ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್ ಹಲವಾರು ಫೀಚರ್ಸ್ಗಳನ್ನು ಬಿಡುಗಡೆ ಮಾಡುವ ಮೂಲಕ ದೇಶದಲ್ಲಿ ಭಾರೀ ಮಾತುಕತೆಯಲ್ಲಿದೆ. ಇದಲ್ಲದೆ ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್ ಎಂದೂ ಗುರುತಿಸಿಕೊಂಡಿದೆ. ಸಾಮಾನ್ಯವಾಗಿ ಒಂದೇ ಮೊಬೈಲ್‌ನಲ್ಲಿ (Mobile) ಎರಡು ಆ್ಯಪ್ಗಳನ್ನು ಬಳಕೆ ಮಾಡುವ ಅವಕಾಶ ಕಲ್ಪಿಸಿಲಾಗಿದ್ದು, ಈ ಮೂಲಕ ಮೊಬೈಲ್ ಬಳಕೆದಾರರು ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದಾರೆ. ಅದೇ ರೀತಿ ಈಗ ಟ್ಯಾಬ್ಲೆಟ್‌ಗಳಲ್ಲಿ ವಾಟ್ಸಾಪ್ ಸ್ಪ್ಲಿಟ್ ವ್ಯೂ ಗೆ ಅವಕಾಶ ಮಾಡಿಕೊಡಲು ಮೆಟಾ ಮುಂದಾಗಿದೆ. ವಾಟ್ಸಾಪ್ ಈ ಬಾರಿ ಬಿಡುಗಡೆ ಮಾಡಿದ ಫೀಚರ್ಸ್ಗಳಲ್ಲಿ ಇದೊಂದು ಬಹಳಷ್ಟು ವಿಶೇಷ ಫೀಚರ್ (WhatsApp New Feature) ಅಂತಾನೇ ಹೇಳ್ಬಹುದು.
ಹೌದು, ಇದುವರೆಗೆ ಕೇವಲ ಸ್ಮಾರ್ಟ್ಫೋನ್ಗಳಲ್ಲಿ ಎರಡು ಆ್ಯಪ್ಗಳನ್ನು ಒಂದೇ ಬಾರಿಗೆ ಬಳಕೆ ಮಾಡಬಹುದಿತ್ತು. ಆದರೆ ಇನ್ಮುಂದೆ ವಾಟ್ಸಾಪ್ನಲ್ಲೂ ಈ ಫೀಚರ್ ಬರ್ತಾ ಇದೆ. ಆದರೆ ಈ ಫೀಚರ್ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ. ಹಾಗಿದ್ರೆ ಈ ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ, ಯಾರಿಗೆಲ್ಲಾ ಲಭ್ಯವಿದೆ ಎಂದು ಈ ಲೇಖನದ ಮೂಲಕ ತಿಳಿಯಿರಿ.
ವಾಟ್ಸಾಪ್ ಇದೀಗ ತನ್ನ ಬಳಕೆದಾರರಿಗಾಗಿ ಸ್ಪ್ಲಿಟ್ ವ್ಯೂ ಎಂಬ ಫೀಚರ್ ಅನ್ನು ಬಿಡುಗಡೆ ಮಾಡಿದೆ.
ಏನಿದು ಸ್ಪ್ಲಿಟ್ ವ್ಯೂ?
ಸ್ಪ್ಲಿಟ್ ವ್ಯೂ ಎಂಬುದು ಸ್ಮಾರ್ಟ್ ಡಿವೈಸ್ ಬಳಕೆದಾರರಿಗೆ ಅಗತ್ಯವಾಗಿರುವ ಒಂದು ಪ್ರಮುಖ ಫೀಚರ್ಸ್ ಆಗಿದ್ದು, ಒಮ್ಮೆಲೆ ಒಂದೇ ಡಿಸ್‌ಪ್ಲೇನಲ್ಲಿ ಎರಡು ಆ್ಯಪ್ಗಳನ್ನು ಓಪನ್ ಮಾಡಲು ಅವಕಾಶ ನೀಡುತ್ತದೆ. ಅದರಲ್ಲೂ ಈ ಸೌಲಭ್ಯ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿದ್ದು, ಆಯ್ದ ಆ್ಯಪ್ಗಳು ಮಾತ್ರ ಈ ಸೇವೆಗೆ ಬೆಂಬಲ ನೀಡುತ್ತವೆ. ಇದರ ಸಾಲಿಗೆ ಈಗ ವಾಟ್ಸಾಪ್ ಸಹ ಸೇರಿಕೊಳ್ಳಲಿದೆ.
ಇದನ್ನೂ ಓದಿ: ಇದು ಜಗತ್ತಿನ ದುಬಾರಿ ನೈಲ್ ಪಾಲಿಶ್ ಅಂತೆ, ಇದ್ರ ಬೆಲೆ ಬರೋಬ್ಬರಿ 1 ಕೋಟಿ 90 ಲಕ್ಷ!
ಟ್ಯಾಬ್ ಬಳಕೆದಾರರಿಗೆ ಮಾತ್ರ ಲಭ್ಯ
ಈ ಸ್ಪ್ಲಿಟ್ ವ್ಯೂ ಅನ್ನು ಸದ್ಯಕ್ಕೆ ಪರೀಕ್ಷಿಸಲಾಗುತ್ತಿದ್ದು, ಟ್ಯಾಬ್ಲೆಟ್‌ಗಳಿಗಾಗಿ ಆಂಡ್ರಾಯ್ಡ್ ಬೀಟಾದಲ್ಲಿ ಇದನ್ನು ಹೊರತರಲು ಯೋಜಿಸಲಾಗುತ್ತಿದೆ. ಈ ಮೂಲಕ ಯಾರೆಲ್ಲಾ ಬಳಕೆದಾರರು ಟ್ಯಾಬ್ಲೆಟ್‌ಗಳಲ್ಲಿ ವಾಟ್ಸಾಪ್ ಬಳಸುತ್ತಾರೋ ಅವರು ಇನ್ಮುಂದೆ ಈ ಸೌಲಭ್ಯ ಪಡೆದುಕೊಳ್ಳಬಹುದು. ಜೊತೆಗೆ ಈ ವೇಳೆ ಒಬ್ಬರ ಜೊತೆ ಚಾಟಿಂಗ್ ಮಾಡುವುದರ ಜೊತೆಗೆ ಇನ್ನೊಂದು ಬದಿಯಲ್ಲಿ ವಾಟ್ಸಾಪ್‌ನ ಇತರೆ ಫೀಚರ್ಸ್ ಅನ್ನು ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ.
ವಾಬೀಟಾಇನ್ಫೋ ವರದಿಯ ಪ್ರಕಾರ
ಈ ಸಂಬಂಧ ಈ ಬದಲಾವಣೆಯನ್ನು WABetaInfo ಗಮನಿಸಿದ್ದು, ಇದರ ವರದಿಯ ಪ್ರಕಾರ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಳಕೆದಾರರು ವಾಟ್ಸಾಪ್‌ನ ಸ್ಪ್ಲಿಟ್ ವ್ಯೂ ಫೀಚರ್ಸ್ ಅನ್ನು ಬಳಕೆ ಮಾಡಲು ಅನುಮತಿಸಲಾಗುತ್ತದೆ ಎಂದು ಉಲ್ಲೇಖಿಸಿದೆ. ಇನ್ನು ಸಾಮಾನ್ಯವಾಗಿ ಟ್ಯಾಬ್ಲೆಟ್‌ನಲ್ಲಿ ವಾಟ್ಸಾಪ್ ಬಳಕೆ ಮಾಡುವಾಗ ವಾಟ್ಸಾಪ್ ಸಂಪೂರ್ಣ ಡಿಸ್‌ಪ್ಲೇ ಯನ್ನು ಆಕ್ರಮಿಸಿಕೊಳ್ಳುತ್ತದೆ. ಈ ವೇಳೆ ಇತರೆ ಚಾಟ್ ವಿಭಾಗವನ್ನು ತೆರೆಯಬೇಕು ಎಂದರೆ ಚಾಟ್ ಲೀಸ್ಟ್‌ಗೆ ಹಿಂತಿರುಗಿ ನಂತರ ಬೇಕಾದ ಚಾಟ್ ಓಪನ್ ಮಾಡಬೇಕು. ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ.
ವಾಟ್ಸಾಪ್‌ನಲ್ಲಿ ಕಾಲ್ ಅನ್ನು ಶೆಡ್ಯೂಲ್ ಮಾಡುವ ಫೀಚರ್
ವಾಟ್ಸಾಪ್‌ನಲ್ಲಿ ಈಗಾಗಲೇ ವಾಯ್ಸ್ ಹಾಗೂ ವಿಡಿಯೋ ಕರೆ ಮಾಡಲು ಅವಕಾಶ ನೀಡಲಾಗಿದೆ. ಅದಾಗ್ಯೂ ಈ ವಿಭಾಗದಲ್ಲಿ ಇನ್ನಷ್ಟು ಹೊಸ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿರುವ ವಾಟ್ಸಾಪ್ ಬಳಕೆದಾರರಿಗೆ ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಆಯ್ಕೆಯ ಫೀಚರ್ಸ್ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಈ ಶೆಡ್ಯೂಲ್ ಕರೆ ಸೌಲಭ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರಲಿದ್ದು, ಈ ಮೂಲಕ ಬೇಕಾದವರ ಜೊತೆಗೆ ಸಮಯಕ್ಕಿಂತ ಮುಂಚಿತವಾಗಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕರೆಯನ್ನು ಯೋಜಿಸಬಹುದಾಗಿದೆ. ಈ ಮೂಲಕ ಇನ್ಮುಂದೆ ಬಳಕೆದಾರರು ಯಾವುದೇ ಕಾಲ್ಗಳನ್ನು ವಾಟ್ಸಾಪ್‌ನಲ್ಲಿ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಕಂಪೆನಿ ಹೇಳಿದೆ. ಇನ್ನು ವಾಟ್ಸಾಪ್ ಪರಿಚಯಿಸಿರುವ ಈ ಹೊಸ ಫೀಚರ್ ಇನ್ನೇನು ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತದೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ