WhatsApp​ ಬಳಕೆದಾರರೇ ಈ ತಪ್ಪು ಮಾಡಬೇಡಿ! ಯಾಕಂದ್ರೆ, ಕಂಪನಿ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್​ ಮಾಡಿದೆ

ಜುಲೈ ತಿಂಗಳಿನಲ್ಲಿ ವಾಟ್ಸ್ಆ್ಯಪ್​, ಭಾರತದಿಂದ 574 ಕುಂದುಕೊರತೆ ವರದಿಗಳನ್ನು ಸ್ವೀಕರಿಸಿದೆ ಮತ್ತು ಪ್ಲಾಟ್‌ಫಾರ್ಮ್ ಅವುಗಳಲ್ಲಿ 27 ಕುರಿತು ಕ್ರಮ ಕೈಗೊಂಡಿದೆ. ಹೀಗಾಗಿ ಕೆಲವು ಖಾತೆಗಳನ್ನು ಬ್ಯಾನ್​ ಮಾಡಿದೆ. ವಾಟ್ಸ್​ಆ್ಯಪ್​ ಖಾತೆಗಳನ್ನು ಪರಿಶೀಲಿಸಿ ನಂತರ ಈ ನಿರ್ಣಯವನ್ನು ಕೈಗೊಳ್ಳುತ್ತದೆ.

ವಾಟ್ಸ್ಆ್ಯಪ್

ವಾಟ್ಸ್ಆ್ಯಪ್

  • Share this:
    ವಾಟ್ಸ್ಆ್ಯಪ್ (WhatsApp)​​ ಜನಪ್ರಿಯ ಸಾಮಾಜಿಕ ಜಾಲತಾಣವಾಗಿ ಗುರುತಿಸಿಕೊಂಡಿದೆ. ಭಾರತದಾದ್ಯಂತ (India) ಹೆಚ್ಚಿನ ಸಂಖ್ಯೆಯ ಜನರು ಈ ಆ್ಯಪ್​ ಅನ್ನು ಬಳಸುತ್ತಾರೆ ಮತ್ತು ಅದರ ಮೂಲಕ ಸಂವಹನ ನಡೆಸುತ್ತಾರೆ. ಆದರೆ ವಾಟ್ಸ್​ಆ್ಯಪ್​ ಒಳ್ಳೆಯ ಕೆಲಸಗಳಿಗೆ ಬಳುವವರು ಸಂಕ್ಯೆ ಎಷ್ಟಿದೆಯೋ, ಅಷ್ಟೇ ಕೆಟ್ಟ ಕಾರ್ಯಗಳಿಗೆ ಬಳಸುವವರ ಸಂಖ್ಯೆಯೂ ಇದೆ. ಇದನ್ನು ಪರಿಗಣಿಸಿಕೊಂಡು ವಾಟ್ಸ್​ಆ್ಯಪ್​​​​ ಪ್ರತಿ ತಿಂಗಳೂ ಕೆಲವು ಖಾತೆಗಳನ್ನು ಬ್ಯಾನ್ (Ban)​ ಮಾಡುತ್ತಾ ಬಂದಿದೆ. ಅದರಂತೆಯೇ ಜುಲೈ ತಿಂಗಳ ಬ್ಯಾನ್​ ಆಗಿರುವ ಖಾತೆಗಳ ಅಂಕಿ ಅಂಶ ಹೊರಬಿದ್ದಿದೆ. ಜುಲೈ 1, 2022ಮತ್ತು ಜುಲೈ 31,2022ರ ನಡುವೆ ಸುಮಾರು 23,87,000 ವಾಟ್​​ಆ್ಯಪ್​ ಖಾತೆಗಳನ್ನು ನಿಷೇಧಿಸಿದೆ.

    ಹೌದು. ವಾಟ್ಸ್​ಆ್ಯಪ್​​​​ ಬಳಕೆದಾರರ ಖಾತೆಯ ಮೇಲೆ ಕಣ್ಣಿಟ್ಟಿದೆ. ಅದರಲ್ಲೂ ವಾಟ್ಸ್​ಆ್ಯಪ್​​​​ ನಿಯಮಕ್ಕೆ ವಿರುದ್ಧವಾದ ವರ್ತನೆ ತೋರಿಸಿದರೆ ಖಾತೆಯನ್ನು ಬ್ಯಾನ್​ ಮಾಡುತ್ತದೆ. ಬಳಕೆದಾರರು ಕೂಡ ಅನುಮಾನದ ಖಾತೆಯ ಬಗ್ಗೆ ವರದಿ ಮಾಡಿದರೆ ಖಾತೆಯನ್ನು ನಿಷೇಧಿಸುತ್ತದೆ. ಆದರೆ ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲೇ 14,16,000 ಖಾತೆಗಳನ್ನು ಮುಂಚಿತವಾಗಿಯೇ ಡಿಲೀಟ್​ ಮಾಡಲಾಗಿದೆ ಎಂದು ಮೆಟಾ ಮಾಲಿಕತ್ವದ ವೇದಿಕೆ ವಾಟ್ಸ್​ಆ್ಯಪ್​ ಹಂಚಿಕೊಂಡ ಮಾಸಿಕ ವರದಿಯಲ್ಲಿ ತಿಳಿಸಿದೆ.

    ಅಂದಹಾಗೆಯೇ, ಭಾರತೀಯ ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ನಿಯಮ 4(1)(ಡಿ) ಅಡಿಯಲ್ಲಿ ವಾಟ್ಸ್​ಆ್ಯಪ್​ ಇಂಡಿಯಾ ವರದಿಯನ್ನು ಪ್ರಕಟಿಸುತ್ತದೆ.

    ಜುಲೈ ತಿಂಗಳಿನಲ್ಲಿ ವಾಟ್ಸ್ಆ್ಯಪ್​, ಭಾರತದಿಂದ 574 ಕುಂದುಕೊರತೆ ವರದಿಗಳನ್ನು ಸ್ವೀಕರಿಸಿದೆ ಮತ್ತು ಪ್ಲಾಟ್‌ಫಾರ್ಮ್ ಅವುಗಳಲ್ಲಿ 27 ಕುರಿತು ಕ್ರಮ ಕೈಗೊಂಡಿದೆ. ಹೀಗಾಗಿ ಕೆಲವು ಖಾತೆಗಳನ್ನು ಬ್ಯಾನ್​ ಮಾಡಿದೆ. ವಾಟ್ಸ್​ಆ್ಯಪ್​ ಖಾತೆಗಳನ್ನು ಪರಿಶೀಲಿಸಿ ನಂತರ ಈ ನಿರ್ಣಯವನ್ನು ಕೈಗೊಳ್ಳುತ್ತದೆ.

    ಜುಲೈನಲ್ಲಿ ಸ್ವೀಕರಿಸಿದ 574 ಕುಂದುಕೊರತೆ ವರದಿಗಳಲ್ಲಿ, 392 ವರದಿಗಳು 'ನಿಷೇಧದ ಮನವಿ' ಮತ್ತು ಇತರವು ಇದೆ, ಜೊತೆಗೆ ಸುರಕ್ಷತೆಯಂತಹ ವಿಚಾರವು ಈ ಸಾಲಿನಲ್ಲಿ ಕಾಣಿಸಿಕೊಂಡಿದೆ ಹಾಗಾಗಿ ಜುಲೈನಲ್ಲಿ ಒಟ್ಟು 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡುವ ಅನಿವಾರ್ಯತೆ ಎದರಾಗಿತ್ತು.

    ಇದನ್ನೂ ಓದಿ: Jio Prepaid Plans: ಪ್ರತಿ ದಿನ 2GB ಡೇಟಾ, ಅನಿಯಮಿತ ಕರೆ ಸೌಲಭ್ಯ! 500 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್​ ಪ್ಲಾನ್​ಗಳಿವು

    ವಾಟ್ಸ್​ಆ್ಯಪ್​ ಈ ಬಗ್ಗೆ ಹೇಳಿಕೆ ನೀಡಿದ್ದು, ‘‘ಫ್ಲಾಟ್​​ಫಾರ್ಮ್​​​ನಲ್ಲಿ ಏನಾದರು ಹಾನಿಕಾರಕ ನಡವಳಿಕೆಯನ್ನು ತಡೆಯಲು ವಾಟ್ಸ್​​​ಆ್ಯಪ್ ಉಪಕರಣಗಳನ್ನು ಸಹ ನಿಯೋಜಿಸುತ್ತದೆ. ಆದರೆ ಹಾನಿಕಾರಕ ಚಟುವಟಿಕೆಗಳು ನಡೆಯದಂತೆ ತಡೆಯುವುದು ಉತ್ತಮ ಎಂದು ನಾವು ನಂಬುತ್ತೇವೆ’’ ಎಂದು ಕಂಪನಿ ಹೇಳಿದೆ.

    ಇದನ್ನೂ ಓದಿ: Air India: ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲಿದೆ ಏರ್ ಇಂಡಿಯಾ! ಇದಕ್ಕಾಗಿ ಹೊಸ ಯೋಜನೆ ಕೂಡ ರೆಡಿ

    ಪ್ರತಿ ತಿಂಗಳು ವಾಟ್ಸ್​ಆ್ಯಪ್​ ತನ್ನ ಫ್ಲಾಟ್​​ಫಾರ್ಮ್​ಗಳ ಕುರಿತು ವರದಿಗಳನ್ನು ಸ್ವೀಕರಿಸುತ್ತದೆ. ಅದರಲ್ಲಿ ಬಹುಪಾಲು ವರಧಿಗಳು ಸಮಸ್ಯೆಗಳ ಕುರಿತಾಗಿ ಇರುತ್ತದೆ. ನಂತರ ವರಧಿಯನ್ನು ಆಧರಿಸಿ ಸರಿಯಾಗಿ ಗಮಿನಿಸಿ ಖಾತೆಯನ್ನು ನಿರ್ಬಂಧಿಸುತ್ತದೆ. ಅದರಂತೆಯೇ ಜೂನ್‌ನಲ್ಲಿ, ವಾಟ್ಸ್​ಆ್ಯಪ್​ 632 ಕುಂದುಕೊರತೆ ವರದಿಗಳನ್ನು ಸ್ವೀಕರಿಸಿತ್ತು ಮತ್ತು 64 ವರದಿಗಳ ಮೇಲೆ ಕ್ರಮ ಕೈಗೊಂಡಿದೆ. ಮಾತ್ರವಲ್ಲದೆ ಜೂನ್‌ನಲ್ಲಿ 22 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ ಮತ್ತು ಮೇ ತಿಂಗಳಲ್ಲಿ 19 ಲಕ್ಷ ಖಾತೆಗಳನ್ನು ಬ್ಯಾನ್​ ಮಾಡಿದೆ.

    ಮೊದಲೇ ಹೇಳಿದಂತೆ ವಾಟ್ಸ್​ಆ್ಯಪ್​ ಆಗಾಗ ಬಳಕೆದಾರರ ಖಾತೆಗಳ ಮೇಲೆ ಕಣ್ಣಿಟ್ಟಿದೆ. ವಾಟ್ಸ್​ಆ್ಯಪ್​ ಮೂಲಕ ಕೆಟ್ಟ ಸಂದೇಶ ರವಾನಿಸಿದರೆ ಅಥವಾ ಖಾತೆಯು ನಿಯಮಕ್ಕೆ ವಿರುದ್ಧವಾಗಿದ್ದರೆ  ಆ ಖಾತೆಯನ್ನು ಬ್ಯಾನ್​ ಮಾಡುತ್ತದೆ. ಪ್ರತಿ ತಿಂಗಳು ವಾಟ್ಸ್​ಆ್ಯಪ್​​ ಈ ಕಾರ್ಯವನ್ನು ತಪ್ಪದೇ ಮಾಡುತ್ತಾ ಬಂದಿದೆ.
    Published by:Harshith AS
    First published: