ವಾಟ್ಸಪ್​ನಲ್ಲಿ ಗ್ರೂಪ್​ ವಿಡಿಯೋ ಕಾಲಿಂಗ್​ ಮಾಡುವುದು ಹೇಗೆ?


Updated:July 31, 2018, 3:42 PM IST
ವಾಟ್ಸಪ್​ನಲ್ಲಿ ಗ್ರೂಪ್​ ವಿಡಿಯೋ ಕಾಲಿಂಗ್​ ಮಾಡುವುದು ಹೇಗೆ?

Updated: July 31, 2018, 3:42 PM IST
ವಾಟ್ಸಪ್​ ತನ್ನ ಹೊಸ ಫೀಚರ್​ ಗ್ರೂಪ್​ ವಿಡಿಯೋ ಹಾಗು ಆಡಿಯೋ ಕಾಲಿಂಗ್​ ಅಪ್​ಡೇಟ್​ನ್ನು ಎಲ್ಲಾ ಐಒಎಸ್​ ಹಾಗು ಆ್ಯಂಡ್ರಾಯ್ಡ್​ ಬಳಕೇದಾರರಿಗೆ ಬಿಡುಗಡೆ ಮಾಡಿದೆ.

2018 ಎಫ್​8 ಸಮ್ಮೇಳನದಲ್ಲಿ ತನ್ನ ನೂತನ ಫೀಚರ್​ಗಳನ್ನು ಘೋಷಿಸಿದ್ದ ಫೇಸ್​ಬುಕ್​ ಗ್ರೂಪ್​ ವಿಡಿಯೋ ಕಾಲಿಂಗ್​ ಸೌಲಭ್ಯವನ್ನು ನೀಡುವುದಾಗು ಹೇಳಿಕೊಂಡಿತ್ತು. ಅದರಂತೆ ಈ ಹಿಂದೆ ಬಿಟಾ ವರ್ಷನ್​ನಲ್ಲಿ ಚಾಲನೆಗೆ ಬಂದಿದ್ದ ಗ್ರೂಪ್​ ವಿಡಿಯೋ ಕಾಲಿಂಗ್​ ಸೌಲಭ್ಯ ಮಂಗಳವಾರದಿಂದ ಎಲ್ಲರಿಗೂ ಲಭ್ಯವಿರುವಂತೆ ಸಂಸ್ಥೆ ನೂತನ ಅಪ್​ಡೇಟ್​ ನೀಡಿದೆ.

ಎರಡು ಲಕ್ಷಕೋಟಿಗೂ ಅಧಿಕ ಬಳಕೇದಾರರನ್ನು ಹೊಂದಿರುವ ವಾಟ್ಸಪ್​ ಈ ಫೀಚರ್​ನ್ನು ವ್ಯವಸ್ಥಿತವಾಗಿಯೇ ಅಳವಡಿಸಿದೆ ಎಂದರೆ ತಪ್ಪಾಗಲಾರದು, ಹೊಸ ಅಪ್​ಡೇಟ್​ನಲ್ಲಿ ಬಳಕೇದಾರರು ಏಕಕಾಲದಲ್ಲಿ ನಾಲ್ವರಿಗೆ ವಿಡಿಯೋ ಕಾಲ್​ ಮಾಡುವ ಸೌಲಭ್ಯ ನೀಡಿದೆ.

ಗ್ರೂಪ್​ ವಿಡಿಯೋ ಅಥವಾ ಆಡಿಯೋ ಕಾಲ್​ ಮಾಡುವುದು ಹೇಗೆ, ಇಲ್ಲಿದೆ ಸಂಪೂರ್ಣ ಮಾಹಿತಿ


  • ಮೊದಲು ನಿಮ್ಮ ವಾಟ್ಸ್​ಆ್ಯಪ್​​ನ್ನು ಪ್ಲೇಸ್ಟೋರ್​ ಅಥವಾ ಐ ಸ್ಟೋರ್​ನಲ್ಲಿ ಅಪ್​ಡೇಟ್​ ಮಾಡಿಕೊಳ್ಳಿ

  • ನಿಮ್ಮ ಸ್ನೇಹಿತರೊಬ್ಬರಿಗೆ ಮೊದಲು ವಾಯ್ಸ್​ ಕರೆ ಅಥವಾ ವಿಡಿಯೋ ಕರೆಯನ್ನು ಮಾಡಿ

  • ಬಲ ಬದಿಯ ಮೇಲಿನ ಭಾಗದಲ್ಲಿರುವ Add Participant ಆಯ್ಕೆಯನ್ನು ಒತ್ತಿ, ಬಳಿಕ
    ನಿಮಗೆ ಯಾರ ಜೊತೆ ಮಾತನಾಡಬೇಕೋ ಅವರನ್ನು ಆಯ್ಕೆ ಮಾಡಿಕೊಳ್ಳಿ,

  • ಒಂದು ಬಾರಿ ನೀವು ಕೇವಲ ಒಬ್ಬರನ್ನು ಮಾತ್ರಾ ಆಯ್ಕೆ ಮಾಡಿಕೊಳ್ಳಬಹುದು

  • ಒಟ್ಟಾರೆ ನೀವು ನಾಲ್ಕು ಮಂದಿಯೊಂದಿಗೆ ಚಾಟ್​ ಮಾಡಬಹುದಾಗಿದೆ.

  • ಕೇವಲ ಕರೆಯನ್ನು ಮಾಡಿದ ವ್ಯಕ್ತಿ ಮಾತ್ರ ಮತ್ತೋರ್ವ ವ್ಯಕ್ತಿಯನ್ನು ಆ್ಯಡ್​ ಮಾಡಬಹುದು, ಬೇರೆ ವ್ಯಕ್ತಿಗಳಿಗೆ ಈ ಆಯ್ಕೆ ಇರುವುದಿಲ್ಲ.

First published:July 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ