ಎಚ್ಚರ..! ನಿಮ್ಮ ವಾಟ್ಸ್​ಆ್ಯಪ್​ ಹೀಗೂ ಹ್ಯಾಕ್​ ಆಗಬಹುದು

ಚೆಕ್​​ ಪಾಯಿಂಟ್​ ನಡೆಸಿದ ಸಂಶೋಧನೆಯಿಂದ ಬಳಕೆದಾರರ ವಾಟ್ಸ್​ಆ್ಯಪ್​ ಅನ್ನು ಮೂರು ವಿಧಗಳಲ್ಲಿ ಹ್ಯಾಕ್​ ಮಾಡಬಹುದು ಎಂದು ಹೇಳಿದೆ. ಅಂತೆಯೇ, ಗ್ರೂಪ್​ ಕಮ್ಯುನಿಕೇಷನ್​ನಲ್ಲಿರುವ ಕೋಟ್​ ಟೆಕ್ಸ್ಟ್​ ಬಳಸಿ, ಮೆಸೇಜ್​ ಕಳುಹಿಸಿದಾತನ ಹೆಸರು ಹಾಗೂ ಮೆಸೇಜ್​ ಅನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ

news18
Updated:August 10, 2019, 2:09 PM IST
ಎಚ್ಚರ..! ನಿಮ್ಮ ವಾಟ್ಸ್​ಆ್ಯಪ್​ ಹೀಗೂ ಹ್ಯಾಕ್​ ಆಗಬಹುದು
ವಾಟ್ಸ್​ಆ್ಯಪ್​
  • News18
  • Last Updated: August 10, 2019, 2:09 PM IST
  • Share this:
ಸಾಕಷ್ಟು ಜನರು ಬಳಕೆ ಮಾಡುತ್ತಿರುವ ವಾಟ್ಸ್​ಆ್ಯಪ್​ ಅನ್ನು ಸುಲಭವಾಗಿ ಹ್ಯಾಕ್​ ಮಾಡಬಹುದು ಹಾಗೂ ಸಂದೇಶವನ್ನು ಬದಲಾಯಿಸಬಹುದು ಎಂಬ ಸಂಗತಿಯನ್ನು ಸಂಶೋಧನೆಯೊಂದು ಬಹಿರಂಗ ಪಡಿಸಿದೆ.

ವಾಟ್ಸ್​ಆ್ಯಪ್​ ಸುರಕ್ಷತೆ ಹಾಗೂ ಸೈಬರ್​ ಭದ್ರತೆ ಕುರಿತು  ಚೆಕ್​ ಪಾಯಿಂಟ್​ ರಿಸರ್ಚ್​ ಸಂಸ್ಥೆ ಸಂಶೋಧನೆ ನಡೆಸಿ, ವಾಟ್ಸ್​​ಆ್ಯಪ್​ನಲ್ಲಿರುವ ಭದ್ರತಾ ಸಮಸ್ಯೆಯ ಕುರಿತು ಎಚ್ಚರಿಕೆ ನೀಡಿದೆ. ವಾಟ್ಸ್​​ಆ್ಯಪ್​ ಗ್ರೂಪ್​ ಕಮ್ಯುನಿಕೇಷನ್​ ಸಂದರ್ಭದಲ್ಲಿ ಹ್ಯಾಕರುಗಳು ​ ಭದ್ರತಾ ವೈಫಲ್ಯವನ್ನು ಬಳಸಿಕೊಂಡು, ಮೆಸೇಜ್​ ಹ್ಯಾಕ್​ ಹಾಗೂ ವಾಯ್ಸ್​ ಕರೆಗಳನ್ನು ಹ್ಯಾಕ್​ ಎಂದು ತಿಳಿಸಿದೆ.

ಚೆಕ್​​ ಪಾಯಿಂಟ್​ ನಡೆಸಿದ ಸಂಶೋಧನೆಯಿಂದ ಬಳಕೆದಾರರ ವಾಟ್ಸ್​ಆ್ಯಪ್​ ಅನ್ನು ಮೂರು ವಿಧಗಳಲ್ಲಿ ಹ್ಯಾಕ್​ ಮಾಡಬಹುದು ಎಂದು ಹೇಳಿದೆ. ಅಂತೆಯೇ, ಗ್ರೂಪ್​ ಕಮ್ಯುನಿಕೇಷನ್​ನಲ್ಲಿರುವ ಕೋಟ್​ ಟೆಕ್ಸ್ಟ್​ ಬಳಸಿ, ಮೆಸೇಜ್​ ಕಳುಹಿಸಿದಾತನ ಹೆಸರು ಹಾಗೂ ಮೆಸೇಜ್​ ಅನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ

ಕೋಟೆಡ್​ ರಿಪ್ಲೈ ಅನ್ನು ಬಳಸಿ ಗ್ರೂಪಿನಲ್ಲಿ ಮೆಸೇಜ್​ ಬದಲಾಯಿಸಿಕೊಳ್ಳಬಹುದು. ಅಂತೆಯೆ, ಖಾಸಗಿ ಸಂದೇಶವನ್ನು ಹ್ಯಾಕ್​ ಮಾಡಿ, ಇನ್ನೊಂದು ಗ್ರೂಪ್​ಗೆ ಕಳುಹಿಸಬಹುದಾಗಿದೆ. ಎಂದು ಚೆಕ್​ ಪಾಯಿಂಟ್​ ಸಂಶೋಧನೆಯ ಮೂಲಕ ತಿಳಿಸಿದೆ.
First published: August 10, 2019, 11:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading