ಈ ಸ್ಮಾರ್ಟ್​ಫೋನ್​ಗಳಲ್ಲಿ ಸ್ಥಗಿತಗೊಂಡಿದೆ ವಾಟ್ಸ್​ಆ್ಯಪ್


Updated:January 2, 2018, 6:23 PM IST
ಈ ಸ್ಮಾರ್ಟ್​ಫೋನ್​ಗಳಲ್ಲಿ ಸ್ಥಗಿತಗೊಂಡಿದೆ ವಾಟ್ಸ್​ಆ್ಯಪ್

Updated: January 2, 2018, 6:23 PM IST
ಫೇಸ್​ಬುಕ್ ಮಾಲಿಕತ್ವದ ಮೊಬೈಲ್ ಮೆಸೇಜಿಂಗ್ ಆ್ಯಪ್ ಜನವರಿ 1ರಿಂದ ಬ್ಲ್ಯಾಕ್​ಬೆರಿ ಒಎಸ್, ಬ್ಲ್ಯಾಕ್​ಬೆರಿ 10, ವಿಂಡೋಸ್ ಫೋನ್ 8.0 ಹಾಗೂ ಹಳೆಯ ಆ್ಯಂಡ್ರಾಯ್ಡ್ ಪ್ಲ್ಯಾಟ್​ಫಾರ್ಮ್​ಗಳನ್ನು ಸಪೋರ್ಟ್​ ಮಾಡುವ ಫೋನ್​ಗಳಲ್ಲಿ ವಾಟ್ಸ್​ಆ್ಯಪ್ ಕಾರ್ಯ ನಿರ್ವಹಿಸುತ್ತಿಲ್ಲ.

ಫೇಸ್​ಬುಕ್ ಕಂಪೆನಿಯ ವೆಬ್​ಸೈಟ್​ನ ಸಪೋರ್ಟ್​ ನೋಟ್​ನಲ್ಲಿ ಈ ವಿಚಾರವಾಗಿ ಬರೆದುಕೊಂಡಿರುವ ಫೇಸ್​ಬುಕ್​ ವಕ್ತಾರ 'ಈ ಫೋನ್​ಗಳು ವಾಟ್ಸ್​ಆ್ಯಪ್​ನ ನೂತನ ಫೀಚರ್ಸ್​ಗಳನ್ನು ಸಪೋರ್ಟ್ ಮಾಡುವ ಸಾಮರ್ಥ್ಯ ಹೊಂದಿಲ್ಲ. ಒಂದು ವೇಳೆ ನೀವು ಬ್ಲ್ಯಾಕ್​ಬೆರಿ ಒಎಸ್, ಬ್ಲ್ಯಾಕ್​ಬೆರಿ 10, ವಿಂಡೋಸ್ ಫೋನ್ 8.0 ಇವುಗಳಲ್ಲಿ ಯಾವುದಾದರೊಂದು ಫೋನ್ ಬಳಸುತ್ತಿರುವಿರಾದರೆ ನಿಮ್ಮ ಡಿವೈಸ್​ ಅಪ್​ಗ್ರೇಡ್​ ಮಾಡುವ ಅಗತ್ಯವಿದೆ' ಎಂದಿದ್ದಾರೆ.

ಡಿಸೆಂಬರ್ 2018ರ ಬಳಿಕ ನೋಕಿಯಾ S40 ಯಲ್ಲೂ ಸ್ಥಗಿತಗೊಳ್ಳಲಿದೆ ವಾಟ್ಸ್ಆ್ಯಪ್
ಬಳಕೆದಾರರು ವಾಟ್ಸ್​ಆ್ಯಪ್ ಬಳಸಬಹುದು ಆದರೆ ಹೊಸ ಅಕೌಂಟ್​ ಅಥವಾ ಚಾಲ್ತಿಯಲ್ಲಿರುವ ಅಕೌಂಟ್​ನ್ನು ರೀ ವೆರಿಫಿಕೇಶನ್​ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು 2020 ಫೆಬ್ರವರಿ 1ರ ಬಳಿಕ ಆ್ಯಂಡ್ರಾಯ್ಡ್​ ಒಎಸ್​ 2.3.7 ಅಥವಾ ಇದಕ್ಕೂ ಹಳೆಯ ವರ್ಶನ್​ನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.
First published:January 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...