HOME » NEWS » Tech » WHATSAPP FEATURE UPDATE MUTE WHATSAPP CHATS FOREVER NEW FEATURE INTRODUCED RMD

Whatsapp New Features: ಗ್ರೂಪ್​ಗಳಿಂದ ಶಾಶ್ವತವಾಗಿ ಮುಕ್ತಿ ಹೊಂದಲು ಹೊಸ ಫೀಚರ್​ ಪರಿಚಯಿಸಿದ ವಾಟ್ಸ್​ಆ್ಯಪ್​

ಇಷ್ಟು ದಿನ ಚ್ಯಾಟ್​ಗಳನ್ನು 8 ಗಂಟೆ, ಒಂದು ವಾರ ಹಾಗೂ ಒಂದು ವರ್ಷಗಳ ಕಾಲ ಮ್ಯೂಟ್​ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಹೊಸ ಫೀಚರ್​​ನಲ್ಲಿ ಚ್ಯಾಟ್​ಅನ್ನು ಶಾಶ್ವತವಾಗಿ ಮ್ಯೂಟ್​ ಮಾಡಲು ಅವಕಾಶ ಇದೆ.

news18-kannada
Updated:October 23, 2020, 1:21 PM IST
Whatsapp New Features: ಗ್ರೂಪ್​ಗಳಿಂದ ಶಾಶ್ವತವಾಗಿ ಮುಕ್ತಿ ಹೊಂದಲು ಹೊಸ ಫೀಚರ್​ ಪರಿಚಯಿಸಿದ ವಾಟ್ಸ್​ಆ್ಯಪ್​
ವಾಟ್ಸ್ಆ್ಯಪ್
  • Share this:
ಕೆಲವೊಮ್ಮೆ ನಿಮಗೆ ಅವಶ್ಯಕತೆ ಇಲ್ಲದಿದ್ದರೂ ಕೆಲ ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಆಗ ನೀವು ಮ್ಯೂಟ್​ ಆಯ್ಕೆಯನ್ನು ಕ್ಲಿಕ್​ ಮಾಡಿ ಕಿರಿಕಿರಿ ಉಂಟುಮಾಡುತ್ತಿರುವ ಗ್ರೂಪ್​ ಅಥವಾ ವೈಯಕ್ತಿಕ ಚ್ಯಾಟ್ ಮ್ಯೂಟ್​ ಮಾಡುತ್ತೀರಾ. ಆದರೆ ಇದು ತಾತ್ಕಾಲಿಕ ಮಾತ್ರ. ಈಗ ವಾಟ್ಸ್​ಆ್ಯಪ್​ ಹೊಸ ಫೀಚರ್​ ಒಂದನ್ನು ಪರಿಚಯಿಸಿದ್ದು, ನೀವು ಈ ರೀತಿ ಅಸಂಬಂಧಿತ ಚ್ಯಾಟ್​ಗಳಿಂದ ಶಾಶ್ವತವಾಗಿ ಮುಕ್ತಿ ಹೊಂದಬಹುದಾಗಿದೆ.

ಇಷ್ಟು ದಿನ ಚ್ಯಾಟ್​ಗಳನ್ನು 8 ಗಂಟೆ, ಒಂದು ವಾರ ಹಾಗೂ ಒಂದು ವರ್ಷಗಳ ಕಾಲ ಮ್ಯೂಟ್​ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಹೊಸ ಫೀಚರ್​​ನಲ್ಲಿ ಚ್ಯಾಟ್​ಅನ್ನು ಶಾಶ್ವತವಾಗಿ ಮ್ಯೂಟ್​ ಮಾಡಲು ಅವಕಾಶ ಇದೆ. ಈ ಫೀಚರ್ ಆ್ಯಂಡ್ರಾಯ್ಡ್​, ಐಒಎಸ್​ ಹಾಗೂ ವೆಬ್​ ವರ್ಷನ್​ನಲ್ಲಿ ಲಭ್ಯವಿದೆ.


ಇನ್ನು, ಶೀಘ್ರವೇ ವೆಕೇಶನ್​ ಮೂಡ ಆಯ್ಕೆ ಕೂಡ ಸಿಗಲಿದೆ. ಯಾವುದಾದರೂ ಚ್ಯಾಟ್​ಅನ್ನು ವಾಟ್ಸ್​​ಆ್ಯಪ್​​ನಲ್ಲಿ ನೀವು ಆರ್ಕೈವ್​ ಮಾಡಿದರೆ ಅದು ತಾತ್ಕಾಲಿಕವಾಗಿ ಹೈಡ್​ ಆಗುತ್ತಿತ್ತು. ಹೊಸ ಸಂದೇಶ ಬಂದ ಕೂಡಲೇ ಈ ಚ್ಯಾಟ್​ ಮತ್ತೆ ಕಾಣುತ್ತಿತ್ತು. ಆದರೆ, ಹೊಸ ಅಪ್ಡೇಟ್​ನಲ್ಲಿ ಈ ಚ್ಯಾಟ್​ಅನ್ನು ಶಾಶ್ವತವಾಗಿ ಆರ್ಕೈವ್​ ಮಾಡಬಹುದಾಗಿದೆ.
Published by: Rajesh Duggumane
First published: October 23, 2020, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories