ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಪ್ (Whatsapp) ತನ್ನ ಬಳಕೆದಾರರಿಗಾಗಿ ಹಲವಾರು ಅಪ್ಡೇಟ್ಸ್ಗಳನ್ನು (Updates) ನೀಡುತ್ತಿದೆ. ಇದೀಗ ವಾಟ್ಸಪ್ನಲ್ಲಿ ಅವತಾರ್ ಕ್ರಿಯೇಟ್ (Avtar Create) ಮಾಡುವ ಫೀಚರ್ಸ್ ಬಗ್ಗೆ ಮಾಹಿತಿಯನ್ನು ಎಲ್ಲರೂ ಕೇಳಿರಬಹುದು. ಆದರೆ ಯಾವೆಲ್ಲಾ ಸ್ಮಾರ್ಟ್ಫೋನ್ಗಳಲ್ಲಿ ಇದು ಲಭ್ಯವಿದೆ ಎಂಬುದನ್ನು ಈಗ ತಿಳಿಯಬಹುದು. ಆದರೆ ಇದನ್ನು ವಾಟ್ಸಪ್ ಮೂಲಕ ಹೇಗೆ ಕ್ರಿಯೇಟ್ ಮಾಡುವುದು ಎಂಬುದನ್ನು ಯಾರಿಗೂ ತಿಳಿದಿಲ್ಲ. ಈ ಫೀಚರ್ ಇದೀಗ ಐಫೋನ್ಗಳಲ್ಲಿ (IPhone) ಬಂದಿದ್ದು ವಾಟ್ಸಪ್ನಲ್ಲಿ ಅವತಾರ್ ಸ್ಟಿಕ್ಕರ್ಸ್ ಅನ್ನು ಕ್ರಿಯೇಟ್ ಮಾಡುವುದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡ್ತೀವಿ. ಈ ಫೀಚರ್ಸ್ ಇದುವರೆಗೆ ಕೇವಲ ಇನ್ಸ್ಟಾಗ್ರಾಮ್ (Instagram) ಮತ್ತು ಸ್ನ್ಯಾಪ್ಚಾಟ್ಗಳಲ್ಲಿ (Snapchat) ಮಾತ್ರ ಲಭ್ಯವಿತ್ತು ಇದೀಗ ವಾಟ್ಸಪ್ನಲ್ಲೂ ಲಭ್ಯವಿದೆ.
ಆಂಡ್ರಾಯ್ಡ್ ಮತ್ತು ಐಫೋನ್ಗಳಲ್ಲಿ ಈ ವಾಟ್ಸಪ್ ಅವತಾರ್ ಫೀಚರ್ಸ್ ಲಭ್ಯವಾಗಲಿದ್ದು ಈ ವಾಟ್ಸಪ್ ಅವತಾರ್ ಅನ್ನು ಐಫೋನ್ ಮತ್ತು ಆಂಡ್ರಾಯ್ಡ್ಗಳಲ್ಲಿ ಹೇಗೆ ಕ್ರಿಯೇಟ್ ಮಾಡ್ಬಹುದು ಎಂಬುದನ್ನು ನಾವು ನಿಮಗೆ ತಿಳಿಸಿಕೊಡ್ತೀವಿ.
ಐಫೋನ್ ವಾಟ್ಸಪ್ನಲ್ಲಿ ಅವತಾರ್ ಸ್ಟಿಕ್ಕರ್ಸ್ ಕ್ರಿಯೇಟ್ ಮಾಡುವುದು ಹೇಗೆ?
- ಮೊದಲಿಗೆ ಐಫೋನ್ನಲ್ಲಿ ವಾಟ್ಸಪ್ ಆ್ಯಪ್ ಅನ್ನು ಓಪನ್ ಮಾಡ್ಬೇಕು, ನಂತರ ವಾಟ್ಸಪ್ನಲ್ಲಿ ಸೆಟ್ಟಿಂಗ್ಗೆ ಹೋಗ್ಬೇಕು.
- ಅಲ್ಲಿ ಅವತಾರ್ ಕ್ರಿಯೇಟ್ ಮಾಡುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ, ನಂತರ ಅವತಾರ್ ರಚಿಸಲು ಸ್ಕ್ರೀನ್ ಓಪನ್ ಆಗುತ್ತದೆ.
ಇದನ್ನೂ ಓದಿ: ಇಷ್ಟೆಲ್ಲಾ ಫೀಚರ್ಸ್ ಹೊಂದಿದ ಮೊಬೈಲ್, ಇದೀಗ ಕೇವಲ 10 ಸಾವಿರ ರೂಪಾಯಿಗೆ ಮಾರಾಟ
- ಅದರಲ್ಲಿ ‘Say more with Avatars now on WhatsApp’ ಎಂಬ ಹೊಸ ಲಿಂಕ್ ಆಯ್ಕೆ ಓಪನ್ ಆಗುತ್ತದೆ. ಇದರ ಮೇಲೆ ಟ್ಯಾಪ್ ಮಾಡ್ಬೇಕು.
![]()
ಸಾಂಕೇತಿಕ ಚಿತ್ರ
- ಇದರಲ್ಲಿ ನಿಮಗೆ ಸ್ಕಿನ್ ಟೋನ್, ಹೇರ್ ಸ್ಟೈಲ್, ಐವೇರ್, ಔಟ್ಫಿಟ್ ಇವುಗಳನ್ನೆಲ್ಲಾ ಸೆಲೆಕ್ಟ್ ಮಾಡಿ ನಿಮಗೆ ಬೇಕಾದ ಹಾಗೆ ಅವತಾರ್ ಸ್ಟಿಕ್ಕರ್ ಅನ್ನು ರಚಿಸಬಹುದಾಗಿದೆ.
- ನೀವು ಕ್ರಿಯೇಟ್ ಮಾಡಿದ ಅವತಾರ್ ಸ್ಟಿಕ್ಕರ್ ಕಸ್ಟಮೈಸ್ ಮಾಡಿದ ನಂತರ, ಡನ್ ಮತ್ತು ಸೇವ್ ಟ್ಯಾಪ್ ಮಾಡಿ.
- ಈಗ ನೀವು ನಿಮ್ಮ ಅವತಾರ್ ಸ್ಟಿಕ್ಕರ್ಗಳನ್ನು ಬ್ರೌಸ್ ಮಾಡಬಹುದು ಮತ್ತು ಪ್ರೊಫೈಲ್ ಫೋಟೋವನ್ನು ಸಹ ಆ್ಯಡ್ ಮಾಡಬಹುದಾಗಿದೆ.
ಆಂಡ್ರಾಯ್ಡ್ ಫೋನ್ಗಳ ವಾಟ್ಸಪ್ನಲ್ಲಿ ಅವತಾರ್ ಸ್ಟಿಕ್ಕರ್ಸ್ ಕ್ರಿಯೇಟ್ ಮಾಡುವುದು ಹೇಗೆ?
- ವಾಟ್ಸಪ್ ಓಪನ್ ಮಾಡಿದ ನಂತರ ಅಲ್ಲಿ ಸೆಟ್ಟಿಂಗ್ಸ್ನಲ್ಲಿ ಸ್ಟಿಕ್ಕರ್ಗಳ ವಿಭಾಗಕ್ಕೆ ಹೋಗುವ ಮೂಲಕ ನಿಮ್ಮ ಸ್ವಂತ ಡಿಜಿಟಲ್ ಅವತಾರ್ ಅನ್ನು ರಚಿಸಿಕೊಳ್ಳಬಹುದಾಗಿದೆ.
- ಆಂಡ್ರಾಯ್ಡ್ನಲ್ಲಿ ವಾಟ್ಸಪ್ನಲ್ಲಿ ಇಮೋಜಿ ಸಿಂಬಲ್ ಟ್ಯಾಪ್ ಮಾಡಿ. ಅಲ್ಲಿ ನಿಮಗೆ ಜಿಫ್ ಆಯ್ಕೆಯ ನಂತರದಲ್ಲಿ ಸ್ಟಿಕ್ಕರ್ ಆಯ್ಕೆ ಕಾಣಿಸುತ್ತದೆ.
![]()
ಸಾಂಕೇತಿಕ ಚಿತ್ರ
- ಅಲ್ಲಿ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ನಲ್ಲಿ ‘ಅವತಾರ್’ ಆಯ್ಕೆ ಇದ್ದರೆ ಅಲ್ಲಿ ಕಾಣಿಸುತ್ತದೆ.
- ಅಲ್ಲಿಂದ ಯಾವುದಾದರೂ ಮಾದರಿಯ ಒಂದು ‘ಅವತಾರ್’ ಅನ್ನು ಸೆಲೆಕ್ಟ್ ಮಾಡಿ.
- ಒಂದು ವೇಳೆ ನಿಮ್ಮ ವಾಟ್ಸಪ್ನಲ್ಲಿ ಇನ್ನೂ ಈ ಫೀಚರ್ಸ್ ಕಾಣಿಸುತ್ತಿಲ್ಲ ಎಂದಾದರೆ ನಿಮ್ಮ ವಾಟ್ಸಪ್ ಅನ್ನು ಅಪ್ಡೇಟ್ ಮಾಡ್ಬೆಕು.
- ಇದೀಗ ‘ಅವತಾರ್’ ಟ್ಯಾಪ್ ಮಾಡಿದರೆ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ.
- ಅಲ್ಲಿ ‘ಗೆಟ್ ಸ್ಟಾರ್ಟೆಡ್’ ಆಯ್ಕೆ ಕ್ಲಿಕ್ ಮಾಡುವ ಮೂಲಕ ‘ಅವತಾರ್’ ಸ್ಟಿಕ್ಕರ್ ರಚಿಸಿ.
ಈ ಅವತಾರ್ ಫೀಚರ್ಸ್ ಮೊದಲಿಗೆ ಸ್ನ್ಯಾಪ್ಚಾಟ್ ಒಂದರಲ್ಲೇ ಇತ್ತು. ನಂತರದಲ್ಲಿ ಇದು ಇನ್ಸ್ಟಾಗ್ರಾಂ ನಲ್ಲಿ ಅಳನವಡಿಸಲಾಯಿತು. ಇದೀಗ ಈ ಫೀಚರ್ಸ್ ಅನ್ನು ವಾಟ್ಸಪ್ನಲ್ಲೂ ಆ್ಯಡ್ ಮಾಡಲಾಗಿದೆ. ಆದರೆ ಯಾವೆಲ್ಲ ಸ್ಮಾರ್ಟ್ಫೋನ್ಗಳಲ್ಲಿ ಯಾವಾಗಿನಿಂದ ಲಭ್ಯವಾಗುತ್ತದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.