HOME » NEWS » Tech » WHATSAPP BUSINESS ADD NEW FEATURE THAT ALLOWS USERS TO MAKE PURCHASES WITHIN CHAT WINDOW HG

WhatsApp Business; ಹೊಸ ಫೀಚರ್ ಪರಿಚಯಿಸಲು ಮುಂದಾದ ವಾಟ್ಸ್ಆ್ಯಪ್ ಬ್ಯುಸಿನೆಸ್!; ಏನದು?

WhatsApp: ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​ ಹೊಸ ಫೀಚರ್​ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಲೇ ಬಂದಿದೆ. ಸದ್ಯದಲ್ಲೇ ವಾಟ್ಸ್​ಆ್ಯಪ್​ ವೆಬ್​ ಬಳಕೆದಾರರಿಗೆ ವಿಡಿಯೋ, ಮತ್ತು ಧ್ವನಿ ಕರೆ ಮಾಡುವ ಫೀಚರ್​ ನೀಡಲಿದೆ. ಅದರಂತೆ ವಾಟ್ಸ್​ಆ್ಯಪ್​ ಬ್ಯುಸಿನೆಸ್​ ಆ್ಯಪ್​ನಲ್ಲಿ ಚಾಟ್​​​ ವಿಂಡೋ ಫೀಚರ್​ ಅನ್ನು ಪರಿಚಯಿಸಲು ಚಿಂತಿಸಿದೆ.

news18-kannada
Updated:October 23, 2020, 2:20 PM IST
WhatsApp Business; ಹೊಸ ಫೀಚರ್ ಪರಿಚಯಿಸಲು ಮುಂದಾದ ವಾಟ್ಸ್ಆ್ಯಪ್ ಬ್ಯುಸಿನೆಸ್!; ಏನದು?
ವಾಟ್ಸ್ಆ್ಯಪ್ ಬ್ಯುಸಿನೆಸ್
  • Share this:
ಜನಪ್ರಿಯ ವಾಟ್ಸ್​ಆ್ಯಪ್​ ಇದೀಗ ಗ್ರೂಪ್​ ಸಂದೇಶಗಳ ಕಿರಿಕಿರಿಯಿಂದ ಪಾರಾಗಲು ಮ್ಯೂಟ್ ಆಲ್ವೇಸ್​​ ಎಂಬ  ಹೊಸ ಫೀಚರ್​ ಪರಿಚಯಿಸಿದೆ. ಸಾಕಷ್ಟು ಜನರಿಗೆ ಈ ನೂತನ ಫೀಚರ್​ ಬಳಕೆಗೆ ಬರಲಿದೆ. ಅದರಂತೆ ಇದೀಗ ವಾಟ್ಸ್​ಆ್ಯಪ್​ ಬ್ಯುಸಿನೆಸ್​ ಆ್ಯಪ್​ನಲ್ಲೂ ಚಾಟ್​ ವಿಂಡೋ ಎಂಬ ಹೊಸ ಫೀಚರ್​ ಅನ್ನು ನೀಡಲು ಮುಂದಾಗಿದ್ದು, ವ್ಯವಹಾರ ಮಾಡುವ ಗ್ರಾಹಕರಿಗೆ ಇದರಿಂದ ಪ್ರಯೋಜನ ಸಿಗಲಿದೆ.

ಅಂದಹಾಗೆ ವಾಟ್ಸ್​ಆ್ಯಪ್​ ಬ್ಯುಸಿನೆಸ್​ನಲ್ಲಿ ವಸ್ತುಗಳನ್ನು ನೇರವಾಗಿ ಖರೀದಿಸಲು ಮತ್ತು ಮಾರಲು ಅನುಗುಣವಾಗುವಂತೆ ಚಾಟ್​​ ವಿಂಡೋ ಎಂಬ ಆಯ್ಕೆಯನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಗ್ರಾಹಕ ಈ ಫೀಚರ್​ ಬಳಸುವ ಮೂಲಕ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ, ಸಂದೇಶ ಕಳುಹಿಸುವ ಮೂಲಕ ವಸ್ತುಗಳ ಬಗ್ಗೆ ವಿಚಾರಿಸಿ ನಂತರ ಬೇಕೆಂದರೆ ಖರೀದಿಸಬಹುದಾಗಿದೆ.

ಫೇಸ್​ಬುಕ್​ ಒಡೆತನದ ವಾಟ್ಸ್​ಆ್ಯಪ್​ ಹೊಸ ಫೀಚರ್​ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಲೇ ಬಂದಿದೆ. ಸದ್ಯದಲ್ಲೇ ವಾಟ್ಸ್​ಆ್ಯಪ್​ ವೆಬ್​ ಬಳಕೆದಾರರಿಗೆ ವಿಡಿಯೋ, ಮತ್ತು ಧ್ವನಿ ಕರೆ ಮಾಡುವ ಫೀಚರ್​ ನೀಡಲಿದೆ. ಅದರಂತೆ ವಾಟ್ಸ್​ಆ್ಯಪ್​ ಬ್ಯುಸಿನೆಸ್​ ಆ್ಯಪ್​ನಲ್ಲಿ ಚಾಟ್​​​ ವಿಂಡೋ ಫೀಚರ್​ ಅನ್ನು ಪರಿಚಯಿಸಲು ಚಿಂತಿಸಿದೆ.

ವಾಟ್ಸ್​ಆ್ಯಪ್​ ಬ್ಯುಸಿನೆಸ್​ ಅಕೌಂಟ್​ ಹೊಂದಿರುವ ಬಳಕೆದಾರರಿಗೆ ಚಾಟ್​ ಸ್ಕ್ರೀನ್​ ಕೆಟಲಾಗ್​ಗಳನ್ನು ನೀಡಲಿದೆ. ನೇರವಾಗಿ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿದೆ. ಈ ನೂತನ ಫೀಚರ್​ ಜಾಗತಿಕವಾಗಿ ವಾಟ್ಸ್​ಆ್ಯಪ್​​ ಪರಿಚಯಿಸಲಿದ್ದು, ನಂತರ ಭಾರತೀಯರಿಗೂ ಬಳಕೆಗೆ ಸಿಗಲಿದೆ.

ವಾಟ್ಸ್​ಆ್ಯಪ್​ ಈ ಬಗ್ಗೆ ಹೇಳಿಕೆ ನೀಡಿದ್ದು,  ಜನರಿಗೆ ಲಭ್ಯವಿರುವ ಉತ್ಪನ್ನಗಳನ್ನು ಖರೀದಿಸಲು ಮತ್ತು ಚಾಟ್​ ಮಾಡುವ ಮೂಲಕ ಖರೀದಿಸಲು ಈ ಆಯ್ಕೆಯನ್ನು ನೀಡುತ್ತಿದ್ದೇವೆ ಎಂದಿದೆ.

ಕೊರೋನಾ ಕಾಲದಲ್ಲಿ ಸಣ್ಣ ಉದ್ಯಮದ ಮೇಲೆ ಹೊಡೆತ ಬಿದ್ದಿದೆ. ಈ ನಿಟ್ಟಿನಲ್ಲಿ ನೂತನ ಫೀಚರ್​ ಅವರಿಗೆ ಸಹಾಯಕ್ಕೆ ಬರಲಿದೆ ಎಂದು ವಾಟ್ಸ್​ಆ್ಯಪ್​ ಹೇಳಿಕೆ ನೀಡಿದೆ.

ಪ್ರತಿದಿನ 175 ದಶಲಕ್ಷಕ್ಕೂ ಅಧಿಕ ಜನರು ವಾಟ್ಸ್​ಆ್ಯಪ್​​ ಬ್ಯುಸಿನೆಸ್​ನಲ್ಲಿ ಸಂದೇಶ ರವಾನಿಸುತ್ತಾರೆ. ಹಾಗಾಗಿ ವಾಟ್ಸ್​ಆ್ಯಪ್​ ಉತ್ಪನ್ನಗಳ ಬಗ್ಗೆ ವಿಚಾರಿಸಲು ಸಂದೇಶ ಕಳುಹಿಸಲು ಬಯಸುತ್ತಾರೆ. ಇದರಿಂದ ಅವರಿಗೆ ನೇರವಾಗಿ ವಸ್ತುಗಳ ಬಗ್ಗೆ ತಿಳಿದುಕೊಂಡು ಖರೀದಿಸಲು ಅನುಕೂಲವಾಗಲಿದೆ.
Youtube Video

Whatsapp New Features: ಗ್ರೂಪ್​ಗಳಿಂದ ಶಾಶ್ವತವಾಗಿ ಮುಕ್ತಿ ಹೊಂದಲು ಹೊಸ ಫೀಚರ್​ ಪರಿಚಯಿಸಿದ ವಾಟ್ಸ್​ಆ್ಯಪ್​
Published by: Harshith AS
First published: October 23, 2020, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories