ವಾಟ್ಸಪ್​ನಲ್ಲಿ ನಕಲಿ ಮಾಹಿತಿ ಕಂಡು ಹಿಡಿಯಲು ಬಂದಿದೆ ಹೊಸ ಅಪ್​ಡೇಟ್​


Updated:July 11, 2018, 1:16 PM IST
ವಾಟ್ಸಪ್​ನಲ್ಲಿ ನಕಲಿ ಮಾಹಿತಿ ಕಂಡು ಹಿಡಿಯಲು ಬಂದಿದೆ ಹೊಸ ಅಪ್​ಡೇಟ್​

Updated: July 11, 2018, 1:16 PM IST
ಹೊಸದಿಲ್ಲಿ: ವಾಟ್ಸಪ್​ನಲ್ಲಿ ಹಾಗೂ ಇತರೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚುತ್ತಿರುವ ಸುಳ್ಳು ಸಂದೇಶ ಹಾಗು ಅಪರಾಧ ಪ್ರಕರಣಗಳಿಗೆ ಸೆಡ್ಡು ಹೊಡೆಯಲು ಫೇಸ್​ಬುಕ್​ ಒಡೆತನದ ಸಂಸ್ಥೆ ಮುಂದಾಗಿದ್ದು ಅನುಮಾನಾಸ್ಪದ ಲಿಂಗ್​ ಎಂಬ ಹೊಸ ಫೀಚರ್​ನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಈ ಅಪ್​ಡೇಟ್​ ಕೇವಲ ಪ್ರಾಯೋಗಿಕ ಹಂತದಲ್ಲಿದ್ದು, ವಾಟ್ಸಾಪ್​ ಬೀಟಾ 2.18.204 ಮೇಲ್ಪಟ್ಟ ಬಳಕೇದಾರರಿಗೆ ಆಯ್ಕೆಯನ್ನು ಬಳಸಿಕೊಳ್ಳಬಹುದು ಎಂದು 'ವಾಬಿಟಾಇನ್ಫೋ' ಜಾಲತಾಣ ವರದಿ ಮಾಡಿದೆ.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
“Suspicious Link” ಎಂಬ ಈ ಅಪ್​ಡೇಟ್​ ನಿಮ್ಮ ವಾಟ್ಸಪ್​ಗೆ ಬರುವ ಮೆಸೇಜ್​ಗಳನ್ನು ಪರಿಶೀಲಿಸುತ್ತದೆ. ನಕಲಿ ಲಿಂಕ್‌ಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸಿ ವಿವರಗಳನ್ನು ದೃಡೀಕರಿಸಲಿದೆ. ಈ ಪ್ರಕ್ರಿಯೆ ನಿರಂತರವಾಗಿ ಬ್ಯಾಗ್ರೌಂಡ್​ನಿಂದ ನಡೆಯುತ್ತಿರುತ್ತದೆ.

ಒಂದು ವೇಳೆ ನಿಮಗೆ ಬಂದ ಲಿಂಕ್​ ಸುಳ್ಳು ಮಾಹಿತಿ ಅಥವಾ ಸ್ಪಾಮ್​ ಮಾಹಿತಿಯನ್ನು ಹೊಂದಿದ್ದರೆ ಕೆಂಪು ಲ್ಯಾಬೆಲ್‌ನಿಂದ ಈ ಮೆಸೇಜ್​ನ್ನು ಗುರುತಿಸಲಾಗುತ್ತದೆ. ಅಲ್ಲದೇ ಈ ಮಾಹಿತಿಯ ಕುರಿತು ವಾಟ್ಸಾಪ್​ ಬಳಕೇದಾರರಿಗೆ “This link contains unusual characters. It may be trying to appear as another site.”(ಈ ಮೆಸೇಜ್​ನಲ್ಲಿ ಅನುಮಾನಾಸ್ಪದ ಸಂದೇಶವನ್ನು ರವಾನಿಸಲಾಗಿದೆ) ಎಂಬ ಸಂದೇಶವನ್ನು ಕೂಡಾ ನೀಡುತ್ತದೆ.

ಮತ್ತೊಂದು ವರದಿ ಪ್ರಕಾರ ವಾಟ್ಸಪ್​ ಬಳಕೇದಾರರೇ ಸ್ವತಃ ಸುಳ್ಳು ಸಂದೇಶವನ್ನು ರಿಪೋರ್ಟ್​ ಮಾಡುವ ಅವಕಾಶವನ್ನು ಚಾಲ್ತಿಗೆ ತರಲು ಸಂಸ್ಥೆ ಚಿಂತನೆ ನಡೆಸಿದೆಯಂತೆ.

ಅದೇನೆ ಇರಲಿ ಒಟ್ಟಾರೆ ಮಕ್ಕಳ ಕಳ್ಳರಂತಹ ಸುಳ್ಳುಸುದ್ದಿಯಿಂದ ರಕ್ಷಣೆ ಪಡೆಯಲು ಇಂತಹ ಅವಶ್ಯಕ ಅಪ್​ಡೇಟ್​ಗಳು ವಾಟ್ಸಾಪ್​ಗೆ ಬೇಕಾಗಿದೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ