HOME » NEWS » Tech » WHATSAPP COULD SOON ADD MULTI DEVICE SUPPORT DISAPPEARING MODE AND VIEW ONCE STG LG

WhatsApp ಹೊಸ ಫೀಚರ್; ನಿಮ್ಮ ಮೆಸೇಜ್​ನ್ನು ಅವರು ಓದಿದ ಕೂಡ್ಲೇ ಅದು ಮಾಯವಾಗಿಬಿಡುತ್ತೆ !

WhatsApp upcoming new features: ಕಳೆದ ವರ್ಷ ಏಳು ದಿನಗಳ ಬಳಿಕ ಮಾಯವಾಗುವ ಕಾಲಾವಕಾಶದ ಫೀಚರ್ ಅನ್ನು ವಾಟ್ಸ್ಆ್ಯಪ್‌ ತನ್ನ ಬಳಕೆದಾರರಿಗೆ ಪರಿಚಯಿಸಿತ್ತು. ಇದೀಗ ತನ್ನ ಸಾಮರ್ಥ್ಯ ವಿಸ್ತರಿಸುತ್ತಿದ್ದು, ಡಿಸಪಿಯರಿಂಗ್ ಮೋಡ್ ಆಯ್ಕೆಯನ್ನು ಮಾಡುವ ಅವಕಾಶವನ್ನು ಬಳಕೆದಾರರಿಗೆ ಪರಿಚಯಿಸಲಿದೆ.

news18-kannada
Updated:June 4, 2021, 2:44 PM IST
WhatsApp ಹೊಸ ಫೀಚರ್; ನಿಮ್ಮ ಮೆಸೇಜ್​ನ್ನು ಅವರು ಓದಿದ ಕೂಡ್ಲೇ ಅದು ಮಾಯವಾಗಿಬಿಡುತ್ತೆ !
WhatsApp
  • Share this:

ಇನ್ನೇನು ವಾಟ್ಸ್ಆ್ಯಪ್‌ ಹೊಸ ಫೀಚರ್ ಗಳನ್ನು ಹೊತ್ತು ತರಲಿದೆ. ಸಂಸ್ಥೆಯು ಬಹು ಸಾಧನಗಳನ್ನು ಬೆಂಬಲಿಸುವುದನ್ನು ಸೇರ್ಪಡೆ ಮಾಡಿಕೊಳ್ಳಲಿದೆ. ಜತೆಗೆ ಕೆಲವು ಸಂದೇಶಗಳಿಗೆ ಹೊಸ ಡಿಸಪಿಯರಿಂಗ್ ಮೋಡ್ ಮತ್ತು ಒಂದು ಸಲ ಮಾತ್ರ ವೀಕ್ಷಣೆ ಮಾಡುವ ಆಯ್ಕೆಯನ್ನು ನೀಡಲಿದೆ. ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನಪ್ರಿಯವಾಗಿರುವ ವಾಟ್ಸ್ ಆಪ್, ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹಲವು ಡಿವೈಸ್​​​ಗಳಿಗೆ ಏಕಕಾಲಕ್ಕೆ ಸಪೋರ್ಟ್ ಮಾಡುವಂಥ ವ್ಯವಸ್ಥೆಯನ್ನು ಕಲ್ಪಿಸಿಕೊಡಲಿದೆ.


ಮೇಸೇಜಿಂಗ್ ಆ್ಯಪ್ನಲ್ಲಿ ಬರುವ ಹೊಸ ಫೀಚರ್ಗಳ ಮಾಹಿತಿ ಪ್ರಕಟಿಸುವುದಕ್ಕೆ ಖ್ಯಾತವಾದWABetaInfoಗೆ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಹಾಗೂ ವಾಟ್ಸ್ಆ್ಯಪ್‌ ಮುಖ್ಯಸ್ಥ ವಿಲ್ ಕ್ಯಾಥ್‍ಕಾರ್ಟ್ ಅವರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ ಒಂದು ಸಲ ಮಾತ್ರ ನೋಡಬಹುದಾದ ‘ವ್ಯೂ ಒನ್ಸ್’ ಆಯ್ಕೆಯೊಂದಿಗೆ ಸಂದೇಶ ನೋಡಿದ ಮೇಲೆ ಮಾಯವಾಗುವ ‘ಡಿಸಪಿಯರಿಂಗ್ ಮೋಡ್’’ ಕೂಡ ಹೊಸ ಫೀಚರ್ ಆಗಿ ವಾಟ್ಸ್ಆ್ಯಪ್‌ಗೆ ಸೇರ್ಪಡೆಗೊಳ್ಳಲಿದೆ ಎಂದು ಮಾರ್ಕ್ ಜುಕರ್‌ಬರ್ಗ್‌ ಖಚಿತಪಡಿಸಿದ್ದಾರೆ. ಜತೆಗೆ ಈ ಫೀಚರ್ ಗಳು ಒಂದು ಸಲ ಎಲ್ಲರಿಗೂ ಲಭ್ಯವಾದಾಗ ಹೇಗೆ ಕಾಣಿಸಿಕೊಳ್ಳಲಿದೆ ಎಂಬುದರ ಸ್ಕ್ರೀನ್ ಶಾಟ್ ಅನ್ನೂ ಜುಕರ್‌ಬರ್ಗ್‌ ಶೇರ್ ಮಾಡಿದ್ದಾರೆ.



4 ಸಾಧನಗಳನ್ನು ಬೆಂಬಲಿಸುವ ಮಲ್ಟಿ ಡಿವೈಸ್ ಸಪೋರ್ಟ್ :


ವಾಟ್ಸ್ಆ್ಯಪ್‌ನ ಪ್ರೈವೇಟ್ ಬೀಟಾ ಆವೃತ್ತಿಯಲ್ಲಿ ಈ ಮಲ್ಟಿ ಡಿವೈಸ್ ಸಪೋರ್ಟ್ ವ್ಯವಸ್ಥೆಯು ಅಲ್ಲಲ್ಲಿ ಕಾಣಿಸಿಕೊಂಡಿದ್ದರೂ, ಯಾವಾಗ ಸಂಪೂರ್ಣವಾಗಿ ಬಳಕೆದಾರರಿಗೆ ಇದು ಸಿಗಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಏಕೆಂದರೆ ಇದರ ಬಿಡುಗಡೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ಆದರೆ ಈ ಫೀಚರ್ ಗಳು ಬಹಳ ಬೇಗ ಲಭ್ಯವಾಗಲಿವೆ ಎಂದು ಜುಕೆರ್ ಬರ್ಗ್,WABetaInfoಗೆ ತಿಳಿಸಿದ್ದಾರೆ.


ಇದನ್ನೂ ಓದಿ:Rohini Sindhuri vs Shlipa Nag: ಲೆಕ್ಕ ಕೇಳಿದ್ದಕ್ಕೆ ಹೀಗೆ ಮಾಡ್ತಿದಾರೆ; ಶಿಲ್ಪಾನಾಗ್​ ಆರೋಪಕ್ಕೆ ರೋಹಿಣಿ ಸಿಂಧೂರಿ ಕಿಡಿ

“ನಿಮ್ಮ ಫೋನ್ ಬ್ಯಾಟರಿ ಕ್ಷೀಣವಾಗುತ್ತಿರುವ ಸಂದರ್ಭದಲ್ಲೂ ನಿಮ್ಮ ಎಲ್ಲ ಕಂಟೆಂಟ್ ಅನ್ನು ಎಲ್ಲ ಸಾಧನಗಳೊಂದಿಗೆ ಸಿಂಕ್ ಮಾಡುವುದು ಅತ್ಯಂತ ದೊಡ್ಡ ಸವಾಲಿನ ಕೆಲಸವಾಗಿದೆ. ಆದರೆ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಕಾಯುತ್ತಿದ್ದೇವೆ” ಎಂದು ಜುಕರ್‌ಬರ್ಗ್‌ ಹೇಳಿದ್ದಾರೆ.


ಇದಕ್ಕೂ ಮುನ್ನ ವಾಟ್ಸ್ಆ್ಯಪ್‌ ಮುಖ್ಯಸ್ಥ ವಿಲ್ ಕ್ಯಾಥ್‍ಕಾರ್ಟ್ ಅವರು, ವಾಟ್ಸ್ಆ್ಯಪ್‌ನ ಹೊಸ ಮಲ್ಟಿ ಡಿವೈಸ್ ಫೀಚರ್ ಮೂಲಕ ನಾಲ್ಕು ಸಾಧನಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದರು.

ಕೆಲವು ಸಂದೇಶಗಳಿಗೆ ಡಿಸಪಿಯರಿಂಗ್ ಮೋಡ್ , ವ್ಯೂ ಒನ್ಸ್ ಆಯ್ಕೆ:


ಕಳೆದ ವರ್ಷ ಏಳು ದಿನಗಳ ಬಳಿಕ ಮಾಯವಾಗುವ ಕಾಲಾವಕಾಶದ ಫೀಚರ್ ಅನ್ನು ವಾಟ್ಸ್ಆ್ಯಪ್‌ ತನ್ನ ಬಳಕೆದಾರರಿಗೆ ಪರಿಚಯಿಸಿತ್ತು. ಇದೀಗ ತನ್ನ ಸಾಮರ್ಥ್ಯ ವಿಸ್ತರಿಸುತ್ತಿದ್ದು, ಡಿಸಪಿಯರಿಂಗ್ ಮೋಡ್ ಆಯ್ಕೆಯನ್ನು ಮಾಡುವ ಅವಕಾಶವನ್ನು ಬಳಕೆದಾರರಿಗೆ ಪರಿಚಯಿಸಲಿದೆ.


ಒಂದು ಸಲ ಬಳಕೆದಾರ ಡಿಸಪಿಯರಿಂಗ್ ಮೋಡ್ ಆನ್ ಮಾಡಿದರೆ, ವಾಟ್ಸ್ಆ್ಯಪ್‌ ಥ್ರೆಡ್ ಗಳು ಮಾಯವಾಗುವ ಥ್ರೆಡ್ಗಳಾಗುತ್ತದೆ. ನಿರ್ದಿಷ್ಟ ಅವಧಿಗೆ ಅಳವಡಿಸಿದ್ದರೆ, ಆ ಸಮಯದಲ್ಲಿ ಅವರ ಚಾಟ್ಗಳು ಮಾಯವಾಗಲಿವೆ.


ಇನ್ನೊಂದೆಡೆ ವ್ಯೂ ಒನ್ಸ್ ಆಯ್ಕೆಯ ಮೂಲಕ ಫೋಟೋ ಹಾಗೂ ವಿಡಿಯೋಗಳನ್ನು ಒಂದು ಬಾರಿ ಮಾತ್ರ ಕಾಣಿಸಿಕೊಳ್ಳುವಂತೆ ಶೇರ್ ಮಾಡಬಹುದಾಗಿದೆ. ಫೋಟೋ ಹಾಗೂ ವಿಡಿಯೋವನ್ನು ವಾಟ್ಸ್ಆ್ಯಪ್‌ನಲ್ಲಿ ಸ್ವೀಕರಿಸುವ ಬಳಕೆದಾರನು, ಅದನ್ನು ಒಮ್ಮೆ ನೋಡಿದ ನಂತರ ಅದಾಗಿಯೇ ಚಾಟ್ನಿಂದ ಮಾಯವಾಗಲಿದೆ.



Youtube Video

ಈ ಎಲ್ಲ ಹೊಸ ಫೀಚರ್ ಗಳು ಮುಂದಿನ ಒಂದೆರಡು ತಿಂಗಳುಗಳಲ್ಲಿ ವಾಟ್ಸ್ಆ್ಯಪ್‌ ಬಳಕೆದಾರರಿಗೆ ಲಭ್ಯವಾಗಬಹುದು ಎಂದು ವರದಿ ಹೇಳಿದೆ.

Published by: Latha CG
First published: June 4, 2021, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories