ನಕಲಿ ಸುದ್ದಿಯನ್ನು ಪತ್ತೆಹಚ್ಚಲು ವಾಟ್ಸಪ್​ನ ಹೊಸ ಪ್ಲಾನ್​


Updated:August 10, 2018, 6:34 PM IST
ನಕಲಿ ಸುದ್ದಿಯನ್ನು ಪತ್ತೆಹಚ್ಚಲು ವಾಟ್ಸಪ್​ನ ಹೊಸ ಪ್ಲಾನ್​

Updated: August 10, 2018, 6:34 PM IST
ನಕಲಿ ಸುದ್ದಿಯಿಂದ ಬೇಸತ್ತಿರುವ ಸರಕಾರ ಸಾಮಾಜಿಕ ಜಾಲತಾಣಗಳ ಮೇಲೆ ಸಾಕಷ್ಟು ಒತ್ತಡ ಹಾಕುತ್ತಲೇ ಬಂದಿದೆ. ಹೀಗಾಗಿ ಈ ನಕಲಿ ಸುದ್ದಿಯನ್ನು ಮಟ್ಟಹಾಕಲು ಮುಂದಾಗಿರುವ ಫೇಸ್​ಬುಕ್​ ಒಡೆತನದ ವಾಟ್ಸಪ್​ ಸಂಸ್ಥೆ, ನಕಲಿ ಸುದ್ದಿಯನ್ನು ಪತ್ತೆ ಹಚ್ಚಲೆಂದೇ ಭಾರತದಲ್ಲಿ ಸ್ಥಳೀಯ ತಂಡವನ್ನು ರಚಿಸುತ್ತಿದ್ದು ಇಲ್ಲಿಯ ವ್ಯಕ್ತಿಯನ್ನೇ ಮುಖ್ಯ ಅಧಿಕಾರಿಯ ನೇಮಿಸುವುದಾಗಿ ಕೇಂದ್ರಕ್ಕೆ ತಿಳಿಸಿದೆ.

ಈ ಕುರಿತು ವರದಿ ಮಾಡಿರುವ ಟೈಮ್ಸ್​ ಆಫ್​ ಇಂಡಿಯಾ, ನಕಲಿ ಸುದ್ದಿಯನ್ನು ಗುರುತಿಸುವುದು ಮತ್ತು ಅದನ್ನು ಮಟ್ಟ ಹಾಕುವುದು ಭಾರತ ಸರಕಾರದ ಪ್ರಮುಖ ಆಗ್ರಹಗಳಲ್ಲಿ ಒಂದಾಗಿತ್ತು. ಇದಕ್ಕೆ ಪೂರಕವೆಂಬಂತೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ಉತ್ತರಿಸಿರುವ ವಾಟ್ಸಪ್​, ನಕಲಿ ಸುದ್ದಿ ತಡೆಗಟ್ಟಲು ಭಾರತದಲ್ಲೇ ಹೊಸ ತಂಡ ರಚಿಸಲಾತ್ತದೆ ಎಂದಿದೆ. ಇದರೊಂದಿಗೆ ಸರಕಾರದಿಂದಲೂ ಜನರಿಗೆ ನಕಲಿ ಸುದ್ದಿಗಳ ಕುರಿತು ಸೂಕ್ತ ಶಿಕ್ಷಣವನ್ನು ನೀಡಲಾಗುತ್ತದೆ.

ಗುಂಪು ಗಲಭೆ ಹಾಗು ನಕಲಿ ಸುದ್ದಿಯಿಂದಾಗುವ ತೊಂದರೆ ಕುರಿತು ಹೇಳಿಕೆ ನೀಡಿರುವ ವಾಟ್ಸಪ್​, ಪ್ರತಿಯೊಂದು ವಿಚಾರದಲ್ಲಿ ಸರಕಾರ ಮತ್ತು ಟೆಕ್ನಾಲಜಿ ಸಂಸ್ಥೆಗಳು ಒಟ್ಟಾಗೆ ಕಾರ್ಯ ನಿರ್ವಹಿಸುತ್ತದೆ. ಹಿಗಾಗಿ ನಾವು ವಾಟ್ಸಪ್​ನಲ್ಲಿ ನಕಲಿ ಸುದ್ಧಿಗಳನ್ನು ಪತ್ತೆಹಚ್ಚಿವ ಹಾಗು ಜನರಿಗೆ ಅರಿವನ್ನು ಮೂಡಿಸುತ್ತೇವೆ.

ಸರಕಾರಿ ಅಧಿಕಾರಿಯೊಬ್ಬರ ಪ್ರಕಾರ, ವಾಟ್ಸಪ್​ ಈಗಾಗಲೇ ಸರಕಾರಕ್ಕೆ ಕಾನೂನು ಸಲಹಾ ಘಟಕವನ್ನು ಭಾರತದಲ್ಲಿ ನೇಮಿಸಿಕೊಂಡಿದೆ. ಆದರೆ ಈ ಆ್ಯಪ್​ನಲ್ಲಿ ರವಾನೆಯಾಗುವ ಸಂದೇಶಗಳನ್ನು ಪತ್ತೆಹಚ್ಚುವ ಹಾಗೂ ಇದರ ಮೂಲ ಹುಡುಕುವ ಯಾವುದೇ ಹೊಸ ಅಪ್​ಡೇಟ್​ಗಳನ್ನು ರೂಪಿಸಿಕೊಂಡಿಲ್ಲ. ಸರಕಾರದ ಆಗ್ರಹದಲ್ಲಿ ವಾಟ್ಸಪ್​ನಲ್ಲಿ ಬರುವ ಸಂದೇಶಗಳ ಮೂಲವನ್ನು ಸಂಸ್ಥೆ ಪತ್ತೆ ಹಚ್ಚಬೇಕು. ಇದನ್ನು ಸಮರ್ಪಕವಾಗಿ ಇವರು ಮಾಡುತ್ತಿಲ್ಲ ಎಂದಿದ್ದಾರೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ