WhatsApp ಬಳಕೆದಾರರೇ… ಗೂಗಲ್ ಕಡೆಯಿಂದ ನಿಮಗಿದೆ ಆಘಾತಕಾರಿ ಸುದ್ದಿ!

Google Drive: ವಾಟ್ಸ್​ಆ್ಯಪ್ ಚಾಟ್​​ ಬ್ಯಾಕಪ್​ ಸಮಸ್ಯೆ ನಿರ್ವಹಣೆಗಾಗಿ ಕೆಲಸ ಮಾಡುತ್ತಿದೆ. ಮಾತ್ರವಲ್ಲದೆ, ಅದಕ್ಕೆಂದೇ ಹೊಸ ವಿಭಾಗವೊಂದನ್ನು ಪರಿಚಯಿಸಲಿದೆ.

WhatsApp

WhatsApp

 • Share this:
  WhatsApp Chat BacKups:  ವಾಟ್ಸ್​ಆ್ಯಪ್​ ತನ್ನ ಚಾಟ್​ ಬ್ಯಾಕಪ್​ಗಳನ್ನ ಗೂಗಲ್​ ಡ್ರೈವ್​ನಲ್ಲಿ ಇರಿಸಬಹುದಾದ ಆಯ್ಕೆಯಿತ್ತು. ಫೋಟೋ, ವಿಡಿಯೋ ಮಾತ್ರವಲ್ಲದೆ ಸಂದೇಶಗಳನ್ನು ಸ್ಟೊರೇಜ್​ ಮಾಡುವ ಅವಕಾಶವಿತ್ತು. ಅಂದರೆ ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ಬ್ಯಾಕಪ್​ ಬದಲಾಯಿಸಲು ಗೂಗಲ್​ ಡ್ರೈವ್​ ಸಹಾಯ ಮಾಡುತ್ತಿತ್ತು. ಇದು ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸುಲಭ ಮತ್ತು ಸರಳ ಮಾರ್ಗವಾಗಿತ್ತು. ಆದರೆ ಇನ್ಮುಂದೆ ವಾಟ್ಸ್​ಆ್ಯಪ್​ ಬ್ಯಾಕಪ್​ ಗೂಗಲ್​ ಡ್ರೈವ್ (Google Drive)​ ಸಂಗ್ರಹ ಕೋಟಕ್ಕೆ ಸೇರಿಸುವುದನ್ನು ತಡೆಯಲಿದೆ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಇಂತಹದೊಂದು ಬದಲಾವಣೆ ಬಗ್ಗೆ ತಿಳಿಸಲಿದೆ.

  WaBetaInfo ವರದಿಯ ಪ್ರಕಾರ, WhatsApp ಬ್ಯಾಕಪ್‌ಗಳಿಗಾಗಿ Google ಅನಿಯಮಿತ ಸಂಗ್ರಹಣೆಯನ್ನು ನೀಡುವುದನ್ನು ನಿಲ್ಲಿಸಬಹುದು. ಬದಲಾಗಿ, ವಾಟ್ಸಾಪ್ ಬಳಕೆದಾರರನ್ನು ಸೀಮಿತ ಯೋಜನೆಗೆ ಬದಲಾಯಿಸಲು ಕೇಳಬಹುದು- ಪ್ರತಿ ಬಳಕೆದಾರರಿಗೆ 2000 MB ಸಂಗ್ರಹ ಸಾಮರ್ಥ್ಯ ಸಿಗಬಹುದು ಎಂದು ಅಂದಾಜಿಸಿದೆ. ಅಂದಹಾಗೆಯೇ, ವಾಬೇಟಾ ಇನ್ಫೋ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು ಅದು ವಾಟ್ಸ್​ಆ್ಯಪ್ ಮುಂಬರುವ ವೈಶಿಷ್ಟ್ಯಗಳು ಮತ್ತು ನವೀಕರಣಗಳನ್ನು ಟ್ರ್ಯಾಕ್ ಮಾಡುತ್ತದೆ.

  ವಾಟ್ಸ್​ಆ್ಯಪ್ ಚಾಟ್​​ ಬ್ಯಾಕಪ್​  ಸಮಸ್ಯೆ ನಿರ್ವಹಣೆಗಾಗಿ ಕೆಲಸ ಮಾಡುತ್ತಿದೆ. ಮಾತ್ರವಲ್ಲದೆ, ಅದಕ್ಕೆಂದೇ ಹೊಸ ವಿಭಾಗವೊಂದನ್ನು ಪರಿಚಯಿಸಲಿದೆ. ಅದರ ಮೂಲಕ ಬ್ಯಾಕಪ್​ ಗಾತ್ರವನ್ನು ನಿರ್ವಹಿಸಲು ಅನುಮತಿಸಲಿದೆ. ಮತ್ತೊಂದು ವಿಚಾರವೆಂದರೆ ವಾಟ್ಸ್​ಆ್ಯಪ್​ ಬ್ಯಾಕಪ್​ಗಾಗಿ ಗೂಗಲ್​ ಡ್ರೈವ್​ ಬೆಂಬಲ ಪಡೆದಿತ್ತು. ಆದರೆ ಒಂದು ವೇಳೆ ವಾಟ್ಸ್​ಆ್ಯಪ್​ ತನ್ನದೇ ಹೊಸ ವಿಭಾಗ ತೆರೆದರೆ ಈ ಸಮಸ್ಯೆ ನಿವಾರಣೆಯಾಗಲಿದೆ. ಜನಪ್ರಿಯ ಫ್ಲಾಟ್​ಫಾರ್ಮ್​ ಈ ವೈಶಿಷ್ಯವನ್ನು ಏಕೆ ಅಭಿವೃದ್ಧಿಪಡಿಸುತ್ತಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.

  ವಾಟ್ಸ್​ಆ್ಯಪ್ ಬ್ಯಾಕಪ್‌ಗಳು ಆರಂಭದಲ್ಲಿ ಗೂಗಲ್ ಡ್ರೈವ್ ಶೇಖರಣಾ ಕೋಟಾದ ಒಂದು ಭಾಗವಾಗಿತ್ತು. ಆದರೆ 2018 ರಲ್ಲಿ ಫೇಸ್‌ಬುಕ್ ಒಡೆತನದ ಪ್ಲಾಟ್‌ಫಾರ್ಮ್ ಗೂಗಲ್‌ನೊಂದಿಗೆ ಪಾಲುದಾರಿಕೆ ಹೊಂದಿದಾಗ ಗೂಗಲ್ ಡ್ರೈವ್‌ನಲ್ಲಿ ಶೇಖರಣಾ ಕೋಟಾದಿಂದ ಸ್ವತಂತ್ರವಾಗಿ ವಾಟ್ಸ್​ಆ್ಯಪ್ ಬ್ಯಾಕಪ್‌ಗಳನ್ನು ನೀಡುತ್ತ ಬಂದಿದೆ..

  Read Also: Phone Fraud: ನಿಮಗೆ ಅಮಿತಾಭ್‌ ಬಚ್ಚನ್ ಅವರಿಂದ ಕರೆ ಬಂದಿದೆಯೇ? ಎಚ್ಚರವಾಗಿರಿ! ಇದರಿಂದ ನೀವು ಮೋಸ ಹೋಗಬಹುದು!

  WhatsApp: ಎಚ್ಚರ! ವಾಟ್​​ಆ್ಯಪ್​ನಲ್ಲಿ​ ಹರಿದಾಡುವ ಈ ಲಿಂಕ್​ ಕ್ಲಿಕ್​ ಮಾಡದಿರಿ...

  Malware alert: ಎಚ್ಚರ! ವಾಟ್ಸ್​ಆ್ಯಪ್​ ಬಳಕೆದಾರರು ನೀವಾಗಿದ್ದರೆ ಕೆಲವು ನಕಲಿ ಸಂದೇಶಗಳು ಖಾತೆಗೆ ಬರಬಹುದು. ಅದರಲ್ಲೂ ಅಮುಲ್​ 75ನೇ ವಾರ್ಷಿಕೋತ್ಸವದ ಸಂದೇಶ ತಲುಪಿರುವ ಸಾಧ್ಯತೆಯಿದೆ. ಈ ಸಮೀಕ್ಷೆಯ ಭಾಗವಾಗಿಸಿದರೆ 6 ಸಾವಿರ ಬಹುಮಾನ ಅರ್ಹರಾಗುತ್ತೀರಿ ಎಂದು ಬರೆದಿರುವ ಸಂದೇಶದ ಮೊರೆ ಮೋಗುವ ಮುನ್ನ ಕೊಂಚ ಜಾಗರೂಕರಾಗಿರಿ. ಏಕೆಂದರೆ ಇದೊಂದು ನಕಲಿ ಸಂದೇಶವಾಗಿದ್ದು, ಸೈಬರ್ ಕಳ್ಳರು ಬಳಕೆದಾರರನ್ನು ಸಂಕಷ್ಟಕ್ಕೆ ದೂಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

  ಸೈಬರ್​ ಕಳ್ಳರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೆಲವು ದುಷ್ಕರ್ಮಿಗಳು 75ನೇ ವರ್ಷ ಪೂರೈಸಿದಕ್ಕೆ ಅಮುಲ್ ಆಚರಣೆಯನ್ನು ಗುರಿಯಾಗಿಸಿದ್ದಾರೆ. ಇದೊಂದು ಸ್ಕ್ಯಾಮ್​ ಆಗಿದ್ದು, ಬಳಕೆದಾರರನ್ನು ಸಂಕಷ್ಟಕ್ಕೆ ದೂಡುವ ಪಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಸೈಬರ್​ ಕಳ್ಳರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೆಲವು ದುಷ್ಕರ್ಮಿಗಳು 75ನೇ ವರ್ಷ ಪೂರೈಸಿದಕ್ಕೆ ಅಮುಲ್ ಆಚರಣೆಯನ್ನು ಗುರಿಯಾಗಿಸಿದ್ದಾರೆ. ಇದೊಂದು ಸ್ಕ್ಯಾಮ್​ ಆಗಿದ್ದು, ಬಳಕೆದಾರರನ್ನು ಸಂಕಷ್ಟಕ್ಕೆ ದೂಡುವ ಪಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ಸಂದೇಶದ ಬಗ್ಗೆ ಎಚ್ಚರಿಕೆಯ ಮಾಹಿತಿಗಳು ಹರಿದಾಡುತ್ತಿದೆ. ಅದರಲ್ಲೂ ಟ್ವೀಟ್​​ ಮಾಡುವ ಮೂಲಕ ವೈರಲ್​ ಮಾಡುತ್ತಿದ್ದಾರೆ. ಇದು 75ನೇ ವರ್ಷದ ಅಮುಲ್​ ವಾರ್ಷಿಕೋತ್ಸವದ ಸಮೀಕ್ಷೆಯಾಗಿದ್ದು, ಇದನ್ನು ಪೂರ್ಣಗೊಳಿಸಿದರೆ 6 ಸಾವಿರ ಬಹುಮಾನ ಪಡೆಯಬಹುದೆಂಬ ಆಸೆ ತೋರಿಸಿ ನಕಲಿ ವಾಟ್ಸ್​ಆ್ಯಪ್ ಲಿಂಕ್​ ಹರಿಯಬಿಡಲಾಗುತ್ತಿದೆ.

  ಬಹುತೇಕ ವಾಟ್ಸ್​ಆ್ಯಪ್ ಬಳಕೆದಾರರಿಗೆ ಇಂತಹದೊಂದು ಸಂದೇಶ ಬಂದಿದೆ. ಅನೇಕರು ಈ ಬಗ್ಗೆ ಸಂಶಯ ಹೊರಹಾಕಿದ್ದು, ನೇರವಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ತಮ್ಮ ಸಂಶಯ ಪೂರ್ಣ ಗೊಳಿಸುತ್ತಿದ್ದಾರೆ. ವಾಟ್ಸ್​ಆ್ಯಪ್​​ನಲ್ಲಿ ಹರಿದಾಡುತ್ತಿರುವ ಅಮುಲ್​ 75ನೇ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದ ಸಮೀಕ್ಷೆಯ ಸಂದೇಶ ನಿಜವೇ? ಈ ಸಮೀಕ್ಷೆಯಲ್ಲಿ 6 ಸಾವರ ಬಹುಮಾನ ನೀಡುತ್ತಿದ್ದಾರಾ? ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

  ಆದರೆ ಅಮುಲ್​ ಕಾರ್ಪೋರೇಶನ್​ ಮೀಟಿವೈ ಅಥವಾ ಟ್ಟಿಟ್ಟರ್​ ಖಾತೆ ಈ ಟ್ವೀಟ್​ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ದೇಶದಾದ್ಯಂತ ನವರಾತ್ರಿ ಹಬ್ಬದ ಸಡಗರ ಪ್ರಾರಂಭವಾಗಿದೆ. ಇದು ವಿವಿಧ ಹಿಂದೂ ದೇವತೆಗಳಿಗೆ ಅರ್ಪಿತವಾದ ಒಂಬತ್ತು ದಿನಗಳ ಹಬ್ಬವಾಗಿದೆ. ಅಕ್ಟೋಬರ್ 6 ರಿಂದ ಪ್ರಾರಂಭವಾಗಿ ಅಕ್ಟೋಬರ್​ 15ರ ದಸರಾ ಹಬ್ಬದೊಂದಿಗೆ ಮುಕ್ತಾಯವಾಗುತ್ತದೆ. ಹಬ್ಬದ ಸಮಯದಲ್ಲಿ ಜನರು ತಮ್ಮ ಹತ್ತಿರದ ಮತ್ತು ಆತ್ಮೀಯರಿಗೆ ಶುಭಾಶಯ ತಿಳಿಸಲು ಪ್ರಾರಂಭಿಸಿದ್ದಾರೆ. ವಾಟ್ಸ್​ಆ್ಯಪ್​ ಮೂಲಕವೂ ನವರಾತ್ರಿ ಹಬ್ಬದ ವಿಶೇಷ ಸ್ಟಿಕರ್​ ರಚಿಸಿ, ಡೌನ್​ಲೋಡ್​​ ಮಾಡಿ ಸ್ನೇಹಿತರಿಗೆ ಕಳುಹಿಸಿ ಶುಭಾಶಯ ಹೇಳಬಹುದಾಗಿದೆ. ಹಾಗಿದ್ದರೆ ವಾಟ್ಸ್​ಆ್ಯಪ್ ಮೂಲಕ ಸ್ಟಿಕ್ಕರ್​ ರಚಿಸುವುದು ಹೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
  Published by:Harshith AS
  First published: