WhatsApp: ವಾಟ್ಸ್ಆ್ಯಪ್ ಅಪ್ಡೇಟ್ ವರ್ಷನ್ ಬಿಡುಗಡೆ; ಇಲ್ಲಿದೆ ಹೊಸ ಫೀಚರ್ಗಳ ವಿವರ
WhatsApp New Update: ಈ ಹಿಂದೆ ಬಳಕೆದಾರರ ಅನುಮತಿ ಇಲ್ಲದೆ ವಾಟ್ಸ್ಆ್ಯಪ್ ಗ್ರೂಪಿಗೆ ಸೇರಿಸಬಹುದಾಗಿತ್ತು. ಆದರೀಗ ಬಳಕೆದಾರನಿಗೆ ಸೆಟ್ಟಿಂಗ್ನಲ್ಲಿ ಆಯ್ಕೆಯೊಂದನ್ನು ನೀಡಿದ್ದು, ಅನುಮತಿ ಇಲ್ಲಿದೆ ಗ್ರೂಪಿಗೆ ಸೇರಿಸಲಾಗುವುದಿಲ್ಲ.
news18-kannada Updated:November 27, 2019, 12:24 PM IST

WhatsApp Has a New Update For iOS With Better Group Privacy Settings And More
- News18 Kannada
- Last Updated: November 27, 2019, 12:24 PM IST
ಬಳಕೆದಾರರ ಸುರಕ್ಷತೆ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಹೊಸ ಫೀಚರ್ಗಳನ್ನು ಪರಿಚಯಿಸುತ್ತಾ ಬಂದಿದೆ. ಈ ಬಾರಿ ಪರಿಚಯಿಸಿರುವ ನೂತನ ವರ್ಷನ್ನಲ್ಲಿ ವಾಟ್ಸ್ಆ್ಯಪ್ ಸಾಕಷ್ಟು ಹೊಸ ಅಪ್ಡೇಟ್ಗಳನ್ನು ನೀಡಿದೆ. ವಾಟ್ಸ್ಆ್ಯಪ್ ಬಳಕೆದಾರರು ಆ್ಯಪ್ ಸ್ಟೋರ್ಗೆ ತೆರಳಿ ಆ್ಯಪ್ ಅಪ್ಡೇಟ್ ಮಾಡುವ ಮೂಲಕ ನೂತನ ವರ್ಷನ್ ಪಡೆದುಕೊಳ್ಳಬಹುದು. ಅಂದಹಾಗೆ, ಹೊಸ ಅಪ್ಡೇಟ್ನಲ್ಲಿ ಏನಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಗ್ರೂಪ್ ಪ್ರೈವೆಸಿ:
ಈ ಹಿಂದೆ ಬಳಕೆದಾರರ ಅನುಮತಿ ಇಲ್ಲದೆ ವಾಟ್ಸ್ಆ್ಯಪ್ ಗ್ರೂಪಿಗೆ ಸೇರಿಸಬಹುದಾಗಿತ್ತು. ಆದರೀಗ ಬಳಕೆದಾರನಿಗೆ ಸೆಟ್ಟಿಂಗ್ನಲ್ಲಿ ಆಯ್ಕೆಯೊಂದನ್ನು ನೀಡಿದ್ದು, ಅನುಮತಿ ಇಲ್ಲಿದೆ ಗ್ರೂಪಿಗೆ ಸೇರಿಸಲಾಗುವುದಿಲ್ಲ. ಅದಕ್ಕೆಂದೆ ಗ್ರೂಪ್ ಸೆಟ್ಟಿಂಗ್ಸ್ನಲ್ಲಿ ಕೆಲ ಆಯ್ಕೆಗಳನ್ನು ನೀಡಲಾಗಿದೆ. ಬಳಕೆದಾರರು ಈ ಸೆಟ್ಟಿಂಗ್ಸ್ಗಾಗಿ ಮೊದಲಿಗೆ > ಅಕೌಂಟ್ ಪ್ರೈಮಸಿ> ಗ್ರೂಪ್ ಸೆಟ್ಟಿಂಗ್ ತೆರಳಿ ನಿಮ್ಮಿಷ್ಟದ ಆಯ್ಕೆಯನ್ನು ಅಳವಡಿಸಬಹುದು.ಕಾಲ್ ವೈಟಿಂಗ್:
ಈ ಮೊದಲು ಸಾಮಾನ್ಯ ಕರೆಯಲ್ಲಿ ಮಾತ್ರ ಕಾಲ್ ವೈಟಿಂಗ್ ಆಯ್ಕೆ ಇತ್ತು. ಈ ಆಯ್ಕೆ ವಾಟ್ಸ್ಆ್ಯಪ್ನಲ್ಲಿ ಲಭ್ಯವಿರಲಿಲ್ಲ. ಈಗ ಹೊಸ ಅಪ್ಡೇಟ್ ವರ್ಷನ್ನಲ್ಲಿ ಕಾಲ್ ವೈಟಿಂಗ್ ಆಯ್ಕೆಯನ್ನು ನೀಡಲಾಗಿದೆ. ಬಳಕೆದಾರರ ವಾಟ್ಸ್ಆ್ಯಪ್ ಬೇರೊಂದು ಕರೆಯಲ್ಲಿದ್ದರೆ ಇನ್ಕಮ್ಮಿಂಗ್ ಕರೆಯ ನೋಟಿಫೀಕೇಷನ್ ಬರುತ್ತದೆ.
ಇದರ ಜೊತೆಗೆ ವಾಟ್ಸ್ಆ್ಯಪ್ ಸ್ಕ್ರೀನ್ನಲ್ಲಿ ಚ್ಯಾಟ್ ವಿಭಾಗಕ್ಕೆ ಮೊದಲಿಗಿಂತ ಹೆಚ್ಚು ಜಾಗ ಸಿಗಲಿದೆ. ಇದರಿಂದ ಬಳಕೆದಾರನಿಗೆ ವಾಟ್ಸ್ಆ್ಯಪ್ ಬಳಕೆ ಮತ್ತಷ್ಟು ಸುಲಭ ಎನಿಸಲಿದೆ.
ವಾಟ್ಸ್ಆ್ಯಪ್ ಮುಂದಿನ ದಿನಗಳಲ್ಲಿ ಡಾರ್ಕ್ ಮೋಡ್ ಪರಿಚಯಿಸುವುದಾಗಿ ತಿಳಿಸಿದೆ. ಈಗಾಗಲೇ ಮೆಸೆಂಜರ್ನಲ್ಲಿ ಡಾರ್ಕ್ ಮೋಡ್ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ವಾಟ್ಸ್ಆ್ಯಪ್ನಲ್ಲೂ ಬಳಕಬಹುದಾಗಿದೆ. ಇದು ಬಳಕೆದಾರನಿಗೆ ಹೊಸ ಅನುಭವ ನೀಡಲಿದೆ.ಇದನ್ನೂ ಓದಿ: Happy Birthday Suresh Raina: 33ನೇ ವಸಂತಕ್ಕೆ ಕಾಲಿಟ್ಟ ಚಿನ್ನ ತಲ ಸುರೇಶ್ ರೈನಾ
ಇದನ್ನೂ ಓದಿ: Bigg Boss Kannada 7: ‘ಎಲ್ಲಾ ದೈವ ಇಚ್ಚೆ‘ ಎಂದು ಮತ್ತೆ ಬಿಗ್ ಬಾಸ್ ಮನೆಯೊಳಕ್ಕೆ ಕಾಲಿಟ್ಟ ಚೈತ್ರಾ!