• Home
  • »
  • News
  • »
  • tech
  • »
  • WhatsAap: ನಿಂದನೀಯ ಹಾಗೂ ಸ್ಪ್ಯಾಮ್ ಸಂದೇಶ ತಡೆಗಟ್ಟಲು ವಾಟ್ಸ್‌ಆ್ಯಪ್ ಹೊರತರಲಿದೆ ಹೊಸ ಫೀಚರ್

WhatsAap: ನಿಂದನೀಯ ಹಾಗೂ ಸ್ಪ್ಯಾಮ್ ಸಂದೇಶ ತಡೆಗಟ್ಟಲು ವಾಟ್ಸ್‌ಆ್ಯಪ್ ಹೊರತರಲಿದೆ ಹೊಸ ಫೀಚರ್

WhatsApp

WhatsApp

WhatsApp Update: ಪ್ರಸ್ತುತ ವಾಟ್ಸ್‌ಆ್ಯಪ್ ವ್ಯಕ್ತಿ ಹಾಗೂ ವ್ಯವಹಾರದೊಂದಿಗಿನ ಸಂಪೂರ್ಣ ಚಾಟ್‌ಗಳನ್ನು ವರದಿ ಮಾಡಲು ಮಾತ್ರವೇ ಅನುಮತಿಸುತ್ತದೆ. ಈಗ ಹೊಸ ಫೀಚರ್ ಅನ್ನು ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಡಿವೈಸ್‌ಗಳ ಬೀಟಾ ಬಳಕೆದಾರರೊಂದಿಗೆ ಪರಿಶೀಲಿಸಲಾಗುತ್ತಿದೆ.

  • Share this:

ಫೇಸ್‌ಬುಕ್ ಮಾಲಿಕತ್ವದ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆ್ಯಪ್ ತನ್ನ ಹೊಸ ಫೀಚರ್ ಪರೀಕ್ಷಿಸುತ್ತಿದ್ದು, ಇದು ಬಳಕೆದಾರರಿಗೆ ನಿರ್ದಿಷ್ಟ ಮೆಸೇಜ್ ಅನ್ನು ಪ್ಲಾಟ್‌ಫಾರ್ಮ್‌ನಲ್ಲಿ ವರದಿ ಮಾಡಲು ಅನುವು ಮಾಡಿಕೊಡಲಿದೆ. ಈ ಫೀಚರ್ ಪರಿಶೀಲನೆಯನ್ನು ಐಒಎಸ್ ಹಾಗೂ ಆ್ಯಂಡ್ರಾಯ್ಡ್ ಸಾಧನಗಳೆರಡರಲ್ಲೂ ಮಾಡಲಾಗುತ್ತಿದೆ.


ಪ್ರಸ್ತುತ ವಾಟ್ಸ್‌ಆ್ಯಪ್ ವ್ಯಕ್ತಿ ಹಾಗೂ ವ್ಯವಹಾರದೊಂದಿಗಿನ ಸಂಪೂರ್ಣ ಚಾಟ್‌ಗಳನ್ನು ವರದಿ ಮಾಡಲು ಮಾತ್ರವೇ ಅನುಮತಿಸುತ್ತದೆ. ಈಗ ಹೊಸ ಫೀಚರ್ ಅನ್ನು ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಡಿವೈಸ್‌ಗಳ ಬೀಟಾ ಬಳಕೆದಾರರೊಂದಿಗೆ ಪರಿಶೀಲಿಸಲಾಗುತ್ತಿದೆ.


ವಾಟ್ಸ್‌ಆ್ಯಪ್‌ನಲ್ಲಿ ನಿಂದನೀಯ ಹಾಗೂ ಸ್ಪ್ಯಾಮ್ ಸಂದೇಶಗಳನ್ನು ತಡೆಯುವ ಸಲುವಾಗಿ ವಾಟ್ಸ್‌ಆ್ಯಪ್ ಈ ಹೊಸ ಫೀಚರ್ ಪರಿಚಯಿಸಲಿದೆ. ನಿಂದನೀಯ ಹಾಗೂ ಸ್ಪ್ಯಾಮ್ ಸಂದೇಶಗಳು ಇತ್ತೀಚಿನ ದಿನಗಳಲ್ಲಿ ವಾಟ್ಸ್‌ಆ್ಯಪ್‌ಗೆ ಸಂಕಷ್ಟ ತಂದೊಡ್ಡಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆ ಹೊಸ ಫೀಚರ್‌ ಪರಿಚಯಿಸುತ್ತಿದೆ ಎನ್ನಲಾಗಿದೆ. ವಾಟ್ಸಾಆ್ಯಪ್ ಟ್ರ್ಯಾಕರ್ WABetaInfo ಮೂಲಕ ಐಒಎಸ್ ಬೀಟಾ ಆವೃತ್ತಿಗಳಾದ 2.21.190.12 ಹಾಗೂ 2.21.190.11ನಲ್ಲಿ ಈ ಫೀಚರ್ ಕಂಡುಬಂದಿದೆ.


WABetaInfo ಬಳಕೆದಾರರ ವರದಿಗಳು ಅಪ್ಲಿಕೇಶನ್‌ಗೆ ವರದಿ ಮಾಡಿದ ಸಂದೇಶಗಳನ್ನು ಮಾತ್ರ ವಾಟ್ಸ್‌ಆ್ಯಪ್‌ಗೆ ಫಾರ್ವರ್ಡ್ ಮಾಡಲು ಮತ್ತು ಅದರ ಬಗ್ಗೆ ಕಳುಹಿಸುವವರಿಗೆ ಸೂಚಿಸಲು ಅನುಮತಿಸುತ್ತದೆ ಎಂದು ತಿಳಿಸಿದೆ. ವರದಿ ತಿಳಿಸಿರುವ ಪ್ರಕಾರ ಹೊಸ ಫೀಚರ್‌ನ ವರದಿ ಮಾಡುವ ಪ್ರಕ್ರಿಯೆಯು ಪ್ರಸ್ತುತ ಇರುವುದಕ್ಕಿಂತ ಭಿನ್ನವಾಗಿದ್ದು ಬಳಕೆದಾರರು ಸಂಪೂರ್ಣ ಚಾಟ್ ಆಧರಿಸಿ ವ್ಯವಹಾರ ನಡೆಸಿದಾಗ ಇತ್ತೀಚಿನ ಐದು ಸಂದೇಶಗಳನ್ನು ವಾಟ್ಸ್‌ಆ್ಯಪ್‌ಗೆ ಫಾರ್ವರ್ಡ್ ಮಾಡಲಾಗುತ್ತದೆ.


ವಾಟ್ಸ್‌ಆ್ಯಪ್‌ನ ಬೀಟಾ ಆವೃತ್ತಿಯಲ್ಲಿರುವ ಬಳಕೆದಾರರು ಸಂದೇಶ ಟ್ಯಾಪ್ ಮಾಡಿದಾಗ ಹೊಸ "ವರದಿ" ಆಯ್ಕೆಯನ್ನು ನೋಡಬಹುದು. WABetaInfo ಆ್ಯಂಡ್ರಾಯ್ಡ್ ಬೀಟಾ ಬಿಡುಗಡೆಗಳಿಗಾಗಿ ಇತ್ತೀಚಿನ ವಾಟ್ಸ್‌ಆ್ಯಪ್‌ನಲ್ಲಿ ವೈಯಕ್ತಿಕ ಸಂದೇಶ ವರದಿ ಮಾಡುವ ವೈಶಿಷ್ಟ್ಯ ಕಂಡುಕೊಂಡಿದೆ.


ಆ್ಯಂಡ್ರಾಯ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯ ಬೀಟಾ ಟೆಸ್ಟರ್‌ಗಳಿಗಾಗಿ ವಾಟ್ಸ್‌ಆ್ಯಪ್ ಬೀಟಾ ಆವೃತ್ತಿ 2.21.20.1ನಲ್ಲಿ ಈ ವೈಶಿಷ್ಟ್ಯ ಕಂಡುಬಂದಿದೆ. ಆ್ಯಂಡ್ರಾಯ್ಡ್‌ನಲ್ಲಿ, ಬಳಕೆದಾರರು ಸಂದೇಶವನ್ನು ದೀರ್ಘವಾಗಿ ಒತ್ತುವ ಮೂಲಕ ಏಕೈಕ ಸಂದೇಶವನ್ನು ರಿಪೋರ್ಟ್‌ ಮಾಡಲು ಸಾಧ್ಯವಾಗುತ್ತದೆ, ನಂತರ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಡಾಟ್ ಮೆನುವನ್ನು ಕ್ಲಿಕ್ ಮಾಡಿ ಮತ್ತು "ರಿಪೋರ್ಟ್‌" ಆಯ್ಕೆ ಮಾಡಬೇಕಾಗುತ್ತದೆ.


Read Also ⇒ Murder | ಹಣಕ್ಕಾಗಿ ಪ್ರೀತಿಯ ನಾಟಕ, ಸೆಕ್ಸ್ ಮಾಡುವಾಗ ಕೊಲೆ: ಈ ಮರ್ಡರ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ

ಪ್ರಸ್ತುತ ಈ ಫೀಚರ್ ಇನ್ನೂ ಪರಿಶೀಲನೆ ಹಂತದಲ್ಲಿದ್ದು ಸಾಮಾನ್ಯ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದಿಲ್ಲ. WABetaInfo ವರದಿಯು ಆ್ಯಂಡ್ರಾಯ್ಡ್‌ ಮತ್ತು ಐಫೋನ್ ಬಳಕೆದಾರರಿಗಾಗಿ ಈ ವೈಶಿಷ್ಟ್ಯವು ಶೀಘ್ರದಲ್ಲಿಯೇ ಲಭ್ಯವಾಗಲಿದೆ ಎಂದು ತಿಳಿಸುತ್ತದೆ. ವರದಿಯು ವಾಟ್ಸ್‌ಆ್ಯಪ್ ಪ್ರಸ್ತುತ ಈ ವೈಶಿಷ್ಟ್ಯವನ್ನು ಹೊರತರುತ್ತಿದೆ ಎಂದು ಹೇಳುತ್ತಿದ್ದು ನೀವು ಬೀಟಾ ಬಳಕೆದಾರರಾಗಿದ್ದರೆ ಈ ಫೀಚರ್ ಅನ್ನು ಇದೀಗ ನಿಮಗೆ ಬಳಸಬಹುದಾಗಿದೆ. ಅಲ್ಲದಿದ್ದರೆ ವಾಟ್ಸ್‌ಆ್ಯಪ್ ಈ ಫೀಚರ್ ಬಳಸಲು ಸಾಧ್ಯವಾಗುವಂತೆ ಸ್ಥಿರ ಅಪ್‌ಡೇಟ್ ಆಗಿ ಹೊರತರುವವರೆಗೆ ಬಳಕೆದಾರರು ಕಾಯಬೇಕಾಗುತ್ತದೆ.


First published: