ಇತ್ತೀಚೆಗೆ ಬಹುತೇಕ ಎಲ್ಲರ ಕೈಯಲ್ಲೂ ಸ್ಮಾರ್ಟ್ಫೋನ್ (Smartphone) ಇದ್ದೇ ಇದೆ. ಅದೇ ರೀತಿ ಪ್ರತಿಯೊಬ್ಬರ ಸ್ಮಾರ್ಟ್ಫೋನ್ನಲ್ಲೂ ಒಂದು ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಇದೆ ಎಂದು ಹೇಳಿದರೆ ಅದು ವಾಟ್ಸಪ್ (Whatsapp). ಹೌದು, ವಾಟ್ಸಪ್ ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಾಗುವ ವೇಗದ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಭಾರತದಲ್ಲಿ (India) ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಆದರೆ ಎಲ್ಲರೂ ಒಮ್ಮೊಮ್ಮೆ ವಾಟ್ಸಾಪ್ ನಲ್ಲಿ ತಪ್ಪು ಮಾಡಿ ಬೇರೆಯವರಿಗೆ ಸಂದೇಶ ಕಳುಹಿಸಿದ್ದಾರೆ. ಸಂಬಂಧವೇ ಇಲ್ಲದ ಗ್ರೂಪ್ನಲ್ಲಿ ಆಕಸ್ಮಿಕವಾಗಿ ಏನನ್ನಾದರೂ ಮೆಸೇಜ್ ಕಳುಹಿಸುತ್ತಾರೆ. ಆದರೆ ಅದನ್ನು ಡಿಲೀಟ್ ಫಾರ್ ಎವ್ರಿವನ್ (Delete For Everyone) ಎಂಬ ಆಯ್ಕೆಯನ್ನು ಒತ್ತುವ ಮೂಲಕ ಡಿಲೀಟ್ ಮಾಡಬಹುದು. ಇದೀಗ ವಾಟ್ಸಪ್ ಮತ್ತೊಂದು ಫೀಚರ್ ಅನ್ನು ಬಿಡುಗಡೆ ಮಾಡಿದೆ.
ವಾಟ್ಸಪ್ ದಿನದಿಂದ ದಿನಕ್ಕೆ ಏನಾದರೂ ಫೀಚರ್ಸ್ ಅನ್ನು ಬಿಡುಗಡೆ ಮಾಡುತ್ತಲೇ ಇದೆ. ಇದುವರೆಗೆ ಡಿಲೀಟ್ ಫಾರ್ ಎವ್ರಿವನ್ ಮೂಲಕ ತಪ್ಪಾಗಿ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡಬಹುದಿತ್ತು. ಇದೀಗ ಈ ಫೀಚರ್ನಂತೆಯೇ ಮತ್ತೊಂದು ಅಪ್ಡೇಟ್ ಬಂದಿದೆ. ಅದೇನೆಂದು ತಿಳೀಬೇಕಾದ್ರೆ ಈ ಕೆಳಗೆ ಓದಿ.
ಮೆಸೇಜ್ ಅನ್ನು ಅಂಡೂ ಮಾಡುವ ಅವಕಾಶ
ಮೆಟಾ ಮಾಲೀಕತ್ವದಲ್ಲಿರುವ ವಾಟ್ಸಪ್ ಕಂಪನಿಯು ಬಳಕೆದಾರರ ಅಗತ್ಯಗಳನ್ನು ಪೂರೈಸಲು ಹೊಸ ಹೊಸ ಫೀಚರ್ಸ್ಗಳನ್ನು ಒದಗಿಸುತ್ತಿದೆ. ಕೆಲವೊಮ್ಮೆ ಬಳಕೆದಾರರು ವಾಟ್ಸಪ್ನಲ್ಲಿ ತಪ್ಪಾಗಿ ಸಂದೇಶಗಳನ್ನು ಕಳುಹಿಸುತ್ತಾರೆ ನಂತರ ಡಿಲೀಟ್ ಮಾಡಬೇಕಾದರೆ ಗೊಂದಲಕ್ಕೊಳಗಾಗುತ್ತಾರೆ.
ಇದನ್ನೂ ಓದಿ: 40 ಸಾವಿರದೊಳಗಿನ ಬೆಸ್ಟ್ ಸ್ಮಾರ್ಟ್ಟಿವಿಗಳಿವು! ಫ್ಲಿಪ್ಕಾರ್ಟ್ನಲ್ಲಿ ಬಂಪರ್ ಆಫರ್
ಅಂತಹವರಿಗೆ ಇದೀಗ ಹೊಸ ಫೀಚರ್ ಬಿಡುಗಡೆಯಾಗಿದೆ. ಈ ಹಿಂದೆ ಯಾವುದೇ ಮೆಸೇಜ್ ಆದರೂ ತಪ್ಪಿ ಸೆಂಡ್ ಅದಾಗ ಡಿಲೀಟ್ ಫಾರ್ ಎವ್ರಿವನ್ ನೀಡುತ್ತಿದ್ದೆವು. ಆದರೆ ಇನ್ನುಮುಂದೆ ಡಿಲೀಟ್ ಫಾರ್ ಮಿ ಎಂಬ ಆಯ್ಕೆಯನ್ನು ಒತ್ತಿದಾಗ, ಆ ಮೆಸೇಜ್ ಅನ್ನು ಅಂಡೂ (Undo) ಮಾಡಲು ವಾಟ್ಸಪ್ ನಿಮಗೆ ಅನುಮತಿ ನೀಡುತ್ತದೆ.
ಆ್ಯಕ್ಸಿಡೆಂಟಲ್ ಡಿಲೀಟ್ ಎಂಬ ಫೀಚರ್
ವಾಟ್ಸಾಪ್ ಇತ್ತೀಚೆಗೆ 'ಆಕ್ಸಿಡೆಂಟಲ್ ಡಿಲೀಟ್' ಎಂಬ ಹೊಸ ಫೀಚರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಇದು ಬಳಕೆದಾರರು ಕಳುಹಿಸಿದ ಮೆಸೇಜ್ ಅನ್ನು ರಿವರ್ಸ್ ಮಾಡಲು ಬಳಕೆದಾರರಿಗೆ 5 ಸೆಕೆಂಡ್ನ ಆಯ್ಕೆಯನ್ನು ನೀಡುತ್ತದೆ. ಈ ಫೀಚರ್ ಮೂಲಕ ಬಳಕೆದಾರರು ತಾವು ಕಳುಹಿಸಿದ ಮೆಸೇಜ್ ಅನ್ನು ಅಂಡೂ (Undo) ಆಯ್ಕೆಯನ್ನು ಸೆಲೆಕ್ಟ್ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರಿಗೂ ಕಾಣದಮತೆ ಡಿಲೀಟ್ ಮಾಡಬಹುದು.
ಆಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳಲ್ಲಿ ಲಭ್ಯ
ವಾಟ್ಸಪ್ನ ಈ ಹೊಸ ವೈಶಿಷ್ಟ್ಯವು ಕೆಲವು ಐಫೋನ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಲಭ್ಯವಿದೆ. ಯುಎಸ್ ಮೂಲದ ಟೆಕ್ ಪೋರ್ಟಲ್ ಟೆಕ್ಕ್ರಂಚ್ ಸಂಸ್ಥೆಯ ವರದಿಯ ಪ್ರಕಾರ, ಈ ಫೀಚರ್ ವೈಯಕ್ತಿಕ ಮತ್ತು ಗ್ರೂಪ್ ಚ್ಯಾಟ್ಗಳಲ್ಲಿ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. WABetaInfo ವರದಿಯನ್ನು ಉಲ್ಲೇಖಿಸಿ, ಟೆಕ್ಕ್ರಂಚ್ ಸಂಸ್ಥೆ ಈ ವೈಶಿಷ್ಟ್ಯವನ್ನು ಆಗಸ್ಟ್ನಲ್ಲಿ ಕೆಲವು ಆಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳಲ್ಲಿ ಬೀಟಾ ಪರೀಕ್ಷಿಸಲಾಗಿದೆ ಎಂದು ವಿವರಿಸಿದೆ.
ಡಿಲೀಟ್ ಫಾರ್ ಎವ್ರಿವನ್ ಸಮಯದ ಮಿತಿ ಹೆಚ್ಚಳ
2017 ರಲ್ಲಿ ವಾಟ್ಸಪ್ ಮೆಸೇಜಿಂಗ್ ಆ್ಯಪ್ ಡಿಲೀಟ್ ಫಾರ್ ಎವ್ರಿವನ್' ಎಂಬ ಆಯ್ಕೆಯನ್ನು ಪರಿಚಯಿಸಿತು. ಇದು ಬಳಕೆದಾರರು ತಪ್ಪಾಗಿ ವಾಟ್ಸಪ್ ಗ್ರೂಪ್ನಲ್ಲಿ ಮಾಡಿದಂತಹ ಮೆಸೇಜ್ ಅನ್ನು ಡಿಲೀಟ್ ಮಾಡಲು ಸಹಾಯ ಮಾಡುತ್ತದೆ. ಆರಂಭದಲ್ಲಿ, ಈ ಆಯ್ಕೆ ಕೇವಲ 7 ನಿಮಿಷಗಳಿಗೆ ಬಳಸಬೇಕಿತ್ತು, ಆದರೆ ಈ ವರ್ಷದ ಆಗಸ್ಟ್ನಲ್ಲಿ ಇದನ್ನು 60 ಗಂಟೆಗಳವರೆಗೆ ಹೆಚ್ಚಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ