HOME » NEWS » Tech » WHATSAPP INTRODUCES NEW SHOPPING FEATURES ON ITS BUSINESS APP HG

WhatsApp Business app: ಬಳಕೆದಾರರಿಗಾಗಿ ಹೊಸ ಫೀಚರ್ಸ್ ಪರಿಚಯಿಸಿದ ವಾಟ್ಸ್ಆ್ಯಪ್ ಬ್ಯುಸಿನೆಸ್ ಆ್ಯಪ್!

ಉತ್ಪನ್ನಗಳು ಮತ್ತು ಸೇವೆಯನ್ನು ಒದಗಿಸುವ ವಾಟ್ಸ್ಆ್ಯಪ್ ಬ್ಯುಸಿನೆಸ್​ನಲ್ಲಿ ಕ್ಯಾಟಲಾಗ್ ಅನ್ನು ರಚಿಸುವ ಅವಕಾಶವನ್ನು ನೀಡುತ್ತಿದೆ.

news18-kannada
Updated:April 8, 2021, 11:23 AM IST
WhatsApp Business app: ಬಳಕೆದಾರರಿಗಾಗಿ ಹೊಸ ಫೀಚರ್ಸ್ ಪರಿಚಯಿಸಿದ ವಾಟ್ಸ್ಆ್ಯಪ್ ಬ್ಯುಸಿನೆಸ್ ಆ್ಯಪ್!
ವಾಟ್ಸ್​ಆ್ಯಪ್​.
  • Share this:
ವಾಟ್ಸ್ಆ್ಯಪ್ ಬ್ಯುಸಿನೆಸ್ ಆ್ಯಪ್​​​ನಲ್ಲಿ ಶಾಪಿಂಗ್ ಫೀಚರ್​ವೊಂದನ್ನು ಪರಿಚಯಿಸಿದೆ. ಆ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲ ನೀಡಲು ಮುಂದಾಗಿದೆ. ಫೇಸ್​ಬು ಕ್ ಒಡೆತನದ ವಾಟ್ಸ್ಆ್ಯಪ್ ಬ್ಯುಸಿನೆಸ್ ಆ್ಯಪ್ ಇದೀಗ ವಾಟ್ಸ್ಆ್ಯಪ್ ವೆಬ್ ಅಥವಾ ಡೆಸ್ಕ್​​ಟಾಪ್ ಆವೃತ್ತಿಯಲ್ಲೂ  ಕ್ಯಾಟಲಾಗ್ ರಚಿಸಲು ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಒದಗಿಸುತ್ತಿದೆ.

ಉತ್ಪನ್ನಗಳು ಮತ್ತು ಸೇವೆಯನ್ನು ಒದಗಿಸುವ ವಾಟ್ಸ್ಆ್ಯಪ್ ಬ್ಯುಸಿನೆಸ್​ನಲ್ಲಿ ಕ್ಯಾಟಲಾಗ್ ಅನ್ನು ರಚಿಸುವ ಅವಕಾಶವನ್ನು ನೀಡುತ್ತಿದೆ.

ಕಂಪ್ಯೂಟರ್ ಮೂಲಕ ಅನೇಕ ವ್ಯವಹಾರವನ್ನು ನಡೆಸುತ್ತಿದ್ದಾರೆ. ಆದ್ದರಿಂದ ಈ ಹೊಸ ಆಯ್ಕೆಯು ಹೊಸ ವಸ್ತುಗಳು ಅಥವಾ ಸೇವೆಗಳನ್ನು ಸೇರಿಸಲು ಸುಲಭವಾಗಿಸುತ್ತದೆ. ಜೊತೆಗೆ ಇದರಿಂದ ಗ್ರಾಹಕರಿಗೆ ಏನು ಲಭ್ಯವಿದೆ ಎಂದು ತಿಳಿಯುತ್ತದೆ.

ರೆಸ್ಟೋರೆಂಟ್ ಅಥವಾ ಬಟ್ಟೆ ಅಂಗಡಿಯಂತಹ ದೊಡ್ಡ ದಾಸ್ತಾನು ಹೊಂದಿರುವ ವ್ಯವಹಾರಗಳಿಗೆ ಇದು ಸಹಾಯಕವಾಗಲಿದೆ. ಹಾಗಾಗಿ ಅವರು ಕ್ಯಾಟಲಾಗ್ ರಚಿಸಿ ನಿರ್ವಹಿಸಬಹುದಾಗಿದೆ. ಜೊತೆಗೆ ಸುಲಭವಾಗಿ ಪ್ರದರ್ಶಿಸಲು ಮತ್ತು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದು ವಾಟ್ಸ್ಆ್ಯಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಾಟ್ಸ್ಆ್ಯಪ್ ಬ್ಯುಸಿನೆಸ್ ಮೂಲಕ 8 ದಶಲಕ್ಷಕ್ಕೂ ಅಧಿಕ ಜನರು ಹೆಚ್ಚಿನ ವ್ಯವಹಾರಕ್ಕೆ ಕ್ಯಾಟಲಾಗ್ ಬ್ರೌಸ್ ಮಾಡಬಹುದಾಗಿದೆ. ಸದ್ಯ ಎಲ್ಲ ಬಳಕೆದಾರರಿಗೆ ಈ ನೂತನ ಫಿಚರ್ ಲಭ್ಯವಿದೆ.

ಕಳೆದ ವರ್ಷ ರಜಾದಿನಗಳಲ್ಲಿ ವಾಟ್ಸ್ಆ್ಯಪ್ ಕೆಲವು ಬಳಕೆದಾರರಿಗೆ ಕ್ಯಾಟಲಾಗ್ ಬ್ರೌಸ್ ಮಾಡುವ ಆಯ್ಕೆಯನ್ನ ಪರಿಚಯಿಸಿತ್ತು. ಅದರಲ್ಲಿ ಕೆಲವು ಪ್ರಾಡೆಕ್ಟ್​ಗಳನ್ನ ಆಯ್ಕೆ ಮಾಡುವುದರ ಜೊತೆಗೆ ವ್ಯವಹಾರವನ್ನು ನಿರ್ವಹಿಸಬಹುದಾಗಿತ್ತು. ಆದರೀಗ ಪ್ರಸ್ತುತ ಎಲ್ಲ ಬಳಕೆದಾರರಿಗೆ ಈ ನೂತನ ಫೀಚರ್ ಅನ್ನು ಪರಿಚಯಿಸಿದೆ.ಎಂದು ವಾಟ್ಸ್ಆ್ಯಪ್ ತಿಳಿಸಿದೆ.

ವಾಟ್ಸ್ಆ್ಯಪ್ ಬ್ಯುಸಿನೆಸ್ ಅಪ್ಲಿಕೇಶನ್ ಮೂಲಕ ಮಾರಾಟಗಾರರಿಗೆ ತಮ್ಮ ಕ್ಯಾಟಲಾಗ್​ನಿಂದ ನನಿರ್ದಿಷ್ಟ ವಸ್ತುಗಳನ್ನು ಮರೆಮಾಡಲು ಅನುಮತಿಸುತ್ತದೆ. ಜೊತೆಗೆ ಸ್ಟಾಕ್​ಗೆ ಮರಳಿದಾಗ ಸುಲಭವಾಗಿ ತೋರಿಸುತ್ತದೆ.

ಕ್ಯಾಟಲಾಗ್​ಗೆ  ಉತ್ನ್ನವನ್ನು ಅಥವಾ ಸೇವೆಯನ್ನು ಸೇರಿಸುವುದು ಹೇಗೆ?

1. ವಾಟ್ಸ್ಆ್ಯಪ್ ಬಿಸಿನೆಸ್ ಅಪ್ಲಿಕೇಶನ್ ತೆರೆಯಿರಿ. ನಂತರ ಅಲ್ಲಿ ಕಾಣಿಸುವ ಮೋರ್ ಆಯ್ಕೆಯನ್ನು ಕ್ಲಿಕ್ ಮಾಡಿರಿ/

2.  ಚಾಟ್​ಲೀಸ್ಟ್​  ಮೇಲ್ಭಾಗದಲ್ಲಿ ಕ್ಯಾಟಲಾಗ್ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿರಿ

3. ಫೋಟೋಗಳನ್ನು ಅಪ್ಲೋಡ್ ಮಾಡಿರಿ. ವಾಟ್ಸ್ಆ್ಯಪ್ 10 ಫೋಟೋಗಳನ್ನು ಅಪ್ಲೋಡ್ ಮಾಡಲು ಅವಕಾಶ ನೀಡುತ್ತದೆ.
Published by: Harshith AS
First published: April 8, 2021, 11:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories