ಫೇಕ್​ ಮೆಸೇಜ್​​ಗಳಿಗೆ ಬಿತ್ತು ಕಡಿವಾಣ; ಸುಳ್ಳು ಸುದ್ದಿ ಕಳುಹಿಸಿದವರು ಯಾರೆಂದು ತಿಳಿಯಬಹುದು

ಫೇಕ್​ ಸುದ್ದಿಗಳಿಂದಾಗುವ ಅನಾಹುತವನನ್ನು ತಪ್ಪಿಸಲು ಸಲುವಾಗಿ ಐಐಟಿ ಮದ್ರಾಸ್​ ಪ್ರೊಫೆಸರ್​​ ಹಾಗೂ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರು ಆಗಿರುವ ವಿ.ಕಾಮಕೋಟಿ ಅವರು ಮದ್ರಾಸ್​ ಹೈಕೋರ್ಟ್​ಗೆ ವರದಿಯೊಂದನ್ನು ಸಲ್ಲಿಸಿದ್ದಾರೆ.

news18
Updated:August 8, 2019, 9:52 PM IST
ಫೇಕ್​ ಮೆಸೇಜ್​​ಗಳಿಗೆ ಬಿತ್ತು ಕಡಿವಾಣ; ಸುಳ್ಳು ಸುದ್ದಿ ಕಳುಹಿಸಿದವರು ಯಾರೆಂದು ತಿಳಿಯಬಹುದು
ವಾಟ್ಸ್​ಆ್ಯಪ್
  • News18
  • Last Updated: August 8, 2019, 9:52 PM IST
  • Share this:
ವಾಟ್ಸ್​ಆ್ಯಪ್​ನಲ್ಲಿ ಹರಡುತ್ತಿರುವ ಫೇಕ್​ ನ್ಯೂಸ್​ನಿಂದ ದೇಶದಲ್ಲಿ ಸಾಕಷ್ಟು ತೊಂದರೆಗಲಾಗುತ್ತಿದೆ. ಇದಕ್ಕಾಗಿ ವ್ಯಾಟ್ಸ್​ ಆ್ಯಪ್​ ಸಂಸ್ಥೆ ಫಾರ್ವಡ್​ ಮೆಸೇಜ್​ಗಳಿಗೆ ನಿರ್ದಿಷ್ಟ ಮಿತಿಯನ್ನು ನಿಗದಿ ಪಡಿಸಿತ್ತು. ಆದರೂ ಫೇಸ್​ ಮೆಸೇಜ್​​​​ಗಳನ್ನು ಕಳುಹಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ವಾಟ್ಸ್ಆ್ಯಪ್​ನಲ್ಲಿ ಬರುವ ಫೇಕ್​ ಮೆಸೇಜ್​ ಎಲ್ಲಿಂದ ಬಂತೆಂಬುದನ್ನು ಕಂಡು ಹಿಡಿಯಬಹುದಂತೆ.

ಫೇಕ್​ ಸುದ್ದಿಗಳಿಂದಾಗುವ ಅನಾಹುತವನನ್ನು ತಪ್ಪಿಸಲು ಸಲುವಾಗಿ ಐಐಟಿ ಮದ್ರಾಸ್​ ಪ್ರೊಫೆಸರ್​​ ಹಾಗೂ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಸದಸ್ಯರು ಆಗಿರುವ ವಿ.ಕಾಮಕೋಟಿ ಅವರು ಮದ್ರಾಸ್​ ಹೈಕೋರ್ಟ್​ಗೆ ವರದಿಯೊಂದನ್ನು ಸಲ್ಲಿಸಿದ್ದಾರೆ. ವರದಿಯಲ್ಲಿ ಫಾರ್ವಡ್​ ಮೆಸೇಜ್​ಗಳನ್ನು ಯಾರು ಮೊದಲು ಕಳುಹಿಸುತ್ತಾರೆ ಅನ್ನೋದನ್ನು ತಿಳಿಯಬಹುದು ಎಂದು ಹೇಳಿದ್ದಾರೆ. ಅಮೆರಿಕನ್​ ಮೆಸೆಂಜಿಂಗ್​ ಫ್ಲಾಟ್​​ಫಾರ್ಮ್​ ಬಳಸಿಕೊಂಡಂತೆ ಮೆಸೇಜ್​ ಮೂಲವನ್ನು ಕಂಡುಹಿಡಿಯಲು ಎರಡು ಆಯ್ಕೆಗಳಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸ್ಪೀಕ್​​ ಔಟ್​ ಚಾಲೆಂಜ್​ ಮಾಡಿದ ಧವನ್​, ಶ್ರೇಯಸ್ಸ್​ ವಿಡಿಯೋ ವೈರಲ್​!

ಆಯ್ಕೆ-1

ಮೆಸೇಜ್​ ಮೊದಲು ಟೈಪ್​ ಮಾಡಿದವರ ಸಂಪೂರ್ಣ ಮಾಹಿತಿ, ಆ ಮೆಸೇಜ್​ ಜೊತೆ ನಮೋದನೆಯಾಗಬೇಕು. ಹೀಗಾದಲ್ಲಿ ವಾಟ್ಸ್​ ಆ್ಯಪ್​ ಮೆಸೇಜ್​ ಫಾರ್ವಡ್​ ಮಾಡುವವರು ಹಾಗೂ ರಿಸೀವ್​ ಮಾಡುವವರು ಯಾರೆಂದು  ತಿಳಿಯಬಹುದು ಎಂದು ಹೇಳಿದ್ದಾರೆ.

ಆಯ್ಕೆ-2

ಮೊದಲ ಮೆಸೇಜ್​ ಕಳುಹಿಸಿದವರ ಮಾಹಿತಿ ಆಯಾ ಮೆಸೇಜ್​​ಗಳ ಜೊತೆ ಲಭ್ಯವಿರುತ್ತದೆ. ಪ್ರತಿ ಬಾರಿ ಮೆಸೇಜ್​ ಫಾರ್ವಡ್​ ಮಾಡಿದಾಗಲೂ ಆ ಮೆಸೇಜ್​ ಕೂಡ ಫಾರ್ವಡ್​ ಆಗುತ್ತದೆ. ಮೊದಲು ಮೆಸೇಜ್​ ಕಳುಹಿಸಿದವನ ಮಾಹಿತಿ ಎನ್​ಕ್ರಿಪ್ಟ್​ ಆಗಿರುವುದರಿಂದ ಇತರರಿಗೆ ಯಾರು ಅಂತ ನೋಡಲು ಸಾಧ್ಯವಾಗುವುದಿಲ್ಲ. ಆದರೆ ವಾಟ್ಸ್​ ಆ್ಯಪ್​ ಕಂಪೆನಿಯ ಲಾ ಆಫ್​ ಎನ್​ಫೋರ್ಸ್​ಮೆಂಟ್​ ವಿಭಾಗ ಈ ಮಾಹಿತಿಯನ್ನು ಬಹಿರಂಗ ಪಡಿಸಬಹುದು ಎಂದು ತಿಳಿಸಿದ್ದಾರೆ.
Loading...

ಇನ್ನು ಮೆಸೇಜ್​ ಅನ್ನು ಕಾಪಿ ಪೇಸ್ಟ್​ ಮಾಡಿ ಬೇರೆಯವರಿಗೆ ಕಳುಹಿಸಿದರೂ , ಕಾಪಿ ಪೇಸ್ಟ್​ ಮಾಡಿದವರ ಮಾಹಿತಿ ಆಯಾ ಮೆಸೇಜ್​ಗಳ ಮೇಲೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. ವಾಟ್ಸ್​ ಆ್ಯಪ್​ ಡೌನ್​ಲೋಡ್​ ಮಾಡುವಾಗ ಬಳಕೆದಾರರನ ಮಾಹಿತಿ, ಹಾರ್ಡ್​ವೇರ್​ ಆಪರೇಟಿಂಗ್​ ಸಿಸ್ಟಮ್​, ಬ್ರೌಸರ್ ಮಾಹಿತಿ, ಐಪಿ ವಿಳಾಸ, ಮೊಬೈಲ್​ ನೆಟ್​ವರ್ಕ್​ ಹಾಗೂ ಫೋನ್​ ನಂಬರ್​ ಮಾಹಿತಿಗಳು ವಾಟ್ಸ್​ ಆ್ಯಪ್​ ಸಂಸ್ಥೆಗೆ ತಿಳಿಯುತ್ತದೆ ಎಂದು ವಿ. ಕಾಮಕೋಟಿ ಅವರು ಮದ್ರಾಸ್​ ಹೈಕೋರ್ಟಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.
First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...