• Home
 • »
 • News
 • »
 • tech
 • »
 • Meta Company: ವಾಟ್ಸಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ರಾಜೀನಾಮೆ! ಕಾರಣವೇನು? ಇಲ್ಲಿದೆ ಮಾಹಿತಿ

Meta Company: ವಾಟ್ಸಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ರಾಜೀನಾಮೆ! ಕಾರಣವೇನು? ಇಲ್ಲಿದೆ ಮಾಹಿತಿ

ವಾಟ್ಸಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್

ವಾಟ್ಸಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್

ಮೆಟಾದಲ್ಲಿನ ಭಾರತದ ಉದ್ಯೋಗಿದಳ ನಂತರ ಇದೀಗ ಮೆಟಾದ, ವಾಟ್ಸಪ್ ಇಂಡಿಯಾದ ಮುಖ್ಯಸ್ಥರು ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ವಾಲ್ ಕೂಡ  ರಾಜೀನಾಮೆ ನೀಡಿದ್ದರು. ಇದೀಗ ವಾಟ್ಸಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಅವರು ರಾಜೀನಾಮೆ ನೀಡಿದ್ದಾರೆ.

ಮುಂದೆ ಓದಿ ...
 • Share this:

  ಕೆಲದಿನಗಳಿಂದ ಈ ಸೋಷಿಯಲ್ ಮೀಡಿಯಾಗಳಿಗೆ (Social Media) ಏನಾಗಿದೆ ಎಂಬ ಪ್ರಶ್ನೆ ಎಲ್ಲಾ ಬಳಕೆದಾರಿಗೆ ಕಾಡುತ್ತಿದೆ. ಇತ್ತೀಚೆಗೆ ಮೆಟಾ (Meta) ತನ್ನ ಸಂಸ್ಥೆಯಲ್ಲಿರುವ ಉದ್ಯೋಗಿಗಳನ್ನು ವಜಾ ಮಾಡಿತ್ತು. ಹೀಗೆ ಮಾಡಿದ ಸ್ವಲ್ಪ ಸಮಯದ ನಂತರ  ವಾಟ್ಸಪ್ (Whatsapp), ಫೇಸ್​ಬುಕ್ (Facebook) ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದಾದ ಬಳಿಕ 2 ವಾರಗಳ ಹಿಂದೆ ಮೆಟಾ ಇಂಡಿಯಾ (Meta India) ಮುಖ್ಯಸ್ಥ ಅಜಿತ್ ಮೋಹನ್(Ajit Mohan) ರಾಜೀನಾಮೆ ನೀಡಿದ್ದರು. ಇದೀಗ ಮೆಟಾ ಇಂಡಿಯಾ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ವಾಲ್ ಕೂಡ  ರಾಜೀನಾಮೆ ನೀಡಿದ್ದಾರೆ. ಇದರೆಲ್ಲದರ ಜೊತೆಗೆ ವಾಟ್ಸಾಪ್‌ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ (Abhijit Bose) ಕೂಡ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾ ಹೇಳಿಕೆಯಲ್ಲಿ ತಿಳಿಸಿದೆ.


  ಭಾರತದಲ್ಲಿ ವಾಟ್ಸಪ್​ನ ಮೊದಲ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದ ಅಭಿಜಿತ್​ ಬೋಸ್ ಅವರು ಇದುವರೆಗೆ ಮಾಡಿದಂತಹ ಉತ್ತಮ ಕಾರ್ಯಗಳಿಗೆ ವಾಟ್ಸಪ್​ನ ಮುಖ್ಯಸ್ಥರಾಗಿರುವ ವಿಲ್ ಕ್ಯಾತ್‌ಕಾರ್ಟ್ ಅವರು ಧನ್ಯವಾದ ಸಲ್ಲಿಸಿದರು.


  ಅಭಿಜಿತ್ ಭೋಸ್ ಅವರ ಕುರಿತ್ ಕ್ಯಾತ್ ಕರ್ಟ್​ ಅವರ ಮಾತು:


  ಭಾರತದ ವಾಟ್ಸಪ್​ನ ಮುಖ್ಯಸ್ಥರಾಗಿ ಮೊದಲು ಆಯ್ಕೆಯಾದವರು ಅಭಿಜಿತ್​ ಭೋಸ್. ಇವರು ತಮಗೆ ನೀಡಿದ ಕಾರ್ಯವನ್ನು ಉತ್ತಮವಾಗಿ ನ ನಿರ್ವಹಿಸಿದ್ದಾರೆಂದು ವಾಟ್ಸಪ್ ಮುಖ್ಯಸ್ಥ ವಿಲ್ ಕ್ಯಾತ್ ಕರ್ಟ್ ಅವರು ಧನ್ಯವಾದ ಸಲ್ಲಿಸಿದರು.


  ಇದನ್ನೂ ಓದಿ: ಐಫೋನ್ 13ಗೆ ಹೋಲುವ ಸ್ಯಾಮ್​ಸಂಗ್ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್​ ಬಿಡುಗಡೆ!


  ಇದಲ್ಲದೆ “ಅವರ ಉದ್ಯಮಶೀಲ ಪ್ರಯತ್ನವು ನಮ್ಮ ತಂಡವು ಲಕ್ಷಾಂತರ ಜನರು ಮತ್ತು ವ್ಯವಹಾರಗಳಿಗೆ ಪ್ರಯೋಜನಕಾರಿಯಾದ ಹೊಸ ಸೇವೆಗಳನ್ನು ನೀಡಲು ಸಹಾಯ ಮಾಡಿದೆ. ಭಾರತಕ್ಕಾಗಿ ವಾಟ್ಸಾಪ್ ಇನ್ನೂ ಹೆಚ್ಚಿನದನ್ನು ಮಾಡಬಹುದು. ಭಾರತದ ಡಿಜಿಟಲ್ ರೂಪಾಂತರವನ್ನು ಮುಂದುವರಿಸಲು ಬಹಳಷ್ಟು ಯೋಜನೆಗಳನ್ನು ಕೈಗೊಂಡಿದ್ದೇವೆ ಎಂದು ಕ್ಯಾತ್‌ಕಾರ್ಟ್ ಹೇಳಿದರು.


  WhatsApp India chief Abhijit Bose resigns What is the reason


  ಮೆಟಾ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ:


  ಭಾರತದಲ್ಲಿನ ಮೆಟಾ ಮುಖ್ಯಸ್ಥರಾಗಿದ್ದ ಅಜಿತ್ ಮೋಹನ್ ಅವರು ಕೂಡ ಈ ತಿಂಗಳ  ಆರಂಭದಲ್ಲಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ರಾಜೀನಾಮೆ ನೀಡಿದ ನಂತರ  ಅಜಿತ್ ಮೋಹನ್ ಅವರು ಏಷ್ಯಾ ಫೆಸಿಫಿಕ್ ಸ್ನ್ಯಾಪ್​ ಅಧ್ಯಕ್ಷರಾಗಿ ಸೇರುತ್ತಿದ್ದಾರೆ ಎಂದು ಘೋಷಿಸಲಾಗಿದೆ.


  ಸಾರ್ವಜನಿಕ ನೀತಿಯ ನಿರ್ದೇಶಕರಾಗಿ ಶಿವನಾಥ್ ತುಕ್ರಾಲ್ ನೇಮಕ:


  ಈ ಎಲ್ಲಾ ಘಟನೆಗಳ ನಂತರ ಭಾರತದಲ್ಲಿ ಸಾರ್ವಜನಿಕ ನೀತಿಯ ನಿರ್ದೇಶಕರಾಗಿದ್ದ ಶಿವನಾಥ್ ತುಕ್ರಾಲ್ ಅವರನ್ನು ಇದೀಗ ಭಾರತದ ಎಲ್ಲಾ ಮೆಟಾ ಬ್ರಾಂಡ್​ಗಳಿಗೆ ಸಾರ್ವಜನಿಕ ನೀತಿಯ ನಿರ್ದೇಶಕರಾಗಿ ನೇಮಿಸಲಾಗಿದೆ.


  ಮೆಟಾದ ಹಿಂದಿನ ವಜಾ:


  ಕೆಲವು ದಿನಗಳ ಹಿಂದೆಯಷ್ಟೇ ಮೆಟಾ ಜಗತ್ತಿನಾದ್ಯಂತ ಸುಮಾರು 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.


  WhatsApp India chief Abhijit Bose resigns What is the reason
  ಸಾಂಕೇತಿಕ ಚಿತ್ರ


  ಕೆಲಸಕ್ಕೆ ಸೇರಿದ ಎರಡೇ ದಿನಕ್ಕೆ ವಜಾ!

   ಹಿಮಾಂಶು ವಿ ಹೆಸರಿನ ಮೆಟಾದ ಮಾಜಿ ಉದ್ಯೋಗಿ, ಮೆಟಾದಲ್ಲಿನ ತಮ್ಮ ಹೊಸ ಉದ್ಯೋಗಕ್ಕಾಗಿ ಇದೀಗ ತಾನೇ ಭಾರತದಿಂದ ಕೆನಡಾಕ್ಕೆ ಸ್ಥಳಾಂತರಗೊಂಡಿದ್ದರು. ಇದೀಗ ಲಿಂಕ್ಡ್‌ಇನ್ ಖಾತೆಯಲ್ಲಿ ತಮ್ಮ ದಯನೀಯ ಹಾಗೂ ಹತಾಶ ಸ್ಥಿತಿಯನ್ನು ಬಹಿರಂಗಪಡಿಸಿರುವ ಹಿಮಾಂಶು, ಐಐಟಿ ಖಾರಗ್‌ಪುರ್ ವಿದ್ಯಾಲಯದ ಪದವೀಧರರಾಗಿದ್ದಾರೆ.


  ಗಿಟ್‌ಹಬ್, ಅಡೋಬ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಉನ್ನತ ಮಟ್ಟದ ಬ್ರ್ಯಾಂಡ್‌ಗಳಲ್ಲಿ ಉದ್ಯೋಗ ನಿರ್ವಹಿಸಿದ ವೃತ್ತಿಪರರು ಎಂದೆನಿಸಿದ್ದಾರೆ. ಈ ಮಧ್ಯೆ ಕೆಲಸಕ್ಕೆಂದು ಕೆನಡಾಗೆ ಬಂದಿದ್ದ ಇವರನ್ನು ಮೆಟಾ ಕೆಲಸಕ್ಕೆ ಸೇರಿದ ಎರಡೇ ದಿನಕ್ಕೆ ವಜಾ ಮಾಡಿದೆ ಎಂದು ವಿಶಾದ ವ್ಯಕ್ತ ಪಡಿಸಿದ್ದಾರೆ.

  ಮಾರ್ಕ್ ಜುಕರ್​ಬರ್ಗ್ ಹೇಳಿದ್ದೇನು?


  ಬೃಹತ್ ಉದ್ಯೋಗಿ ವಜಾಗೊಳಿಸುವಿಕೆಯ ನಂತರ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಪೋಸ್ಟ್‌ನಲ್ಲಿ ಕಮೆಂಟ್ ಮಾಡಿದ್ದು, ಮೆಟಾ ಇತಿಹಾಸದಲ್ಲಿಯೇ ನಡೆಸಿದ ಅತ್ಯಂತ ಕಷ್ಟಕರವಾದ ಬದಲಾವಣೆಯ ಕುರಿತು ನಾನು ಹಂಚಿಕೊಳ್ಳುತ್ತಿದ್ದೇನೆ. ತಂಡದ ಗಾತ್ರವನ್ನು 13% ಕ್ಕಿಂತ ಕಡಿಮೆ ಮಾಡಲು ನಿರ್ಧರಿಸಿದ್ದು, 11000 ಕ್ಕಿಂತಲೂ ಹೆಚ್ಚಿನ ಪ್ರತಿಭಾವಂತರಿಗೆ ಕಂಪನಿ ಬಿಟ್ಟು ಹೋಗಲು ಅವಕಾಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

  Published by:Gowtham K
  First published: