HOME » NEWS » Tech » WHATSAPP GETS STICKER SEARCH NEW ANIMATED STICKER PACK WALLPAPERS HG

ಹೊಸ ಫೀಚರ್ ಪರಿಚಯಿಸಿದ ವ್ಯಾಟ್ಸ್ಆ್ಯಪ್!; ಏನದು?

ವಾಟ್ಸ್​ಆ್ಯಪ್​ ಈವರೆಗೆ ಅನೇಕ​ ಫೀಚರ್ಸ್​​ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಅನಿಮೇಟೆಡ್​ ಸ್ಟಿಕ್ಕರ್​​ ಪ್ಯಾಕ್​ ಪರಿಚಯಿಸುವ ಮೂಲಕ​ ಬಳಕೆದಾರಿಗೆ ಹೊಸ ಅನುಭವ​ ಒದಗಿಸಿದೆ.

news18-kannada
Updated:December 1, 2020, 6:12 PM IST
ಹೊಸ ಫೀಚರ್ ಪರಿಚಯಿಸಿದ ವ್ಯಾಟ್ಸ್ಆ್ಯಪ್!; ಏನದು?
whatsapp
  • Share this:
ವಾಟ್ಸ್​ಆ್ಯಪ್​ ಇಂದು  ಅನಿಮೇಟೆಡ್​ ಸ್ಟಿಕ್ಕರ್​​ ಪ್ಯಾಕ್​​ ಅನ್ನು ಪರಿಚಯಿಸಿದೆ. ಜೊತೆಗೆ ವಾಲ್​ಪೇಪರ್​ ಬದಲಿಸುವ ಆಯ್ಕೆಯನ್ನು ನೀಡಿದೆ.

ವಾಟ್ಸ್​ಆ್ಯಪ್​ ಈವರೆಗೆ ಅನೇಕ​ ಫೀಚರ್ಸ್​​ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಅನಿಮೇಟೆಡ್​ ಸ್ಟಿಕ್ಕರ್​​ ಪ್ಯಾಕ್​ ಪರಿಚಯಿಸುವ ಮೂಲಕ​ ಬಳಕೆದಾರಿಗೆ ಹೊಸ ಅನುಭವ​ ಒದಗಿಸಿದೆ.

ಹೊಸ ಅನಿಮೇಟೆಡ್​ ಸ್ಟಿಕ್ಕರ್​​ ಪ್ಯಾಕ್​

ವ್ಯಾಟ್ಸ್​ಆ್ಯಪ್​ ಜನಪ್ರಿಯ ಸ್ಟಿಕ್ಕರ್​ಪ್ಯಾಕ್​ ಅನ್ನು ಪರಿಚಯಿಸಿದೆ. 9 ಭಾಷೆಗಳಲ್ಲಿ ಬಳಕೆಗೆ ಸಿಗಲಿದೆ. ಅರೇಬಿಕ್​, ಫ್ರೆಂಚ್​​, ಜರ್ಮನ್​​, ಇಂಡೋನೇಷಿಯ, ಇಟಲಿ, ಪೋರ್ಚುಗೀಸ್​, ರಷ್ಯಾ, ಸ್ಪಾನಿಷ್​ ಮತ್ತು ಟರ್ಕಿ ಭಾಷೆಯನ್ನು ಒಳಗೊಂಡಿದೆ.

ಸ್ಟಿಕ್ಕರ್​ ಹುಡುಕಾಟ

ಅನಿಮೇಟೆಡ್​ ಸ್ಟಿಕ್ಕರ್​​ ಅನ್ನು ಹುಡುಕುವ ಫೀಚರ್​ ನೀಡಿದೆ. ಈವರೆಗೆ ವ್ಯಾಟ್ಸ್​ಆ್ಯಪ್​ನಲ್ಲಿ ಜಿಐಫ್​ ಮತ್ತು ಎಮೋಜಿಯನ್ನು ಹುಡುಕಬಹುದಿತ್ತು. ಆದರೀಗ ಅನಿಮೇಟೆಡ್​ ಸ್ಟಿಕ್ಕರ್​​ ಅನ್ನು ಹುಡುಕಾಡಬಹುದು.

ವಾಲ್​ಪೇಪರ್​:ವಾಟ್ಸ್ಆ್ಯಪ್​ ಹಲವಾರು ವಾಲ್​ಪೇಪರ್​ ಅನ್ನು ಪರಿಚಯಿಸಿದೆ. ಇದರಲ್ಲಿ ಚಾಟ್​ ವಾಲ್​ಪೇಪರ್​ ಜೊತೆಗೆ ಮಂದ ಬೆಳಕಿನ ವಾಲ್​ಪೇಪರ್​ ಅನ್ನು ಬಳಸಿಕೊಳ್ಳಬಹುದಾಗಿದೆ. ಪ್ರಪಂಚದ ವೈವಿಧ್ಯಗಳ, ಪ್ರಕೃತಿ, ವಾಸ್ತು ಶಿಲ್ಪ ಮುಂತಾದ ಸಾಂಪ್ರದಾಯಿಕ ಚಿತ್ರವನ್ನು ಪರಿಚಯಿಸಿದೆ.
First published: December 1, 2020, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories