ವಾಟ್ಸಪ್​ ಹೊಸ ಅಪ್ಡೇಟ್​: ಇನ್ಮೇಲೆ ಕೇವಲ ಐದು ಮಂದಿ/ಗುಂಪಿಗೆ ಮೆಸೇಜ್​ ಫಾರ್ವರ್ಡ್​ ಮಾಡಬಹುದು


Updated:July 20, 2018, 11:55 AM IST
ವಾಟ್ಸಪ್​ ಹೊಸ ಅಪ್ಡೇಟ್​: ಇನ್ಮೇಲೆ ಕೇವಲ ಐದು ಮಂದಿ/ಗುಂಪಿಗೆ ಮೆಸೇಜ್​ ಫಾರ್ವರ್ಡ್​ ಮಾಡಬಹುದು

Updated: July 20, 2018, 11:55 AM IST
ನವದೆಹಲಿ: ನಕಲಿ ಸುದ್ಧಿಗಳ ವಿರುದ್ಧ ಸಮರ ಸಾರಿರುವ ಫೇಸ್​ಬುಕ್​ ಒಡೆತನದ ವಾಟ್ಸಪ್​ ನಕಲಿ ಸುದ್ಧಿಗಳ ಹಿಡಿತಕ್ಕೆ ಮುಂದಾಗಿದ್ದು, ಒಂದು ಬಾರಿಗೆ ಕೇವಲ ಐದು ಮಂದಿಗೆ ಅಥವಾ ಗುಂಪಿಗೆ ಮಾತ್ರಾ ಮೆಸೇಜ್​ ಫಾರ್ವರ್ಡ್​ ಮಾಡುವಂತೆ ಹೊಸ ಅಪ್​ಡೇಟ್​ನ್ನು ತರುವುದಾಗಿ ಕೇಂದ್ರ ಸರಕಾರಕ್ಕೆ ವಾಟ್ಸಪ್​ ಸಂಸ್ಥೆ ಹೇಳಿಕೊಂಡಿದೆ.

ಸುಳ್ಳು ಸುದ್ಧಿಯನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರ ಎರಡನೇ ಬಾರಿ ವಾಟ್ಸಪ್​ ಸಂಸ್ಥೆಗೆ ಹೇಳಿತ್ತು, ಹೀಗಾಗಿ ಹೊಸ ಕ್ರಮಕ್ಕೆ ಮುಂದಾದ ವಾಟ್ಸಪ್​ ಅತ್ಯಂತ ಹೆಚ್ಚು ಮೆಸೇಜ್​ಗಳನ್ನು ಫಾರ್ವರ್ಡ್​ ಮಾಡುವ ಭಾರತ ದೇಶಕ್ಕೆ ನೂತನ ನಿಯಂತ್ರಣಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದೆ.

ಶುಕ್ರವಾರದಂದು ಸರಕಾರಕ್ಕೆ ನೀಡಿದ ಉತ್ತರ ಪ್ರತಿಯ ಪ್ರಕಾರ, ವಿಶ್ವದಲ್ಲೇ ಅತ್ಯಂತ ಹೆಚ್ಚು ಬಾರಿ ಭಾರತೀಯರು ವಾಟ್ಸಪ್ ಅಪ್ಲಿಕೇಶನ್​ನಲ್ಲಿ ಚಿತ್ರಗಳು, ಅಥವಾ ಸಂದೇಶಗಳನ್ನು ಫಾರ್ವರ್ಡ್​ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಫಾರ್ವರ್ಡ್​ ಮೆಸೇಜ್​ಗಳನ್ನು ನಿಯಂತ್ರಿಸಲು ಕ್ವಿಕ್​ ಫಾರ್ವರ್ಡ್​ ಬಟನ್​ನನ್ನು ತೆಗೆದು ಹಾಕುವುದಲ್ಲದೇ ಒಂದು ಬಾರಿ ಕೇವಲ ಐದು ಗ್ರೂಪ್​ ಅಥವಾ ಜನರಿಗೆ ಮೆಸೇಜ್​ ಮಾಡುವ ಅವಕಾಶ ಕಲ್ಪಿಸುವ ಹೊಸ ವಿಧಾನವನ್ನು ಪರಿಚಯಿಸುವುದಾಗಿ ಹೇಳಿದೆ.

ಕೆಲ ವರ್ಷಗಳ ಹಿಂದೆಯಷ್ಟೇ ವಾಟ್ಸಪ್​ ಏಕಕಾಲದಲ್ಲಿ ಸಂದೇಶಗಳನ್ನು ಹಲವು ಗ್ರೂಪ್​ ಹಾಗೂ ವ್ಯಕ್ತಿಗಳಿಗೆ ಫಾರ್ವರ್ಡ್​ ಮಾಡುವ ಆಯ್ಕೆಯನ್ನು ನೀಡಿತ್ತು. ಇದಾಗ ಬಳಿಕ ಇತ್ತೀಚೆಗಷ್ಟೇ ಮೆಸೇಜ್​ಗಳನ್ನು ಫಾರ್ವರ್ಡ್​ ಮಾಡಲು ಮತ್ತಷ್ಟು ಸುಲಭ ಮಾಡಿರುವ ಸಂಸ್ಥೆ ಫಾರ್ವರ್ಡ್​ ಬಟನ್​ವೊಂದನ್ನು ಕೂಡಾ ಬಿಡುಗಡೆ ಮಾಡಿತ್ತು.

ಆದರೆ ಮಕ್ಕಳ ಕಳ್ಳರು, ಖ್ಯಾತ ತಾರೆ ಮೃತಪಟ್ಟರು, 100 ಮಂದಿಗೆ ಕಳುಹಿಸಿದರೆ ನಿಮಗೆ ಆ ದೇವರು ಒಳಿತು ಮಾಡುತ್ತಾನೆ ಇಂತಹ ಹಲವಾರು ನಕಲಿ ಸುದ್ಧಿಗಳಿಂದ ಹಲವಾರು ಮಂದಿ ಜೀವ ಕಳೆದುಕೊಂಡಿದ್ದಾರೆ, ಇದಕ್ಕೊಂದು ಪರಿಹಾರ ನೀಡುವಂತೆ ಸರಕಾರ ಸಂಸ್ಥೆಗೆ ಕೇಳಿಕೊಂಡಿತ್ತು. ಈ ಸಂದರ್ಭದಲ್ಲಿ ಸಂಸ್ಥೆ ಫಾರ್ವರ್ಡ್​ ಮಾಡಿರುವ ಮೆಸೇಜ್​ಗಳನ್ನು ಪತ್ತೆ ಹಚ್ಚಲು ಆ ಮೆಸೇಜ್​ನ ಎಡಬದಿ ಫಾರ್ವರ್ಡ್​ ಸಿಂಬಲ್​ ಕೂಡಾ ಬರುವ ಅಪ್​ಡೇಟ್​ ನೀಡಿತ್ತು.
First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...