಉದ್ಯಮದ ಉದ್ದೇಶಕ್ಕೆ ಅಲ್ಲ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.

ಪ್ರತಿಷ್ಠಿತ ಪೇಮೆಂಟ್ಸ್ ಆಪ್ ಪೇಟಿಎಂ ಕಳೆದ ನವೆಂಬರ್'ನಲ್ಲಿ ಚಾಟ್ ಫೀಚರ್ ಪರಿಚಯಿಸಿತ್ತು. ಹೀಗಾಗಿ. ಪೇಟಿಎಂನಿಂದ ಸ್ಪರ್ಧೆ ಎದುರಿಸುತ್ತಿರುವ ವಾಟ್ಸಾಪ್ ಹಣ ವರ್ಗಾವಣೆಯ ಫೀಚರ್ ಪರಿಚಯಿಸುತ್ತಿದೆ.

ವಾಟ್ಸಾಪ್'ನಲ್ಲಿ ಲಭ್ಯವಿರುವ ನೂತನ ಅಪ್ಡೇಟ್ ಮಾಡಿದವರಿಗೆ ಮಾತ್ರ ಈ ಫೀಚರ್ ಸಿಗಲಿದೆ. ವಾಟ್ಸಾಪ್'ನಲ್ಲಿ ಸೆಟ್ಟಿಂಗ್ಸ್ ಆಯ್ಕೆ ಕ್ಲಿಕ್ ಮಾಡಿದರೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಲು ಯುಪಿಐ ಆಯ್ಕೆ ಸಿಗಲಿದೆ.
First published:February 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...