ಈಗಂತೂ ಬಹುತೇಕರು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಅಂತ ಹೇಳಿದರೆ ಮೊದಲು ನೆನಪಾಗುವುದು ಮೆಟಾ ಮಾಲೀಕತ್ವದ ವಾಟ್ಸಾಪ್ ಅಂತ ಹೇಳಿದರೆ ತಪ್ಪಾಗುವುದಿಲ್ಲ. ತನ್ನ ಬಳಕೆದಾರರಿಗೆ ಅಂತ ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸುತ್ತಲೇ ಇರುತ್ತದೆ ಎಂಬುದು ಸಹ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈಗ ಮತ್ತೊಂದು ಹೊಸ ವೈಶಿಷ್ಟ್ಯತೆಯನ್ನು ವಾಟ್ಸಪ್ (WhatsApp) ಹೊರ ತರುತ್ತಿದೆ ನೋಡಿ. ಅದೇನೆಂದರೆ ಹೊಸ ವೈಶಿಷ್ಟ್ಯತೆಯು ಬಳಕೆದಾರರಿಗೆ ತಮ್ಮ ಸ್ಟೇಟಸ್ ನಲ್ಲಿ (Status) ಧ್ವನಿ ಸಂದೇಶಗಳನ್ನು ಹಂಚಿಕೊಳ್ಳಲು ಅನುವು ಮಾಡಿ ಕೊಡುತ್ತದೆ.
ಒಮ್ಮೆ ಹಂಚಿಕೊಂಡ ನಂತರ, ಚಾಟ್ ಪಟ್ಟಿ ಮತ್ತು ಇತರ ಸ್ಥಳಗಳಲ್ಲಿ ಪ್ರೊಫೈಲ್ ಫೋಟೋಗಳ ಸುತ್ತಲೂ ಒಂದು ಉಂಗುರ ರೀತಿಯ ಚಿತ್ರ ಕಾಣಿಸಿಕೊಳ್ಳುತ್ತದೆ. ವಾಟ್ಸಾಪ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ಹೊಸ ವೈಶಿಷ್ಟ್ಯತೆಯ ಬಗ್ಗೆ ಮಾಹಿತಿಯನ್ನು ಶೇರ್ ಮಾಡಿದೆ.
ಏನದು ವಾಟ್ಸಪ್‌ನ ಹೊಸ ವೈಶಿಷ್ಟ್ಯತೆ?
"ನಾವು ಸ್ಟೇಟಸ್ ವೈಶಿಷ್ಟ್ಯತೆಗೆ ಕೆಲವು ರೋಮಾಂಚಣಕಾರಿಯಾದ ಅಪ್ಡೇಟ್‌ಗಳನ್ನು ಸೇರಿಸಿದ್ದೇವೆ. ಅದು ಆರಾಮವಾಗಿ ರೆಕಾರ್ಡ್ ಮಾಡಬಹುದು ಮತ್ತು ಅದನ್ನು ನಿಮಗೆ ಬೇಕಾದವರೊಂದಿಗೆ ಹಂಚಿಕೊಳ್ಳಬಹುದು" ಎಂದು ವಾಟ್ಸಾಪ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಎಲ್ಐಸಿ ಪಾಲಿಸಿದಾರರಿಗೆ ಹೊಸ ಡಿಜಿಟಲ್ ಸೇವೆ; ವಾಟ್ಸಾಪ್‌ನ 24x7 ಸೇವೆಗಳ ಮೂಲಕ ಪಡೆಯಬಹುದು ಈ ಪ್ರಯೋಜನ
ಮೆಟಾ ಮಾಲೀಕತ್ವದ ಕಂಪನಿಯು ತನ್ನ ಅಪ್ಲಿಕೇಶನ್ ನಲ್ಲಿ ಹೊಸ ಸ್ಥಿತಿ ಪ್ರತಿಕ್ರಿಯೆಗಳನ್ನು ಸುಗಮಗೊಳಿಸಿರುವುದರಿಂದ ಬಳಕೆದಾರರು ತಮ್ಮ ಪ್ರೀತಿಪಾತ್ರರಿಗೆ ಕೇವಲ ಟ್ಯಾಪ್ ಮಾಡುವ ಮೂಲಕ ಹೇಗೆ ಭಾವಿಸುತ್ತಾರೆ ಎಂಬುದನ್ನು ತಿಳಿಸಬಹುದು.
ಹೊಸ ವೈಶಿಷ್ಟ್ಯತೆಯ ಬಗ್ಗೆ ವಾಟ್ಸಪ್ ಹೇಳಿದ್ದೇನು?
"ನಿಮ್ಮ ವಾಟ್ಸಾಪ್ ಸ್ಟೇಟಸ್ ಗಳನ್ನು ನೋಡಬಲ್ಲ ಕಾಂಟ್ಯಾಕ್ಟ್ ನಂಬರ್ಗಳನ್ನು ಆರಿಸಿಕೊಳ್ಳಬಹುದು. ಪ್ರತಿ ಸ್ಟೇಟಸ್ ಗೆ ನಿಮ್ಮ ಸ್ಟೇಟಸ್ ಅನ್ನು ನೋಡಲು ಅನುವು ಮಾಡಿಕೊಡುವವರನ್ನು ಆಯ್ಕೆ ಮಾಡಬಹುದು. ನಿಮ್ಮ ಸ್ಟೇಟಸ್ ನ ಮೇಲೆ ಇನ್ನೂ ಹೆಚ್ಚಿನ ನಿಯಂತ್ರಣವನ್ನು ನೀವು ಹೊಂದಿರುತ್ತೀರಿ. ನಿಮ್ಮ ಸ್ಟೇಟಸ್ ನಲ್ಲಿ ಹಂಚಿಕೊಳ್ಳಲಾದ ಲಿಂಕ್ ಗಳನ್ನು ಎಡಿಟ್ ಮಾಡಿ ಶೇರ್ ಮಾಡಿಕೊಳ್ಳಬಹುದಾಗಿದೆ.
ಕಂಪನಿಯು ಆಯ್ದ ಬಳಕೆದಾರರಿಗೆ ಹೊಸ ವೈಶಿಷ್ಟ್ಯತೆಯನ್ನು ಹೊರ ತರುತ್ತಿದೆ, ಅದು ಚಾಟ್ ಗಳಲ್ಲಿ 100 ಮೀಡಿಯಾ ಫೈಲ್ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ವಾಬೇಟಾಇನ್ಫೋ ವರದಿ ಮಾಡಿದಂತೆ, ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಂಡ್ರಾಯ್ಡ್ 2.23.4.3 ಗಾಗಿ ವಾಟ್ಸಾಪ್ ಬೀಟಾವನ್ನು ಬಿಡುಗಡೆ ಮಾಡುತ್ತಿದೆ, ಇದು ವೈಶಿಷ್ಟ್ಯತೆಯನ್ನು ಹೊರ ತರುತ್ತದೆ.
ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಂಡ ನಂತರ ಈ ಫೀಚರ್ ಅನ್ನು ಬಳಸಬಹುದಂತೆ
ಅಪ್ಲಿಕೇಶನ್ ನ ಬೀಟಾ ಪ್ರೋಗ್ರಾಂನಲ್ಲಿ ನೋಂದಾಯಿಸಿಕೊಂಡ ಬಳಕೆದಾರರು ವಾಟ್ಸಾಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿದ ನಂತರ ಒಂದೇ ಬಾರಿಗೆ 100 ಮಾಧ್ಯಮಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಈ ಅಪ್ಡೇಟ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.
ಈ ವೈಶಿಷ್ಟ್ಯತೆಯು ಪ್ರಸ್ತುತ ವಾಟ್ಸಾಪ್ ನ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗಲಿದೆ.
ಈ ವೈಶಿಷ್ಟ್ಯತೆಯು ಬಳಕೆದಾರರಿಗೆ ವಾಟ್ಸಾಪ್ ನಲ್ಲಿ ಇತರ ಬಳಕೆದಾರರೊಂದಿಗೆ ಸಂಪೂರ್ಣ ಫೋಟೋ ಆಲ್ಬಮ್ ಗಳನ್ನು ಹಂಚಿಕೊಳ್ಳಲು ಸುಲಭವಾಗುತ್ತದೆ. ಹೊಸ ಮಿತಿಯು ಬಳಕೆದಾರರು ಬಹಳಷ್ಟು ಮೀಡಿಯಾ ಫೈಲ್ ಗಳನ್ನು ಕಳುಹಿಸಬೇಕಾದ ಸಂದರ್ಭದಲ್ಲಿ ಒಂದೇ ಫೋಟೋ ಅಥವಾ ವಿಡಿಯೋವನ್ನು ಒಂದಕ್ಕಿಂತ ಹೆಚ್ಚು ಬಾರಿ ಆಯ್ಕೆ ಮಾಡುವುದನ್ನು ತಡೆಯಲು ಸಹ ಇದು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ